Asianet Suvarna News Asianet Suvarna News

ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ ಪಟ್ಟಿ ಪ್ರಕಟ; ನಾಲ್ವರು ಭಾರತೀಯ ಮೂಲದ ಮಹಿಳೆಯರಿಗೆ ಸ್ಥಾನ

ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ ಪಟ್ಟಿಯನ್ನು ಫೋರ್ಬ್ಸ್ ಪ್ರಕಟಿಸಿದೆ. ಇದರಲ್ಲಿ ಭಾರತೀಯ ಮೂಲದ ಮಹಿಳಾ ಉದ್ಯಮಿಗಳಾದ  ಜಯಶ್ರೀ ಉಲ್ಲಾಳ್, ಇಂದ್ರಾ ನೂಯಿ, ನೀರಜಾ ಸೇಥಿ ಹಾಗೂ ನೆಹಾ ನರ್ಖೆಡೆ ಸ್ಥಾನ ಪಡೆದಿದ್ದಾರೆ. 
 

Jayshree Ullal Neerja Sethi Neha Narkhede Indra Nooyi Meet Indian origin women on Americas Richest Self Made Women List anu
Author
First Published Jul 11, 2023, 5:30 PM IST

ನ್ಯೂಯಾರ್ಕ್ (ಜು.11): ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ 'ಅಮೆರಿಕದ 100 ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ' ಪಟ್ಟಿಯಲ್ಲಿ  ಜಯಶ್ರೀ ಉಲ್ಲಾಳ್, ಇಂದ್ರಾ ನೂಯಿ ಸೇರಿದಂತೆ ಭಾರತೀಯ ಮೂಲದ ನಾಲ್ವರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಈ ನಾಲ್ವರ ಒಟ್ಟು ನಿವ್ವಳ ಆದಾಯ 4.06 ಬಿಲಿಯನ್ ಡಾಲರ್. ಕಂಪ್ಯೂಟರ್ ನೆಟ್ ವರ್ಕಿಂಗ್ ಸಂಸ್ಥೆ ಅರಿಸ್ಟಾ ನೆಟ್ ವರ್ಕ್ಸ್ ಸಿಇಒ ಜಯಶ್ರೀ ಉಲ್ಲಾಳ್  ಈ ಪಟ್ಟಿಯಲ್ಲಿ 15ನೇ ಸ್ಥಾನ ಪಡೆದಿದ್ದರೆ, ಐಟಿ ಕನ್ಸಲ್ಟಿಂಗ್ ಹಾಗೂ ಔಟ್ ಸೋರ್ಸಿಂಗ್ ಸಂಸ್ಥೆ ಸೈಂಟೆ ಸಹಸಂಸ್ಥಾಪಕಿ ನೀರಜಾ ಸೇಥಿ 25ನೇ ಸ್ಥಾನ ಗಳಿಸಿದ್ದಾರೆ. ಇನ್ನು ಕ್ಲೌಡ್ ಕಂಪನಿ ಕನ್ ಫ್ಲೂಯೆಂಟ್ ಮಾಜಿ ಮುಖ್ಯ ತಂತ್ರಜ್ಞಾನ ಅಧಿಕಾರಿ ನೆಹಾ ನರ್ಖೆಡೆ ಹಾಗೂ ಪೆಪ್ಸಿಕೋ ಮಾಜಿ ಮುಖ್ಯಸ್ಥೆ ಹಾಗೂ ಸಿಇಒ ಇಂದ್ರಾ ನೂಯಿ ಕ್ರಮವಾಗಿ 50ನೇ ಹಾಗೂ 77ನೇ ಸ್ಥಾನಗಳಲ್ಲಿದ್ದಾರೆ. ಎಬಿಸಿ ಸಪ್ಲೈ ಸಹಸಂಸ್ಥಾಪಕಿ ಡೈನೆ ಹೆಂಡ್ರಿಕ್ಸ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಆದಾಯ 15 ಬಿಲಿಯನ್ ಅಮೆರಿಕನ್ ಡಾಲರ್.

ಜಯಶ್ರೀ ಉಲ್ಲಾಳ್
2008ನೇ ಸಾಲಿನಿಂದ ಅರಿಸ್ಟಾ ನೆಟ್ ವರ್ಕ್ ಅಧ್ಯಕ್ಷೆ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಜಯಶ್ರೀ ಉಲ್ಲಾಳ್  (62ವರ್ಷ) ಅವರ ನಿವ್ವಳ ಸಂಪತ್ತು  2.4 ಬಿಲಿಯನ್ ಡಾಲರ್. ಫೋರ್ಬ್ಸ್ 'ಅಮೆರಿಕದ 100 ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ' ಪಟ್ಟಿಯಲ್ಲಿಇವರು 15ನೇ ಸ್ಥಾನದಲ್ಲಿದ್ದಾರೆ. ಜಯಶ್ರೀ ಉಲ್ಲಾಳ್ ಅರಿಸ್ಟಾ ನೆಟ್ ವರ್ಕ್ ಸಂಸ್ಥೆಯಲ್ಲಿ ಶೇ.2.4 ಷೇರುಗಳನ್ನು ಹೊಂದಿದ್ದಾರೆ. 2022ರಲ್ಲಿ ಅರಿಸ್ಟಾ ಸುಮಾರು 4.4 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಹೊಂದಿದ್ದರು. ಲಂಡನ್ ನಲ್ಲಿ (London) ಹುಟ್ಟಿ ಭಾರತದಲ್ಲಿ ಬೆಳೆದ ಜಯಶ್ರೀ ಉಲ್ಲಾಳ್ ( Jayshree Ullal),ಸ್ಯಾನ್ ಫ್ರಾನ್ಸಿಕೋ ಸ್ಟೇಟ್ ಯುನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಸಾಂತಾ ಕ್ಲಾರ ಯುನಿವರ್ಸಿಟಿಯಿಂದ ಇಂಜಿನಿಯರಿಂಗ್ ಮ್ಯಾನೇಜ್ ಮೆಂಟ್ ಪದವಿ ಪಡೆದಿದ್ದಾರೆ. ಗ್ರಾಫಿಕ್ ಕಾರ್ಡ್ ಕಂಪನಿಗಳಲ್ಲಿ ಜನಪ್ರಿಯತೆ ಗಳಿಸಿರುವ ಅಡ್ವಾನ್ಡ್ ಮೈಕ್ರೋ ಡೆವೈಸ್ಸ್ (ಎಎಂಡಿ) ಮೂಲಕ ಉಲ್ಲಾಳ್ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಆ ಬಳಿಕ ಕೆಲವು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಉಲ್ಲಾಳ್, ಸಿಸ್ಕೋನಲ್ಲಿ 15ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಆ ಬಳಿಕ 2008ರಲ್ಲಿ ಅರಿಸ್ಟಾಕ್ಕೆ ಸೇರಿದ್ದರು. 

ಮುಖೇಶ್ ಅಂಬಾನಿ ಮುಂಬೈ ನಿವಾಸ ಅಂಟಿಲಿಯಾ ಎಲ್ಲರಿಗೂ ಗೊತ್ತು; ಆದ್ರೆ ಲಂಡನ್ ನಲ್ಲಿರುವ ಈ ಐಷಾರಾಮಿ ಬಂಗ್ಲೆ ಗೊತ್ತಾ?

ನೀರಜ್ ಸೇಥಿ
ಫೋರ್ಬ್ಸ್ 'ಅಮೆರಿಕದ 100 ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ' ಪಟ್ಟಿಯಲ್ಲಿ 25ನೇ ಸ್ಥಾನದಲ್ಲಿರುವ ನೀರಜ್ ಸೇಥಿ ಅವರ ನಿವ್ವಳ ಸಂಪತ್ತು 990 ಮಿಲಿಯನ್ ಡಾಲರ್.  ಮಿಚಿಗನ್ ಅಪಾರ್ಟ್ ಮೆಂಟ್ ನಲ್ಲಿ ಪತಿ ಭರತ್ ದೇಸಾಯಿ ಅವರೊಂದಿಗೆ ಸೇರಿ ಸೇಥಿ,  ಐಟಿ ಕನ್ಸಲ್ಟಿಂಗ್  ಹಾಗೂ ಹೊರಗುತ್ತಿಗೆ ಸಂಸ್ಥೆ ಸಿಂಟೆಲ್ ಅನ್ನು 1980ರಲ್ಲಿ ಪ್ರಾರಂಭಿಸಿದ್ದರು. 2018ರ ಅಕ್ಟೋಬರ್ ನಲ್ಲಿ ಫ್ರೆಂಚ್ ಐಟಿ ಸಂಸ್ಥೆ ಅಟೋಸ್ ಎಸ್ ಇ ಸೆಂಟೆಲ್ ಸಂಸ್ಥೆಯನ್ನು 3.4 ಬಿಲಿಯನ್ ಡಾಲರ್ ಗೆ ಖರೀದಿಸಿದ್ದರು. ಈ ಸಂದರ್ಭದಲ್ಲಿ ಸೇಥಿ ತಮ್ಮ ಷೇರುಗಳಿಗೆ 510 ಮಿಲಿಯನ್ ಡಾಲರ್ ಗಳಿಸಿದ್ದರು.

ನೇಹಾ ನರ್ಖೆಡೆ
'ಅಮೆರಿಕದ 100 ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ' ಪಟ್ಟಿಯಲ್ಲಿ ನೇಹಾ ನರ್ಖೆಡೆ 50ನೇ ಸ್ಥಾನ ಗಳಿಸಿದ್ದಾರೆ. ಅವರ ನಿವ್ವಳ ಸಂಪತ್ತು 520 ಮಿಲಿಯನ್ ಡಾಲರ್. ಲಿಂಕ್ಡ್ ಇನ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು, 2014ರಲ್ಲಿ ಇತರ ಇಬ್ಬರು ಸಹೋದ್ಯೋಗಿಗಳೊಂದಿಗೆ ಸಮಸ್ಥೆಗೆ ರಾಜೀನಾಮೆ ನೀಡಿ, ಕಾನ್ ಫ್ಲೂಯೆಂಟ್ ಸ್ಥಾಪಿಸಿದರು. 2022ರಲ್ಲಿ ಈ ಸಂಸ್ಥೆ ಆದಾಯ  586 ಮಿಲಿಯನ್ ಡಾಲರ್. ಈ ಸಂಸ್ಥೆಯಲ್ಲಿ ನೇಆ ಶೇ.6ರಷ್ಟು ಷೇರುಗಳನ್ನು ಹೊಂದಿದ್ದಾರೆ. 2023ರ ಮಾರ್ಚ್ ನಲ್ಲಿ ನೇಹಾ ಒಸಿಲರ್ ಎಂಬ ಸಂಸ್ಥೆ ಸ್ಥಾಪಿಸಿ, ಅದರ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಟಾಟಾ ಕಂಪನಿಯ ಈ ಷೇರಿನಿಂದ ಕೆಲವೇ ನಿಮಿಷಗಳಲ್ಲಿ 500 ಕೋಟಿ ಸಂಪತ್ತು ಗಳಿಸಿದ ರಾಕೇಶ್‌ ಜುಂಜುನ್ವಾಲಾ ಪತ್ನಿ!

ಇಂದ್ರಾ ನೂಯಿ
ಪೆಪ್ಸಿಕೋ ಕಂಪನಿ ಮುಖ್ಯಸ್ಥೆ ಹಾಗೂ ಸಿಇಒ ಆಗಿ 24 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ 2019ರಲ್ಲಿ ನಿವೃತ್ತರಾದ ಇಂದ್ರಾ ನೂಯಿ ಈ ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿದ್ದಾರೆ. 67 ವರ್ಷದ ಇಂದ್ರಾ ನೂಯಿ ಅವರ ನಿವ್ವಳ ಸಂಪತ್ತು 350 ಮಿಲಿಯನ್ ಡಾಲರ್. ನೂಯಿ ಪೆಪ್ಸಿಕೋ ಸಿಇಒ ಆಗಿದ್ದ ಸಂದರ್ಭದಲ್ಲಿ ಮಾರಾಟವನ್ನು ದುಪ್ಪಟ್ಟು ಹೆಚ್ಚಿಸಿದ್ದರು. ಅಲ್ಲದೆ, ಆರೋಗ್ಯಕರ ಉತ್ಪನ್ನಗಳನ್ನು ಪರಿಚಯಿಸಿದ್ದರು. 

Follow Us:
Download App:
  • android
  • ios