ವಾಷಿಂಗ್ಟನ್: ವಿಶ್ವದ ನಂ.1  ಶ್ರೀಮಂತ, ಅಮೆರಿಕದ ಅಮೆಜಾನ್ ಕಂಪನಿ ಅಧ್ಯಕ್ಷ ಜೆಫ್ ಬೆಜೋಸ್ ಕಳೆದ 2 ದಿನಗಳಲ್ಲಿ 1.50 ಲಕ್ಷ ಕೋಟಿ ರು. ಸಂಪತ್ತು ಕಳೆದು ಕೊಂಡಿದ್ದಾರೆ. 

ಅಮೆರಿಕದ ವ್ಯಾಪಾರ ಸಮರ ಷೇರು ಮಾರುಕಟ್ಟೆ ಮೇಲೆ ಕರಾಳ ಛಾಯೆ ಬೀರಿದೆ. 

ಹೀಗಾಗಿ ಅಮೆಜಾನ್ ಕಂಪ ನಿಯ ಷೇರುಮೌಲ್ಯ ಶೇ. 14ರಷ್ಟು ಕುಸಿದಿದೆ. ಹೀಗಾಗಿ ಬೆಜೋಸ್ ಸಂಪತ್ತು 2 ದಿನಗಳಲ್ಲಿ 1.50 ಲಕ್ಷ ಕೋಟಿ ರು.ಇಳಿದಿದೆ. ತಿಂಗಳಲ್ಲಿ 12.50 ಲಕ್ಷ ಕೋಟಿ ಆಸ್ತಿ, 9.50 ಲಕ್ಷ ಕೋಟಿಗೆ ಇಳಿದಿದೆ.