ನವದೆಹಲಿ(ಸೆ.11): ನಿತ್ಯವೂ ಹಾವು ಏಣಿ ಆಟವಾಡುತ್ತಿರುವ ಚಿನ್ನ-ಬೆಳ್ಳಿ ದರ, ಇಂದು ಇಳಿಕೆ ಕಾಣುವ ಮೂಲಕ ಅಚ್ಚರಿ ಮೂಡಿಸಿದೆ. ಮಲ್ಟಿ ಕಮೋಡಿಟಿ ಎಕ್ಸಚೆಂಜ್ ಮಾರುಕಟ್ಟೆಯಲ್ಲಿ ಇಂದು 10 ಗ್ರಾಂ ಚಿನ್ನದ ದರದಲ್ಲಿ 1,730 ರೂ. ಕಡಿಮೆಯಾಗಿದೆ.

ಒಟ್ಟು ಶೇ.0.26ರಷ್ಟು ಇಳಿಕೆ ಕಂಡಿರುವ ಚಿನ್ನದ ದರ 38, 154 ರೂ. ಆಗಿದ್ದು, ಒಂದೇ ದಿನದಲ್ಲಿ 1,730 ರೂ. ಕಡಿಮೆಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದೆ. 

ಇನ್ನು  ಮಲ್ಟಿ ಕಮೋಡಿಟಿ ಎಕ್ಸಚೆಂಜ್ ಮಾರುಕಟ್ಟೆಯಲ್ಲಿ ಬೆಳ್ಳಿದರದಲ್ಲಿ ಶೇ.0.23ರಷ್ಟು ಇಳಿಕೆ ಕಂಡು ಬಂದಿದ್ದು, ಒಂದು ಕೆಜಿ ಬೆಳ್ಳಿ ದರ 47,686 ರೂ. ಆಗಿದೆ. ಬೆಳ್ಳಿ ದರದಲ್ಲಿ 3,800 ರೂ. ಕಡಿಮೆಯಾಗಿರುವುದು ವಿಶೇಷ.

ಅದರಂತೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1,491 ಡಾಲರ್‌ಗೆ ಇಳಿಕೆ ಕಂಡಿದೆ.