ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್, ಶೀಘ್ರವೇ ಇನ್ನಷ್ಟು ಉದ್ಯೋಗ ಕಡಿತದ ಸುಳಿವು ನೀಡಿದ್ದಾರೆ. ಇತ್ತೀಚೆಗಷ್ಟೇ ಮೆಟಾ 11000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಅದರ ಬೆನ್ನಲ್ಲೇ ಈ ಕಹಿ ಸುದ್ದಿ ಹೊರಬಿದ್ದಿದೆ.

ವಾಷಿಂಗ್ಟನ್‌: ಕಂಪನಿಯಲ್ಲಿ ವಿವಿಧ ಹಂತದಲ್ಲಿ ಮ್ಯಾನೇಜರ್‌ಗಳೇ ಮ್ಯಾನೇಜರ್‌ಗಳನ್ನು ಮ್ಯಾನೇಜ್‌ ಮಾಡುವ ರೀತಿಯ ಉದ್ಯೋಗಿಗಳ ಚೌಕಟ್ಟು ನಿರ್ಮಾಣವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್, ಶೀಘ್ರವೇ ಇನ್ನಷ್ಟು ಉದ್ಯೋಗ ಕಡಿತದ ಸುಳಿವು ನೀಡಿದ್ದಾರೆ. ಇತ್ತೀಚೆಗಷ್ಟೇ ಮೆಟಾ 11000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಅದರ ಬೆನ್ನಲ್ಲೇ ಈ ಕಹಿ ಸುದ್ದಿ ಹೊರಬಿದ್ದಿದೆ.

ಕಂಪನಿಯ ಹಿರಿಯ ಅಧಿಕಾರಿಗಳ ಜೊತೆಗೆ ಇತ್ತೀಚೆಗೆ ಸಭೆ ನಡೆಸಿದ ಜುಕರ್‌ಬಗ್‌ರ್‍ (Mark Zuckerberg), 'ಮ್ಯಾನೇಜರ್‌ಗಳೇ ಮ್ಯಾನೇಜರ್‌ಗಳನ್ನು ಮ್ಯಾನೇಜ್‌ ಮಾಡುವ ಕಚೇರಿ ವ್ಯವಸ್ಥೆ ಸರಿಯಲ್ಲ. ಯಾವ ಮ್ಯಾನೇಜರ್‌ ಹೆಚ್ಚಿನ ಜನರ ತಂಡ ಕಟ್ಟಿಕೊಂಡಿರುತ್ತಾರೋ ಅಂಥವರಿಗೆ ಯಾವುದೇ ಕೊಡುಗೆ ನೀಡಬಾರದು. ಮ್ಯಾನೇಜ​ರ್ಸ್, ಮ್ಯಾನೇಜಿಂಗ್‌ ಮ್ಯಾನೇಜ​ರ್ಸ್‌ನಂಥ ವ್ಯವಸ್ಥಾಪನ ಚೌಕಟ್ಟನ್ನು ನೀವು ಬಯಸುತ್ತೀರಿ ಎಂದು ನಾನು ಅಂದುಕೊಂಡಿಲ್ಲ. ಕೆಲಸ ಮಾಡುವವರನ್ನು ಮ್ಯಾನೇಜ್‌ ಮಾಡಲು ಮತ್ತೊಬ್ಬ ಮ್ಯಾನೇಜರ್‌ ಬೇಕಾಗಿಲ್ಲ. ಇಂಥ ಬಹುಸ್ತರದ ಮ್ಯಾನೇಜರ್‌ ವ್ಯವಸ್ಥೆಯನ್ನು ನಾನು ಒಪ್ಪಲ್ಲ ಎಂದು ಸ್ಪಷ್ಟಪಡಿಸಿದರು ಎಂದು ವರದಿಗಳು ತಿಳಿಸಿವೆ.

ಮಹಿಳಾ ಬಾಸ್‌ ನನ್ನನ್ನು ತಬ್ಬಿಕೊಂಡಿದ್ದನ್ನು ವಿರೋಧಿಸಿದ್ದಕ್ಕೆ ವಜಾ: ಗೂಗಲ್ ಮಾಜಿ ಉದ್ಯೋಗಿಯಿಂದ ಕೇಸ್‌

ಇದೇ ವೇಳೆ ಕಂಪನಿಯ ಕೋಡಿಂಗ್‌ ಎಂಜಿನಿಯರ್‌ಗಳಿಗೆ ನೆರವಾಗಲು ಚಾಟ್‌ ಜಿಪಿಟಿ ರೀತಿಯ ವ್ಯವಸ್ಥೆ ಅಭಿವೃದ್ಧಿಯ ಬಗ್ಗೆಯೂ ಸಭೆಯಲ್ಲಿ ಜುಕರ್‌ಬರ್ಗ್ ಸಲಹೆ ನೀಡಿದರು.

ಈಗ ಫಿಲಿಫ್ಸ್‌ನಿಂದಲೂ 6,000 ಉದ್ಯೋಗ ಕಡಿತ ಘೋಷಣೆ

ಆಮ್‌ಸ್ಟರ್‌ಡ್ಯಾಂ: ಅಮೆಜಾನ್‌ (Amazon), ಮೆಟಾ (Meta), ಐಬಿಎಂ (IBM) ಬಳಿಕ ಉದ್ಯೋಗಿಗಳ ಕಡಿತ ಮುಂದುವರೆದಿದ್ದು, ತಂತ್ರಜ್ಞಾನ, ಯಂತ್ರೋಪಕರಣ ತಯಾರಕ ಕಂಪನಿ ಫಿಲಿಫ್ಸ್‌ 2025ರ ವೇಳೆಗೆ ಜಾಗತಿಕವಾಗಿ 6,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ತಿಳಿಸಿದೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ 4,000 ಉದ್ಯೋಗಿಗಳನ್ನು ಕಡಿತಗೊಳಿಸುತ್ತಿರುವುದಾಗಿ ಫಿಲಿಫ್ಸ್‌ ಘೋಷಿಸಿತ್ತು. 2022ರಲ್ಲಿ ಆದಾಯ ಕಡಿತ ಅನುಭವಿಸಿರುವ ಫಿಲಿಫ್ಸ್‌ ಉದ್ಯೋಗಿಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ.

‘2022ರಲ್ಲಿ ಫಿಲಿಫ್ಸ್‌ 935 ಕೋಟಿ ರು.ಗೂ ಅಧಿಕ ನಷ್ಟಅನುಭವಿಸಿದೆ’ ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಾಕೋಬ್‌ ತಿಳಿಸಿದ್ದಾರೆ. 130 ವರ್ಷದ ಇತಿಹಾಸವಿರುವ ಫಿಲಿಫ್ಸ್‌ ಕಂಪನಿ ತನ್ನ ಉತ್ಪನ್ನಗಳಲ್ಲಿ ಬದಲಾವಣೆಯನ್ನು ತಂದಿತ್ತು. ಬದಲಾವಣೆಗೆ ಅವಶ್ಯವಿದ್ದ ವಸ್ತುಗಳ ಬೆಲೆ ಹೆಚ್ಚಾಗಿತ್ತು. ಇದರಿಂದಾಗಿ ಮಾರುಕಟ್ಟೆಯಲ್ಲೂ ಸಹ ಫಿಲಿಫ್ಸ್‌ ನಷ್ಟಅನುಭವಿಸಿತ್ತು ಎಂದು ಜಾಕೋಬ್‌ ತಿಳಿಸಿದ್ದಾರೆ. ಇತ್ತೀಚೆಗೆ ತಂತ್ರಜ್ಞಾನ (Technology) ಕಂಪನಿಗಳಾಗಿದ್ದ ಡೊ, ಸ್ಯಾಪ್‌, ಐಬಿಎಂ ಒಟ್ಟು 8,500 ಉದ್ಯೋಗಿಗಳನ್ನು ಕಡಿತಗೊಳಿಸಿದ್ದವು.

ಫಿಲಿಪ್ಸ್‌ನಿಂದ ಮತ್ತೆ 6 ಸಾವಿರ ಉದ್ಯೋಗಿಗಳ ಕಡಿತ: ದೋಷಪೂರಿತ ಸ್ಲೀಪ್‌ ಡಿವೈಸ್‌ ಹಿಂಪಡೆದ ನೆಪ ಹೇಳಿದ ಸಂಸ್ಥೆ..!