ಚೀನಾ ವಸ್ತು ಬಹಿಷ್ಕರಿಸಲು ಭಾರತದ ಆಟೋಮೊಬೈಲ್ ಕ್ಷೇತ್ರ ಹಿಂದೇಟು!

 ಚೀನಿ ವಸ್ತುಗಳನ್ನು ಬಹಿಷ್ಕರಿಸುವ ಬಹುದೊಡ್ಡ ಅಭಿಯಾನ ನಡೆಯುತ್ತಿದೆ. ಹಲವು ಕ್ಷೇತ್ರಗಳು ಚೀನಿ ವಸ್ತುಗಳನ್ನು ನಿಷೇಧಿಸಿದೆ. ಆದರೆ ಭಾರತದ ಆಟೋಮೊಬೈಲ್ ಕ್ಷೇತ್ರ ಚೀನಾ ವಸ್ತು ಬಹಿಷ್ಕರಿಸಲು ಹಿಂದೇಟು ಹಾಕಿದೆ.

India automobile not ready to boycott china products

ನವದೆಹಲಿ(ಜೂ.27): ಲಡಾಖ್ ಗಡಿ ಪ್ರದೇಶದಲ್ಲಿ ಚೀನಾ ಆಕ್ರಮಣದಿಂದ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಸಿಟ್ಟು ಭಾರತೀಯರಿಗೆ ಇನ್ನೂ ಆರಿಲ್ಲ. ಆದರೆ ಅತ್ತ ಚೀನಾ ಆತಿಕ್ರಮಣ ಮಾತ್ರ ನಿಂತಿಲ್ಲ. ಸೇನೆ ದಿಟ್ಟ ಉತ್ತರ ನೀಡಲು ಸಜ್ಜಾಗಿದೆ. ಇತ್ತ ಭಾರತೀಯರು ಚೀನಿ ವಸ್ತುಗಳ ಬಹಿಷ್ಕಾರದ ಮೂಲಕ ತಿರುಗೇಟು ನೀಡುತ್ತಿದ್ದಾರೆ. ಹಲವು ಕಂಪನಿಗಳು, ಹಲವು ಕ್ಷೇತ್ರಗಳು ಚೀನಿ ವಸ್ತುಗಳನ್ನು ಅಧೀಕೃತವಾಗಿ ನಿಷೇಧಿಸಿದೆ. ಆದರೆ ಭಾರತೀಯ ಆಟೋಮೊಬೈಲ್ ಕ್ಷೇತ್ರ ಚೀನಾ ವಸ್ತುಗಳ ಬಳಕೆ ನಿಷೇಧಿಸಲು ಹಿಂದೇಟು ಹಾಕಿದೆ.

ಚೀನಾ ಮೇಲೆ 'ಕೇಸರಿ' ಅಸ್ತ್ರ ಪ್ರಯೋಗ; ಬೆಚ್ಚಿ ಬಿದ್ದಿದೆ ಡ್ರ್ಯಾಗನ್ ಪಡೆ...

ವಾಹ ಉತ್ಪಾದನೆಗೆ ಬೇಕಾದ ಬಿಡಿ ಭಾಗಗಳು ಚೀನಾದಿಂದ ಆಮದು ಆಗುತ್ತಿದೆ.  ಭಾರತದಲ್ಲಿ ಈ ಬಿಡಿ ಭಾಗಗಳ ಉತ್ಪಾದನೆ ಇಲ್ಲ. ಚೀನಾ ಹೊರತು ಪಡಿಸಿ ಬೇರೆ ದೇಶಗಳಿಂದ  ಕಡಿಮೆ ಬೆಲೆಗೆ ಬಿಡಿ ಭಾಗಗಳ ಆಮದು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಚೀನಾವನ್ನು ನೆಚ್ಚಿಕೊಳ್ಳಬೇಕು ಎಂದು ಮಾರುತಿ ಸುಜುಕಿ ಹೇಳಿದೆ. 2019ರಲ್ಲಿ ಚೀನಾದಿಂದ ಬರೋಬ್ಬರಿ 4.2 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಬಿಡಿ ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ. 

ಸ್ಥಳೀಯರಿಗೆ ಉದ್ಯೋಗ; ಭಾರತದಲ್ಲಿರುವ ಚೀನಾ ಕಂಪನಿಗಳ ಪ್ಲಾನ್!...

ದಿಢೀರ್ ಆಗಿ ಚೀನಾ ವಸ್ತುಗಳ ನಿಷೇಧ ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಅಸಾಧ್ಯ. ಇದೇ ಬೆಲೆಯಲ್ಲಿ ಭಾರತದಲ್ಲಿ ಬಿಡಿ ಭಾಗಗಳು ಪೂರೈಕೆಯಾಗುತ್ತಿದ್ದರೆ ಚೀನಾದಿಂದ ಆಮದು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಹೀಗಾಗಿ ಆಟೋಮೊಬೈಲ್ ಕ್ಷೇತ್ರಕ್ಕೆ ಚೀನಾ ವಸ್ತುಗಳ ನಿಷೇಧ ಕಷ್ಟವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

ಆಟೋಮೊಬೈಲ್ ಪಾರ್ಟ್‌ಗಳು ಚೀನಾದಿಂದಲೇ ಬಹುತೇಕ ರಾಷ್ಟ್ರಗಳಿಗೆ ಪೂರೈಕೆಯಾಗುತ್ತಿದೆ. ಚೀನಾದಲ್ಲಿ ಬಹುತೇಕ ಕಂಪನಿಗಳ ಉತ್ಪಾದನ ಘಟಕಗಳಿವೆ.  ಚೀನಾ ವಸ್ತುಗಳನ್ನು ನಿಷೇಧಿಸಿದರೆ ಭಾರತದ ಆಟೋಮೊಬೈಲ್ ಉತ್ಪಾದನೆ ಸ್ಥಗಿತಗೊಳ್ಳಲಿದೆ ಎಂದು ಆಟೋಮೊಬೈಲ್ ದಿಗ್ಗಜರು ಹೇಳಿದ್ದಾರೆ.

2019ರಲ್ಲಿ ಚೀನಾದಿಂದ ಭಾರತ ಒಟ್ಟು 70.3 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಇನ್ನು ಭಾರತದಿಂದ ಚೀನಾಗೆ 16.7 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ವಸ್ತುಗಳು ಚೀನಾಗೆ ರಫ್ತಾಗಿದೆ. 

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Latest Videos
Follow Us:
Download App:
  • android
  • ios