ರಾತ್ರೋ ರಾತ್ರಿ ವಿಶ್ವದ ಶ್ರೀಮಂತ ಪಟ್ಟ ಕಳೆದುಕೊಂಡ ಜೆಫ್ ಬೆಜೋಸ್: ಮತ್ಯಾರೀಗ ಸಿರಿವಂತ?
ರಾತ್ರೋ ರಾತ್ರಿ ವಿಶ್ವದ ಶ್ರೀಮಂತ ಪಟ್ಟ ಕಳೆದುಕೊಂಡ ಜೆಫ್ ಬೆಜೋಸ್| 7 ಶತಕೋಟಿ ಡಾಲರ್ ಮಾರುಕಟ್ಟೆ ಮೌಲ್ಯ ಕಳೆದುಕೊಂಡ ಬೆಜೋಸ್| ಕಳೆದ ತ್ರೈಮಾಸಿಕ ಅವಧಿಯಲ್ಲಿ ನಷ್ಟಕ್ಕೆ ಗುರಿಯಾದ ಅಮೆಜಾನ್ ಮುಖ್ಯಸ್ಥ| ವಿಶ್ವದ ಆಗರ್ಭ ಶ್ರೀಮಂತ ಪಟ್ಟ ಮರಳಿ ಪಡೆದ ಬಿಲ್ ಗೇಟ್ಸ್| ಜೆಫ್ ಬೆಜೋಸ್ ಕಂಪನಿ ಆದಾಯ 103.9 ಶತಕೋಟಿ ಡಾಲರ್| ಗೇಟ್ಸ್ ಸಂಪತ್ತಿನ ಮೌಲ್ಯ ಇದೀಗ 105.7 ಶತಕೋಟಿ ಡಾಲರ್| ತ್ರೈಮಾಸಿಕ ಅವಧಿಯ ಆದಾಯದಲ್ಲಿ ಅಮೆಜಾನ್ ಆದಾಯ ಶೇ.26ರಷ್ಟು ಇಳಿಕೆ|
ಸೀಟಲ್(ಅ.25): ಹಣದ ಹಿಂದಲ್ಲ ವಿದ್ಯೆಯ ಹಿಂದೆ ಓಡು ಎಂಬ ಹಿರಿಯರ ಸಲಹೆ ನಿಜಕ್ಕೂ ಅತ್ಯಮೂಲ್ಯವಾದುದು. ಸಂಪತ್ತು ಕ್ಷಣಿಕವಾದರೆ, ಜ್ಞಾನ ಕೊನೆವರೆಗೂ ಕೈ ಹಿಡಯುತ್ತದೆ.
ಅಮೆಜಾನ್ ದಿಢೀರ್ ನಿರ್ಧಾರ: ಸ್ವಿಗಿ, ಜೊಮ್ಯಾಟೋಗೆ ಹರಿಸಿದೆ ಬೆವರ!
ವಿಶ್ವದ ಆಗರ್ಭ ಶ್ರೀಮಂತ ಎಂಬ ಬಿರುದನ್ನು ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಕಳೆದುಕೊಂಡಿದ್ದಾರೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಬೆಜೋಸ್ ಸುಮಾರು 7 ಶತಕೋಟಿ ಡಾಲರ್ ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದ್ದಾರೆ.
ಸ್ವಾಮಿ 'ಅರ್ಥ' ಬದಲಾಯ್ತು: 'ಸಮಾಜ'ವೇ ಮುಖ್ಯ ಎಂದು 'ವಾದ' ಮಾಡಿದ್ದಾಯ್ತು!
ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಅಮೆಜಾನ್ ಷೇರುಗಳ ಬೆಲೆ ಶೇ. 7ರಷ್ಟು ಕುಸಿದಿದ್ದು, ಬೆಜೋಸ್ ಕಂಪನಿ ಆದಾಯ 103.9 ಶತಕೋಟಿ ಡಾಲರ್ ಆಗಿದೆ.
ವೇದಿಕೆಯಲ್ಲೇ ಅಮೆಜಾನ್ ಮುಖ್ಯಸ್ಥನ ಬೆವರಿಳಿಸಿದ ಭಾರತೀಯ ನಾರಿ!
ಇನ್ನು ವಿಶ್ವದ ಆಗರ್ಭ ಶ್ರೀಮಂತ ಪಟ್ಟವನ್ನು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮರಳಿ ಪಡೆದಿದ್ದಾರೆ. ಗೇಟ್ಸ್ ಸಂಪತ್ತಿನ ಮೌಲ್ಯ ಇದೀಗ 105.7 ಶತಕೋಟಿ ಡಾಲರ್ ಆಗಿದೆ. ಸತತ 24 ವರ್ಷಗಳವರೆಗೆ ಬಿಲ್ ಗೇಟ್ಸ್ ಅವರೇ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿದ್ದರು.
ನಂ. 1 ಶ್ರೀಮಂತನ ಡೈವೋರ್ಸ್: ಅಮೆಜಾನ್ ಬಾಸ್ ಪತ್ನಿಗೆ 2.5 ಲಕ್ಷ ಕೋಟಿ ವಿಚ್ಛೇದನ ಹಣ!
2017ರ ನಂತರದ ತ್ರೈಮಾಸಿಕ ಅವಧಿಯ ಆದಾಯದಲ್ಲಿ ಅಮೆಜಾನ್ ಆದಾಯ ಶೇ.26ರಷ್ಟು ಇಳಿದಿದ್ದು, ಇದೀಗ ಜೆಫ್ ಬೆಜೋಸ್ ತಮ್ಮ ಶ್ರೀಮಂತ ಪಟ್ಟವನ್ನು ಕಳೆದುಕೊಳ್ಳುವಂತಾಗಿದೆ.
3 ಲಕ್ಷ ಕೋಟಿ ಕಳೆದುಕೊಂಡ ಅಮೆಜಾನ್ ಬಾಸ್
ಫೋರ್ಬ್ಸ್ ಪಟ್ಟಿಗೆ ಬೆಜೊಸ್ ಸೇರ್ಪಡೆಯಾಗಿದ್ದು 1998ರಲ್ಲಿ. ಅದರ ಹಿಂದಿನ ವರ್ಷವಷ್ಟೇ ಅದು ಸಾರ್ವಜನಿಕ ಕ್ಷೇತ್ರದಲ್ಲಿ ವಹಿವಾಟು ಆರಂಭಿಸಿದ್ದು. ಆಗ ಕಂಪೆನಿಯ ಒಟ್ಟಾರೆ ಆದಾಯ 1.6 ಶತಕೋಟಿ ಡಾಲರ್ ಆಗಿತ್ತು.