ಫಿಲಿಪ್ಸ್‌ನಿಂದ ಮತ್ತೆ 6 ಸಾವಿರ ಉದ್ಯೋಗಿಗಳ ಕಡಿತ: ದೋಷಪೂರಿತ ಸ್ಲೀಪ್‌ ಡಿವೈಸ್‌ ಹಿಂಪಡೆದ ನೆಪ ಹೇಳಿದ ಸಂಸ್ಥೆ..!

 130 ವರ್ಷಗಳ ಹಿಂದೆ ಲೈಟಿಂಗ್ ಕಂಪನಿಯಾಗಿ ಪ್ರಾರಂಭವಾದ ಫಿಲಿಪ್ಸ್ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಬದಲಾವಣೆಗಳಿಗೆ ಒಳಗಾಗಿದೆ. ಉನ್ನತ-ಮಟ್ಟದ ಎಲೆಕ್ಟ್ರಾನಿಕ್ ಆರೋಗ್ಯ ಉತ್ಪನ್ನಗಳನ್ನು ತಯಾರಿಸುವಲ್ಲಿ ಗಮನಹರಿಸಿದೆ.

philips cuts 6 thousand jobs after sleep device recall losses deepen report ash

ದಿ ಹೇಗ್ (ಜನವರಿ 30, 2023) : ದೋಷಪೂರಿತ ನಿದ್ರೆಯ ಉಸಿರಾಟಕಾರಕ ಉಪಕರಣಗಳನ್ನು ಬೃಹತ್‌ ಪ್ರಮಾಣದಲ್ಲಿ ಹಿಂಪಡೆದ ಕಾರಣದಿಂದ ಉಂಟಾದ ನಷ್ಟದ ನೆಪವೊಡ್ಡಿ ವಿಶ್ವಾದ್ಯಂತ 6,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಡಚ್ ವೈದ್ಯಕೀಯ ತಂತ್ರಜ್ಞಾನ ತಯಾರಕ ಸಂಸ್ಥೆ ಫಿಲಿಪ್ಸ್ ಸೋಮವಾರ ಮಾಹಿತಿ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ರಾಯ್ ಜಾಕೋಬ್ಸ್ ಅವರು 2025 ರ ವೇಳೆಗೆ ಕಷ್ಟಕರ, ಆದರೆ ಅಗತ್ಯವಿರುವ ಮತ್ತಷ್ಟು ಉದ್ಯೋಗ ಕಡಿತವನ್ನು ಘೋಷಿಸಿದರು. 4,000 ಉದ್ಯೋಗ ಕಡಿತಗಳನ್ನು ಘೋಷಿಸಿದ ಕೇವಲ ಮೂರು ತಿಂಗಳ ನಂತರ ಈಗ ಮತ್ತೆ 6 ಸಾವಿರ ಜನರನ್ನು ಉದ್ಯೋಗದಿಂದ ತೆಗೆದುಹಾಕುತ್ತಿರುವ ಬಗ್ಗೆ ಸಂಸ್ಥೆ ಮಾಹಿತಿ ನೀಡಿದೆ.

2022 ಫಿಲಿಪ್ಸ್ (Philips) ಮತ್ತು ನಮ್ಮ ಮಧ್ಯಸ್ಥಗಾರರಿಗೆ (Stakeholders) ಬಹಳ ಕಷ್ಟಕರವಾದ ವರ್ಷವಾಗಿದೆ. ಮತ್ತು ನಾವು ನಮ್ಮ ಕಾರ್ಯಗತಗೊಳಿಸುವಿಕೆಯನ್ನು ಸುಧಾರಿಸಲು ಹಾಗೂ ತುರ್ತಾಗಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಜಾಕೋಬ್ಸ್ (Jakobs) ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆಮ್‌ಸ್ಟರ್‌ಡ್ಯಾಮ್ ಮೂಲದ ಈ ಸಂಸ್ಥೆಯು 2022 ರ ನಾಲ್ಕನೇ ತ್ರೈಮಾಸಿಕದಲ್ಲಿ 105 ಮಿಲಿಯನ್ ಯೂರೋಗಳ (Euros) ($114 ಮಿಲಿಯನ್) ನಿವ್ವಳ ನಷ್ಟವನ್ನು (Loss) ಮತ್ತು ಕಳೆದ ವರ್ಷ ಒಟ್ಟಾರೆಯಾಗಿ 1.6 ಬಿಲಿಯನ್ ಯೂರೋಗಳ ನಷ್ಟವಾಗಿದೆ ಎಂದು ತಿಳಿದುಬಂದಿದೆ. ದೋಷಪೂರಿತ ಸ್ಲೀಪ್‌ ಡಿವೈಸ್‌ಗಳನ್ನು (Sleep Device) ಗ್ರಾಹಕರಿಂದ ಹಿಂಪಡೆದ ಕಾರಣ ಹೆಚ್ಚು ನಷ್ಟವಾಗಿದೆ ಎಂದೂ ತಿಳಿದುಬಂದಿದೆ.

ಇದನ್ನು ಓದಿ: ಆರ್ಥಿಕ ಪುನಶ್ಚೇತನಕ್ಕಾಗಿ 4000 ಉದ್ಯೋಗಿಗಳಿಗೆ ಕೊಕ್‌ ನೀಡಿದ Philips

ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ನೀಡಲು ಫಿಲಿಪ್ಸ್ 2021 ರಲ್ಲಿ ತನ್ನ ಉಪಕರಣಗಳ ಜಾಗತಿಕ ಹಿಂಪಡೆಯುವಿಕೆಯನ್ನು ಘೋಷಿಸಿತು. ರೋಗಿಗಳು ಯಂತ್ರಗಳಲ್ಲಿ ಕ್ಷೀಣಿಸಿದ ಧ್ವನಿ-ತಪ್ಪಾಗಿಸುವ ಫೋಮ್‌ನ ತುಂಡುಗಳನ್ನು ಉಸಿರಾಡಿದರೆ ಅಥವಾ ನುಂಗಿದರೆ ಸಂಭಾವ್ಯ ವಿಷಕಾರಿ ಮತ್ತು ಕಾರ್ಸಿನೋಜೆನಿಕ್ ಪರಿಣಾಮಗಳ ಅಪಾಯ ಎದುರಿಸಿದ ಆರೋಪ ಕೇಳಿಬಂದ ಬಳಿಕ ಹಿಂತೆಗೆದುಕೊಳ್ಳಲಾಗಿದೆ..

ಅಕ್ಟೋಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ಜಾಕೋಬ್ಸ್, ಫಿಲಿಪ್ಸ್ ಕಾರ್ಯಕ್ಷಮತೆಯನ್ನು ಸುಧಾರಿಸಬೇಕು ಹಾಗೂ ಚುರುಕುತನ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ನಮ್ಮ ಕೆಲಸದ ವಿಧಾನವನ್ನು ಸರಳಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದರು. ಇದು, 2025 ರ ವೇಳೆಗೆ ಜಾಗತಿಕವಾಗಿ ನಮ್ಮ ಕಾರ್ಯಪಡೆಯ ಕಷ್ಟಕರವಾದ, ಆದರೆ ಅಗತ್ಯವಾದ ಮತ್ತಷ್ಟು ಕಡಿತವನ್ನು ಒಳಗೊಂಡಿದೆ ಎಂದು ಸುಮಾರು 6,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಹೇಳಿದರು. ಈ ಪೈಕಿ, 2023 ರಲ್ಲಿ ಒಟ್ಟು 3,000 ಹೊಸ ಉದ್ಯೋಗ ಕಡಿತಗಳನ್ನು ಮಾಡಲಾಗುವುದು ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಕೆಲಸದಿಂದ ವಜಾ: ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಐಟಿ ಉದ್ಯೋಗಿಗಳಿಗೆ ಸಂಕಷ್ಟ

 130 ವರ್ಷಗಳ ಹಿಂದೆ ಲೈಟಿಂಗ್ ಕಂಪನಿಯಾಗಿ ಪ್ರಾರಂಭವಾದ ಫಿಲಿಪ್ಸ್ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಬದಲಾವಣೆಗಳಿಗೆ ಒಳಗಾಗಿದೆ. ಉನ್ನತ-ಮಟ್ಟದ ಎಲೆಕ್ಟ್ರಾನಿಕ್ ಆರೋಗ್ಯ ಉತ್ಪನ್ನಗಳನ್ನು ತಯಾರಿಸುವಲ್ಲಿ ಗಮನಹರಿಸಿದೆ.

ಆದರೆ, ಅಪಾರ ಪ್ರಮಾಣದ ಸ್ಲೀಪ್‌ ಡಿವೈಸ್‌ ಹಿಂಪಡೆಯುವಿಕೆ ಕಂಪನಿಯನ್ನು ಪ್ರಶ್ನೆ ಮಾಡುವಂತೆ ಆಗಿದೆ. ಅಪಾರ ಪ್ರಮಾಣದ ನಷ್ಟ ಉಂಟಾದ ಬಳಿಕ ಸಂಸ್ಥೆಯ ಈ ಹಿಂದಿನ ಸಿಇಒ ರಾಜೀನಾಮೆಯನ್ನೂ ನೀಡಿದ್ದರು. ಕಂಪನಿಯು ಈಗ US ಡಿಪಾರ್ಟ್‌ಮೆಂಟ್ ಆಫ್ ಜಸ್ಟಿಸ್‌ನಿಂದ ತನಿಖೆಗೆ ಒಳಪಟ್ಟಿದ್ದು ಹಣಕಾಸಿನ ಇತ್ಯರ್ಥದ ಕುರಿತು ಅಮೆರಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಹಲವಾರು ಮೊಕದ್ದಮೆಗಳಲ್ಲಿ ಪ್ರತಿವಾದಿಯಾಗಿದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್‌ನಿಂದ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ವಜಾ: ಟೆಕ್‌ ಸಂಸ್ಥೆಗಳಿಂದ ದಿನಕ್ಕೆ 1,600 ಸಿಬ್ಬಂದಿಗೆ ಗೇಟ್‌ಪಾಸ್..!

ಈ ಮದ್ಯೆ, ನಮ್ಮ ರೋಗಿಗಳ ಸುರಕ್ಷತೆ ಮತ್ತು ಗುಣಮಟ್ಟ ನಿರ್ವಹಣೆಯನ್ನು ಬಲಪಡಿಸಲು ಹಾಗೂ ರೆಸ್ಪಿರೋನಿಕ್ಸ್ ಮರುಸ್ಥಾಪನೆಯನ್ನು ಪೂರ್ಣಗೊಳಿಸಲು ಫಿಲಿಪ್ಸ್ ಗಮನಹರಿಸುವುದಾಗಿ ಜಾಕೋಬ್ಸ್ ಹೇಳಿದ್ದು, ಸಂಸ್ಥೆಯು ರೋಗಿಗಳಿಗೆ ಶಾಪಿಂಗ್ ಮಾಡಲು ಅಗತ್ಯವಿರುವ 90 ಪ್ರತಿಶತದಷ್ಟು ಬದಲಿ ಸಾಧನಗಳನ್ನು ಉತ್ಪಾದಿಸಿದೆ ಎಂದೂ ತಿಳಿಸಿದೆ.

ಇದನ್ನು ಓದಿ: Layoff: ಕಂಪನಿಯ ಶೇ. 20 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಶೇರ್‌ಚಾಟ್‌..!

Latest Videos
Follow Us:
Download App:
  • android
  • ios