ಮುಖೇಶ್ ಅಂಬಾನಿ ಮುಂಬೈನಲ್ಲಿ 15,000 ಕೋಟಿ ರೂಪಾಯಿ ಮೌಲ್ಯದ ಅಂಟಿಲಿಯಾ ಎಂಬ ಬಂಗ್ಲೆಯಲ್ಲಿ ವಾಸಿಸುತ್ತಾರೆ ಎಂಬ ವಿಷಯ ಎಲ್ಲರಿಗೂ ಗೊತ್ತು. ಆದರೆ, ಲಂಡನ್ ನಲ್ಲಿ ಕೂಡ ಮುಖೇಶ್ ಅಂಬಾನಿ ಆಸ್ತಿ ಹೊಂದಿರುವ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಸ್ಟೋಕ್ ಪಾರ್ಕ್ ಎಂಬ ಆಸ್ತಿ 300 ಎಕರೆ ಪ್ರದೇಶದಲ್ಲಿ ವಿಸ್ತರಿಸಿದ್ದು,ಇಲ್ಲಿನ ಬಂಗ್ಲೆಯಲ್ಲಿ 49 ರೂಮ್ ಗಳು ಹಾಗೂ ಸೂಟ್ಸ್ ಗಳಿವೆ.  

Business Desk:ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈನಲ್ಲಿರುವ ಐಷಾರಾಮಿ ಬಂಗಲೆ 'ಅಂಟಿಲಿಯಾ' ಸದಾ ಸುದ್ದಿಯಲ್ಲಿರುತ್ತದೆ. 15,000 ಕೋಟಿ ರೂಪಾಯಿ ಮೌಲ್ಯದ ಈ ಬಂಗಲೆ ವಿಶ್ವದ ಎರಡನೇ ಅತೀ ದುಬಾರಿ ಮನೆಯಾಗಿದೆ. ಈ ಐಷಾರಾಮಿ ಮನೆಯು 173 ಮೀಟರ್ ಎತ್ತರ ಮತ್ತು 37,000 ಚದರ ಮೀಟರ್‌ಗಳಲ್ಲಿ ಹರಡಿಕೊಂಡಿದೆ. ಬಹು ಅಂತಸ್ತಿನ ಕಾರ್ ಪಾರ್ಕಿಂಗ್, 9 ಹೈ ಸ್ಪೀಡ್ ಎಲಿವೇಟರ್‌ಗಳು, ಈಜುಕೊಳಗಳು, ಸ್ಪಾ ಸೇರಿದಂತೆ ಸಕಲ ಸೌಲಭ್ಯಗಳನ್ನು ಈ ಮನೆ ಹೊಂದಿದೆ. ಆದರೆ, ಮುಖೇಶ್ ಹಾಗೂ ನೀತಾ ಅಂಬಾನಿ ಅವರು ಇದೊಂದೇ ಮನೆಯನ್ನೇ ಹೊಂದಿಲ್ಲ. ಅವರು ಇನ್ನೊಂದು ಐಷಾರಾಮಿ ಬಂಗ್ಲೆಯನ್ನು ಹೊಂದಿದ್ದಾರೆ. ಆದರೆ, ಈ ಬಂಗ್ಲೆ ಇರೋದು ಲಂಡನ್ ನಲ್ಲಿ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಲಂಡನ್ ನ ಸ್ಟೋಕ್ಸ್ ಪಾರ್ಕ್ ಎಂಬ ಈ ಆಸ್ತಿಯನ್ನು 2021ರ ಏಪ್ರಿಲ್ ನಲ್ಲಿ ಮುಖೇಶ್ ಅಂಬಾನಿ 592 ಕೋಟಿ ರೂ.ಗೆ ಖರೀದಿಸಿದ್ದರು. ಈ ಆಸ್ತಿಯು 300 ಎಕರೆ ಪ್ರದೇಶದಲ್ಲಿ ವಿಸ್ತರಿಸಿದ್ದು, ಲಂಡನ್ ನಿಂದ ಸುಮಾರು 40 ಕಿ.ಮೀ. ದೂರದಲ್ಲಿದೆ. 

ಲಂಡನ್ ನಲ್ಲಿರುವ ಮುಖೇಶ್ ಅಂಬಾನಿ ಅವರ ಬಂಗ್ಲೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಈ ಹಿಂದೆ ಚೆಸ್ಟರ್, ಹಾರ್ಟ್ ಫೋರ್ಡ್ ಹಾಗೂ ವಿಟ್ನಿ ಎಂಬ ರಾಜಮನೆತನದ ಸಹೋದರರಿಗೆ ಈ ಆಸ್ತಿ ಸೇರಿತ್ತು. ಕುಟುಂಬದ ಉದ್ಯಮಕ್ಕಾಗಿ ಈ ಸಹೋದರರು 1988ರಲ್ಲಿ ಈ ಆಸ್ತಿಯನ್ನು ಖರೀದಿಸಿದ್ದರು. ಅಂದಹಾಗೇ ಮುಖೇಶ್ ಅಂಬಾನಿ ಕೂಡ ಈ ಆಸ್ತಿಯನ್ನು ಉದ್ಯಮದ ಉದ್ದೇಶದಿಂದಲೇ ಖರೀದಿಸಿದ್ದಾರೆ. ಭಾರತದ ಜನಪ್ರಿಯ ಹೋಟೆಲ್ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶವನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೊಂದಿದ್ದು, ಈ ಬಂಗ್ಲೆ ಮೂಲಕ ಅದನ್ನು ನನಸು ಮಾಡಿಕೊಳ್ಳುತ್ತಿದೆ.

ಹುಟ್ಟಿದ ಕೂಸಿಗೆ ಅಂಬಾನಿ ಫ್ಯಾಮಿಲಿ 32 ಬೆಂಗಾವಲು ವಾಹನಗಳ ಭರ್ಜರಿ ಸ್ವಾಗತ, ಅಬ್ಬಬ್ಬಾ ಎಂದು ನೆಟ್ಟಿಗರು!

ಸ್ಟೋಕ್ ಪಾರ್ಕ್ ಈ ಬಂಗ್ಲೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಫೈವ್ ಸ್ಟಾರ್ ಹೋಟೆಲ್ ಆಗಿ ಬದಲಾಯಿಸಿದೆ. ಇದರಲ್ಲಿ 49 ರೂಮ್ ಗಳು ಹಾಗೂ ಸೂಟ್ಸ್ ಗಳಿವೆ. ಹಾಗೆಯೇ ಅಂಬಾನಿ ಈ ಸ್ಥಳದಲ್ಲಿ ಪುಟ್ಟ ಆಸ್ಪತ್ರೆ ನಿರ್ಮಿಸುವ ಯೋಜನೆ ಕೂಡ ಹೊಂದಿದ್ದಾರೆ. ಹಾಗೆಯೇ ಈ ಬಂಗ್ಲೆಯ ಸುತ್ತ ದೊಡ್ಡ ಹುಲ್ಲಿನ ಕೋರ್ಟ್, ಸರೋವರ ಹಾಗೂ ಸೇತುವೆ ಕೂಡ ಇದೆ.

ಸ್ಟೋಕ್ ಪಾರ್ಕ್ ನಲ್ಲಿ ಎರಡು ಜನಪ್ರಿಯ ಹಾಲಿವುಡ್ ಚಿತ್ರಗಳನ್ನು ಕೂಡ ಚಿತ್ರೀಕರಿಸಲಾಗಿತ್ತು. ಟುಮರೋ ನೆವರ್ ಡೈಸ್ (1997) ಹಾಗೂ ಗೋಲ್ಡ್ ಫಿಂಗರ್ (1964) ಎಂಬ ಎರಡು ಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಇಂಗ್ಲೆಂಡ್ ರಾಜಮನೆತನದ ಅಂತಾರಾಷ್ಟ್ರೀಯ ಗ್ರೂಪ್ (IG) ಈ ಹಿಂದೆ ಈ ಆಸ್ತಿಯ ಒಡೆತನ ಹೊಂದಿದ್ದು, ಆ ಬಳಿಕ ಅಂಬಾನಿಗೆ ಮಾರಾಟ ಮಾಡಿತ್ತು. ಸ್ಟೋಕ್ ಪಾರ್ಕ್ ಎಸ್ಟೇಟ್ ಸಂಪದ್ಭರಿತವಾದ ಕಟ್ಟಡವಾಗಿದ್ದು, 900 ವರ್ಷಗಳಿಗಿಂತಲೂ ಹೆಚ್ಚಿನ ಐತಿಹಾಸಿಕ ಹಿನ್ನೆಲೆ ಹೊಂದಿದೆ.

Success Mantra: ಮುಖೇಶ್ ಅಂಬಾನಿಯಂತಾಗ್ಬೇಕೆಂದ್ರೆ ಏನೆಲ್ಲ ಬೇಕು?

ಮುಕೇಶ್ ಅಂಬಾನಿ (Mukesh Ambani) ವಿಶ್ವದಲ್ಲೇ ಅತೀ ದುಬಾರಿ ಖಾಸಗಿ ಮನೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಮುಂಬೈನಲ್ಲಿರುವ ಆಂಟಿಲಿಯಾ, 27 ಅಂತಸ್ತಿನ ಕಟ್ಟಡವಾಗಿದ್ದು, ಇದರಲ್ಲಿ ಮುಕೇಶ್ ಅಂಬಾನಿ ಕುಟುಂಬವು ವಾಸಿಸುತ್ತದೆ. ಮುಖೇಶ್ ಅಂಬಾನಿ, ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ಈ ಮನೆಯಲ್ಲಿ ವಾಸಿಸುತ್ತಾರೆ. ಅಂಬಾನಿ ಕುಟುಂಬವು 2012 ರಲ್ಲಿ ಆಂಟಿಲಿಯಾಕ್ಕೆ ಸ್ಥಳಾಂತರಗೊಂಡಿತು ಮತ್ತು ಪ್ರಸ್ತುತ ಮನೆಯ ಬೆಲೆ 15,000 ಕೋಟಿ ರೂ. ಆಂಟಿಲಿಯಾ ತನ್ನ ವೈಶಿಷ್ಟ್ಯಗಳು, ಗ್ರ್ಯಾಂಡ್ ಪಾರ್ಟಿಗಳು, ಭದ್ರತೆ ಮತ್ತು ಹಲವಾರು ಇತರ ಕಾರಣಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತದೆ.