ಜಿಯೋ 10ನೇ ವರ್ಷದ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಹಲವು ಆಫರ್ ಘೋಷಿಸಿದೆ. ಇದೀಗ ಜಿಯೋ ಭಾರತ್ 4ಜಿ ಆಫರ್ ಘೋಷಿಸಲಾಗಿದ್ದು, 6 ತಿಂಗಳ ಉಚಿತ ರೀಚಾರ್ಜ್, ಅನ್‌ಲಿಮಿಟೆಟ್ ಕಾಲ್ ಸೇರಿದಂತೆ ಹಲವು ಪ್ರಯೋಜನ ನೀಡಿದೆ.

ಮುಂಬೈ (ಸೆ.30) : ಜಿಯೋ 10ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗ್ರಾಹಕರಿಗೆ ಹತ್ತು ಹಲವು ಆಫರ್ ನೀಡಿದೆ. ಅತೀ ಕಡಿಮೆ ಬೆಲೆಗೆ ಹಲವು ಸೌಲಭ್ಯಗಳನ್ನು ಘೋಷಿಸಿದೆ. ಇದೀಗ ವಾರ್ಷಿಕೋತ್ಸವದ ಕೊಡುಗೆಯಾಗಿ ಜಿಯೋ ಭಾರತ್ 4ಜಿ ಫೋನ್ ಕೇವಲ 1,499 ರೂಪಾಯಿಗೆ ನೀಡುತ್ತಿದೆ. ವಿಶೇಷ ಅಂದರೆ ಈ ಫೋನ್ ಜೊತೆಗೆ 6 ತಿಂಗಳ ಉಚಿತ ರೀಚಾರ್ಜ್ ಕೂಡ ನೀಡಲಾಗುತ್ತಿದೆ. ಈ ಫ್ರೀ ರೀಚಾರ್ಜ್ ವೇಳೆ ಗ್ರಾಹಕರಿಗೆ ಪ್ರತಿ ತಿಂಗಳು 14 ಜಿಬಿ ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗಲಿದೆ. ಫೋನ್ ಖರೀದಿಸಿದ ಬೆನ್ನಲ್ಲೇ ಮುಂದಿನ 6 ತಿಂಗಳ ವರೆಗೆ ಯಾವುದೇ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಸಂಪೂರ್ಣವಾಗಿ ಉಚಿತವಾಗಿದೆ.

ಫೀಚರ್ ಫೋನ್ ಗ್ರಾಹಕರಿಗೆ ಬಂಪರ್ ಆಫರ್

ಇಂದಿಗೂ 2ಜಿ ಫೀಚರ್ ಫೋನ್‌ಗಳನ್ನು ಬಳಸುತ್ತಿರುವ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಕಂಪನಿಯು ಈ ಕೊಡುಗೆಯನ್ನು ವಿಶೇಷವಾಗಿ ಪರಿಚಯಿಸಿದೆ. ಜಿಯೋ ಪ್ರಕಾರ, ಇಂತಹ ಗ್ರಾಹಕರು ಸಾಮಾನ್ಯವಾಗಿ ತಿಂಗಳಿಗೆ ಸುಮಾರು ₹199 ಅನ್ನು ರೀಚಾರ್ಜ್‌ಗಾಗಿ ಖರ್ಚು ಮಾಡುತ್ತಾರೆ. ಆರು ತಿಂಗಳಿಗೆ ಈ ಮೊತ್ತವು ಸುಮಾರು ₹1,200 ಆಗುತ್ತದೆ. ಹೀಗಾಗಿ, ₹1,499ಕ್ಕೆ ಫೋನ್ ಮತ್ತು ಆರು ತಿಂಗಳ ರೀಚಾರ್ಜ್ ಎರಡೂ ಲಭ್ಯವಿರುವುದರಿಂದ 2ಜಿಯಿಂದ 4ಜಿ ಬದಲಾಗುವ ನಿವ್ವಳ ಹೆಚ್ಚುವರಿ ವೆಚ್ಚವು ಕೇವಲ ₹299 ಮಾತ್ರ ಆಗುತ್ತದೆ. ಆದರೆ ಗ್ರಾಹಕರು ಫೋನ್ ಖರೀದಿಸುವಾಗ ಸಂಪೂರ್ಣ ₹1,499 ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಅಲ್ಟ್ರಾ ಫಾಸ್ಟ್ ಇಂಟರ್‌ನೆಟ್

4ಜಿ ಆಗಿ ಬದಲಾಗುವುದರಿಂದ ಗ್ರಾಹಕರಿಗೆ ಅಲ್ಟ್ರಾ-ಫಾಸ್ಟ್ ಇಂಟರ್‌ನೆಟ್ ಸಿಗುವುದಲ್ಲದೆ, ಜಿಯೋಭಾರತ್‌ನಲ್ಲಿ 500ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳಿರುವ ಜಿಯೋಟಿವಿ (JioTV), ಜಿಯೋಹಾಟ್‌ಸ್ಟಾರ್‌ನಲ್ಲಿ ಕ್ರಿಕೆಟ್, ಚಲನಚಿತ್ರಗಳು ಮತ್ತು ಮನರಂಜನೆ, ಮ್ಯೂಸಿಕ್ ಹಾಗೂ ಜಿಯೋಪೇ (JioPay) ಮೂಲಕ ಯುಪಿಐ (UPI) ಪಾವತಿಗಳಂತಹ ಸೌಲಭ್ಯಗಳು ಸಹ ಲಭ್ಯವಿರುತ್ತವೆ. ಈ ಫೋನ್‌ನಲ್ಲಿ 2.4 ಇಂಚಿನ ಡಿಸ್‌ಪ್ಲೇ ಮತ್ತು 2000mAh ಬ್ಯಾಟರಿಯನ್ನು ನೀಡಲಾಗಿದೆ. ಈ ಕೊಡುಗೆಯು ಜಿಯೋಭಾರತ್‌ನ ನಿರ್ದಿಷ್ಟ A1, B1, B2 ಮತ್ತು B3 ಮಾಡೆಲ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

ಇತ್ತೀಚೆಗೆಷ್ಟೇ ಟ್ರಾಯ್ ರೀಚಾರ್ಜ್ ಕುರಿತು ಮಹತ್ವದ ಆದೇಶ ನೀಡಿತ್ತು. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಲಭ್ಯವಾಗಬೇಕು. ಪ್ರಮುಖವಾಗಿ ಡೇಟಾ ಅವಶ್ಯಕತೆ ಇಲ್ಲದವರೂ ಡೇಟಾ ರೀಚಾರ್ಜ್ ಮಾಡುವ ಪದ್ಧತಿಗೆ ಬ್ರೇಕ್ ಹಾಕಿ ಕೇವಲ ಕರೆಗಾಗಿ, ಎಸ್ಎಂಎಸ್‌ಗಾಗಿ ಮಾತ್ರ ಬಳಸುವ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಲಭ್ಯವಾಗುವಂತೆ ಮಾಡಲು ಸೂಚನೆ ನೀಡಲಾಗಿದೆ. ಇನ್ನು ತಿಂಗಳ ವ್ಯಾಲಿಟಿಡಿಯನ್ನು 28 ದಿನಗಳ ಬದಲು 30 ದಿನ ಮಾಡುವಂತೆ ಆದೇಶ ನೀಡಲಾಗಿದೆ.