ರಿಲಯನ್ಸ್ ಜಿಯೋ ತನ್ನ JioHome ಸೇವೆಯನ್ನು ವಿಸ್ತರಿಸಿದ್ದು, ಹೊಸ 3-in-1 ಪ್ಲ್ಯಾನ್‌ಗಳ ಜೊತೆಗೆ ಪ್ರತ್ಯೇಕ Wi-Fi ಮತ್ತು TV ಪ್ಯಾಕ್ ಪರಿಚಯಿಸಿದೆ. ಗ್ರಾಹಕರು ಈಗ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, OTT ಆ್ಯಪ್‌ಗಳು ಮತ್ತು ಅನಿಯಮಿತ ಡೇಟಾವನ್ನು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಪಡೆಯಬಹುದು.
ರಿಲಯನ್ಸ್ ಜಿಯೋ ತನ್ನ JioHome ಸೇವೆಯನ್ನು ವಿಸ್ತರಿಸಿದ್ದು, ಹೊಸ 3-in-1 ಪ್ಲ್ಯಾನ್‌ಗಳ ಜೊತೆಗೆ ಪ್ರತ್ಯೇಕ Wi-Fi ಮತ್ತು TV ಪ್ಯಾಕ್‌ಗಳನ್ನು ಪರಿಚಯಿಸಿದೆ. ಗ್ರಾಹಕರು ಈಗ ಈ ಸೇವೆಗಳನ್ನು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಪಡೆಯಬಹುದಾಗಿದೆ. ಅಂದರೆ 3-in-1 ಪ್ಲ್ಯಾನ್‌ಗಳಲ್ಲಿ ಒಂದೇ ಸಬ್‌ಸ್ಕ್ರಿಪ್ಶನ್‌ನಲ್ಲಿ ಆನ್‌ಲಿಮಿಟೆಡ್ Wi-Fi, 1000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, 12ಕ್ಕೂ ಹೆಚ್ಚು OTT ಆ್ಯಪ್‌ಗಳು ಸಿಗುತ್ತವೆ. ಇದು JioFiber ಮತ್ತು JioAirFiber ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು Jio ಕಂಪನಿ ತಿಳಿಸಿದೆ.
Jio 3-in-1 ಪ್ಲ್ಯಾನ್‌ಗೆ ಎಷ್ಟು ರಿಚಾರ್ಜ್ ಮಾಡಿಸಬೇಕು?
100 Mbps ಪ್ಲ್ಯಾನ್‌ಗೆ ಎರಡು ತಿಂಗಳಿಗೆ ₹2,122 ಪಾವತಿಸಬೇಕು. ಇದು ಮೂರನೇ ತಿಂಗಳು ಉಚಿತವಾಗಿರುತ್ತದೆ. ಅಂದರೆ ತಿಂಗಳಿಗೆ ಸರಾಸರಿ ₹707 ಖರ್ಚಾಗುತ್ತದೆ. 30 Mbps ಪ್ಲ್ಯಾನ್‌ಗೆ ಮೂರು ತಿಂಗಳಿಗೆ ₹2,222 ಪಾವತಿಸಬೇಕು. ಇದರಲ್ಲಿ ಒಂದು ತಿಂಗಳು ಉಚಿತವಾಗಿದ್ದು ಅನಂತರ ತಿಂಗಳಿಗೆ ಸರಾಸರಿ ₹555 ಖರ್ಚಾಗುತ್ತದೆ.
30 Mbps ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ 100 GB ಡೇಟಾ ಸಿಗುತ್ತದೆ. ಈ ಡೇಟಾವನ್ನು 90 ದಿನಗಳವರೆಗೆ ಬಳಸಬಹುದು. ಎರಡೂ ಪ್ಲ್ಯಾನ್‌ಗಳಲ್ಲಿ ಉಚಿತ ವಾಯ್ಸ್ ಸೇವೆ ಸಿಗುತ್ತದೆ. ದೀರ್ಘಾವಧಿಯ ಪಾವತಿಗೆ ಹೆಚ್ಚುವರಿಯಾಗಿ 7 ದಿನಗಳ ಸೇವೆಯೂ ಸಿಗಲಿದೆ. ಈಗಿರುವ ಗ್ರಾಹಕರು ಪ್ಲ್ಯಾನ್ ಬದಲಾಯಿಸಿದಾಗ, 3, 6 ಅಥವಾ 12 ತಿಂಗಳ ಮುಂಗಡ ಪಾವತಿ ಮಾಡಿದಾಗ ಹಾಗೂ ಪ್ರೀಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾದಾಗ ಈ ದೀರ್ಘಾವಧಿಯ ಪ್ರಯೋಜನ ಅನ್ವಯಿಸುತ್ತದೆ ಎಂದು Jio ತಿಳಿಸಿದೆ.
Jio TV-only ಪ್ಯಾಕ್ ಮಾತ್ರ ಸಾಕಾ?
ಗ್ರಾಹಕರು ಈಗ Wi-Fi ಅಥವಾ OTT ಸೇವೆ ಎಲ್ಲ ಬೇಡ, ನಿಮಗೆ JioHome TV ಮಾತ್ರ ಬೇಕು ಅಂದರೆ ಅದನ್ನೂ ಪ್ರತ್ಯೇಕವಾಗಿ ಪಡೆಯಬಹುದು. ₹2,000 ಪ್ಯಾಕ್ 5 ತಿಂಗಳವರೆಗೆ ವ್ಯಾಲಿಡಿಟಿ ಇರುತ್ತದೆ. ತಿಂಗಳಿಗೆ ಸರಾಸರಿ ₹400 ವೆಚ್ಚವಾಗುತ್ತದೆ. ಇದರಲ್ಲಿ 1,000ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳು ಸಿಗುತ್ತವೆ. ಇವುಗಳಲ್ಲಿ 15ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ 200ಕ್ಕೂ ಹೆಚ್ಚು HD ಚಾನೆಲ್‌ಗಳೂ ಸೇರಿವೆ.
ಎರಡು ತಿಂಗಳ ಪ್ಯಾಕ್‌ಗೆ ₹1000 ರಿಚಾರ್ಜ್ ಮಾಡಿಸಬೇಕು. ಇದಕ್ಕೆ ₹200 ಸೆಟಪ್ ಶುಲ್ಕವಿದ್ದು, Jio ಈ ಮೊತ್ತವನ್ನು ತಲಾ ₹50ರ ನಾಲ್ಕು ಕೂಪನ್‌ಗಳ ರೂಪದಲ್ಲಿ ವಾಪಸ್ ನೀಡುತ್ತದೆ.
Jio Wi-Fi-only ಪ್ಯಾಕ್‌ಗಳು
100 Mbps Wi-Fi ಪ್ಯಾಕ್‌ಗೆ 5 ತಿಂಗಳಿಗೆ ₹3,000 ಪಾವತಿಸಬೇಕು. ಅಂದರೆ ತಿಂಗಳಿಗೆ ₹600 ವೆಚ್ಚವಾಗುತ್ತದೆ. 30 Mbps ಪ್ಯಾಕ್‌ಗೆ 5 ತಿಂಗಳಿಗೆ ₹2,200 ಪಾವತಿಸಬೇಕು. ಅಂದರೆ ತಿಂಗಳಿಗೆ ₹440 ವೆಚ್ಚವಾಗುತ್ತದೆ. ಎರಡು ತಿಂಗಳ ಪ್ಯಾಕ್‌ಗಳ ಬೆಲೆ ಕ್ರಮವಾಗಿ ₹1,500 ಮತ್ತು ₹1,100 ಆಗಿದೆ. ಇದಕ್ಕೆ ₹300 ಮತ್ತು ₹200 ಸೆಟಪ್ ಶುಲ್ಕವಿದ್ದು, ಈ ಮೊತ್ತವನ್ನು ₹50ರ ವೋಚರ್‌ಗಳ ರೂಪದಲ್ಲಿ ವಾಪಸ್ ನೀಡಲಾಗುತ್ತದೆ.
Jio ಡೇಟಾ ಮಿತಿ ಎಷ್ಟು?
ಎಲ್ಲಾ ಅನಿಯಮಿತ Fiber ಪ್ಲ್ಯಾನ್‌ಗಳಿಗೂ 3,300 GB ಬಳಕೆ ನೀತಿ ಅನ್ವಯಿಸುತ್ತದೆ ಎಂದು Jio ತಿಳಿಸಿದೆ. AirFiber ಬಳಕೆದಾರರಿಗೆ ಗರಿಷ್ಠ 1000 GB ಹೈ-ಸ್ಪೀಡ್ ಡೇಟಾ ಸಿಗುತ್ತದೆ. ಈ ಮಿತಿ ಮುಗಿದ ಬಳಿಕ ಇಂಟರ್ನೆಟ್ ವೇಗ 64 Kbpsಗೆ ಇಳಿಯುತ್ತದೆ.
JioHome ಸೇವೆ ದೇಶಾದ್ಯಂತ 2 ಕೋಟಿಗೂ ಹೆಚ್ಚು ಮನೆಗಳನ್ನು ತಲುಪಿದೆ ಎಂದು Jio ಹೇಳಿಕೊಂಡಿದೆ.


