Asianet Suvarna News Asianet Suvarna News

ಚೀನಾದಂತೆ ಭಾರತ ಜಾಗತಿಕ ಉತ್ಪಾದನಾ ಕೇಂದ್ರ ಆಗೋದು ಹೇಗೆ?

ವಿಶ್ವದರ್ಜೆಯ ಮೂಲಸೌಕರ‍್ಯ, ಕಡಿಮೆ ಕಾರ್ಮಿಕ ವೇತನದಂತಹ ನೀತಿಗಳು ಚೀನಾದ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದವು. ಈ ನಿಟ್ಟಿನಲ್ಲಿ ಭಾರತ 30 ವರ್ಷ ಹಿಂದಕ್ಕೆ ಹೋಗಿ ಜಾಗತಿಕ ಉತ್ಪಾದನಾ ಹಬ್‌ ಆಗಲು ಚೀನಾ ಏನು ಮಾಡಿತ್ತು ಎಂಬುದನ್ನು ಕಲಿಯಬೇಕಾಗುತ್ತದೆ.

Its hard to be the Next China but not Impossible
Author
Bengaluru, First Published Jun 28, 2020, 3:55 PM IST

2010ರಲ್ಲಿ ಚೀನಾ ಅಮೆರಿಕವನ್ನೂ ಹಿಂದಿಕ್ಕಿ ಜಗತ್ತಿನ ಅತಿ ದೊಡ್ಡ ಉತ್ಪಾದನಾ ವಲಯವಾಗಿ ಹೊರಹೊಮ್ಮಿತು. ವಿಶ್ವದ ಉತ್ಪಾದನಾ ಕಾರ್ಖಾನೆಯಾಗಿ 1980ರ ಆರಂಭದಲ್ಲಿ ಚೀನಾ ಸಕ್ರಿಯವಾಗಿದ್ದರೂ ಮೊದಮೊದಲು ಸೀಮಿತ ಪ್ರಮಾಣದ ಸರಕುಗಳ ಉತ್ಪಾದಕ ರಾಷ್ಟ್ರವಾಗಿ ಆರಂಭವಾಗಿ ಅನಂತರ ಔಷಧದಿಂದ ಹಿಡಿದು ಎಲೆಕ್ಟ್ರಾನಿಕ್‌ ಉತ್ಪನ್ನಗಳವರೆಗೆ ಪ್ರತಿಯೊಂದು ಸರಕಿನ ಉತ್ಪಾದನಾ ಹಬ್‌ ಆಗಿ ಬೆಳವಣಿಗೆ ಹೊಂದಿತು.

ಕೊರೋನಾದಿಂದಾದ ಬದಲಾವಣೆ

ವಿಶ್ವಸಂಸ್ಥೆಯ ಸಂಖ್ಯಾಶಾಸ್ತ್ರ ವಿಭಾಗದ ಅಂದಾಜಿನ ಪ್ರಕಾರ, 2018ರಲ್ಲಿ ಜಾಗತಿಕ ಉತ್ಪಾದನೆಯಲ್ಲಿ ಚೀನಾ ಉತ್ಪನ್ನಗಳ ಪ್ರಮಾಣ ಶೇ.28 ರಷ್ಟಿತ್ತು. ಆದರೆ ಕೊರೋನಾ ವೈರಸ್‌ ಹಲವು ವಿಧದಲ್ಲಿ ಚೀನಾ ಉತ್ಪಾದನಾ ವಲಯದ ಮೇಲೆ ಪರಿಣಾಮ ಬೀರಿದೆ. ಚೀನಾದಲ್ಲಿನ ಉತ್ಪಾದನೆಯ ಸ್ಥಗಿತದಿಂದ ಉಂಟಾದ ವ್ಯತ್ಯಯದಿಂದ ಪಾಠ ಕಲಿತು, ಭವಿಷ್ಯದ ಅಪಾಯವನ್ನು ಎದುರಿಸುವ ಕಾರ‍್ಯತಂತ್ರದ ಭಾಗವಾಗಿ ಹೊಸ ಉತ್ಪಾದನಾ ಕೇಂದ್ರಗಳತ್ತ ಜಗತ್ತು ಕಣ್ಣು ಹಾಯಿಸುವಂತಾಗಿದೆ. ಹಲವಾರು ಕೈಗಾರಿಕೆಗಳು ಒಂದೇ ದೇಶದ ಉತ್ಪಾದನೆಯ ಮೇಲೆ ಅವಲಂಬಿತವಾಗಿರುವುದರ ಅಪಾಯವನ್ನು ಅರಿತುಕೊಂಡಿವೆ. ಹೀಗಾಗಿ ಉತ್ಪಾದನಾ ವಲಯಗಳು ಭೌಗೋಳಿಕವಾಗಿ ಹರಡಿಕೊಂಡಿರಬೇಕು ಎಂಬ ಉದ್ದೇಶದಿಂದ ತಮ್ಮಲ್ಲಿನ ಸೌಲಭ್ಯವನ್ನು ವಿಸ್ತರಿಸಲು ಪ್ರಯತ್ನಿಸುತ್ತಿವೆ.

ಚೀನಾ ಸೊಕ್ಕು ಮುರಿಯಲು ರೆಡಿಯಾಗಿದೆ ರಕ್ಷಣಾ ವ್ಯೂಹ; ಇನ್ಮೇಲೆ ಅಸಲಿ ಆಟ ಶುರು..!

ಇಂಥ ಸಂದರ್ಭದಲ್ಲಿ ಉತ್ಪಾದನಾ ಸ್ನೇಹಿ ವಾತಾವರಣವನ್ನು ಸೃಷ್ಟಿಸಿ, ಭಾರತದಲ್ಲಿ ಘಟಕಗಳನ್ನು ಸ್ಥಾಪಿಸಿ, ಜಾಗತಿಕ ಉತ್ಪಾದನಾ ಸಂಸ್ಥೆಗಳೊಂದಿಗೆ ಲಾಭದಾಯಕ ಒಪ್ಪಂದಗಳನ್ನು ಮಾಡಿಕೊಂಡು, ಚೀನಾ ಹಿಂದಿಕ್ಕಿ ಪ್ರಮುಖ ಉತ್ಪಾದನಾ ಕೇಂದ್ರವಾಗಲು ಭಾರತಕ್ಕಿದು ಸುವರ್ಣಾವಕಾಶ. ಎಲೆಕ್ಟ್ರಾನಿಕ್ಸ್‌, ವೈದ್ಯಕೀಯ, ಜವಳಿ ಮುಂತಾದ ಕ್ಷೇತ್ರಗಳಲ್ಲಿ ಭಾರತದಲ್ಲಿ ಬಂಡವಾಳ ಹೂಡಲು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಗಳು ಈಗಾಗಲೇ ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿವೆ ಎಂದು ವರದಿಯಾಗಿದೆ. ಭಾರತವು ಈ ಅವಕಾಶವನ್ನು ಲಾಭದಾಯಕವಾಗಿ ಸದುಪಯೋಗ ಮಾಡಿಕೊಳ್ಳಬೇಕು ಮತ್ತು ಪರಾರ‍ಯಯ ಉತ್ಪಾದನಾ ರಾಷ್ಟ್ರವಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಳ್ಳಬೇಕು.

ಕುತೂಹಲಕಾರಿ ಸಂಗತಿ ಎಂದರೆ ದೀರ್ಘಕಾಲದ ಚೀನಾ-ಅಮೆರಿಕ ಸುಂಕದ ಯುದ್ಧವು ಈಗಾಗಲೇ ಜಾಗತಿಕ ಕಂಪನಿಗಳು ತಮ್ಮ ಉತ್ಪಾದನಾ ಕೇಂದ್ರವನ್ನು ಚೀನಾದಿಂದ ಆಚೆಗೆ ಸ್ಥಾಪಿಸುವ ಬಗೆಗಿನ ನಿಲುವಿಗೆ ಕಾರಣವಾಗಿತ್ತು. ಇದೀಗ ಕೋವಿಡ್‌-19 ಸಾಂಕ್ರಾಮಿಕ ರೋಗವು ಚೀನಾದಿಂದ ಆಚೆಗೆ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಕೊಂಡೊಯ್ಯುವ ಯೋಜನೆಗೆ ಮತ್ತಷ್ಟುಪ್ರೋತ್ಸಾಹ ನೀಡುತ್ತಿವೆ. ಹೀಗಾಗಿ ವಿವಿಧ ರಾಷ್ಟ್ರಗಳು ಈ ಪ್ರಕ್ರಿಯೆಗೆ ಹೆಚ್ಚಿನ ವೇಗ ನೀಡಿದೆ. ಈ ಪರಿಸ್ಥಿತಿಯಲ್ಲಿ ಹಲವಾರು ದೇಶಗಳು ಕಾರ‍್ಯಸಾಧ್ಯವಾದ ಉತ್ಪಾದನಾ ಆಯ್ಕೆಗಳಾಗಿ ಹೊರಹೊಮ್ಮುತ್ತಿವೆ. ಭಾರತವನ್ನು ಹೊರತುಪಡಿಸಿ ವಿಯೆಟ್ನಾಂ, ಇಂಡೋನೇಷ್ಯಾ, ಕಾಂಬೋಡಿಯಾ ಮತ್ತು ಸಿಂಗಾಪುರ - ಈ ದೇಶಗಳು ಜಾಗತಿಕ ಕಂಪನಿಗಳು ಪರಿಗಣಿಸುತ್ತಿರುವ ಪ್ರಮುಖ ಆಯ್ಕೆಗಳಾಗಿವೆ.

ಚೀನಾ ತಂಟೆಗೆ ಭಾರತದ ಮಿಸೈಲ್‌ ಸಡ್ಡು: ಡ್ರ್ಯಾಗನ್ ವಿರುದ್ಧ ಮಹತ್ತರ ಹೆಜ್ಜೆ!

ಭಾರತ ಈಗೇನು ಮಾಡಬೇಕು?

ಜಾಗತಿಕ ಉತ್ಪಾದನೆಗೆ ಅನುಕೂಲಕರ ವಾತಾವರಣ ನಿರ್ಮಿಸಲು ಭಾರತವು ಪೂರ್ವಭಾವಿ ಸಿದ್ಧತೆ ನಡೆಸಬೇಕಾದ ತುರ್ತು ಇದೆ. ಆಗ, ಕೊರೋನಾ ವೈರಸ್‌ ಬಿಕ್ಕಟ್ಟು ಕಡಿಮೆಯಾದಾಗ ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಪೂರೈಕೆ ಸರಪಳಿಯ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವನ್ನಾಗಿ ಭಾರತವನ್ನು ಪರಿಗಣಿಸಬಹುದು. ಅದಕ್ಕಾಗಿ ದಕ್ಷ ಮತ್ತು ಹೆಚ್ಚು ತರಬೇತಿ ಪಡೆದ ಮಾನವ ಶಕ್ತಿಯನ್ನು ಒದಗಿಸುವ, ನಾವೀನ್ಯತೆಯನ್ನು ಉತ್ತೇಜಿಸುವ, ವ್ಯವಹಾರಗಳನ್ನು ಸುಲಭಗೊಳಿಸುವ ಮತ್ತು ಬೌದ್ಧಿಕ ಆಸ್ತಿಯನ್ನು ರಕ್ಷಿಸುವ ಉತ್ಪಾದನಾ ಪರಿಸರ ವ್ಯವಸ್ಥೆಯ ಅಗತ್ಯವಿದೆ.

ಹಾಗಾಗಿ ಭಾರತ 30 ವರ್ಷ ಹಿಂದಕ್ಕೆ ಹೋಗಿ ಜಾಗತಿಕ ಉತ್ಪಾದನಾ ಹಬ್‌ ಆಗಲು ಚೀನಾ ಏನು ಮಾಡಿತ್ತು ಎಂಬುದನ್ನು ಕಲಿಯುವುದು ಉತ್ತಮ. ವಿಶ್ವ ದರ್ಜೆಯ ಮೂಲಸೌಕರ‍್ಯ, ಲಾಜಿಸ್ಟಿಕ್ಸ್‌, ಕಡಿಮೆ ಕಾರ್ಮಿಕ ವೇತನದಂತಹ ನೀತಿಗಳು ಚೀನಾದ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದವು. ಭಾರತವೂ ಚೀನಾದ ಅನುಭವದಿಂದ ಕಲಿತರೆ ಹಾಗೂ ಮಾರಾಟಗಾರರು, ತಂತ್ರಜ್ಞಾನ ಮತ್ತು ನುರಿತ ಕಾರ್ಮಿಕರ ಸಮೂಹದೊಂದಿಗೆ ಅನುಕೂಲಕರ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ರೂಪಿಸಿದರೆ ಖಂಡಿತವಾಗಿಯೂ ಮುಂದಿನ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಬೆಳೆಯಬಹುದು.

ಚೀನಾ ವಸ್ತು ಬಹಿಷ್ಕರಿಸಲು ಭಾರತದ ಆಟೋಮೊಬೈಲ್ ಕ್ಷೇತ್ರ ಹಿಂದೇಟು!

ಮೂಲಸೌಕರ‍್ಯ, ಮಾನವ ಸಂಪನ್ಮೂಲ

ಭಾರತವು ಹೆಚ್ಚಿನ ವಿದೇಶಿ ಹೂಡಿಕೆಗೆ ಅನುಕೂಲವಾಗುವಂತೆ ಕೌಶಲಗಳನ್ನು ಸೃಷ್ಟಿಸಲು ನಾವೀನ್ಯತೆಯನ್ನು ಬೆಳಸಬೇಕು ಮತ್ತು ಉತ್ಪಾದನಾ ಮೂಲಸೌಕರ‍್ಯವನ್ನು ಹೆಚ್ಚಿಸಬೇಕು. ಉತ್ಪಾದನಾ ಸಾಮರ್ಥ್ಯಗಳಲ್ಲಿ ವಿವಿಧ ಹಂತಗಳಿವೆ. ಮೊದಲನೆಯದು ಕಡಿಮೆ ಕೌಶಲದ ಅಗತ್ಯವಿರುವ ಗಣಿಗಾರಿಕೆ, ಕಚ್ಚಾ ವಸ್ತುಗಳನ್ನು ಉತ್ಪಾದಿಸುವುದು ಮತ್ತು ಕೃಷಿ ಸಂಬಂಧಿತ ಸರಕುಗಳ ಉತ್ಪಾದನೆ.

ಎರಡನೆಯದು ಜವಳಿ, ಉಡುಪು ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಚಟುವಟಿಕೆಗಳು. ಅವುಗಳಿಗೆ ಕಡಿಮೆ ಮಟ್ಟದ ವಿಶೇಷ ಕೌಶಲದ ಅಗತ್ಯವಿರುತ್ತದೆ. ಆದಾಗ್ಯೂ ಯಂತ್ರೋಪಕರಣ ಮತ್ತು ರಾಸಾಯನಿಕ ಉತ್ಪನ್ನಗಳಂತಹ ಸಂಕೀರ್ಣ ಉತ್ಪನ್ನಗಳ ತಯಾರಿಕೆಗೆ ಅತ್ಯಾಧುನಿಕ ಸಾಮರ್ಥ್ಯದ ಸೌಲಭ್ಯಗಳು ಬೇಕಾಗುತ್ತವೆ. ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸಲು ಭಾರತ ಈ ಎಲ್ಲಾ ರೀತಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು.

ಮೇಕ್‌ ಇನ್‌ ಇಂಡಿಯಾ ಮತ್ತು ಸ್ಕಿಲ್‌ ಇನ್‌ ಇಂಡಿಯಾ ಮುಂತಾದ ಕ್ರಮಗಳ ಮೂಲಕ ಲಕ್ಷಾಂತರ ಉದ್ಯೋಗ ಸೃಷ್ಟಿಸಲು, ಉತ್ಪಾದನಾ ವಲಯವನ್ನು ಸದುಪಯೋಗಪಡಿಸಿಕೊಳ್ಳಲು ಸರ್ಕಾರ ಈಗಾಗಲೇ ನಿರ್ಣಾಯಕ ಗಮನ ನೀಡಿದೆ. ನುರಿತ ಮಾನವ ಸಂಪನ್ಮೂಲಗಳ ಸಮೂಹವನ್ನು ಸೃಷ್ಟಿಸಲು ಕೌಶಲ ಹೆಚ್ಚಿಸುವುದೂ ಸಹ ಪ್ರಮುಖ ಪೂರ್ವಸಿದ್ಧತೆಯಾಗಿದೆ. ಎರಡು ದಶಕಗಳ ಹಿಂದೆ ಜಗತ್ತು ತನ್ನ ಸೇವಾ ವಲಯದ ಕೆಲಸಗಳನ್ನು ಹೊರಗುತ್ತಿಗೆಗೆ ನೀಡಲು ಮುಂದಾದಾಗ ಭಾರತದ ಐಟಿ ತಜ್ಞರು ಮತ್ತು ಇಂಗ್ಲಿಷ್‌ ಮಾತನಾಡುವ ಪಧವೀದರರು ಆ ಅವಕಾಶವನ್ನು ಮೀರಿ ಭಾರತವನ್ನು ಸೇವಾ ಕೇಂದ್ರವನ್ನಾಗಿಸಿದರು.

ಗ್ರಾಮದ ಜನತೆಯ ದಿಟ್ಟ ನಿರ್ಧಾರ; ಜುಲೈ 1 ರಿಂದ ಚೀನಾ ವಸ್ತು ಬಳಕೆ ನಿಷೇಧ!

ಹಾಗೆಯೇ ಭಾರತವು ಹೆಚ್ಚು ಆದ್ಯತೆಯ ಉತ್ಪಾದನಾ ಕೇಂದ್ರವಾಗಲು ನುರಿತ ಮಾನವ ಸಂಪನ್ಮೂಲಗಳ ಸಮೂಹದ ಅಗತ್ಯವಿದೆ. ಪ್ರತಿಯೊಂದು ವಲಯವೂ ಯಾಂತ್ರೀಕರಣಗೊಂಡಾಗ ಉದ್ಯೋಗಗಳ ಸ್ವರೂಪವೂ ಬಲಾಗುತ್ತದೆ. ಪ್ರತಿ ವಲಯದಲ್ಲೂ ಮಾಹಿತಿ ತಂತ್ರಜ್ಞಾನ ಮಿಳಿತಗೊಂಡರೆ 3ಡಿ ಮುದ್ರಣ ತಜ್ಞರು, ಆಟೋಮೊಬೈಲ್‌ ಅನಾಲಿಟಿಕ್ಸ್‌, ಎಂಜಿನಿಯರ್‌ಗಳು, ದತ್ತಾಂಶ ವಿಶ್ಲೇಷಕರು ಮುಂತಾದ ತಜ್ಞ ಕಾರ್ಮಿಕರ ಬೇಡಿಕೆ ಹೆಚ್ಚಳವಾಗುತ್ತದೆ. ಹಾಗಾಗಿ ಭಾರತ ತನ್ನ ಕಾರ‍್ಯಪಡೆಯ ಕೌಶಲವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾದದ್ದು ಭವಿಷ್ಯದ ಅತ್ಯಗತ್ಯಗಳಲ್ಲಿ ಒಂದು.

ಭವಿಷ್ಯದ ದೂರದೃಷ್ಟಿಯೊಂದಿಗೆ ಉತ್ಪಾದನಾ ವಲಯವನ್ನು ಇನ್ನಷ್ಟುಎತ್ತರಕ್ಕೆ ಹೇಗೆ ಕೊಂಡೊಯ್ಯಬೇಕು ಎಂಬ ಬಗ್ಗೆ ಭಾರತ ಯೋಚಿಸಬೇಕು. ಆಗ ಭಾರತದ ಉತ್ಪಾದನಾ ಮಾರುಕಟ್ಟೆಮತ್ತು ಉತ್ಪಾದನಾ ಕ್ಷೇತ್ರದ ವಿಕಾಸವು ಜಾಗತಿಕ ಕೈಗಾರಿಕೆಗಳ ಅನೇಕ ಉತ್ಪಾದನಾ ಅವಶ್ಯತೆಗಳನ್ನು ಪೂರೈಸಲು, ಉತ್ಪಾದನಾ ಹಾಟ್‌ಸ್ಪಾಟ್‌ಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

Follow Us:
Download App:
  • android
  • ios