ಗ್ರಾಮದ ಜನತೆಯ ದಿಟ್ಟ ನಿರ್ಧಾರ; ಜುಲೈ 1 ರಿಂದ ಚೀನಾ ವಸ್ತು ಬಳಕೆ ನಿಷೇಧ!
ಲಡಾಖ್ ಬಿಕ್ಕಟ್ಟಿನ ಬಳಿಕ ಚೀನಾಗೆ ಪಾಠ ಕಲಿಸಲು ಭಾರತೀಯರು ಸಜ್ಜಾಗಿದ್ದಾರೆ. ಚೀನಾ ವಸ್ತು ಬಳಕೆ ನಿಷೇಧಕ್ಕೆ ಅಭಿಯಾನಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಸಂಪೂರ್ಣ ಗ್ರಾಮವೇ ಚೀನಾ ವಸ್ತು ನಿಷೇಧಿಸಿದೆ.
ಪುಣೆ(ಜೂ.27): ಲಡಾಖ್‌ನಲ್ಲಿ ಭಾರತೀಯ ಭೂಪ್ರದೇಶದೊಳಗೆ ಅತಿಕ್ರಮಣ, ಸೈನಿಕರ ಮೇಲೆ ದಾಳಿಯಿಂದ ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಚೀನಿ ವಸ್ತುಗಳ ಬಹಿಷ್ಕಾರಕ್ಕೆ ಒತ್ತಾಯ ಕೇಳಿಬರುತ್ತಿದೆ. ಹಲವರು ಸ್ವಯಂ ಪ್ರೇರಿತರಾಗಿ ಚೀನಿ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದಾರೆ. ಇದೀಗ ಪುಣೆಯ ಕೊಂಧವೆ-ಧಾವಡೆ ಗ್ರಾಮ ಸಂಪೂರ್ಣವಾಗಿ ಚೀನಾ ವಸ್ತುಗಳ ಬಳಕೆ ಹಾಗೂ ಮಾರಾಟ ನಿಷೇಧಿಸಿದೆ.
ಗಡಿ ಯಥಾಸ್ಥಿತಿ ಬದಲಿಸಿದರೆ ಹುಷಾರ್: ಚೀನಾಕ್ಕೆ ಭಾರತದ ಕಟು ಎಚ್ಚರಿಕೆ!...
ಕೊಂಧವೆ-ಧಾವಡೆ ಗ್ರಾಮ ಪಂಚಾಯಿತ್‌ನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಮ್ಮ ಪಂಚಾಯತ್ ಸಭೆಯಲ್ಲಿ ಈ ಪ್ರಸ್ತಾಪ ಇಡಲಾಗಿತ್ತು. ಇದಕ್ಕೆ ಸರ್ವಾನುಮದಿಂದ ಒಪ್ಪಿಗೆ ಸೂಚಿಸಲಾಗಿದೆ. ಜುಲೈ 1 ರಿಂದ ನಿಷೇಧ ಜಾರಿಯಾಗಲಿದೆ. ಗ್ರಾಮದಲ್ಲಿರುವ ವರ್ತಕರು, ಶಾಪ್ ಮಾಲೀಕರು ಚೀನಾ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ ಎಂದಿದ್ದಾರೆ. ಈ ಮೂಲಕ ಚೀನಾ ವಸ್ತುಗಳ ನಿಷೇಧ ಸಂಪೂರ್ಣವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಯಾಗಲಿದೆ ಎಂದು ಪಂಜಾಯತ್ ಸದಸ್ಯ ನಿತಿನ್ ಧಾವಡೆ ಹೇಳಿದ್ದಾರೆ.
ಭಾರತ ಜೊತೆ ಸಂಘರ್ಷ: ಮಡಿದ ಸೈನಿಕರಿಗೆ ಚೀನಾ ಪತ್ರಿಕೆ ಕಂಬನಿ!
ಈಗಾಗಲೇ ಆಲ್ ಇಂಡಿಯಾ ಟ್ರೇಡರ್ಸ್ ಬರೋಬ್ಬರಿ 3000 ಚೀನಾ ವಸ್ತುಗಳನ್ನು ನಿಷೇಧಿಸಿದ್ದಾರೆ. ಚೀನೀ ವಸ್ತುಗಳ ಮಾರಾಟವನ್ನೂ ನಿಷೇಧಿಸಿದ್ದಾರೆ. ಸೆಲೆಬ್ರೆಟಿಗಳು ಕೂಡ ಚೀನಾ ವಸ್ತುಗಳ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಭಾರತೀಯ ನಾಗರೀಕರು ಚೀನಾ ವಸ್ತುಗಳನ್ನು ಸ್ವಯಂ ಪ್ರೇರಿತರಾಗಿ ನಿಷೇಧಿಸುತ್ತಿದ್ದಾರೆ. ಚೀನಿ ಆ್ಯಪ್ ಡೀಲೀಟ್ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಗ್ರಾಮ ಪಂಚಾಯತ್ ಚೀನಿ ವಸ್ತುಗಳ ನಿಷೇಧ ನಿರ್ಧಾರ ತೆಗೆದುಕೊಂಡು ಮಹತ್ವದ ಹೆಜ್ಜೆ ಇಟ್ಟಿದೆ.
#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"