ಷೇರು ಮಾರುಕಟ್ಟೆಯಿಂದ ಉದ್ಯಮಿ ವಿಜಯ್ ಮಲ್ಯಗೆ 3 ವರ್ಷ ನಿರ್ಬಂಧ ಹೇರಿದ ಸೆಬಿ

ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಸದಂತೆ ಮತ್ತು 3 ವರ್ಷಗಳವರೆಗೆ ಯಾವುದೇ ಲಿಸ್ಟೆಡ್ ಕಂಪನಿಗಳ ಜತೆ ವ್ಯವಹಾರ ನಡೆಸದಂತೆ ಷೇರು ಮಾರುಕಟ್ಟೆ ನಿಯಂತ್ರಕ  ಸೆಬಿ ನಿರ್ಬಂಧ ವಿಧಿಸಿದೆ.

Sebi bans  fugitive Indian businessman Vijay Mallya securities market gow

ಮುಂಬೈ (ಜು.27): ಷೇರು ಮಾರುಕಟ್ಟೆ ನಿಯಂತ್ರಕ ‘ಸೆಬಿ’ (Securities and Exchange Board of India ), ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ (Vijay Mallya) ಅವರು ದೇಶದ ಷೇರು ಮಾರುಕಟ್ಟೆಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವಹಿವಾಟು ನಡೆಸದಂತೆ ಮತ್ತು 3 ವರ್ಷಗಳವರೆಗೆ ಯಾವುದೇ ಲಿಸ್ಟೆಡ್ ಕಂಪನಿಗಳ ಜತೆ ವ್ಯವಹಾರ ನಡೆಸದಂತೆ ನಿರ್ಬಂಧಿಸಿದೆ. ಶುಕ್ರವಾರ ಹೇಳಿಕೆ ನೀಡಿರುವ ಸೆಬಿ, ’ಮಲ್ಯ ಅವರ ಮ್ಯೂಚುಯಲ್ ಫಂಡ್ ಯೂನಿಟ್‌ಗಳು ಸೇರಿದಂತೆ ಎಲ್ಲಾ ಷೇರು ಹಿಡುವಳಿಗಳನ್ನು ಫ್ರೀಜ್ ಮಾಡಬೇಕು’ ಎಂದು ನಿರ್ದೇಶಿಸಿದೆ.

ಮ್ಯಾಟರ್‌ಹಾರ್ನ್ ವೆಂಚರ್ಸ್ ಎಂಬ ಹೆಸರಿನ ವಿದೇಶಿ ಸಾಂಸ್ಥಿಕ ಹೂಡಿಕೆ ಕಂಪನಿ ಮೂಲಕ ಮಲ್ಯ ಅವರು ಭಾರತದಲ್ಲಿ ಪರೋಕ್ಷವಾಗಿ ವ್ಯಾಪಾರ ಮಾಡುತ್ತಾರೆ. ಈ ಮೂಲಕ ಅವರ ಷೇರುಪೇಟೆಯಲ್ಲಿ ನಿಜವಾದ ಗುರುತನ್ನು ಮರೆಮಾಚುತ್ತಾರೆ. ಹೀಗಾಗಿ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (ಸೆಬಿ) ಈ ಕ್ರಮ ಜರುಗಿಸಿದೆ.

ಪ್ರಾಣಿ ಪ್ರಿಯರಿಗೆ ಬಿಬಿಎಂಪಿಯಿಂದ ಹೊಸ ನಿಯಮ ಜಾರಿ, ನಾಯಿಗಳಿಗೆ ಬಿಸ್ಕತ್‌ ಹಾಕುವಂತಿಲ್ಲ

ವಿಜಯ್ ಮಲ್ಯ ಕಿಂಗ್‌ಫಿಶರ್ ಬಿಯರ್ ತಯಾರಕ ಯುನೈಟೆಡ್ ಬ್ರೂವರೀಸ್‌ನಲ್ಲಿ 8.1% ಪಾಲನ್ನು ಹೊಂದಿದ್ದಾರೆ, ಸ್ಮಿರ್ನಾಫ್ ವೋಡ್ಕಾ ತಯಾರಕ ಯುನೈಟೆಡ್ ಸ್ಪಿರಿಟ್ಸ್‌ನಲ್ಲಿ 0.01% ಪಾಲನ್ನು ಹೊಂದಿದ್ದಾರೆ.

ಬ್ಯಾಂಕ್‌ಗಳಿಗೆ 9000 ಕೋಟಿ ರು. ಸಾಲ ವಂಚನೆ ಮಾಡಿ ಬ್ರಿಟನ್‌ನಲ್ಲಿ ನೆಲೆಸಿರುವ ವಿಜಯ್ ಮಲ್ಯ (68) ಅವರನ್ನು ಭಾರತಕ್ಕೆ ಗಡೀಪಾರು ಮಾಡಿ ತರಲು ಭಾರತ ಸರ್ಕಾರ ಯತ್ನಿಸುತ್ತಿದೆ. ಆದರೆ ನಾನಾ ಕಾನೂನು ಅಡ್ಡಿಗಳ ಕಾರಣ ಈವರೆಗೂ ಅದು ಕೈಗೂಡಿಲ್ಲ. 2016ರಿಂದ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ.

ಮುಸ್ಲಿಂ ವ್ಯಾಪಾರಿಗಳಿಂದಲೇ ದೂರು, ಬೇರೆ ಮಾಂಸ ಮಾರಾಟ ಆರೋಪ, ಅಬ್ದುಲ್ ರಜಾಕ್ ವಿಚಾರಣೆಗೆ ಬುಲಾವ್

ಈ ಹಿಂದೆ ಜೂನ್ 2018 ರಲ್ಲಿ, ಷೇರುಗಳಲ್ಲಿನ ಅಸಮರ್ಪಕ ವಹಿವಾಟುಗಳು ಮತ್ತು ಹಲವು ಅಕ್ರಮ ಚಟುವಟಿಕೆಳಿಗೆ ಸಂಬಂಧಿಸಿದಂತೆ ಜೂನ್ 1, 2018 ರಿಂದ ಮೇ 31, 2021 ರವರೆಗೆ SEBI ಮಲ್ಯ ಅವರನ್ನು ಮೂರು ವರ್ಷಗಳವರೆಗೆ ಷೇರು ಮಾರುಕಟ್ಟೆಯಿಂದ ನಿಷೇಧಿಸಿತ್ತು.  ಮಾತ್ರವಲ್ಲ ಐದು ವರ್ಷಗಳವರೆಗೆ ಯಾವುದೇ ಲಿಸ್ಟೆಡ್ ಕಂಪನಿಯಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸ್ಥಾನ ಹೊಂದುವಂತಿಲ್ಲ ಎಂದು ನಿರ್ಬಂಧಿಸಿತ್ತು.

ಜನವರಿ 2006 ರಿಂದ ಮಾರ್ಚ್ 2008 ರವರೆಗೆ SEBI ನಡೆಸಿದ ತನಿಖೆಯಲ್ಲಿ ಮಲ್ಯ ಅವರು ವಿದೇಶಿ ಸಾಂಸ್ಥಿಕ ಹೂಡಿಕೆದಾರರಾದ ಮ್ಯಾಟರ್‌ಹಾರ್ನ್ ವೆಂಚರ್ಸ್ ಅನ್ನು ವಿವಿಧ ಸಾಗರೋತ್ತರ ಖಾತೆಗಳ ಮೂಲಕ ಹಣವನ್ನು ಹೂಡಿಕೆ ಮಾಡುವ ಮೂಲಕ ತಮ್ಮ ಗುಂಪಿನ ಕಂಪನಿಗಳ ಷೇರುಗಳನ್ನು ರಹಸ್ಯವಾಗಿ ವ್ಯಾಪಾರ ಮಾಡಲು ಬಳಸಿಕೊಂಡಿರುವುದು ತಿಳಿದುಬಂದಿತ್ತು. ಇದರಲ್ಲಿ ತಮ್ಮ ಹೆಸರನ್ನು ಮರೆಮಾಚಿ ಮಲ್ಯ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿತ್ತು.
 

Latest Videos
Follow Us:
Download App:
  • android
  • ios