Asianet Suvarna News Asianet Suvarna News

ನಂ. 1 ಶ್ರೀಮಂತನ ಡೈವೋರ್ಸ್: ಅಮೆಜಾನ್‌ ಬಾಸ್‌ ಪತ್ನಿಗೆ 2.5 ಲಕ್ಷ ಕೋಟಿ ವಿಚ್ಛೇದನ ಹಣ!

ಅಮೆಜಾನ್‌ ಬಾಸ್‌ ಪತ್ನಿಗೆ 2.5 ಲಕ್ಷ ಕೋಟಿ ವಿಚ್ಛೇದನ ಹಣ!| ವಿಚ್ಛೇದನ ಮೊತ್ತದಲ್ಲೂ ಹೊಸ ವಿಶ್ವದಾಖಲೆ| 26 ವರ್ಷಗಳ ದಾಂಪತ್ಯ ಜೀವನಕ್ಕೆ ಬೆಜೋಸ್‌- ಮೆಕೆನ್ಜಿ ವಿದಾಯ

Jeff Bezos and MacKenzie divorce worth Rs 2 5 lakh crore
Author
Bangalore, First Published Apr 8, 2019, 9:00 AM IST

ನ್ಯೂಯಾರ್ಕ್[ಏ.08]: ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಹೊಂದಿರುವ ಅಮೆರಿಕದ ಅಮೆಜಾನ್‌ ಕಂಪನಿಯ ಮಾಲೀಕ ಜೆಫ್‌ ಬೆಜೋಸ್‌ ಇದೀಗ ಹೊಸದೊಂದು ದಾಖಲೆ ಬರೆದಿದ್ದಾರೆ. ಅವರು ತಮ್ಮ 23 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದು, ಪತ್ನಿ ಮೆಕೆನ್ಜಿಗೆ ಭರ್ಜರಿ 2.50 ಲಕ್ಷ ಕೋಟಿ ರು. ಜೀವನಾಂಶ ನೀಡಿದ್ದಾರೆ. ಇದು ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಚ್ಛೇದನ ಎಂಬ ದಾಖಲೆಗೆ ಪಾತ್ರವಾಗಿದೆ.

1993ರಲ್ಲಿ ಮೆಕೆನ್ಜಿ ಮತ್ತು ಬೆಜೋಸ್‌ ವಿವಾಹವಾಗಿದ್ದರು. ಇತ್ತೀಚೆಗೆ ಬೆಜೋಸ್‌ ಬೇರೊಬ್ಬ ಮಹಿಳೆಯೊಂದಿಗೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ವಿಚ್ಛೇದನ ನೀಡಲು ಮೆಕೆನ್ಜಿ ನಿರ್ಧರಿಸಿದ್ದರು. ಬಳಿಕ ಎರಡೂ ಬಣಗಳ ನಡುವಿನ ಮಾತುಕತೆ ನಡೆದು, ಇದೀಗ ಅಮೆಜಾನ್‌ನಲ್ಲಿ ತಾವು ಹೊಂದಿದ್ದ ಷೇರುಪಾಲಿನ ಪೈಕಿ ಶೇ.75ರಷ್ಟುಬೆಜೋಸ್‌ಗೆ ಮರಳಿಸಲು ಮೆಕೆನ್ಜಿ ನಿರ್ಧರಿಸಿದ್ದಾರೆ.

ಕಂಪನಿಯಲ್ಲಿ ಪತಿ ಮತ್ತು ಪತ್ನಿ ಶೇ.16ರಷ್ಟು ಷೇರು ಹೊಂದಿದ್ದರು. ಆ ಪೈಕಿ ಇದೀಗ ಮೆಕೆನ್ಜಿ ಶೇ.4ರಷ್ಟುಪಾಲು ಉಳಿಸಿಕೊಂಡು, ಉಳಿದ ಶೇ.12ರಷ್ಟನ್ನು ಬೆಜೋಸ್‌ಗೆ ಮರಳಲಿದ್ದಾರೆ. ಈ ಶೇ.4ರಷ್ಟುಷೇರಿನ ಮೊತ್ತವೇ ಹೆಚ್ಚು ಕಡಿಮೆ 2.50 ಲಕ್ಷ ಕೋಟಿ ರು. ಆಗಲಿದೆ. ಇದಲ್ಲದೆ ಬೆಜೋಸ್‌ ಒಡೆತನದ ಹಲವು ಕಂಪನಿಗಳಲ್ಲಿ ತಾವು ಹೊಂದಿದ್ದ ಪಾಲನ್ನೂ ಮೆಕೆನ್ಜಿ ಬಿಟ್ಟುಕೊಡಲಿದ್ದಾರೆ.

ಅಮೆಜಾನ್‌ ಕಂಪನಿಯ ಅತಿದೊಡ್ಡ ಷೇರುದಾರರಾದ ಜೆಬ್‌ ಬೆಜೋಸ್‌ ಅವರ ಆಸ್ತಿ ಅಂದಾಜು 8 ಲಕ್ಷ ಕೋಟಿ ರು. ಇದೆ.

Follow Us:
Download App:
  • android
  • ios