ಮಹಿಳಾ ಬಾಸ್ ನನ್ನನ್ನು ತಬ್ಬಿಕೊಂಡಿದ್ದನ್ನು ವಿರೋಧಿಸಿದ್ದಕ್ಕೆ ವಜಾ: ಗೂಗಲ್ ಮಾಜಿ ಉದ್ಯೋಗಿಯಿಂದ ಕೇಸ್
ಆಹಾರ, ಪಾನೀಯಗಳು ಮತ್ತು ರೆಸ್ಟೋರೆಂಟ್‌ಗಳ ವ್ಯವಸ್ಥಾಪಕ ನಿರ್ದೇಶಕರಾಗಿ ರಯಾನ್ ಓಲೋಹಾನ್ ಬಡ್ತಿ ಪಡೆದ ನಂತರ, ಆಲ್ಕೋಹಾಲ್ ಒಳಗೊಂಡ ಕಂಪನಿಯ ಸಭೆಯು ಫಿಗ್ & ಆಲಿವ್‌ನಲ್ಲಿ ನಡೆಯಿತು
ವಾಷಿಂಗ್ಟನ್ (ಜನವರಿ 30, 2023): ಮಹಿಳಾ ಕಾರ್ಯನಿರ್ವಾಹಕರೊಬ್ಬರು ತನ್ನನ್ನು ತಬ್ಬಿಕೊಂಡಿದ್ದನ್ನು ವಿರೋಧಿಸಿದ್ದಕ್ಕೆ ಕಂಪನಿಯ ಅಧಿಕಾರಿಗಳು ತನ್ನನ್ನು ವಜಾಗೊಳಿಸಿದ್ದಾರೆ ಎಂದು ಗೂಗಲ್ ಸಂಸ್ಥೆಯ ಮಾಜಿ ಉದ್ಯೋಗಿ ರಯಾನ್ ಓಲೋಹಾನ್ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಟಿಫಾನಿ ಮಿಲ್ಲರ್ ರಾತ್ರಿಯ ಊಟದ ಸಮಯದಲ್ಲಿ ತನ್ನನ್ನು ತಬ್ಬಿಕೊಂಡರು, ಮತ್ತು ಡಿಸೆಂಬರ್ 2019 ರಲ್ಲಿ ಮ್ಯಾನ್‌ಹ್ಯಾಟನ್‌ನ ಚೆಲ್ಸಿಯಾದಲ್ಲಿ ಏಷ್ಯನ್ ಮಹಿಳೆಯರೊಂದಿಗೆ ತನಗೆ ಬಾಂಧವ್ಯವಿದೆ ಎಂದು ತಿಳಿದಿತ್ತು ಎಂದು ಹೇಳಿದರು ಎಂದು ಆ ವ್ಯಕ್ತಿ ನವೆಂಬರ್‌ನಲ್ಲಿ ಮೊಕದ್ದಮೆಯನ್ನೂ ಹೂಡಿದ್ದಾರೆ.
ಆರೋಪಿಯು (Accused) ಗೂಗಲ್‌ನ (Google) ಪ್ರೋಗ್ರಮ್ಯಾಟಿಕ್ ಮಾಧ್ಯಮದ ನಿರ್ದೇಶಕರಾಗಿದ್ದು, ಅವರು ರಯಾನ್ ಓಲೋಹಾನ್ (Ryan Olohan) ಅವರ ಆಬ್ಸ್ ಅನ್ನು ಉಜ್ಜಿದರು, ದೇಹವನ್ನು (Body) ಶ್ಲಾಘಿಸಿದರು ಮತ್ತು ಮದುವೆಯಲ್ಲಿ (Wedding) ಸ್ಪೈಸ್ ಇಲ್ಲ ಎಂದು ಹೇಳಿದರು ಎಂದು ಕೋರ್ಟ್ ಪೇಪರ್ಸ್ ಹೇಳುತ್ತದೆ. ಆಹಾರ, ಪಾನೀಯಗಳು ಮತ್ತು ರೆಸ್ಟೋರೆಂಟ್‌ಗಳ ವ್ಯವಸ್ಥಾಪಕ ನಿರ್ದೇಶಕರಾಗಿ ರಯಾನ್ ಓಲೋಹಾನ್ ಬಡ್ತಿ ಪಡೆದ ನಂತರ, ಆಲ್ಕೋಹಾಲ್ ಒಳಗೊಂಡ ಕಂಪನಿಯ ಸಭೆಯು ಫಿಗ್ & ಆಲಿವ್‌ನಲ್ಲಿ ನಡೆಯಿತು. ಟಿಫಾನಿ ಮಿಲ್ಲರ್ ಆ ಹೊಸ ತಂಡದ ಭಾಗವಾಗಿದ್ದರು ಎಂದು ವರದಿಯಾಗಿದೆ.
ಇದನ್ನು ಓದಿ: ಗೂಗಲ್‌ನಿಂದ 12,000 ಉದ್ಯೋಗಿಗಳ ಕಡಿತ, ಸಿಇಒ ಸುಂದರ್ ಪಿಚೈ ಭಾವುಕ ಸಂದೇಶ!
ಮೊಕದ್ದಮೆಯ ಪ್ರಕಾರ, ಏಳು ಮಕ್ಕಳ ವಿವಾಹಿತ ತಂದೆಯಾದ ರಯಾನ್ ಓಲೋಹನ್ ಅವರು ಆರಂಭದಲ್ಲಿ ಈ ದೂರನ್ನು ಕೋರ್ಟ್ ಮುಂದೆ ತರಲು ಮುಜುಗರಪಟ್ಟಿದ್ದೆ. ಏಕೆಂದರೆ ಎಲ್ಲರೂ ಕುಡಿದಿದ್ದರು ಮತ್ತು ಅವರ ಸಹೋದ್ಯೋಗಿಗಳು ಸಹ ಟಿಫಾನಿಯನ್ನು ಸಮರ್ತಿಸಿಕೊಂಡರು ಎಂದೂ ನ್ಯಾಯಾಲಯದ ಪತ್ರಿಕೆಗಳು ಹೇಳುತ್ತವೆ. ಅಲ್ಲದೆ, ರಯಾನ್ ಓಲೋಹಾನ್ ಘಟನೆ ನಡೆದ ಮುಂದಿನ ವಾರ ಮಾನವ ಸಂಪನ್ಮೂಲ ಇಲಾಖೆಗೆ ಸಮಸ್ಯೆಯನ್ನು ವರದಿ ಮಾಡಿದರು, ಆದರೆ ಇಲಾಖೆ ಕ್ರಮ ತೆಗೆದುಕೊಳ್ಳಲು ವಿಫಲವಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ, ಬಿಳಿಯ ಪುರುಷ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರೆ, ಈ ದೂರನ್ನು ಖಂಡಿತವಾಗಿಯೂ ಕೈಗೆತ್ತಿಕೊಳ್ಳಲಾಗುತ್ತಿತ್ತು ಎಂದು ಮೊಕದ್ದಮೆಯಲ್ಲಿ ಹೇಳಿದೆ. ಹಾಗೂ, ತಾನು ದೂರು ನೀಡಿದ ನಂತರ, ತನ್ನನ್ನು ಟೀಕಿಸುವ ಮೂಲಕ ಮತ್ತು ಸೂಕ್ಷ್ಮ ಆಕ್ರಮಣಗಳಿಗೆ ಮಾನವ ಸಂಪನ್ಮೂಲಗಳಿಗೆ ವರದಿ ಮಾಡುವ ಮೂಲಕ ವ್ಯಕ್ತಿ ವಿರುದ್ಧ ಆರೋಪಿ ಮಹಿಳೆ ಸೇಡು ತೀರಿಸಿಕೊಳ್ಳಲು ಪ್ರಾರಂಭಿಸಿದರು ಎಂದೂ ಅವರು ಹೇಳಿಕೊಂಡಿದ್ದಾನೆ. ಆದರೂ, ಸುಳ್ಳು ದೂರಿನಲ್ಲಿ ಟಿಫಾನಿ ಮಿಲ್ಲರ್ ಅವರು ಏನು ಆರೋಪಿಸಿದ್ದಾರೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ.
ಇದನ್ನೂ ಓದಿ: ಸುದ್ದಿಗೆ ಫೇಸ್‌ಬುಕ್, ಗೂಗಲ್ ಹಣ ನೀಡಲಿ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಏಪ್ರಿಲ್ 2022 ರಲ್ಲಿ ಕರೋಕೆ ಬಾರ್‌ವೊಂದರಲ್ಲಿ, ಟಿಫಾನಿ ಮಿಲ್ಲರ್ ಕಂಪನಿಯ ಗೆಟ್-ಟುಗೆದರ್ ಸಮಯದಲ್ಲಿ ರಯಾನ್ ಓಲೋಹಾನ್ ಅವರನ್ನು ನಿಂದಿಸಿದರು, ಅಪಹಾಸ್ಯ ಮಾಡಿದರು ಎಂದೂ ಮೊಕದ್ದಮೆಯಲ್ಲಿ ಹೇಳಿದೆ. ಮತ್ತು ಅವರು ಬಿಳಿಯರಿಗಿಂತ ಏಷ್ಯನ್ ಮಹಿಳೆಯರಿಗೆ ಆದ್ಯತೆ ನೀಡುತ್ತಾರೆ ಎಂದು ತನಗೆ ತಿಳಿದಿದೆ ಎಂದು ಪುನರುಚ್ಚರಿಸಿದರು- ಅವರ ಪತ್ನಿ ಏಷ್ಯನ್ ಎಂದು ಅಕೆ ತಿಳಿದುಕೊಂಡಿದ್ದರು ಎಂದೂ ಮೊಕದ್ದಮೆಯಲ್ಲಿ ಆರೋಪಿಸಿದೆ.
ಅಲ್ಲದೆ, ತಮ್ಮ ಮೇಲ್ವಿಚಾರಕರಿಂದ ಒತ್ತಡವನ್ನು ಅನುಭವಿಸಿದೆ, ಅವರ ನಿರ್ವಹಣಾ ತಂಡದಲ್ಲಿ ನಿಸ್ಸಂಶಯವಾಗಿ ಹಲವಾರು ಬಿಳಿ ವ್ಯಕ್ತಿಗಳು ಇದ್ದಾರೆ ಎಂದು ಅವರಿಗೆ ತಿಳಿಸಲಾಯಿತು ಎಂದೂ ರಯಾನ್ ಓಲೋಹಾನ್ ಹೇಳಿದ್ದಾರೆ. ಹಾಗೂ, ಜುಲೈನಲ್ಲಿ, ಗೂಗಲ್ ಓಲೋಹಾನ್ ಅವರನ್ನು ವಜಾಗೊಳಿಸಿತು, ಇದು ಕಂಪನಿಯೊಂದಿಗಿನ ಅವರ 16 ವರ್ಷಗಳ ಒಡನಾಟವನ್ನು ಕೊನೆಗೊಳಿಸಿತು ಎಂದೂ ನ್ಯೂಯಾರ್ಕ್ ಪೋಸ್ಟ್ ವರದಿ ಹೇಳಿದೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ನಲ್ಲಿ 21 ವರ್ಷ ಕೆಲಸ ಮಾಡಿದ್ದ ಉದ್ಯೋಗಿಯ ವಜಾ, ಭಾವನಾತ್ಮಕ ಪತ್ರ ವೈರಲ್
ಇನ್ನು, ಟಿಫಾನಿ ಮಿಲ್ಲರ್‌ನ ವಕ್ತಾರರು ತಮ್ಮ ಕ್ಲೈಂಟ್ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು. ಈ ಮೊಕದ್ದಮೆಯು ಹಲವಾರು ಸುಳ್ಳುಗಳಿಂದ ತುಂಬಿದ ಘಟನೆಗಳ ಕಾಲ್ಪನಿಕ ಕತೆಯಾಗಿದ್ದು, ಅತೃಪ್ತ ಮಾಜಿ ಉದ್ಯೋಗಿಯೊಬ್ಬರು ಈ ಕತೆ ಕಟ್ಟಿದ್ದಾರೆ. ಅವರು ಟಿಫಾನಿ ಮಿಲ್ಲರ್‌ಗಿಂತ ಗೂಗಲ್‌ನಲ್ಲಿ ಸೀನಿಯರ್ ಆಗಿದ್ದಾರೆ. ಟಿಫಾನಿ ಮಿಲ್ಲರ್ ಎಂದಿಗೂ ರಯಾನ್ ಓಲೋಹಾನ್ ಕಡೆಗೆ ಯಾವುದೇ ರೀತಿಯಲ್ಲೂ ಮುಂದುವರಿಯಲಿಲ್ಲ ಎಂದು ಸಾಕ್ಷಿಗಳು ಸುಲಭವಾಗಿ ದೃಢೀಕರಿಸಬಹುದು ಎಂದು ಟಿಫಾನಿ ಮಿಲ್ಲರ್ ಅವರ ವಕ್ತಾರರು
ದಿ ಪೋಸ್ಟ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.