ಪಹಲ್ಗಾಮ್ ದಾಳಿಯ ನಂತರ ಭಾರತದ ಪ್ರತಿದಾಳಿ ಭೀತಿಯಲ್ಲಿ ಪಾಕಿಸ್ತಾನ. ತುರ್ತು ಪರಿಸ್ಥಿತಿ ಎದುರಿಸಲು ಹೈಸ್ಪೀಡ್ ಡೀಸೆಲ್, ಜೆಟ್ ಇಂಧನ ದಾಸ್ತಾನು ಹೆಚ್ಚಿಸಲು ಸರ್ಕಾರ ತೈಲ ಕಂಪನಿಗಳಿಗೆ ಸೂಚನೆ. ಸಿಂಧೂ ಒಪ್ಪಂದ ರದ್ದು, ರಾಜತಾಂತ್ರಿಕ ಸಂಬಂಧ ಕಡಿತದಿಂದ ಉದ್ವಿಗ್ನತೆ ಉಲ್ಬಣ. ವಿಶ್ವಸಂಸ್ಥೆ ಸಂಯಮಕ್ಕೆ ಕರೆ ನೀಡಿದರೂ ಗಡಿ ಗುಂಡಿನ ಚಕಮಕಿ ಮುಂದುವರಿಕೆ.
ನವದೆಹಲಿ (ಏ.25): ಪಹಲ್ಗಾಮ್ ಪೈಶಾಚಿಕ ದಾಳಿಯ ನಂತರ ಭಾರತ ಯಾವಗ ಬೇಕಾದರೂ ತನ್ನ ಮೇಲೆ ದಾಳಿ ಮಾಡಬಹುದು ಎನ್ನುವ ಆತಂಕ ಪಾಕಿಸ್ತಾನಕ್ಕೆ ಶುರುವಾಗಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಹೈಸ್ಪೀಡ್ ಡೀಸೆಲ್ ಹಾಗೂ ಜೆಟ್ ಇಂಧನವನ್ನು ಗರಿಷ್ಠ ಪ್ರಕಾಣದಲ್ಲಿ ಸ್ಟಾಕ್ ಇರಿಸಿಕೊಳ್ಳುವಂತೆ ಪಾಕಿಸ್ತಾನ ಸರ್ಕಾರ ತೈಲ ಕಂಪನಿಗಳು ಮತ್ತು ಸಂಸ್ಕರಣಾಗಾರಗಳಿಗೆ ನಿರ್ದೇಶನ ನೀಡಿದೆ ಎಂದು ಪಾಕ್‌ನ ಎಕ್ಸ್‌ಪ್ರೆಸ್ ನ್ಯೂಸ್ ಶುಕ್ರವಾರ ವರದಿ ಮಾಡಿದೆ.
ಪಹಲ್ಗಾಮ್ ಘಟನೆಯು ಪ್ರಾದೇಶಿಕ ಭದ್ರತಾ ವಾತಾವರಣವನ್ನು ತೀವ್ರಗೊಳಿಸಿದ ಸ್ವಲ್ಪ ಸಮಯದ ನಂತರ ಈ ನಿರ್ದೇಶನವನ್ನು ಹೊರಡಿಸಲಾಗಿದೆ ಎಂದು ತೈಲ ಮಾರುಕಟ್ಟೆ ಸಂಸ್ಥೆಗಳ ಮೂಲಗಳು ದೃಢಪಡಿಸಿವೆ. ತುರ್ತು ಸಂದರ್ಭದಲ್ಲಿ ಪೂರೈಕೆಯಲ್ಲಿ ಅಡಚಣೆ ಉಂಟಾಗುವುದನ್ನು ತಪ್ಪಿಸಲು ಪೆಟ್ರೋಲಿಯಂ ಆಮದುಗಳನ್ನು ತ್ವರಿತಗೊಳಿಸಲು ಮತ್ತು ಹೆಚ್ಚಿನ ಮೀಸಲು ಕಾಯ್ದುಕೊಳ್ಳಲು ತೈಲ ನಿರ್ದೇಶನಾಲಯವು PSO ಮತ್ತು ಇತರ ಆಮದುದಾರರಿಗೆ ಸೂಚನೆ ನೀಡಿದೆ.
ತೈಲ ಸಂಸ್ಕರಣಾಗಾರಗಳು ನಿರ್ದಿಷ್ಟವಾಗಿ ಹೈಸ್ಪೀಡ್ ಡೀಸೆಲ್ ಮತ್ತು ಜೆಟ್ ಇಂಧನವನ್ನು ಸಾಕಷ್ಟು ಪ್ರಮಾಣದಲ್ಲಿ ಸ್ಟಾಕ್ ಇರಿಸಿಕೊಳ್ಳುವಂತೆ ತಿಳಿಸಲಾಗಿದೆ. ವಾಯುಯಾನ ಮತ್ತು ಸಾರಿಗೆ ದರ್ಜೆಯ ಇಂಧನಗಳು ಸೇರಿದಂತೆ ಪ್ರಸ್ತುತ ಇಂಧನ ದಾಸ್ತಾನು ಸಾಕಷ್ಟಿದೆ ಎಂದು ಪೆಟ್ರೋಲಿಯಂ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ತುರ್ತು ಸಂದರ್ಭಗಳ ಅಡಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಹೆಚ್ಚುತ್ತಿದೆ. ಅದರಲ್ಲೂ ಪಹಲ್ಗಾಮ್‌ನಲ್ಲಿ ಭಾರತದ ಪ್ರವಾಸಿಗರನ್ನು ಉದ್ದೇಶಿಸಿ ನಡೆದ ಪೈಶಾಚಿಕ ದಾಳಿಯಲ್ಲಿ 26 ಮಂದಿ ಸಾವು ಕಂಡ ಬಳಿಕ ಪರಿಸ್ಥಿತಿ ಇನ್ನಷ್ಟು ಉಲ್ಭಣವಾಗಿದೆ.
ಭಾರತ ಈಗಾಗಲೇ 1960ರಿಂದಲೂ ಜಾರಿಯಲ್ಲಿದ್ದ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ. ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕಿಳಿಸಿದೆ. ಪಾಕಿಸ್ತಾನಿಗಳು ಭಾರತವನ್ನು ತೊರೆಯುವಂತೆ ಆದೇಶ ನೀಡಿದ್ದು, ಅಟ್ಟಾರಿ-ವಾಘಾ ಗಡಿಯನ್ನೂ ಬಂದ್ ಮಾಡಿದೆ. ನಾಗರಿಕರ ಸಂಚಾರ ಮತ್ತು ವ್ಯಾಪಾರವನ್ನು ಸ್ಥಗಿತಗೊಳಿಸಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ತಡೆಯಲು ಭಾರತ ಮಾಡುವ ಯಾವುದೇ ಪ್ರಯತ್ನವನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುವುದು ಎಂದು ಪಾಕಿಸ್ತಾನ ತಿಳಿಸಿದೆ. ಉನ್ನತ ಮಟ್ಟದ ಎನ್‌ಎಸ್‌ಸಿ ಸಭೆಯ ನಂತರ ಈ ಹೇಳಿಕೆ ನೀಡಲಾಗಿದ್ದು, ವಾಘಾ ಗಡಿ ದಾಟುವಿಕೆಯನ್ನು ಮುಚ್ಚಲು ಸಹ ಅನುಮೋದನೆ ನೀಡಲಾಗಿದೆ.
ಬೆಚ್ಚಿ ಬಿದ್ದಿದೆ ಭಯೋತ್ಪಾದಕರ ಹೆಡ್ ಕ್ವಾರ್ಟರ್! ನೆತನ್ಯಾಹು ರೀತಿಯಲ್ಲೇ ನೆತ್ತರ ಸೀಳಿ ಉತ್ತರ ಕೊಡ್ತಾರಾ ಮೋದಿ?
ಈ ನಡುವೆ, ಪಹಲ್ಗಾಮ್ ಘಟನೆಯ ಬೆನ್ನಲ್ಲಿಯೇ ಭಾರತ ಹಾಗೂ ಪಾಕಿಸ್ತಾನ ಗರಿಷ್ಠ ಸಂಯಮ ಕಾಯ್ದುಕೊಳ್ಳಬೇಕು ಎಂದು ವಿಶ್ವಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಹೇಳಿಕೆ ನಡುವೆಯೂ ಭಾರತ ಮತ್ತು ಪಾಕಿಸ್ತಾನ ಪಡೆಗಳು ಎರಡೂ ದೇಶಗಳನ್ನು ಬೇರ್ಪಡಿಸುವ ನಿಯಂತ್ರಣ ರೇಖೆಯಲ್ಲಿ (LOC) ಗುಂಡಿನ ದಾಳಿ ನಡೆಸಿವೆ. 1947 ರಲ್ಲಿ ಸ್ವಾತಂತ್ರ್ಯ ಪಡೆದಾಗಿನಿಂದ ಕಾಶ್ಮೀರವನ್ನು ಭಾರತ ಮತ್ತು ಪಾಕಿಸ್ತಾನಗಳ ನಡುವೆ ವಿಂಗಡಿಸಲಾಗಿದೆ, ಇಬ್ಬರೂ ಆ ಪ್ರದೇಶವನ್ನು ಸಂಪೂರ್ಣವಾಗಿ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ ಆದರೆ ಅದರ ಪ್ರತ್ಯೇಕ ಭಾಗಗಳನ್ನು ನಿಯಂತ್ರಿಸುತ್ತಿದ್ದಾರೆ, ಇದು ವರ್ಷಗಳಿಂದ ಹಿಂಸಾಚಾರಕ್ಕೆ ತಿರುಗಿದ ದೀರ್ಘಕಾಲದ ಉದ್ವಿಗ್ನತೆಗೆ ಕಾರಣವಾಗಿದೆ.
ಭದ್ರತಾ ಲೋಪ ಒಪ್ಪಿಕೊಂಡ ಮೋದಿ ಸರ್ಕಾರ, ಸರ್ಕಾರದ ಯಾವುದೇ ನಿರ್ಧಾರಕ್ಕೂ ನಮ್ಮ ಬೆಂಬಲ ಎಂದ ವಿಪಕ್ಷ!
