ಆಗಸ್ಟ್ ತಿಂಗಳಲ್ಲಿ 14 ದಿನ ಬಂದ್ ಇರಲಿವೆ ಬ್ಯಾಂಕ್‌ಗಳು; ರಜಾದಿನದ ಲಿಸ್ಟ್ ಇಲ್ಲಿದೆ

ಮುಂದಿನ ತಿಂಗಳು ಆಗಸ್ಟ್‌ನಲ್ಲಿ ಬ್ಯಾಂಕ್‌ಗಳು ಬರೋಬ್ಬರಿಗೆ 14 ದಿನ ಬಾಗಿಲು ಮುಚ್ಚಿವೆ. ಬ್ಯಾಂಕ್‌ಗಳಿಗೆ ರಜೆ ಇದ್ರೂ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ವ್ಯತಿತರಿಕ್ತ ಪರಿಣಾಮ ಬೀರಲ್ಲ.

Banks will closed 14 days in august 2024 check rbi list mrq

ಬೆಂಗಳೂರು: ಇಂದು ಕೇವಲ ಹಣ ಜಮೆ ಅಥವಾ ಹಿಂತೆಗೆತಕ್ಕೆ ಮಾತ್ರ ಜನರು ಬ್ಯಾಂಕ್‌ಗಳಿಗೆ ಹೋಗಲ್ಲ. ಇದನ್ನು ಹೊರತುಪಡಿಸಿ ಹಲವು ಹಣಕಾಸಿನ ಸೇವೆಗಳನ್ನು ಬ್ಯಾಂಕ್‌ಗಳು ಒದಗಿಸುತ್ತವೆ. ಹಾಗಾಗಿ ಬ್ಯಾಂಕ್‌ ರಜಾದಿನಗಳ ಬಗ್ಗೆ ತಿಳಿದುಕೊಂಡಿರಬೇಕು. ಭಾನುವಾರದ ಜೊತೆಗೆ ಎರಡು ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಈ ರಜೆಗಳನ್ನು ಹೊರತುಪಡಿಸಿಯೂ ಹಲವು ಸರ್ಕಾರಿ ರಜೆಗಳು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳಿಗೆ ಅನ್ವಯವಾಗುತ್ತವೆ. ಮುಂದಿನ ತಿಂಗಳು ಆಗಸ್ಟ್‌ನಲ್ಲಿ ಬ್ಯಾಂಕ್‌ಗಳು ಬರೋಬ್ಬರಿಗೆ 14 ದಿನ ಬಾಗಿಲು ಮುಚ್ಚಿವೆ. ಬ್ಯಾಂಕ್‌ಗಳಿಗೆ ರಜೆ ಇದ್ರೂ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ವ್ಯತಿತರಿಕ್ತ ಪರಿಣಾಮ ಬೀರಲ್ಲ. ಆನ್‌ಲೈನ್ ಸೇವೆಗಳು 24*7 ಕಾರ್ಯನಿರ್ವಹಿಸುತ್ತಿರುತ್ತವೆ. 

ಆಗಸ್ಟ್ ತಿಂಗಳಲ್ಲಿ ಮೂರು ಪ್ರಮುಖ ಹಬ್ಬಗಳು ಬರುತ್ತವೆ. ರಕ್ಷಾ ಬಂಧನ, ಜನ್ಮಾಷ್ಠಮಿ ಮತ್ತು ಸ್ವತಂತ್ರ ದಿನಾಚರಣೆಗಳಿಗೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಮೂರು ಹಬ್ಬಗಳ ಜೊತೆ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ಸೇರಿಸಿದ್ರೆ 10 ರಜೆ ಆಗುತ್ತದೆ. ಇನ್ನುಳಿದ ನಾಲ್ಕು ರಜೆ ಯಾವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ. 

ದೇಶದಲ್ಲಿ ಉದ್ಯೋಗ ಹೆಚ್ಚಳಕ್ಕೆ ನಿರ್ಮಲಾ ಸೀತಾರಾಮನ್ ಮೂರು ಹೊಸ ಸ್ಕೀಂ ಘೋಷಣೆ

ಆಗಸ್ಟ್ 2024- ಬ್ಯಾಂಕ್ ರಜಾದಿನಗಳ ಪಟ್ಟಿ 

ಆಗಸ್ಟ್ 3: ಅಗರ್ತಲಾದಲ್ಲಿ ಕೇರ ಪೂಜೆ ಹಿನ್ನೆಲೆ ಈ ಭಾಗದಲ್ಲಿಯ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಆಗಸ್ಟ್ 4: ಭಾನುವಾರ
ಆಗಸ್ಟ್ 7: ಹರಿಯಾಲಿ ತೀಜ್ ಹಬ್ಬದ ಹಿನ್ನೆಲೆ ಹರಿಯಾಣದ ಬ್ಯಾಂಕ್‌ಗಳಿಗೆ ರಜೆ
ಆಗಸ್ಟ್ 8: ಈ ದಿನದಂದು ಸಿಕ್ಕಿಂನಲ್ಲಿ ತೇದೋಂಗ್ ಲೋರಂ ಫೈಟ್ ಆಚರಿಸಲಾಗುತ್ತದೆ. ಈ ಹಿನ್ನೆಲೆ ಸಿಕ್ಕಿಂನಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗುತ್ತದೆ. 
ಆಗಸ್ಟ್ 10: ತಿಂಗಳ ಎರಡನೇ ಶನಿವಾರ 
ಆಗಸ್ಟ್ 11: ಭಾನುವಾರ 
ಆಗಸ್ಟ್ 13: ಇಂಫಾಲ್‌ನಲ್ಲಿ ದೇಶಭಕ್ತ ದಿನ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. 
ಆಗಸ್ಟ್ 15: ಸ್ವತಂತ್ರ ದಿನಾಚರಣೆ
ಆಗಸ್ಟ್ 18: ಭಾನುವಾರ 
ಆಗಸ್ಟ್ 20: ಶ್ರೀ ನಾರಾಯಣ ಗುರು ಜಯಂತಿ ಹಿನ್ನೆಲೆ ಕೊಚ್ಚಿ ಮತ್ತು ತಿರುವನಂತಪುರದಲ್ಲಿ ರಜೆ ಘೋಷಣೆ ಮಾಡಲಾಗುತ್ತದೆ. 
ಆಗಸ್ಟ್ 24: ನಾಲ್ಕನೇ ಶನಿವಾರ
ಆಗಸ್ಟ್ 25: ಭಾನುವಾರ
ಆಗಸ್ಟ್ 24: ಇಡೀ ದೇಶದ ತುಂಬೆಲ್ಲಾ ಕೃಷ್ಣ ಜನ್ಮಷ್ಠಾಮಿಯನ್ನು ಆಚರಣೆ ಮಾಡಲಾಗುತ್ತದೆ. ಹಾಗಾಗಿ ದೇಶದ ಎಲ್ಲಾ ಭಾಗಗಳಲ್ಲಿಯೂ ಸರ್ಕಾರಿ ರಜೆ ಇರುತ್ತದೆ.

ಈ ರಜೆಗಳ ದಿನಗಳಂದು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಆನ್‌ಲೈನ್‌ ಮೂಲಕ ಮಾಡಿಕೊಳ್ಳಬಹುದು. ಬ್ಯಾಂಕ್ ರಜೆಯಲ್ಲಿದ್ದರೂ ಎಟಿಎಂ ಸೇವೆ ಗ್ರಾಹಕರಿಗೆ ತೆರೆದಿರುತ್ತದೆ. ಡೆಬಿಟ್ ಕಾರ್ಡ್ ಸಹಾಯದಿಂದ ಎಟಿಎಂ ಮೂಲಕ ಹಣ ಹಿಂಪಡೆದುಕೊಳ್ಳಬಹುದಾಗಿದೆ. ಹಣ ಜಮೆ ಮಾಡುವ ಸೌಲಭ್ಯವೂ ಗ್ರಾಹಕರಿಗೆ ಲಭ್ಯವಿರುತ್ತದೆ.

ಮೂರು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 4,600 ರೂ ಇಳಿಕೆ; ಇಂದಿನ ದರ ಹೇಗಿದೆ?

Latest Videos
Follow Us:
Download App:
  • android
  • ios