ಬಡ ಎಕನಾಮಿಕ್ಸ್‌ಗೆ ಶ್ರೀಮಂತ ಪ್ರಶಸ್ತಿ; ಭಾರತೀಯ ಸಂಜಾತನಿಗೆ ನೊಬೆಲ್ ಗರಿ!
ಜಗತ್ತಿನ ಅತ್ಯುನ್ನತ ಗೌರವಕ್ಕೆ ಭಾಜನರಾಗಿರುವ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಭಾರತೀಯ ಮೂಲದವರು ಎನ್ನುವುದೇ ಹೆಮ್ಮೆಯ ಸಂಗತಿ. ಅಭಿಜಿತ್ ಬ್ಯಾನರ್ಜಿ ಮೂಲತಃ ಮಹಾರಾಷ್ಟ್ರದ ಧೂಲೆಯವರು. ತಾಯಿ ನಿರ್ಮಲಾ ಬ್ಯಾನರ್ಜಿ, ತಂದೆ ದೀಪಕ್ ಬ್ಯಾನರ್ಜಿ. ತಂದೆ ತಾಯಿ ಇಬ್ಬರೂ ಪ್ರಾದ್ಯಾಪಕರು.
ಭಾರತೀಯ ಸಂಜಾತ ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಈಸ್ಟರ್ ಡುಪ್ರೋ ಮತ್ತು ಮೈಖಲ್ ಕ್ರೆಮರ್ ಅವರಿಗೆ 2019ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಸಂದಿದೆ. ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನಕ್ಕಾಗಿ ಇವರುಗಳಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
6.51 ಕೋಟಿ ರು. ಗಳನ್ನು ಒಳಗೊಂಡಿರುವ ಪ್ರಶಸ್ತಿ ಮೊತ್ತವನ್ನು ಮೂವರು ವಿಜೇತರಿಗೆ ಸಮಾನವಾಗಿ ಹಂಚಲಾಗುತ್ತದೆ. ವಿಶೇಷ ಎಂದರೆ ನೊಬೆಲ್‌ಗೆ ಭಾಜನರಾಗಿರುವ ಡುಫೆä್ರೕ ಫ್ರೆಂಚ್-ಅಮೆರಿಕ ಮೂಲದವರಾಗಿದ್ದು, ಬ್ಯಾನರ್ಜಿ ಅವರ ಪತ್ನಿ ಕೂಡ ಹೌದು.
ದುರ್ಬಲ ಆರ್ಥಿಕತೆ ಸುಧಾರಿಸುವುದಿಲ್ಲ: ನೊಬೆಲ್ ಪುರಸ್ಕೃತನ ಮಾತು ಕೇಳೋರಿಲ್ವಾ?
ಪ್ರಶಸ್ತಿ ನೀಡಿದ್ದೇಕೆ?
ಬಡತನ ನಿವಾರಣೆಗೆ ಇವರುಗಳು ನಡೆಸಿದ ಸಂಶೋಧನೆಯು ಜಾಗತಿಕ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಕೇವಲ ಎರಡು ದಶಕಗಳಲ್ಲಿ, ಅವರ ಹೊಸ ಪ್ರಯೋಗ ಆಧಾರಿತ ವಿಧಾನವು ಅಭಿವೃದ್ಧಿ ಆರ್ಥಿಕತೆಯನ್ನು ಮಾರ್ಪಡಿಸಿದೆ. ಇದು ಈಗ ಅಭಿವೃದ್ಧಿ ಹೊಂದುತ್ತಿರುವ ಸಂಶೋಧನಾ ಕ್ಷೇತ್ರವಾಗಿದೆ.
ಆದರೆ ಜಾಗತಿಕ ಬಡತನದ ವಿರುದ್ಧ ಹೋರಾಟಕ್ಕೆ ಅತ್ಯಂತ ವಿಶ್ವಾಸಾರ್ಹ ದಾರಿಯನ್ನು ಸಂಶೋಧಕರು ಒದಗಿಸಿದ್ದಾರೆ ಎಂದು ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಇವರುಗಳ ಪ್ರಯೋಗಾತ್ಮಕ ಸಂಶೋಧನಾ ವಿಧಾನವು ಶಾಲೆಗಳಲ್ಲಿ ಈ ಕುರಿತ ಅಧ್ಯಯನ ಮಾಡುತ್ತಿರುವ 50 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದು ಅಕಾಡೆಮಿ ಹೇಳಿದೆ.
ಯಾರು ಅಭಿಜಿತ್ ಬ್ಯಾನರ್ಜಿ
ಜಗತ್ತಿನ ಅತ್ಯುನ್ನತ ಗೌರವಕ್ಕೆ ಭಾಜನರಾಗಿರುವ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಭಾರತೀಯ ಮೂಲದವರು ಎನ್ನುವುದೇ ಹೆಮ್ಮೆಯ ಸಂಗತಿ. ಅಭಿಜಿತ್ ಬ್ಯಾನರ್ಜಿ ಮೂಲತಃ ಮಹಾರಾಷ್ಟ್ರದ ಧೂಲೆಯವರು. ತಾಯಿ ನಿರ್ಮಲಾ ಬ್ಯಾನರ್ಜಿ, ತಂದೆ ದೀಪಕ್ ಬ್ಯಾನರ್ಜಿ. ತಂದೆ ತಾಯಿ ಇಬ್ಬರೂ ಪ್ರಾದ್ಯಾಪಕರು. ಕಲ್ಕತ್ತಾದ ಸೌತ್ ಪಾಯಿಂಟ್ ಸ್ಕೂಲ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿರುವ ಅಭಿಜಿತ್, ಯುನಿವರ್ಸಿಟಿ ಆಫ್ ಕೊಲ್ಕತ್ತಾದಲ್ಲಿ ಪದವಿ ಪಡೆದರು.
ಕಹಿ ಸತ್ಯ ಕೇಳುವ ಮನೋಭಾವ ಇರಲಿ: ಸ್ವಾಮಿ ಹೇಳಿಕೆಗೆ ಮೋದಿ ತಲೆ ಕೆದರಿಕೊಳ್ಳದಿರಲಿ!
1983ರಲ್ಲಿ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, 1988ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಆರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅಭಿಜಿತ್ ಬ್ಯಾನರ್ಜಿ ಫ್ರೆಂಚ್ ಅಮೆರಿಕ ಮೂಲಕ ಡುಫ್ರೋ ಅವರನ್ನು ವಿವಾಹವಾಗುವುದಕ್ಕೂ ಮೊದಲು ಭಾರತೀಯರೇ ಆದ ಡಾ.ಅರುದಂತಿ ಬ್ಯಾನರ್ಜಿ ಅವರನ್ನು ವಿವಾಹವಾಗಿದ್ದರು. ಇವರಿಬ್ಬರಿಗೆ ಒಬ್ಬ ಪುತ್ರ ಇದ್ದು ಸದ್ಯ ವಿಚ್ಛೇದನ ಪಡೆದಿದ್ದಾರೆ. ನಂತರ 2015ರಲ್ಲಿ ಎಂಐಟಿಯಲ್ಲಿ ಫೆä್ರಪೆಸರ್ ಆಗಿರುವ ಡುಫ್ರೋ ಅವರನ್ನು ವಿವಾಹವಾದರು.
ಸದ್ಯ ಅಮೆರಿಕದಲ್ಲಿ ನೆಲೆಸಿರುವ 58 ವರ್ಷದ ಅಭಿಜಿತ್ ಬ್ಯಾನರ್ಜಿ ಅವರು ಅವರು ಮಸಾಚುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾಗಿದ್ದಾರೆ. 2003ರಲ್ಲಿ ಬ್ಯಾನರ್ಜಿ ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆಕ್ಷನ್ ಲ್ಯಾಬನ್ನು ಪತ್ನಿ ಡುಫ್ರೋ ಮತ್ತು ಸೆಂಥಿಲ್ ಮುಲ್ಪೈನಾಥನ್ ಜೊತೆ ಸ್ಥಾಪನೆ ಮಾಡಿರುವ ಇವರು ಇಂದಿಗೂ ಇದರ ನಿರ್ದೇಶಕರಾಗಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಗಣ್ಯ ವ್ಯಕ್ತಿಗಳ ಉನ್ನತ ಮಟ್ಟದ ಸಮಿತಿಯಲ್ಲಿಯೂ ಇವರು ಸೇವೆ ಸಲ್ಲಿಸಿದ್ದಾರೆ.
ದೆಹಲಿಯ ಜವಹರಲಾಲ್ ನೆಹರೂ ವಿವಿ ಹಾಗೂ ಪ್ರೆಸಿಡೆನ್ಸಿ ಕಾಲೇಜಿನ ಪೂರ್ವ ವಿದ್ಯಾರ್ಥಿಯಾಗಿರುವ ಬ್ಯಾನರ್ಜಿ, ಎನ್‌ಬಿಇಆರ್‌ನಲ್ಲಿ ಬ್ಯೂರೋ ಫಾರ್ ದಿ ರಿಸಚ್‌ರ್ ಇನ್ ದಿ ಎಕನಾಮಿಕ್ ಅನಾಲಿಸಿಸ್ ಆಫ್ ಡೆವಲಪ್‌ಮೆಂಟ್‌ನಲ್ಲಿ ಸಂಶೋಧನಾ ಸಹವರ್ತಿ, ಸಿಇಪಿಆರ್ ಸಂಶೋಧನಾ ಸಹವರ್ತಿ, ಇನ್‌ಸ್ಟಿಟ್ಯೂಟ್‌ನ ಇಂಟನ್ರ್ಯಾಷನಲ್ ನಲ್ಲಿ ಸಂಶೋಧಕ, ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಇಕೋನೊಮೆಟ್ರಿಕ್ ಸೊಸೈಟಿಯಲ್ಲಿ ಸಹವರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇಸ್ಫೋಸಿಸ್ ನೀಡುವ ಇಸ್ಫೋಸಿಸ್ ಬಹುಮಾನ ಕೂಡ ಅಭಿಜಿತ್ ಪಾಲಾಗಿದೆ. ಡುಲ್ಫೋ ಅವರು ಕೂಡ ಎಂಐಟಿಯಲ್ಲಿ ಬಡತನ ನಿರ್ಮೂಲನೆ ಹಾಗೂ ಅಭಿವೃದ್ಧಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾಗಿದ್ದಾರೆ. 2011ರಲ್ಲಿ ವಿದೇಶಿ ನೀತಿ ನಿಯತಕಾಲಿಕೆಯಲ್ಲಿ ಪ್ರಕಟವಾದ 100 ಜಾಗತಿಕ ಚಿಂತಕರ ಪೈಕಿ ಇವರ ಹೆಸರೂ ಇತ್ತು.
ಆರ್ಥಿಕತೆ ನಿಜಕ್ಕೂ ಕುಸಿಯುತ್ತಿದೆಯಾ? ಭರವಸೆಯ ಬೆಳಕೊಂದು ಕಾಣುತ್ತಿದೆಯಾ?
ಅಸಂಖ್ಯಾತ ಲೇಖನಗಳನ್ನು ಬರೆದಿರುವ ಇವರು ಅರ್ಥಶಾಸ್ತ್ರ ಸಂಬಂಧಿಸಿದಂತೆ ‘ಪೂವರ್ ಎಕನಾಮಿಕ್ಸ್ ಸೇರಿದಂತೆ 4 ಪುಸ್ತಕಗಳನ್ನುಬರೆದಿದ್ದಾರೆ. 2 ಡಾಕುಮೆಂಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಪತಿ ಪತ್ನಿ ಇಬ್ಬರೂ ಜೊತೆಗೂಡಿ ಬರೆದಿರುವ ‘ಪೂವರ್ ಎಕನಾಮಿಕ್ಸ್’ ಎಂಬ ಪುಸ್ತಕದಲ್ಲಿ ಜಾಗತಿಕ ಬಡತನ ನಿವಾರಣೆಗೆ ಪರಿಣಾಮಕಾರಿ ಪರಿಹಾರ ಕ್ರಮಗಳನ್ನು ಸೂಚಿಸಲಾಗಿದೆ.
ನ್ಯಾಯ್ ಯೋಜನೆಗೆ ಕೊಡುಗೆ
ಭಾರತದಲ್ಲಿ ಅಭಿವೃದ್ಧಿ ಆರ್ಥಿಕತೆಗಿರುವ ತೊಡಕುಗಳು ಅದರಲ್ಲೂ ಬಡತನ ನಿವಾರಣೆ ಬಗ್ಗೆ ಕಾಳಜಿ ಹೊಂದಿ ಸಂಶೋಧನೆ ನಡೆಸುತ್ತಿರುವ ಅಭಿಜಿತ್ ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ‘ನ್ಯಾಯ್’ ಯೋಜನೆಯ ಹಿಂದಿನ ಶಕ್ತಿ ಕೂಡ ಹೌದು. ಅಂದರೆ ಈ ಯೋಜನೆಯ ರೂಪುರೇಷೆ ಸಿದ್ಧಪಡಿಸಲು ಅದಕ್ಕೊಂದು ಸೂಕ್ತ ಹೆಸರಿಡಲು ಶ್ರಮಿಸಿದ್ದರು. 2019ರ ಚುನಾವಣೆ ವೇಳೆ ದೇಶದ 20% ಬಡಜನರಿಗೆ ವಾರ್ಷಿಕ 72,000 ನೀಡುವ ಯೋಜನೆಯೊಂದನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.
2016ರಲ್ಲಿ ದೇಶದ್ರೋಹದ ಆರೋಪದ ಮೇಲೆ ದೆಹಲಿಯ ಜೆಎನ್‌ಯು ವಿದ್ಯಾರ್ಥಿಗಳ ಬಂಧನವಾಗುತ್ತಿದ್ದಾಗ ಅಭಿಜಿತ್ ಬ್ಯಾನರ್ಜಿ ಹಿಂದುಸ್ತಾನ್ ಟೈಮ್ಸ್‌ಗೆ ಲೇಖನ ಬರೆದಿದ್ದರು. ಅದರಲ್ಲಿ 1983ರಲ್ಲಿ ನಾನೂ ಬಂಧನವಾಗಿದ್ದೆ. ಸರ್ಕಾರ ಜೆಎನ್‌ಯುನಂತರ ಅಭಿವ್ಯಕ್ತಿ ಕೇಂದ್ರದಿಂದ ಸರ್ಕಾರ ಏಕೆ ಅಂತ ಕಾಯ್ದುಕೊಳ್ಳಬಾರದು ಎಂದು ಪ್ರಶ್ನಿಸಿದ್ದರು.
ಇದುವರೆಗೆ 81 ಸಾಧಕರಿಗೆ ನೊಬೆಲ್
ನೊಬೆಲ್ ಸಂಸ್ಥಾಪಕ ಆಲ್‌ಫ್ರೆಡ್ ನೊಬೆಲ್ ಆರ್ಥಿಕ ಕ್ಷೇತ್ರದ ಸಾಧಕರಿಗೆ ನೊಬೆಲ್ ಪುಸ್ಕಾರ ನೀಡುವ ಪ್ರಸ್ತಾಪ ಮಾಡಿರಲಿಲ್ಲ. ಆದರೆ ರಿಸ್ಕ್ ಬೆಂಕನ್ 1968ರಲ್ಲಿ ಸ್ವೀಡನ್ ಸೆಂಟ್ರಲ್ ಬ್ಯಾಂಕ್ ಸ್ಥಾಪಿಸಿ ಆರ್ಥಶಾಸ್ತ್ರ ಕ್ಷೇತ್ರದ ಸಾಧಕರಿಗೂ ನೊಬೆಲ್ ಗೌರವ ನೀಡಲು ಆರಂಭಿಸಿದರು. ಇದುವರೆಗೆ 81 ಸಾಧಕರಿಗೆ ಅರ್ಥಶಾಸ್ತ್ರ ನೊಬೆಲ್ ದೊರೆತಿದೆ.