ಭಾರತ-ಪಾಕ್ ಸಂಘರ್ಷದ ಹಿನ್ನೆಲೆಯಲ್ಲಿ ಇಂಧನ ಕೊರತೆ ಭೀತಿ ಹುಟ್ಟಿಕೊಂಡಿದ್ದರೂ, ಇಂಡಿಯನ್ ಆಯಿಲ್ ಸಾಕಷ್ಟು ದಾಸ್ತಾನು ಹೊಂದಿದ್ದು, ಪೂರೈಕೆ ಸರಾಗವಾಗಿದೆ ಎಂದು ಭರವಸೆ ನೀಡಿದೆ. ಆತಂಕಪಡದೆ ಸಾಮಾನ್ಯವಾಗಿ ಖರೀದಿಸಲು ಸೂಚಿಸಿದೆ. ಇಂಧನ, ಎಲ್‌ಪಿಜಿ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿದೆ.

ನವದೆಹಲಿ (ಮೇ.9): ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಇದರ ನಡುವೆ ಎರಡೂ ದೇಶಗಳ ನಡುವೆ ದೊಡ್ಡ ಯು್ಧ ನಡೆಯಬಹುದು. ಆ ಕಾರಣಕ್ಕಾಗಿ ಇಂಧನ ಕೊರತೆ ಉಂಟಾಗಬಹುದು ಎನ್ನುವ ಮಾಹಿತಿಗಳು ಹರಿದಾಡುತ್ತಿದ್ದವು. ಆದರೆ, ಭಾರತದ ಅತಿದೊಡ್ಡ ತೈಲ ಮಾರಾಟಗಾರ ಸರ್ಕಾರದ ಮಾಲೀಕ್ವದ ಇಂಡಿಯನ್‌ ಆಯಿಲ್‌ ಇದನ್ನು ನಿರಾಕರಿಸಿದೆ.

ಅದರೊಂದಿಗೆ ಜನರು ಭಯಭೀತರಾಗಿ ಇಂಧನ ಖರೀದಿ ಮಾಡುವ ಅಗತ್ಯವಿಲ್ಲ. ಸಾಮಾನ್ಯವಾಗಿ ಖರೀದಿ ಇದ್ದರೆ ಸಾಕು ಎಂದು ಜನರಿಗೆ ಮಾಹಿತಿ ನೀಡಿದೆ. ಈ ಬಗ್ಗೆ ಟ್ವೀಟ್‌ ಮಾಡಿ ಇಂಡಿಯನ್‌ ಆಯಿಲ್‌ ಮಾಹಿತಿ ನೀಡಿದೆ.

'ಇಂಡಿಯನ್ ಆಯಿಲ್ ದೇಶಾದ್ಯಂತ ಸಾಕಷ್ಟು ಇಂಧನ ದಾಸ್ತಾನುಗಳನ್ನು ಹೊಂದಿದೆ ಮತ್ತು ನಮ್ಮ ಪೂರೈಕೆ ಮಾರ್ಗಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ.ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ. ಇಂಧನ ಮತ್ತು ಎಲ್‌ಪಿಜಿ ನಮ್ಮ ಎಲ್ಲಾ ಮಳಿಗೆಗಳಲ್ಲಿ ಸುಲಭವಾಗಿ ಲಭ್ಯವಿದೆ.

ಶಾಂತವಾಗಿರಿ ಮತ್ತು ಅನಗತ್ಯ ಆತುರವನ್ನು ತಪ್ಪಿಸುವ ಮೂಲಕ ನಿಮಗೆ ಉತ್ತಮವಾಗಿ ಸೇವೆ ಸಲ್ಲಿಸಲು ನಮಗೆ ಸಹಾಯ ಮಾಡಿ. ಇದು ನಮ್ಮ ಪೂರೈಕೆ ಮಾರ್ಗಗಳನ್ನು ಸರಾಗವಾಗಿ ಚಾಲನೆಯಲ್ಲಿಡುತ್ತದೆ ಮತ್ತು ಎಲ್ಲರಿಗೂ ಅಡೆತಡೆಯಿಲ್ಲದ ಇಂಧನ ಪ್ರವೇಶವನ್ನು ಖಚಿತಪಡಿಸುತ್ತದೆ' ಎಂದು ಇಂಡಿಯನ್‌ ಆಯಿಲ್‌ ಇಂದು ಟ್ವೀಟ್‌ ಮಾಡಿದೆ.

ಅದೊಂದಿಗೆ #EnergyOfIndia #FuelAvailability #StayInformed #NationFirst #PehleIndianPhirOil ಎನ್ನು ಹ್ಯಾಶ್‌ ಟ್ಯಾಗ್‌ಅನ್ನು ಬಳಸಿಕೊಂಡಿದೆ. ಅದಲ್ಲದೆ, ಕೇಂದ್ರ ಇಂಧನ ಸಚಿವ ಹರ್‌ದೀಪ್‌ ಸಿಂಗ್‌ ಪೂರಿ, ರಾಜ್ಯ ಸಚಿವ ಸುರೇಶ್‌ ಗೋಪಿ, ಪಿಎನ್‌ಜಿ ಕಾರ್ಯದರ್ಶಿ, ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿ ಹಾಗೂ ಐಓಸಿಎಲ್‌ ಚೇರ್ಮನ್‌ಗೆ ಟ್ಯಾಗ್‌ ಮಾಡಿದೆ.

ಸಾಮಾನ್ಯವಾಗಿ ದೇಶ ಯುದ್ಧದಂಥ ಪರಿಸ್ಥಿತಿಗೆ ಇಳಿದಾಗ ಇಂಧನ ಕೊರತೆಗಳು ಉಂಟಾಗುವುದು ಸಾಮಾನ್ಯ. ಹೆಚ್ಚಿನ ಇಂಧನಗಳನ್ನು ಸೇನಾಪಡೆಗಳು ಬಳಕೆ ಮಾಡಿಕೊಳ್ಳುತ್ತದೆ. ಇದರಿಂದಾಗಿ ಜನಸಾಮಾನ್ಯರ ಬಳಕೆಯ ಇಂಧನಗಳ ಪೂರೈಕೆ ಕಡಿಮೆ ಆಗುತ್ತದೆ.

ಆದರೆ, ಟ್ವೀಟ್‌ ಮೂಲಕ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ದೇಶಾದ್ಯಂತ ಸಾಕಷ್ಟು ಇಂಧನ ದಾಸ್ತಾನುಗಳನ್ನು ಹೊಂದಿದೆ ಮತ್ತು ಅದರ ಪೂರೈಕೆ ಮಾರ್ಗಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದೆ. ಕಂಪನಿಯು ತನ್ನ ಎಲ್ಲಾ ಮಳಿಗೆಗಳಲ್ಲಿ ಇಂಧನ ಮತ್ತು ಎಲ್‌ಪಿಜಿ ಸುಲಭವಾಗಿ ಲಭ್ಯವಿರುವುದರಿಂದ ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ ಎಂದು ಹೇಳಿಕೆಯಲ್ಲಿ ಒತ್ತಿ ಹೇಳಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಬೆಳವಣಿಗೆಗಳಂತಹ ಹೆಚ್ಚಿದ ಉದ್ವಿಗ್ನತೆ ಅಥವಾ ತುರ್ತು ಸಂದರ್ಭಗಳಲ್ಲಿ ಉಂಟಾಗಬಹುದಾದ ಕಳವಳಗಳಿಗೆ ಪ್ರತಿಕ್ರಿಯೆಯಾಗಿ ಈ ಟ್ವೀಟ್‌ಮಾಡಿದೆ. ಐಒಸಿಎಲ್‌ನ ಸುಗಮ ಕಾರ್ಯಾಚರಣೆಗಳು ಸಾರ್ವಜನಿಕರ ಬೇಡಿಕೆಗಳನ್ನು ಪೂರೈಸಲು ಇಂಧನ ಮತ್ತು ಎಲ್‌ಪಿಜಿಯ ಸ್ಥಿರ ಪೂರೈಕೆಯನ್ನು ಖಚಿತಪಡಿಸಿದೆ.
ಅದಲ್ಲದೆ, ಕಳೆದ ಹಲವು ವರ್ಷಗಳಿಂದ ದೇಶದಲ್ಲಿ ಇಂಧನ ದಾಸ್ತಾನುಗಳನ್ನು ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಿರುವ ಕಾರಣ, ಎಷ್ಟೇ ದೊಡ್ಡ ಪ್ರಮಾಣದ ಯುದ್ಧವಾದರೂ, ಭಾರತಕ್ಕೆ ಇಂಧನ ಕೊರತೆಯಾಗುವುದು ಕಡಿಮೆ.

Scroll to load tweet…