ಮತ್ತೆ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ| 10 ಗ್ರಾಂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ| ಚಿನ್ನದ ದರದಲ್ಲಿ ಶೇ.0.24ರಷ್ಟು ರೂ ಕಡಿಮೆ| ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಪರಿಣಾಮ| ಶೇ.040ರಷ್ಟು ಗಮನಾರ್ಹ ಇಳಿಕೆ ಕಂಡ ಬೆಳ್ಳಿ ಬೆಲೆ|
ನವದೆಹಲಿ(ಸೆ.11): ನಿತ್ಯವೂ ಹಾವು ಏಣಿ ಆಟವಾಡುತ್ತಿರುವ ಚಿನ್ನ-ಬೆಳ್ಳಿ ದರ, ಇಂದು ಇಳಿಕೆ ಕಾಣುವ ಮೂಲಕ ಅಚ್ಚರಿ ಮೂಡಿಸಿದೆ. ಮಲ್ಟಿ ಕಮೋಡಿಟಿ ಎಕ್ಸಚೆಂಜ್ ಮಾರುಕಟ್ಟೆಯಲ್ಲಿ ಇಂದು 10 ಗ್ರಾಂ ಚಿನ್ನದ ದರದಲ್ಲಿ ಶೇ.0.24ರಷ್ಟು ಕಡಿಮೆಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅದರಂತೆ 10 ಗ್ರಾಂ ಚಿನ್ನದ ದರ ಇದೀಗ 38, 088 ರೂ. ಆಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ವ್ಯವಹಾರದಲ್ಲಿ ತುಸು ಏರಿಕೆ ಕಂಡಿದೆ.
ಇನ್ನು ಮಲ್ಟಿ ಕಮೋಡಿಟಿ ಎಕ್ಸಚೆಂಜ್ ಮಾರುಕಟ್ಟೆಯಲ್ಲಿ ಬೆಳ್ಳಿದರದಲ್ಲಿ ಶೇ.040ರಷ್ಟು ಇಳಿಕೆ ಕಂಡು ಬಂದಿದ್ದು, ಒಂದು ಕೆಜಿ ಬೆಳ್ಳಿ ದರ 47,040 ರೂ. ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1,493.13 ಡಾಲರ್‌ಗೆ ಇಳಿಕೆ ಕಂಡಿದೆ.
