05:14 PM (IST) Mar 07

ಕರ್ನಾಟಕ ಬಜೆಟ್ 2025 ಮಾಹಿತಿ ಪುಸ್ತಕ

ಕರ್ನಾಟಕ ಬಜೆಟ್ 2025 ಮಾಹಿತಿ ಕೈಪಿಡಿ: Karnataka Budget 2025 pdf

04:03 PM (IST) Mar 07

ಪ್ರತಿಯೊಬ್ಬ ಕನ್ನಡಿಗರ ಮೇಲೆ ₹1 ಲಕ್ಷ ಸಾಲ ಹೊರಿಸಿದ ಬೊಗಳೆರಾಮಯ್ಯ; ಅಡ್ಡಕಸುಬಿ ಬಜೆಟ್ ಎಂದ ಆರ್. ಅಶೋಕ

ವಿಪಕ್ಷ ನಾಯಕ ಆರ್. ಅಶೋಕ ಅವರು ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ನಿರಾಶಾದಾಯಕ ಮತ್ತು ಮುಸ್ಲಿಂ ಓಲೈಕೆಯ ಬಜೆಟ್ ಆಗಿದೆ ಎಂದಿದ್ದಾರೆ. ಪ್ರತಿಯೊಬ್ಬ ಕನ್ನಡಿಗರ ಮೇಲೆ ₹1 ಲಕ್ಷ ಸಾಲ ಹೊರಿಸಿದ ಬೊಗಳೆರಾಮಯ್ಯ ಎಂದು ಟೀಕಿಸಿದ್ದಾರೆ.

ಪೂರ್ತಿ ಓದಿ
03:46 PM (IST) Mar 07

Karnataka Budget 2025: ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಿಗೆ ಸರ್ಕಾರ ಕಡಿವಾಣ

03:45 PM (IST) Mar 07

Karnataka Budget 2025: ಕುರಿ-ಮೇಕೆ ಮರಿಗಳ ಸಾವಿನ ಪರಿಹಾರ ಮೊತ್ತ 5 ಸಾವಿರ ರೂ ಹೆಚ್ಚಳ

03:45 PM (IST) Mar 07

Karnataka Budget 2025: ರಾಜ್ಯಾದ್ಯಂತ 5 ಸಾವಿರ ಶಿಕ್ಷರ ಭರ್ತಿಗೆ ಕ್ರಮ

03:34 PM (IST) Mar 07

Karnataka Budget 2025: ಸಿದ್ದರಾಮಯ್ಯ ಮೊದಲ ಬಜೆಟ್ ಗಾತ್ರ 12 ಸಾವಿರ ಕೋಟಿ, ಹದಿನಾರನೇ ಬಜೆಟ್ ಗಾತ್ರ 4 ಲಕ್ಷ ಕೋಟಿ!

ಸಿದ್ದರಾಮಯ್ಯ 1995ರಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡಿದಾಗ ಅದರ ಗಾತ್ರ 12,000 ಕೋಟಿ ರೂ. ಆಗಿತ್ತು. ಇದೀಗ 16ನೇ ಬಜೆಟ್ ಮಂಡನೆ ಮಾಡಿದ್ದು 4.09 ಲಕ್ಷ ಕೋಟಿ ರೂ. ಗಾತ್ರವಾಗಿದೆ. ಇದು ಸಾಮಾಜಿಕ ಕಳಕಳಿ ಮತ್ತು ಉದ್ಯಮ ಸ್ನೇಹಿ ಬಜೆಟ್ ಎಂದು ಸಚಿವ ಎಂ.ಬಿ. ಪಾಟೀಲ ಶ್ಲಾಘಿಸಿದ್ದಾರೆ.

ಪೂರ್ತಿ ಓದಿ
01:44 PM (IST) Mar 07

ಕರ್ನಾಟಕ ಬಜೆಟ್ 2025: ಕ್ರೀಡಾಪಟುಗಳಿಗೆ ಬಂಪರ್ ಗಿಫ್ಟ್ ಕೊಟ್ಟ ಸಿದ್ದರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಭರಪೂರ ಕೊಡುಗೆಗಳನ್ನು ನೀಡಲಾಗಿದೆ. ಒಲಿಂಪಿಕ್ಸ್‌ಗೆ ತಯಾರಿ, ಕ್ರೀಡಾಂಗಣಗಳ ಅಭಿವೃದ್ಧಿ, ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.

ಪೂರ್ತಿ ಓದಿ

01:38 PM (IST) Mar 07

ರಾಜ್ಯದ ವಿವಿಧ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಅನುದಾನ, ರೈಲ್ವೆ, ಜಲಸಾರಿಗೆ ಕ್ಷೇತ್ರಕ್ಕೆ ಎಷ್ಟು ಸಿಕ್ತು?

ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ವಿಮಾನ ನಿಲ್ದಾಣಗಳು, ರೈಲ್ವೆ ಯೋಜನೆಗಳು ಮತ್ತು ಜಲಸಾರಿಗೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕರಾವಳಿ ಪ್ರದೇಶದಲ್ಲಿ ಕಡಲು ಕೊರೆತ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು.

ಪೂರ್ತಿ ಓದಿ
01:20 PM (IST) Mar 07

ಕೊಡಗು: ರಾಜ್ಯದ ಬಜೆಟ್ ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್. ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುವ ಬಜೆಟ್. ಅದಕ್ಕಾಗಿ ಬಹಳಷ್ಟು ಯೋಜನೆ ರೂಪಿಸಿದ್ದಾರೆ. ಇದರಿಂದ ನಮಗೇನೂ ಸಮಸ್ಯೆ ಇಲ್ಲ. ಎಲ್ಲರಿಗೂ ಒಳ್ಳೆಯದಾಗಬೇಕು, ಲಾಭವಾಗಬೇಕು.ಆದರೆ ಹಿಂದೂಗಳಿಗೆ ಕೊಡಬೇಕಾಗಿರುವುದನ್ನು ಕೊಡುವುದರಲ್ಲಿ ವಿಫಲವಾಗಿದೆ. ಅದು ಮುಖ್ಯವಾಗಿ ಎದ್ದು ಕಾಣುತ್ತಿದೆ. ಬರೀ ಅಲ್ಪಸಂಖ್ಯಾತರನ್ನು ಓಲೈಸಿರುವ ರೀತಿ ಬಜೆಟ್ ರೂಪಿಸಿರುವುದು ಕಾಣುತ್ತದೆ. ರಾಜ್ಯದಲ್ಲಿ ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದಕ್ಕೆ ಸರ್ಕಾರ ಮುಂದಾಗಿದೆ. ಆದರೆ ವಿದೇಶದಲ್ಲಿ ಓದುವ ಅಲ್ಪಸಂಖ್ಯಾತರಿಗೆ ಇದ್ದ ಸಹಾಯಧನವನ್ನು 20 ರಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತರ ವಿದ್ಯಾಭ್ಯಾಸಕ್ಕಾಗಿ ಅವರು ಅವಕಾಶ ನೀಡುತ್ತಿದ್ದಾರೆ. ಒಳ್ಳೆಯ ಕೆಲಸವಿದ್ದರೆ ನಾವು ಬೆಂಬಲಿಸುತ್ತೇವೆ. ಆದರೆ ಬರೀ ಘೋಷಣೆಗಳು ಆಗುತ್ತಿವೆ. ಘೋಷಣೆಗಳು ಅನುಷ್ಠಾನ ಆಗುವುದರಲ್ಲಿ ವಿಫಲವಾಗುತ್ತಿವೆ. 

ಕೇಂದ್ರ ಹಲವು ಯೋಜನೆಗಳ ಪೂರೈಸಲು ರಾಜ್ಯದ ಪಾಲು ಕೊಡುವ ನಿರೀಕ್ಷೆ ಇತ್ತು. ಮೈಸೂರು ಏರ್ ಪೋರ್ಟಿಗೆ ಕೇವಲ 120 ಕೋಟಿ ಬೇಕಿತ್ತು.ಆದರೆ ಇದುವರೆಗೆ ಅದರ ಮಾಹಿತಿ ಇಲ್ಲ. ಮೈಸೂರು ಕುಶಾಲನಗರ ರೈಲ್ವೆ ಸಂಪರ್ಕ ಆಗಬೇಕಾಗಿತ್ತು. ಅದಕ್ಕಾಗಿ ಭೂಸ್ವಾದೀನಕ್ಕೆ ಅನುದಾನ ನಿಗಧಿ ಮಾಡಬೇಕಾಗಿತ್ತು. ಅದರಲ್ಲೂ ಕೂಡ ಏನೂ ಕೊಟ್ಟಿಲ್ಲ ವಿಫಲರಾಗುತ್ತಿದ್ದಾರೆ. ಕನಿಷ್ಠ ಕೊಡಗಿನ ರಸ್ತೆಗಳ ಅಭಿವೃದ್ಧಿಗಾದರೂ ಅನುದಾನ ಕೊಡಬೇಕಾಗಿತ್ತು. ಅದನ್ನು ಮಾಡಿದ್ದರೂ ಕೊಡಗಿಗೆ ದೊಡ್ಡ ಲಾಭವಾಗುತಿತ್ತು . ಕೊಡಗಿನ ಎಲ್ಲಾ ರಸ್ತೆಗಳು ಗುಂಡಿಬಿದ್ದಿವೆ. ಅದರ ಬಗ್ಗೆಯೂ ನಿರೀಕ್ಷೆ ಇತ್ತು. ಮತ್ತೊಂದು ಕಡೆ ಆದಿವಾಸಿಗಳಿಗೆ ಮೂಲಸೌಕರ್ಯ ಕೊಡುವ ಕೆಲಸ ಆಗಿಲ್ಲ. ಕಾಡು ಬಿಟ್ಟು ನಾಡಿಗೆ ಬಂದಿರುವ ಜನರಿಗೂ ಮೂಲಸೌಕರ್ಯ ಕೊಟ್ಟಿಲ್ಲ. ಇದೆಲ್ಲವೂ ರಾಜ್ಯದ ಬಜೆಟ್ನಲ್ಲಿ ನಿರೀಕ್ಷೆಯಿತ್ತು. ಸಿದ್ದರಾಮಯ್ಯನವರು 16 ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಈಗಲಾದರೂ ಒಂದು ಒಳ್ಳೆಯ ಕೆಲಸ ಮಾಡಬಹುದಿತ್ತು. ಬಜೆಟ್ ನಲ್ಲಿ ನನಗೆ ಯಾವುದೇ ತೃಪ್ತಿಯಿಲ್ಲ ಎಂದ ಸಂಸದ ಯದುವೀರ್ ಒಡೆಯರ್.

01:20 PM (IST) Mar 07

Karnataka Budget 2025: ನಿರ್ಜೀವ ಬಜೆಟ್ ಎಂದ ಪ್ರಭು ಚೌವ್ಹಾಣ್, ಸಮಾಜಮುಖಿ ಬಜೆಟ್ ಎಂದ ಶಿವರಾಮ್ ಹೆಬ್ಬಾರ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹೊಗಳಿದ್ದಾರೆ. ಆದರೆ, ಶಾಸಕ ಪ್ರಭು ಚೌವ್ಹಾಣ್ ಟೀಕಿಸಿದ್ದು, ಪಶು ಸಂಗೋಪನೆಗೆ ಏನೂ ನೀಡಿಲ್ಲ ಎಂದಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಮ್ಮ ಕ್ಷೇತ್ರದ ಬೇಡಿಕೆ ಈಡೇರಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
01:08 PM (IST) Mar 07

ಬಜೆಟ್‌ನಲ್ಲೂ ದಾಖಲೆ, ಸಾಲದಲ್ಲೂ ದಾಖಲೆ: ಸಿ.ಟಿ.ರವಿ

ಸಿಟಿ ರವಿ ಹೇಳಿಕೆ 

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 16 ನೇ ಬಜೆಟ್. ಬಜೆಟ್‌ನಲ್ಲೂ ದಾಖಲೆ ಸಾಲದಲ್ಲೂ ದಾಖಲೆ. ಅತೀ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತುಯೂ ಅವರದೇ. ಅತೀ ಹೆಚ್ಚು ಸಾಲ ಮಾಡಿದ ಕುಖ್ಯಾತಿಯೂ ಸಿಎಂ ಸಿದ್ದರಾಮಯ್ಯ ಅವರದೇ ಆಗಿದೆ. ಊದೋ ಶಂಖ ... ಕೋಗೋ ಶಂಖ ಅನ್ನೋ ಹಾಗೆ. ಇದು ಅನುಷ್ಠಾನ ಆಗೋ ಬಜೆಟೋ ಅಥ್ವಾ ಘೋಷಣೆಯ ಬಜೆಟೋ ಅನ್ನೋದನ್ನ ಸಿದ್ದರಾಮಯ್ಯ ಹೇಳಬೇಕು. ಕಳೆದ ವರ್ಷದ ಬಜೆಟ್ ಶೇಕಾಡ 50% ಅನುಷ್ಠಾನಕ್ಕೆ ಬಂದಿಲ್ಲ.

01:03 PM (IST) Mar 07

ರಾಜಧಾನಿ ಅಭಿವೃದ್ಧಿಗೆ 7,000 ಕೋಟಿ ರೂ, ಬ್ರ್ಯಾಂಡ್‌ ಬೆಂಗಳೂರು ಹೆಸರಿನಲ್ಲಿ ಬಂಪರ್ ಕೊಡುಗೆ!

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರವು 7,000 ಕೋಟಿ ರೂ. ಅನುದಾನವನ್ನು ಹೆಚ್ಚಿಸಿದೆ. ಸುರಂಗ ಮಾರ್ಗಗಳು, ರಸ್ತೆಗಳ ಅಭಿವೃದ್ಧಿ, ಮೆಟ್ರೋ ವಿಸ್ತರಣೆ ಮತ್ತು ಕೆರೆಗಳ ಪುನರುಜ್ಜೀವನ ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಪೂರ್ತಿ ಓದಿ
12:50 PM (IST) Mar 07

ಇದು ಸಮಾಜಮುಖಿ ಬಜೆಟ್: ಬಿಜೆಪಿ ಶಾಸಕ

ಬಿಜೆಪಿ ಶಾಸಕ.ಶಿವರಾಮ್ ಹೆಬ್ಬಾರ್ ಹೇಳಿಕೆ, ಇದೊಂದು ಸಮಾಜಮುಖಿ ಬಜೆಟ್. ಎಲ್ಲ ವರ್ಗಕ್ಕೂ ಸಮುದಾಯಕ್ಕೂ ಅಭಿವೃದ್ಧಿ ಕೊಟ್ಟಿದ್ದಾರೆ. ಕರಾವಳಿ ಭಾಗಕ್ಕೆ ಒಳ್ಳೆ ಯೋಜನೆ ಘೋಷಣೆ ಮಾಡಿದ್ದಾರೆ. ನಾನು ಯಾವುದೇ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ನಾನು ಪಕ್ಷಪಾತ ಮಾಡಲ್ಲ.ಶಾಸಕನಾಗಿ ಹೇಳುತ್ತಿದ್ದೇನೆ ಒಳ್ಳೆಯ ಬಜೆಟ್. ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಹೆಬ್ಬಾರ್. ಬಿಜೆಪಿ ಅವರು ಆರೋಪ ಮಾಡಲಿ. ನಾನು ಶಾಸಕನಾಗಿ ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ

12:46 PM (IST) Mar 07

ಸಿದ್ದರಾಮಯ್ಯ ಬಜೆಟ್ ನಿರ್ಜೀವ ಬಜೆಟ್: ಪ್ರಭು ಚೌವ್ಹಾಣ್

ಮಾಜಿ ಸಚಿವ ಪ್ರಭು ಚೌವ್ಹಾಣ್ ಹೇಳಿಕೆ, ಸಿದ್ದರಾಮಯ್ಯ ಅವರ ಬಜೆಟ್ ನಿರ್ಜೀವ ಬಜೆಟ್. ಬಜೆಟ್ ನಲ್ಲಿ ಜೀವ ಇಲ್ಲ. ಪಶು ಸಂಗೋಪನೆ ಇಲಾಖೆಗೆ ಏನೂ ಕೊಟ್ಟಿಲ್ಲ. ಖಸಾಯಿ ಖಾನಾಗೆ ಕೊಟ್ಟಿಲ್ಲ, ಪ್ರಾಣಿ ಸಹಾವಾಣಿ ಕೇಂದ್ರ ಬಂದ್ ಆಗಿದೆ. ಈ ಬಜೆಟ್ ನಿರ್ಜೀವ ಬಜೆಟ್, ಜೀವ ಇಲ್ಲ. ಏಳು ಕೋಟಿ ಜನತೆಗೆ ಮೋಸದ ಬಜೆಟ್. ನಮ್ಮ ತಾಲೂಕಿಗೆ ಏನೂ ಕೊಟ್ಟಿಲ್ಲ, ಕಲ್ಯಾಣ ಕರ್ನಾಟಕ ಕ್ಕೂ ಹಣ ನೀಡಿಲ್ಲ. ಈ ಸರ್ಕಾರ ಮೂಖ ಪ್ರಾಣಿಗಳ ವಿರೋಧಿ ಸರ್ಕಾರ. ಗೋ ಶಾಲೆ ಗಳು ಬಂದ್ ಮಾಡಿದ್ದಾರೆ. ಪ್ರಾಕ್ಟೀಕಲ್ ಸಾಧನೆಗೆ ಅರ್ಥ ಇಲ್ಲ.

12:43 PM (IST) Mar 07

Karnataka budget 2025: ಜೋಯಿಡಾ ಸಾವಯವ ತಾಲೂಕು; ಮಂಡ್ಯಕ್ಕೆ ಕೃಷಿ ಕಾಲೇಜು, ಬೆಳಗಾವಿಗೆ ಕೃಷಿ ಸಂಶೋಧನಾ ಕೇಂದ್ರ!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವು ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದ್ದು, ರೈತರಿಗೆ ವಿವಿಧ ಯೋಜನೆಗಳ ಮೂಲಕ ಸಹಾಯಧನ ಒದಗಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲಾಗುವುದು.

ಪೂರ್ತಿ ಓದಿ
12:30 PM (IST) Mar 07

ಅಂಗನವಾಡಿಗೆ ಅಲ್ಪ ವೇತನ ಹೆಚ್ಚಳ, ಚಿತ್ರದುರ್ಗದಲ್ಲಿ ಪ್ರತಿಭಟನೆ

ಚಿತ್ರದುರ್ಗ: ಅಂಗನವಾಡಿ ಕಾರ್ಯಕರ್ತರಿಗೆ ಅಲ್ಪ ಗೌರವಧನ ಹೆಚ್ಚಳಕ್ಕೆ ಕಿಡಿ. ಚಿತ್ರದುರ್ಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ. ಬಜೆಟ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಘೋಷಣೆ. ಅಂಗನವಾಡಿ ಕಾರ್ಯಕರ್ತರಿಗೆ ₹1ಸಾವಿರ. ಅಂಗನವಾಡಿ ಸಹಾಯಕರಿಗೆ ₹750 ಹೆಚ್ಚಿಸಿರುವ ಸರ್ಕಾರ. ಅಂಗನವಾಡಿ ಕಾರ್ಯಕರ್ತೆಯರಿಗೆ 15ಸಾವಿರ ರೂ. ಅಂಗನವಾಡಿ ಸಹಾಯಕರಿಗೆ 10ಸಾವಿರ ರೂ ಹೆಚ್ಚಳಕ್ಕೆ ಡಿಮ್ಯಾಂಡ್. ಸಿಎಂ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ

12:29 PM (IST) Mar 07

ದಾಖಲೆ ಬಚೆಟ್ ಅಂತ ಸಾಲದ ಬಜೆಟ್ ಮಂಡನೆ: ಸಿಎಂಗೆ ಸುನೀಲ್‌ಕುಮಾರ್ ಟಾಂಗ್

ಸಿದ್ದರಾಮಯ್ಯ ಬಜೆಟ್ ಮಂಡನೆ ವಿಚಾರ, ಮಾಜಿ ಸಚಿವ ವಿ. ಸುನೀಲ್ ಕುಮಾರ್ ಹೇಳಿಕೆ

ದಾಖಲೆಯ ಬಜೆಟ್ ಅಂತ ಸಾಲದ ಬಜೆಟ್ ಮಂಡಿಸಿದ್ದಾರೆ. ಮೂಲ‌ಭೂತ ಸೌಕರ್ಯ ಕೊಡೋದ್ರಲ್ಲಿ ವಿಫಲರಾಗಿದ್ದಾರೆ. ಸಿಎಂ ಸಮಾಜ ವಿಭಜನೆ ಮಾಡಿ, ಆರ್ಥಿಕ ವಿಭಜನೆ ಮಾಡಿದ್ದಾರೆ. ಕೆಐಡಿಬಿಐಯಲ್ಲಿ ಮುಸ್ಲಿಂಮರಿಗೆ ಮೀಸಲಾತಿ‌ ನೀಡಿ ಆರ್ಥಿಕ ವಿಭಜನೆಗೆ ಹೊರಟಿದೆ. ನಕ್ಸಲ್ ನಿಗೃಹ ದಳವನ್ನು ವಾಪಾಸ್ ತಗೆದುಕೊಳ್ಳಲು ಹೊರಟಿದ್ದಕ್ಕೆ ವಿರೋಧ ಇದೆ. ಕೊಂಕಣ ರೈಲ್ವೆಗೆ ಯಾವುದೇ ಸಹಾಯ ಕೊಡಲಿಲ್ಲ

12:28 PM (IST) Mar 07

ಉತ್ಪಾದನೆ ಸಾಮಾರ್ಥ್ಯ ಆಧಾರದ ಮೇಲೆ ಕೊಡಬೇಕು ಭೂಮಿ, ಧರ್ಮದ ಆಧಾರದ ಮೇಲಲ್ಲ

ಉತ್ತರ ಕರ್ನಾಟಕ ಅಭಿವೃದ್ಧಿ ಸಂಪೂರ್ಣ ಕಡೆಗಣಿಸಲಾಗಿದೆ.ವಾಣಿಜ್ಯೋದ್ಯಮ ಸಂಘದ ಮಾಜಿ ಅಧ್ಯಕ್ಷ ರಮೇಶ್ ಪಾಟೀಲ್ ತೀವ್ರ ಅಸಮಾಧಾನ. ಇದು ಬೆಂಗಳೂರು ಬಜೆಟ್, ಇದು ಕರ್ನಾಟಕದ ಬಜೆಟ್ ಅಲ್ಲವೇ ಅಲ್ಲ.ಉತ್ತರ ಕರ್ನಾಟಕ ಪ್ರತ್ಯೇಕ ಮಾಡಿಕೊಳ್ಳಿ ಅಂತ ಹೇಳಿದಂತಿದೆ. ಉತ್ತರ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಏನ್ ಕೊಟ್ಟಿದ್ದಾರೆ? ಇನ್ನು ಕೈಗಾರಿಕೆ ಸ್ಥಾಪಿಸುವ ಮುಸ್ಲಿಮರಿಗೆ 20% ಮೀಸಲಾತಿ ವಿಚಾರ. ಕೈಗಾರಿಕೆಗಳಿಗೆ ಉತ್ಪಾದನೆ ಸಾಮಾರ್ಥ್ಯದ ಮೇಲೆ‌ ಭೂಮಿ ನೀಡಬೇಕು. ಧರ್ಮ ನೋಡಿ ಅಲ್ಲ, ಕೈಗಾರಿಕೆಗಳು ವಸ್ತುಗಳನ್ನು ಉತ್ಪಾದಿಸುತ್ತವೆ, ಕೈಗಾರಿಕೆಯಲ್ಲಿ ಧರ್ಮ ಬೆಳೆಸಲು ಭೂಮಿ ಕೊಟ್ಟಿದ್ದಾರೆ. ಇದು ತುಷ್ಟಿಕರಣಣ ಪರಮಾವಧಿ.

12:26 PM (IST) Mar 07

ಕನ್ನಡ ಚಿತ್ರಗಳಿಗೆ ಒಟಿಟಿಗೆ ವೇದಿಕೆ ಸೃಷ್ಟಿ

ಕನ್ನಡ ಚಲನಚಿತ್ರ ಪ್ರೋತ್ಸಾಹಕ್ಕಾಗಿ OTT ವೇದಿಕೆ ಸೃಷ್ಟಿಗೆ ಕ್ರಮ
ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ 
ಮಾನ್ಯತೆ ಪಡೆದ ಪತ್ರಕರ್ತರಿಗೆ 5 ಲಕ್ಷವರೆಗೆ ನಗದು ರಹಿತ ಚಿಕಿತ್ಸೆ
ಎಲ್ಲ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ. ಫಿಕ್ಸ್
ಪತ್ರಕರ್ತರ ಮಾಶಾಸನ 12ರಿಂದ 15,000 ಸಾವಿರಕ್ಕೆ ಏರಿಕೆ

12:24 PM (IST) Mar 07

ಸಿದ್ದಾಮಯ್ಯ ಬಜೆಟ್‌: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಬಲ: ಸರ್ಕಾರದ ಹೊಸ ಯೋಜನೆಗಳು!

ರಾಜ್ಯ ಸರ್ಕಾರವು ವೈದ್ಯಕೀಯ ಶಿಕ್ಷಣವನ್ನು ಬಲಪಡಿಸಲು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಇದರಲ್ಲಿ ಆಸ್ಪತ್ರೆಗಳ ಉನ್ನತೀಕರಣ, ಹೊಸ ಘಟಕಗಳ ಸ್ಥಾಪನೆ, ಮತ್ತು ವೈದ್ಯಕೀಯ ಕಾಲೇಜುಗಳ ಅಭಿವೃದ್ಧಿ ಸೇರಿವೆ.

ಪೂರ್ತಿ ಓದಿ