ಆಗಸ್ಟ್ ಶುರುವಾಗ್ತಿದ್ದಂತೆ ಬದಲಾಗಲಿವೆ ಈ ಹಣಕಾಸಿನ ನಿಯಮಗಳು; ನೇರವಾಗಿ ನಿಮ್ಮ ಜೇಬಿನ ಮೇಲೆಯೇ ಎಫೆಕ್ಟ್!
ಆಗಸ್ಟ್ ಆರಂಭವಾಗುತ್ತಿದ್ದಂತೆ ಎಲ್‌ಪಿಜಿ ಸಿಲಿಂಡರ್‌ನಿಂದ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಹಾಗಾದ್ರೆ ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆ ಆಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
ಬೆಂಗಳೂರು: ಜುಲೈ ತಿಂಗಳು ಮುಗಿಯಲು ಬಂದಿದ್ದು, ಆಗಸ್ಟ್ ಆರಂಭವಾಗುತ್ತಿದ್ದಂತೆ ಕೆಲ ಹಣಕಾಸಿನ ನಿಯಮಗಳಲ್ಲಿ ಬದಲಾವಣೆಗಳಾಗಿವೆ. ಈ ಬದಲಾವಣೆಗಳು ನೇರವಾಗಿ ಜನತೆಯ ಪಾಕೆಟ್ ಮೇಲೆಯೇ ಪರಿಣಾಮ ಬೀರಲಿದೆ. ಜುಲೈನಲ್ಲಿ ನರೇಂದ್ರ ಮೋದಿ ಸರ್ಕಾರದ ಮೊದಲ ಪೂರ್ಣಾವಧಿಯ ಬಜೆಟ್ ಮಂಡನೆಯಾಗಿದೆ. ಆಗಸ್ಟ್ ಆರಂಭವಾಗುತ್ತಿದ್ದಂತೆ ಎಲ್‌ಪಿಜಿ ಸಿಲಿಂಡರ್‌ನಿಂದ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಹಾಗಾದ್ರೆ ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆ ಆಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
1.ಎಲ್‌ಪಿಜಿ ಸಿಲಿಂಡರ್ ಬೆಲೆ
ಪ್ರತಿ ತಿಂಗಳು ಗೃಹ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಗಳು ಬದಲಾಗುತ್ತಿರುತ್ತವೆ. ಜುಲೈನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ ಕಂಡಿದ್ರೆ, ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಈ ಬಾರಿಯೂ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗುವ ನಿರೀಕ್ಷೆಗಳಿವೆ. ಸಿಲಿಂಡರ್ ಬೆಲೆ ಏರಿಕೆಯಾದ್ರೆ ಹೋಟೆಲ್ ಆಹಾರಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಗೃಹ ಬಳಕೆ ಸಿಲಿಂಡರ್ ಬೆಲೆ ಈ ಬಾರಿಯೂ ಸ್ಥಿರವಾಗಿರುವ ಸಾಧ್ಯತೆಗಳು ಹೆಚ್ಚಿವೆ.
ಷೇರು ಮಾರುಕಟ್ಟೆಯಿಂದ ಉದ್ಯಮಿ ವಿಜಯ್ ಮಲ್ಯಗೆ 3 ವರ್ಷ ನಿರ್ಬಂಧ ಹೇರಿದ ಸೆಬಿ
2.ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್
ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಕೆಲ ನಿಯಮಗಳು ಆಗಸ್ಟ್-2024ರಿಂದ ಬದಲಾಗಲಿವೆ. ಕ್ರೆಡಿಟ್ ಕಾರ್ಡ್ ಪೇಮೆಂಟ್ ಸೇರಿದಂತೆ CRED, Cheq, MobiKwik, Freecharge ಸೇವೆಗಳ ಮೇಲೆ ಗ್ರಾಹಕರಿಂದ ಹೆಚ್‌ಡಿಎಫ್‌ಸಿ ಬ್ಯಾಂಕ್ ಶೇ.1ರಷ್ಟು ವಹಿವಾಟು ಶುಲ್ಕವನ್ನು ಪಡೆಯಲಿದೆ. ಇದರ ಲಿಮಿಟ್ 3,000 ರೂ.ವರೆಗೆ ಮಾತ್ರ ಇದೆ. 15,000 ರೂಪಾಯಿಗೂ ಅಧಿಕ ಇಂಧನ ವಹಿವಾಟು ಆದ್ರೆ ಪೂರ್ಣ ಹಣದ ಮೇಲೆ ಶೇ.1ರಷ್ಟು ಸರ್ವಿಸ್ ಚಾರ್ಜ್ ಪಾವತಿಸಬೇಕು. ಇಎಂಐ ಪ್ರೊಸೆಸಿಂಗ್ ಚಾರ್ಜ್ 299 ರೂಪಾಯಿಯನ್ನು ಸಹ ಬ್ಯಾಂಕ್ ವಿಧಿಸುತ್ತದೆ.
3.ಗೂಗಲ್ ಮ್ಯಾಪ್ಸ್ ಸರ್ವಿಸ್
ವರದಿಗಳ ಪ್ರಕಾರ ಭಾರತದಲ್ಲಿ ಆಗಸ್ಟ್ 2024ರಿಂದ ಗೂಗಲ್ ಮ್ಯಾಪ್ಸ್ ಸರ್ವಿಸ್ ಚಾರ್ಜ್ ಕಡಿಮೆಯಾಗಲಿದೆ. ಆಗಸ್ಟ್ 1ರಿಂದ ಇದರ ಹೊಸ ನಿಯಮಗಳು ಅನ್ವಯವಾಗಲಿದ್ದು, ಇದರ ನೇರ ಲಾಭ ಗ್ರಾಹಕರಿಗೆ ಸಿಗಲಿದೆ. ಹೊಸ ನಿಯಮಗಳಿಂದ ಶೇ.70ರಷ್ಟು ಕಡಿಮೆ ಖರ್ಚು ಆಗಲಿದ್ದು, ಗೂಗಲ್ ಮ್ಯಾಪ್ ಸರ್ವಿಸ್ ಚಾರ್ಜ್‌ನ್ನು ರೂಪಾಯಿಗಳಲ್ಲಿಯೇ ಪಾವತಿಸಲು ಅವಕಾಶ ನೀಡಲಾಗಿದೆ.
ಆಗಸ್ಟ್ ತಿಂಗಳಲ್ಲಿ 14 ದಿನ ಬಂದ್ ಇರಲಿವೆ ಬ್ಯಾಂಕ್‌ಗಳು; ರಜಾದಿನದ ಲಿಸ್ಟ್ ಇಲ್ಲಿದೆ