ಪ್ರಮುಖ ಸಾರ್ವಜನಿಕ ಷೇರುದಾರರಾದ ದಿವಂಗತ ರಾಕೇಶ್‌ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ವಾಲಾ ಸುಮಾರು 500 ಕೋಟಿ ರೂ. ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ

ಮುಂಬೈ (ಜುಲೈ 10, 2023): ಹಣ ಮಾಡೋದು ಹೇಗಪ್ಪಾ ಅಂತ ಜನ ಸಾಮಾನ್ಯವಾಗಿ ಚಿಂತೆ ಮಾಡುತ್ತಲೇ ಇರುತ್ತಾರೆ. ಈ ಪೈಕಿ ಹಣ ಮಾಡಲು ಷೇರು ಮಾರುಕಟ್ಟೆಯೂ ಒಂದು ಮಾರ್ಗ. ಟಾಟಾ ಗ್ರೂಪ್ ಸಂಸ್ಥೆಯ ಜೂನ್ ತ್ರೈಮಾಸಿಕ ನವೀಕರಣದ ನಂತರ ಶುಕ್ರವಾರದ ವಹಿವಾಟಿನಲ್ಲಿ ಟೈಟಾನ್ ಕಂಪನಿಯ ಷೇರುಗಳು ಶೇಕಡಾ 3 ರಷ್ಟು ಏರಿಕೆ ಕಂಡಿವೆ. ಈ ಪೈಕಿ, ಪ್ರಮುಖ ಸಾರ್ವಜನಿಕ ಷೇರುದಾರರಾದ ದಿವಂಗತ ರಾಕೇಶ್‌ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ವಾಲಾ ಸುಮಾರು 500 ಕೋಟಿ ರೂ. ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. ಆಭರಣ ತಯಾರಕ ಕಂಪನಿಯಲ್ಲಿ ಸುಮಾರು 5.29 ಪ್ರತಿಶತ ಷೇರುಗಳನ್ನು ಇವರು ಹೊಂದಿದ್ದಾರೆ ಎಂದು ತಿಳಿದುಬಂದಿದೆ. 

ಜೂನ್ ತ್ರೈಮಾಸಿಕದಲ್ಲಿ ಎಲ್ಲಾ ಪ್ರಮುಖ ಗ್ರಾಹಕ ವ್ಯವಹಾರಗಳು ಎರಡು-ಅಂಕಿಯ ಬೆಳವಣಿಗೆಯನ್ನು ಪ್ರದರ್ಶಿಸುವುದರೊಂದಿಗೆ ರ್ಷದಿಂದ ವರ್ಷಕ್ಕೆ (YoY) 20 ಪ್ರತಿಶತದಷ್ಟು ಆದಾಯದ ಬೆಳವಣಿಗೆಯನ್ನು Q1 ಗಾಗಿ ದಾಖಲಿಸಿದೆ ಎಂದು ಟೈಟಾನ್ ಹೇಳಿದೆ. ಕಳೆದ ತ್ರೈಮಾಸಿಕದಲ್ಲಿ ಒಟ್ಟು 18 ಸ್ಟೋರ್‌ಗಳನ್ನು ಆರಂಭಿಸಿದ ಟೈಟಾನ್‌ನ ಮುಖ್ಯ ಆಭರಣ ವ್ಯಾಪಾರವು 21 ಪ್ರತಿಶತದಷ್ಟು ಬೆಳವಣಿಗೆಯೊಂದಿಗೆ ಪ್ರಭಾವಿತವಾಗಿದೆ ಮತ್ತು ಅದರ ಒಟ್ಟು ಅಂಗಡಿಗಳ ಸಂಖ್ಯೆ 559 ಆಗಿದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ರಾಕೇಶ್‌ ಜುಂಜುನ್‌ವಾಲಾ ನಂಬಿಕೆ ಇಟ್ಟಿದ್ದ ಹೂಡಿಕೆಯ 5 ಟಿಪ್ಸ್ ಹೀಗಿದೆ..

ಷೇರುಗಳ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಟೈಟಾನ್ ಸಿಎಫ್‌ಒ ಅಶೋಕ್ ಸೊಂತಾಲಿಯಾ“ಈ ಅವಧಿಯಲ್ಲಿ ಸರಾಸರಿ ಟಿಕೆಟ್ ಗಾತ್ರದ ಬೆಳವಣಿಗೆಗಿಂತ ಖರೀದಿದಾರರ ಬೆಳವಣಿಗೆ ಹೆಚ್ಚಾಗಿದೆ. ತ್ರೈಮಾಸಿಕದಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಳಿತದ ಹೊರತಾಗಿಯೂ, ಏಪ್ರಿಲ್‌ನಲ್ಲಿ ಅಕ್ಷಯ ತೃತೀಯ ಮಾರಾಟ ಮತ್ತು ಜೂನ್‌ನಲ್ಲಿ ಮದುವೆ ಖರೀದಿಗಳು ಹೆಚ್ಚಾಗಿತ್ತು. ಒಟ್ಟಾರೆ ಉತ್ಪನ್ನ ಮಿಶ್ರಣದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಿಲ್ಲದೆ ಚಿನ್ನ ಮತ್ತು ಸ್ಟಡ್ಡೆಡ್‌ನ ಪ್ರಮುಖ ವಿಭಾಗಗಳು ಉತ್ತಮವಾಗಿ ಬೆಳೆದವು. ಹೊಸ ಸ್ಟೋರ್ ಸೇರ್ಪಡೆಗಳು, ಚಿನ್ನದ ಮಾರಾಟ ಮತ್ತು ವಿನಿಮಯ ಕಾರ್ಯಕ್ರಮಗಳು ತ್ರೈಮಾಸಿಕದಲ್ಲಿ ಉತ್ತಮವಾಗಿ ಮುಂದುವರೆಯಿತು’’ ಎಂದು ಹೇಳಿದ್ದಾರೆ. 

ತನಿಷ್ಕ್ ಶಾರ್ಜಾದಲ್ಲಿ ಹೊಸ ಅಂಗಡಿಯನ್ನು ಆರಂಭಿಸಿದ್ದು ಆ ಮೂಲಕ ತನ್ನ ಅಂತಾರಾಷ್ಟ್ರೀಯ ಅಸ್ತಿತ್ವವನ್ನು ಗಲ್ಫ್ ಪ್ರದೇಶದಲ್ಲಿ ಏಳು ಮಳಿಗೆಗಳಿಗೆ ಮತ್ತು USA ನಲ್ಲಿ ಒಂದು ಮಳಿಗೆಗೆ ವಿಸ್ತರಿಸಿತು. ಹಾಗೆ, ದೇಶದಲ್ಲಿ ತನಿಷ್ಕ್‌ನ 9 ಮಳಿಗೆಗಳು ಹಾಗೂ ತನಿಷ್ಕ್‌ನ ಮಿಯಾದ 8 ಹೆಚ್ಚು ಮಳಿಗೆಗಳು ಹೆಚ್ಚಾಗಿವೆ. 

ಇದನ್ನೂ ಓದಿ: Rakesh Jhunjhunwala ವಿಧಿವಶ: ಬಿಗ್‌ ಬುಲ್‌ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಟೈಟಾನ್‌ನ ವಾಚ್‌ಗಳು ಮತ್ತು ವೇರಬಲ್ಸ್ ವಿಭಾಗ 13 ಶೇಕಡಾ ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ. ಈ ಪೈಕಿ ಅನಲಾಗ್ ವಾಚ್‌ಗಳ ವಿಭಾಗದಲ್ಲಿ 8 ಶೇಕಡಾ ಬೆಳವಣಿಗೆಯನ್ನು ಮತ್ತು ವೇರಬಲ್ಸ್‌ ವಿಭಾಗದಲ್ಲಿ 84 ಶೇಕಡಾ ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ. "ಬ್ರ್ಯಾಂಡ್ ಟೈಟಾನ್ ಮತ್ತು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳು ಬಲವಾದ ಖರೀದಿಯ ಮೊಮೆಂಟಮ್‌ ಹೊಂದಿದ್ದು, ಎರಡಂಕಿಯ ಬೆಳವಣಿಗೆಯನ್ನು ಕಂಡಿದೆ. ಪ್ರೀಮಿಯಂ ಬ್ರ್ಯಾಂಡ್‌ಗಳಿಗೆ ಗ್ರಾಹಕರ ಆದ್ಯತೆಗಳು ಹೆಚ್ಚಾಗಿರುವುದು ವಾಚ್‌ಗಳ ಸರಾಸರಿ ಮಾರಾಟದ ಬೆಲೆಯಲ್ಲಿ ಉತ್ತಮ ಏರಿಕೆಗೆ ಕಾರಣವಾಗಿದೆ" ಎಂದೂ ಕಂಪನಿ ಹೇಳಿದೆ.

ಪ್ರಮುಖ ಚಾನೆಲ್‌ಗಳಲ್ಲಿ, ಹೆಲಿಯೋಸ್ ಚೈನ್, ದೊಡ್ಡ ಸ್ವರೂಪದ ಅಂಗಡಿಗಳು (LFS) ಮತ್ತು ಇ-ಕಾಮರ್ಸ್ ಇತರರಿಗೆ ಹೋಲಿಸಿದರೆ ಹೆಚ್ಚಿನ ಬೆಳವಣಿಗೆ ದರಗಳನ್ನು ಗಳಿಸಿವೆ. ತ್ರೈಮಾಸಿಕದಲ್ಲಿ ಸೇರಿಸಲಾದ 26 ಹೊಸ ಮಳಿಗೆಗಳ ಪೈಕಿ, 14 ಮಳಿಗೆಗಳು ಟೈಟಾನ್ ವರ್ಲ್ಡ್‌ ಆಗಿದ್ದು, 9 ಮಳಿಗೆಗಳು ಹೆಲಿಯೊಸ್‌ನದ್ದು ಮತ್ತು 3 ಮಳಿಗೆಗಳು ಫಾಸ್ಟ್ರ್ಯಾಕ್‌ನಲ್ಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 4 ಲಕ್ಷ ರೂ. ಇರ್ತಿತ್ತು!

ರೇಖಾ ಜುಂಜುನ್ವಾಲಾ ಆಸ್ತಿಯಲ್ಲಿ ಭಾರಿ ಏರಿಕೆ
ಟೈಟಾನ್ ಕಂಪನಿಯ ಷೇರುಗಳು ಟ್ರೇಡಿಂಗ್‌ ಆರಂಭವಾದ ಕೆಲವೇ ನಿಮಿಷಗಳಲ್ಲಿ ಶೇ 3.39 ರಷ್ಟು ಏರಿಕೆ ಕಂಡು 3,211.10 ರೂ.ಗಳ ಎಫ್‌ಎಸ್‌ಎಚ್ ದಾಖಲೆಯ ಗರಿಷ್ಠ ವಹಿವಾಟನ್ನು ತಲುಪಿದವು. ಟೈಟಾನ್ ಕಂಪನಿಯು ಸಾರ್ವಕಾಲಿಕ ಉನ್ನತ ಮಟ್ಟದಲ್ಲಿ ರೂ. 2,85,077 ಕೋಟಿಗಳ ಮಾರುಕಟ್ಟೆ ಬಂಡವಾಳೀಕರಣವಾಗಿದೆ., ಇದರಿಂದ ರೇಖಾ ಜುಂಜುನ್ವಾಲಾ ಅವರು ಟೈಟಾನ್‌ ಕಂಪನಿಯಲ್ಲಿನ 5.29 ಪರ್ಸೆಂಟ್‌ ಷೇರುಗಳ ಮೇಲೆ 494 ಕೋಟಿ ರೂಪಾಯಿ ಮೌಲ್ಯದ ನೋಷನಲ್‌ ಲಾಭ ಗಳಿಸಿದ್ದಾರೆ. 

ಇದನ್ನೂ ಓದಿ: 10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ರೂ. ಇರ್ತಿತ್ತು!