ಹರಿಯಾಣದ ಪ್ರವಾಸ ಬ್ಲಾಗರ್ ಜ್ಯೋತಿ ಮಲ್ಹೋತ್ರಾಳನ್ನು ಪಾಕಿಸ್ತಾನ ಪರ ಬೇಹುಗಾರಿಕೆ ಆರೋಪದಡಿ ಬಂಧಿಸಲಾಗಿದೆ. ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಜ್ಯೋತಿ, ತಿಂಗಳಿಗೆ ₹80,000 ರಿಂದ ₹2.7 ಲಕ್ಷದವರೆಗೆ ಗಳಿಸುತ್ತಿದ್ದರು. ಬಂಧನದಿಂದಾಗಿ ಬ್ರ್ಯಾಂಡ್ ಒಪ್ಪಂದಗಳು ರದ್ದಾಗಿ ಆಕೆಯ ಆದಾಯಕ್ಕೆ ಹೊಡೆತ ಬಿದ್ದಿದೆ.
ನವದೆಹಲಿ (ಮೇ.19): ಹರಿಯಾಣದ ಹಿಸಾರ್‌ನ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾಳನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಮೇ 17ರಂದು ಬಂಧಿಸಿದ್ದಾರೆ. ಆಕೆ ಜನಪ್ರಿಯ ಕಂಟೆಂಟ್ ಕ್ರಿಯೇಟರ್. ಯೂಟ್ಯೂಬ್‌ನಲ್ಲಿ 'ಟ್ರಾವೆಲ್ ವಿತ್ ಜೋ' ಎನ್ನುವ ಚಾನೆಲ್ ಮೂಲಕ ಟ್ರಾವೆಲ್ ಕಂಟೆಂಟ್‌ಅನ್ನು ಪೋಸ್ಟ್ ಮಾಡುತ್ತಿದ್ದರು. ಅಲ್ಲದೆ, ಪ್ರಮುಖ ಬ್ರ್ಯಾಂಡ್ ಡೀಲ್‌ಗಳನ್ನೂ ಆಕೆ ಹೊಂದಿದ್ದರು. ಯೂಟ್ಯೂಬ್ ಮತ್ತು ಇನ್ಸ್‌ಟಾಗ್ರಾಮ್‌ನಿಂದ ಪ್ರತಿ ತಿಂಗಳು ಲಕ್ಷಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದರು.
ಜ್ಯೋತಿ ಮಲೋತ್ರಾ ತಿಂಗಳ ಆದಾಯ: ಜ್ಯೋತಿ ಮಲ್ಹೋತ್ರಾ ಜನಪ್ರಿಯ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್. ತಮ್ಮನ್ನು 'ನೊಮ್ಯಾಡಿಕ್ ಲಿಯೋ ಗರ್ಲ್' ಎಂದು ಕರೆದುಕೊಂಡಿದ್ದರು. ಯೂಟ್ಯೂಬ್‌ನಲ್ಲಿ ಸುಮಾರು 3.77 ಲಕ್ಷ ಫಾಲೋವರ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 1.33 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.
YouTube ನಲ್ಲಿ ಟ್ರಾವೆಲ್ ವ್ಲಾಗರ್‌ಗಳು ಸಾಮಾನ್ಯವಾಗಿ ಇತರ ಅನೇಕ ಕಂಟೆಂಟ್ ಕ್ರಿಯೇಟರ್ ರೀತಿ ಆದಾಯ ಗಳಿಸುತ್ತಾರೆ. ಹೆಚ್ಚಾಗಿ ಇದನ್ನು CPM (ಪ್ರತಿ 1000 ವೀಕ್ಷಣೆಗಳಿಗೆ ವೆಚ್ಚ) ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಅವರ YouTube ಫಾಲೋವರ್ಸ್‌ಗಳನ್ನು ನೋಡಿದರೆ, ಜ್ಯೋತಿ ಅವರ ಅಂದಾಜು CPM 1 ರಿಂದ 3 USD (ರೂ. 80-240) ವರೆಗೆ ಇರಬಹುದು. ಅವರ ಪ್ರತಿ ವೀಡಿಯೊಗೆ ಸರಾಸರಿ 50,000 ವೀವ್ಸ್ ಬಂದಿದೆ. ಅವರು ತಿಂಗಳಿಗೆ 10 ವೀಡಿಯೊಗಳನ್ನು ಸರಿಸುಮಾರಿ ಪೋಸ್ಟ್ ಮಾಡತ್ತಿದ್ದರು. ಇದೆಲ್ಲವನ್ನೂ ಲೆಕ್ಕಹಾಕಿದರೆ, ಅವರ ಅಂದಾಜು ಮಾಸಿಕ ವೀವ್‌ಗಳು 5 ಲಕ್ಷ. ಅಂದರೆ YouTube ಜಾಹೀರಾತುಗಳಿಂದ ಅವರ ಮಾಸಿಕ ಆದಾಯವು ರೂ. 40,000 ರಿಂದ ರೂ. 1.2 ಲಕ್ಷಗಳ ನಡುವೆ ಇದೆ.
ಇದು ಕೇವಲ ಜಾಹೀರಾತು ಆದಾಯದಿಂದ ಬರುವ ಹಣ. ಇನ್‌ಫ್ಲುಯೆನ್ಸರ್‌ಗಳು ತಮ್ಮ ಪ್ರಾಯೋಜಕತ್ವ ಮತ್ತು ಬ್ರ್ಯಾಂಡ್ ಡೀಲ್‌ಗಳಿಂದ ಕೂಡ ಗಳಿಸುತ್ತಾರೆ. ಜ್ಯೋತಿ ಟ್ರಾವೆಲ್ ಇನ್‌ಫ್ಲುಯೆನ್ಸರ್. ಕೆಲವು ಬ್ರ್ಯಾಂಡ್ ಡೀಲ್‌ಗಳು ಅವರಿಗೆ ಇದ್ದವು. ಇದರಲ್ಲಿ ಟ್ರಾವೆಲ್ ಸಲಕರಣೆ ಕಂಪನಿಗಳು, ವಿಮಾನಯಾನ ಸಂಸ್ಥೆಗಳು, ಹೋಟೆಲ್‌ಗಳು ಮತ್ತು ಟ್ರಾವೆಲ್ ಅಪ್ಲಿಕೇಶನ್‌ಗಳಿಂದ ಡೀಲ್‌ಗಳು ಸೇರಿವೆ. ಪ್ರತಿಯೊಬ್ಬ ಇನ್‌ಫ್ಲುಯೆನ್ಸರ್‌ಗಳು ವಿಭಿನ್ನವಾಗಿ ಶುಲ್ಕ ವಿಧಿಸುತ್ತಾರೆ, ಆದರೆ ಪ್ರಾಯೋಜಿತ ಪೋಸ್ಟ್‌ಗೆ ₹20,000 ರಿಂದ ₹50,000 ರವರೆಗೆ ಇರುತ್ತದೆ. ಅವರು ಮಾಸಿಕ 2 ರಿಂದ 3 ಬ್ರ್ಯಾಂಡ್ ಡೀಲ್‌ಗಳನ್ನು ಅಂದಾಜು ಮಾಡಿದ್ದರೆ, ಅವರ ಅಂದಾಜು ಆದಾಯ ರೂ. 40,000 ರಿಂದ ರೂ. 1.5 ಲಕ್ಷದವರೆಗೆ ಇರುತ್ತದೆ.
ಇದರಿಂದಾಗಿ ಆಕೆಯ ಮಾಸಿಕ ಗಳಿಕೆ 80,000 ರೂ.ಗಳಿಂದ 2.7 ಲಕ್ಷ ರೂ.ಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
ಜ್ಯೋತಿ ಮಲೋತ್ರಾ ನಿವ್ವಳ ಮೌಲ್ಯ: ಜ್ಯೋತಿ ಅಂದಾಜು 1.5 ಲಕ್ಷ ರೂ.ಗಳನ್ನು ಸಂಪಾದಿಸುತ್ತಿದ್ದಾರೆ ಮತ್ತು 3 ವರ್ಷಗಳಿಂದ ವ್ಲಾಗಿಂಗ್ ಮಾಡುತ್ತಿದ್ದಾರೆ. ಅವರ ಒಟ್ಟು ಗಳಿಕೆ ಸುಮಾರು 54 ಲಕ್ಷ ರೂಪಾಯಿ ಎಂದು ಅಂದಾಜು ಮಾಡಬಹುದು. ಅವರ ಉಳಿತಾಯ ಸುಮಾರು 27 ಲಕ್ಷ ರೂಪಾಯಿ. ಆದ್ದರಿಂದ, ಟ್ರಾವೆಲ್ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಅವರ ವೆಚ್ಚಗಳನ್ನು ಬದಿಗಿಟ್ಟರೆ, ಅವರ ನಿವ್ವಳ ಮೌಲ್ಯ ಸುಮಾರು 15 ಲಕ್ಷ ರೂ.ಗಳಿಂದ 40 ಲಕ್ಷ ರೂ.ಗಳವರೆಗೆ ಇರುತ್ತದೆ ಎಂದು ಲೆಕ್ಕ ಹಾಕಲಾಗಿದೆ.
ಆದರೆ, ಪಾಕಿಸ್ತಾನಕ್ಕಾಗಿ ಭಾರತದ ಮೇಲೆ ಬೇಹುಗಾರಿಕೆ ನಡೆಸುವಲ್ಲಿ ಭಾಗಿಯಾಗಿರುವ ಕಾರಣಕ್ಕಾಗಿ ಅವರ ಬಂಧನದ ನಂತರ, ಅವರ ನಿವ್ವಳ ಮೌಲ್ಯವು ದೊಡ್ಡ ಕುಸಿತವನ್ನು ಕಾಣಲಿದೆ. ಅವರ ಎಲ್ಲಾ ಬ್ರ್ಯಾಂಡ್ ಡೀಲ್‌ಗಳು ಮತ್ತು ಅನುಮೋದನೆಯನ್ನು ರದ್ದುಗೊಳಿಸಲಾಗುತ್ತದೆ. YouTube ಹಣಗಳಿಕೆಯನ್ನು ಕೂಡ ನಿರ್ಬಂಧಿಸುತ್ತದೆ.


