Asianet Suvarna News Asianet Suvarna News

ಲಾಕ್‌ಡೌನ್‌ನಿಂದ ಕಂಗೆಟ್ಟ ಕುಟುಂಬಕ್ಕೆ ಬದುಕು ನೀಡಿದ CEDOK: ಶರಣಮ್ಮ ಬಾಳಿಗೆ ದಾರಿ ದೀಪವಾದ ಕೌಶಲ್ಯಾಭಿವೃದ್ಧಿ ಇಲಾಖೆ!

ಕೊರೊನಾ ಮೊದಲ ಅಲೆಯಿಂದ ಹತ್ತಾರು ಕುಟುಂಬಗಳು ‌ಕಂಗಾಲಾಗಿದ್ದವು. ಅಂತಹ ಕುಟುಂಬ ಪೈಕಿ ಶರಣಮ್ಮ ಕುಟುಂಬವೂ ಒಂದಾಗಿತ್ತು

Inspiring story of Raihur women Sharanamma who started embroidery business with help of CEDOK mnj
Author
Bengaluru, First Published Aug 2, 2022, 9:38 PM IST

ರಾಯಚೂರು (ಆ. 02):  ಮಹಿಳೆ ಇಂದಿನ ಕಾಲದಲ್ಲಿ ಕೃಷಿಯಿಂದ ಹಿಡಿದು ಬಾಹ್ಯಾಕಾಶದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರತಿಭೆಯಿಂದ ಮಿಂಚುತ್ತಿದ್ದಾಳೆ. ತೊಟ್ಟಿಲು ತೂಗಲೂ ಸೈ, ಗನ್ ಹಿಡಿದು ಶತ್ರುಗಳನ್ನು ಸದೆ ಬಡಿಯಲೂ ಸೈ. ಅದರಲ್ಲೂ ಗ್ರಾಮೀಣ ಪ್ರದೇಶ ಮಹಿಳೆಯರು ಕ್ರಿಯಾಶೀಲತೆಗೆ ಸಾಟಿಯೇ ಇಲ್ಲವೆಂದು ಹೇಳಬಹುದು. ಗ್ರಾಮೀಣ ‌ಮಹಿಳೆಯರ ಉದ್ಯಮಶೀಲತಾ ಕೌಶಲ್ಯ ಕಲೆಯನ್ನು ಹೆಚ್ವಿಸಲು ರಾಜ್ಯ  ಸರ್ಕಾರದ ಸಿಡಾಕ್ (CEDOK) ಸಂಸ್ಥೆ ಮುಂದಾಗಿದೆ. ರಾಯಚೂರಿನಲ್ಲಿ ಸಿಡಾಕ್ ಸಂಸ್ಥೆಯಿಂದ‌ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಮತ್ತು ಎಂಬ್ರಾಯಿಡರಿ ಬಗ್ಗೆ ತರಬೇತಿ ಪಡೆದ ಮಹಿಳೆಯರು ಇಂದು ಸ್ವಯಂ ‌ಉದ್ಯೋಗ ಕೈಗೊಂಡು ‌ತಾವೇ ನಾಲ್ಕು ಮಹಿಳೆಯರಿಗೆ ಉದ್ಯೋಗ ‌ನೀಡಿ ಇತರೇ ಮಹಿಳೆಯರಿಗೆ ಮಾದರಿ ಆಗಿದ್ದಾರೆ.

ನೊಂದ ಮಹಿಳೆಗೆ ಆಸರೆಯಾದ ಸರ್ಕಾರದ ಸಿಡಾಕ್ ಸಂಸ್ಥೆ: ಕೊರೊನಾ ಮೊದಲ ಅಲೆಯಿಂದ ಹತ್ತಾರು ಕುಟುಂಬಗಳು ‌ಕಂಗಾಲಾಗಿದ್ದವು. ಅಂತಹ ಕುಟುಂಬ ಪೈಕಿ ಶರಣಮ್ಮ ಕುಟುಂಬವೂ ಒಂದಾಗಿತ್ತು. ಜೀವನವೇ ಬೇಡ, ಅನ್ನುವಷ್ಟರ ಮಟ್ಟಿಗೆ ಶರಣಮ್ಮ ಜೀವನದಲ್ಲಿ ನೊಂದು ಹೋಗಿದ್ರು. ನೊಂದ ಮಹಿಳೆ ಶರಣಮ್ಮ ಏನಾದರೂ ‌ಮಾಡಬೇಕು. ನಾಲ್ಕು ಜನರಲ್ಲಿ ನಾವು ಬೆಳೆದು ನಿಲ್ಲಬೇಕು ಅಂತ ಛಲದಿಂದ ಹತ್ತಾರು ಕಡೆ ಅಲೆದಾಟ ನಡೆಸಿದರು.

ಆಗ ಶರಣಮ್ಮ ಬದುಕಿನಲ್ಲಿ ಬೆಳಕಿನ ದೀಪವಾಗಿದ್ದೇ ರಾಯಚೂರಿನ  ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಅಡಿಯಲ್ಲಿನ ಸಿಡಾಕ್ ‌ಸಂಸ್ಥೆ. ಸಿಡಾಕ್ ಸಂಸ್ಥೆಗೆ ಭೇಟಿ ನೀಡಿದ ಶರಣಮ್ಮ ಕಚೇರಿಯಲ್ಲಿ ಇದ್ದ ಜಂಟಿ ನಿರ್ದೇಕರಾದ ಜಿ.ಯು.ಹುಡೇದ್ ಅವರನ್ನು ಭೇಟಿ ‌ಮಾಡಿ ಸ್ವಯಂ ಉದ್ಯೋಗದ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಿಡಾಕ್ ಸಂಸ್ಥೆಯಿಂದ ‌ತರಬೇತಿ ಪಡೆದು ಸ್ವಯಂ ಉದ್ಯೋಗ ಶುರು ಮಾಡಿದ ಶರಣಮ್ಮ:  ಶರಣಮ್ಮ ಅಲ್ಪಸ್ವಲ್ಪ ಟೇಲರಿಂಗ್ ಕಲಿತುಕೊಂಡಿದ್ರು. ಹೀಗಾಗಿ ಅವರು ಸಿಡಾಕ್ ಸಂಸ್ಥೆ ನೀಡುವ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗೆ ಸೇರಿಕೊಂಡರು. ಆ ತರಬೇತಿ ಪಡೆದ ಶರಣಮ್ಮ, ಸ್ವಯಂ ಉದ್ಯೋಗಕ್ಕೆ ಬೇಕಾದ ಅವಶ್ಯಕ ಮಾಹಿತಿಗಳನ್ನು ‌ತರಬೇತಿಯಲ್ಲಿ ತಜ್ಞರಿಂದ ತಿಳಿದುಕೊಂಡರು.

ಭಾರತದ ಅತ್ಯಂತ ಶ್ರೀಮಂತ ಮಹಿಳೆಯರು ಯಾರೆಲ್ಲಾ?

ಅದೇ ರೀತಿಯಲ್ಲಿ ಸ್ವಯಂ ಉದ್ಯೋಗ ಮಾಡಲು ಆಲೋಚನೆ ಮಾಡಲು ಮುಂದಾದಾಗ ಸಿಡಾಕ್ ಸಂಸ್ಥೆಯ 10 ದಿನಗಳ ಕಾಲ ನಡೆಯುವ ತರಬೇತಿಯಲ್ಲಿ ಗ್ರಾಹಕರ ಅಭಿರುಚಿ, ಸಂವಹನ ಕಲೆ,  ಮಾತುಗಾರಿಕೆ ಹೀಗೆ ಸ್ವಯಂ ಉದ್ಯೋಗ ಆರಂಭಿಸಲು ಹೇಗೆ ತಯಾರಿ‌ ನಡೆಸಬೇಕು ಎಂಬುವುದರ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು. 

ಜೊತೆಗೆ ಕೇಂದ್ರ ಸರ್ಕಾರದ ಸಂಕಲ್ಪ ಯೋಜನೆ ಅಡಿಯಲ್ಲಿ ಎಂಬ್ರಾಯಿಡರಿ ಬಗ್ಗೆ 6 ದಿನಗಳ ಕೌಶಲ್ಯ ಉನ್ನತಿಕರಣ ತರಬೇತಿ ಪಡೆದರು. ಈ ಎಲ್ಲಾ ತರಬೇತಿ ಬಳಿಕ‌ ಪ್ರಮಾಣ ಪತ್ರ ಪಡೆದುಕೊಂಡರು. ನಂತರ ಎಂಬ್ರಾಯಿಡರಿ ‌ಉದ್ಯಮಿಯ ಯೋಜನೆಯ ರೂಪರೇಷೆಗಳನ್ನು ತಯಾರಿ ಮಾಡಿಕೊಂಡು ಸಿಡಾಕ್ ಸಹಾಯದೊಂದಿಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ PMEGP (Prime Minister Employment Generation Programme) ಅಡಿಯಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡಲಾಯ್ತು. 

ಬ್ಯಾಂಕ್‌ನಲ್ಲಿಯೂ ಕೂಡ ಶರಣಮ್ಮಳ ಸ್ವಯಂ ಉದ್ಯೋಗಕ್ಕಾಗಿರುವ ಉತ್ಸಾಹದಿಂದ ಎಂಬ್ರಾಯಿಡರಿ ಯಂತ್ರ ಖರೀದಿಸಲು 5 ಲಕ್ಷ ರೂಪಾಯಿ ಲೋನ್ ನೀಡಿದ್ರು.  ಬ್ಯಾಂಕ್‌ನಿಂದ ಲೋನ್ ಪಡೆದ ಶರಣಮ್ಮ ಈಗ ಸ್ವಯಂ ಉದ್ಯೋಗ ಆರಂಭಿಸಿದ್ದಾರೆ. 

ಎಂಬ್ರಾಯಿಡರಿ ಕೌಶಲ್ಯ ಕಲಿತು ತರಬೇತಿ ಜೀವನ ರೂಪಿಸಿಕೊಂಡ ಮಹಿಳೆ: ಇತ್ತೀಚಿನ ದಿನಗಳಲ್ಲಿ ಎಂಬ್ರಾಯಿಡರಿ ಕಲೆ ಬಗ್ಗೆ ಎಲ್ಲೆಡೆಯೂ ಚರ್ಚೆ ಜೋರಾಗಿದೆ. ಅದರಲ್ಲೂ ಮಹಿಳೆಯರು ಸೀರೆ ಖರೀದಿಸಿದ ಬಳಿಕ ಸೀರೆ ಎಂಬ್ರಾಯಿಡರಿ ‌ಮಾಡಿಸಬೇಕು. ಬ್ಲೌಸ್‌ ಗ್ರ್ಯಾಂಡ್‌ ಆಗಿರಬೇಕು. ಹೊಸ ಸೀರೆಯೊಂದಿಗೆ ಮಾಡರ್ನ್ ಬ್ಲೌಸ್‌ ಹಾಕೋ ಮೂಲಕ ಮಿಂಚಬೇಕು ಅಂತ ಎಂಬ್ರಾಯಿಡರಿ ಯಂತ್ರಗಳ ಮೊರೆ ಹೋಗುವುದು ಕಾಮನ್ ‌ಆಗಿದೆ. 

ಸ್ತ್ರೀ ಸಂಘಗಳ ಉತ್ಪನ್ನಗಳಿಗೆ ಮೀಶೋ ಬ್ರಾಂಡಿಂಗ್‌: ಸಿಎಂ ಬೊಮ್ಮಾಯಿ

ಈ ಎಂಬ್ರಾಯಿಡರಿ ಕಲೆಯೇ ಹತ್ತಾರು ಬಡ ಮಹಿಳೆಯರಿಗೆ ಸ್ವಯಂ ಉದ್ಯೋಗ ನೀಡಿದೆ. ಎಂಬ್ರಾಯಿಡರಿ ಯಂತ್ರದಲ್ಲಿ ಲಕ್ಷಾಂತರ  ಬ್ಲೌಸ್‌ಗಳ ಡಿಸೈನ್‌ಗಳು ಇದ್ದು. ಇತ್ತೀಚಿನ ವರ್ಷಗಳಲ್ಲಿ ಬ್ಲೌಸ್ ವಿನ್ಯಾಸದಲ್ಲಿ ಹೊಸ ಕ್ರಾಂತಿಯೇ ಆಗಿದೆ. ಒನ್‌ ಶೋಲ್ಡರ್‌, ಹಾಫ್ ಶೋಲ್ಡರ್‌, ಸ್ಲಿವ್‌ಲೆಸ್‌, ಮೆಗಾ ಸ್ಲಿವ್‌, ಪಫ್ ಸ್ಲಿವ್‌, ಹಾಫ್ ಸ್ಲಿವ್‌, ಫ‌ು ಸ್ಲಿವ್‌, ಥ್ರಿಫೋರ್ತ್‌ ಸ್ಲಿವ್‌ ಬ್ರೌಸ್‌ ಇತ್ಯಾದಿ. ಇ

ದರ ಜೊತೆಗೆ ನೆಕ್‌ ಲೈನಿನಲ್ಲೂ ರೌಂಡ್‌ , ಸ್ಕ್ವೇರ್‌ , ಓವಲ್‌ , ಪ್ಯಾಕ್‌ನೆಕ್‌ ಲೈನ್‌- ಇತ್ಯಾದಿ ಬಗೆಬಗೆಯ ಪಾಟರ್ನ್ಗಳಲ್ಲಿ ಮಾಡರ್ನ್ ಲುಕ್‌ ನೀಡುವ ಡಿಜೈನರ್‌ ರವಿಕೆಗಳನ್ನು ಮದುವೆ ಹಾಗೂ ಸಮಾರಂಭಗಳಲ್ಲಿ ಹೊಸ ಭರ್ಜರಿ ಸೀರೆಯ ಜೊತೆ ಆದ್ಯತೆ ನೀಡಿದರೆ ನಾರಿಯ ಲುಕ್‌ ಬದಲಾಗೋದರಲ್ಲಿ ಸಂಶಯವಿಲ್ಲ. 

ಸಾರಿಗಳಿಗೆ ಸರಿ ಹೊಂದುವಂತಹ ಮೆಟಿರೀಯಲ್‌ ಬ್ಲೌಸ್‌ಗೆ ಹೊಂದುವಂತೆ ಕೈಯಲ್ಲಿ ಬಿಡಿಸುವ ಎಂಬ್ರಾಯಿಡರಿ, ಕನ್ನಡಿ, ಹರಳು ಜೋಡಣೆ, ಕುಂದನ್‌ ಕುಸುರಿ, ಮುತ್ತುಗಳ ಜೋಡಣೆ ಇವುಗಳಿಂದ ಇಂದು ಬ್ಲೌಸ್‌ ಹೊಸತನ ನೀಡಿ ಆಕರ್ಷಕವಾಗಿಸುತ್ತದೆ.ಅದರಲ್ಲೂ ಎಂಬ್ರಾಯಿಡರಿ ಯಂತ್ರ ಬಂದ ಮೇಲೆ ಮಹಿಳೆಯರ ಅಭಿರುಚಿ ತಕ್ಕಂತೆ ಅಲಂಕಾರ ಮಾಡುವ ಯಂತ್ರಗಳು ಮಾರುಕಟ್ಟೆಗೆ ಬಂದಿವೆ. ಈ ಯಂತ್ರಗಳೇ ಈಗ ಮಹಿಳೆಯರ ಸ್ವಯಂ ಉದ್ಯೋಗಕ್ಕೆ ದಾರಿದೀಪವೂ ಆಗಿದೆ.

ಎಂಬ್ರಾಯಿಡರಿ ಯಂತ್ರ ಹೇಗೆ ಕೆಲಸ ಮಾಡುತ್ತೆ?:  ಕೈಗಳಿಂದ ಹತ್ತಾರು ದಿನಗಳು ಎಂಬ್ರಾಯಿಡರಿ ಹಾಕುವುದು ನಾವು ನೋಡಿದ್ದೇವೆ.‌ ಆದ್ರೆ ಈಗ ಎಲ್ಲವೂ ಕಂಪ್ಯೂಟರ್‌ ಯುಗ.‌ ಶ್ರಮಪಟ್ಟು ದುಡಿಯುವ ಅವಶ್ಯಕತೆ ಯಾರಿಗೂ ಇಲ್ಲ. ಎಂಬ್ರಾಯಿಡರಿ ಯಂತ್ರವೂ ಸಹ ನಾವು ನಮಗೆ ಬೇಕಾದ ಡಿಸೈನ್ ಆಯ್ಕೆ ಮಾಡಿಕೊಟ್ಟರೇ ಸಾಕು. ಆ ಯಂತ್ರವೇ ಎಲ್ಲಾ ಕೆಲಸ ಮಾಡಿ ಮುಗಿಸುತ್ತೆ. ಆ ಸಮಯದಲ್ಲಿ ತಾವು ತಮಗೆ ಬೇಕಾದ ಕೆಲಸಗಳು ಸಹ ಮಾಡಿಕೊಳ್ಳಬಹುದು. ಇನ್ನೂ ಎಂಬ್ರಾಯಿಡರಿ ಯಂತ್ರಕ್ಕೆ ದಾರಗಳ ಜೋಡಣೆ ಮತ್ತು ಯಂತ್ರ ನಿರ್ವಹಣೆ ಸ್ವಲ್ಪ ದಿನಗಳ ಕಾಲ ಕಷ್ಟವಾಗಬಹುದು. ಆದ್ರೂ ಇದು ನನಗೆ ಹೊಸ ಬದುಕು ರೂಪಿಸಿಕೊಟ್ಟಿದೆ ಅಂತರೇ ಶರಣಮ್ಮ 

ಶರಣಮ್ಮ ಘಟಕಕ್ಕೆ ಕೇಂದ್ರ ಸಚಿವ ಭೇಟಿ: ಸಿಡಾಕ್ ಸಂಸ್ಥೆಯಿಂದ ತರಬೇತಿ ಪಡೆದ ಶರಣಮ್ಮ ಬ್ಯಾಂಕ್‌ನಿಂದ 5 ಲಕ್ಷ  ಲೋನ್ ಪಡೆದು ಎಂಬ್ರಾಯಿಡರಿ ಯಂತ್ರ ಖರೀದಿ ‌ಮಾಡಿದ್ರು. ಸ್ನೇಹ ಎಂಬ ಹೆಸರನ್ನು ಇಟ್ಟು ಎಂಬ್ರಾಯಿಡರಿ ಉದ್ಯಮ  ಘಟಕ ಶುರು ಮಾಡಿದರು. 
ಶರಣಮ್ಮಳ ಸ್ವಯಂ ಉದ್ಯೋಗ ಇತರರಿಗೆ ಮಾದರಿಯಾಗಿದೆ.

ನಿತ್ಯ ಎಲ್ಲಾ ಖರ್ಚು - ವೆಚ್ಚಗಳು ತೆಗೆದು ಶರಣಮ್ಮ ಕುಟುಂಬದ ಜೊತೆಗೆ ನೆಮ್ಮದಿಯಿಂದ ದಿನ ಕಳೆದು ದಿನಕ್ಕೆ  1200-1500 ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇವರ ಘಟಕಕ್ಕೆ ಕೇಂದ್ರ ಸಚಿವ ಸಿ. ನಾರಾಯಣಸ್ವಾಮಿ ಭೇಟಿ ನೀಡಿ ಶರಣಮ್ಮ ಸ್ವಯಂ ಉದ್ಯೋಗ ನೋಡಿ ಖುಷಿ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಜೀವನದಲ್ಲಿ ಹೊಸ ಉದ್ಯಮ ಆರಂಭಿಸಬೇಕು ಎಂಬುವವರ ನೆರವಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಹತ್ತಾರು ಯೋಜನೆಗಳು ಇವೆ. ಸರ್ಕಾರದ ನಿಯಮದಂತೆ ಸಿಡಾಕ್ ಸಂಸ್ಥೆ ತರಬೇತಿ ‌ಪಡೆದು ಯುವಕರು ಉದ್ಯೋಗ ಶುರು ಮಾಡಲು ಒಳ್ಳೆಯ ಅವಕಾಶಗಳು ಇವೆ.

Follow Us:
Download App:
  • android
  • ios