ಭಾರತದ ಮೊದಲ ಸಾವರಿನ್ ಗ್ರೀನ್ ಬಾಂಡ್ ಯೋಜನೆಗೆ ವಿತ್ತ ಸಚಿವೆ ಅಂಕಿತ; ಏನಿದರ ವಿಶೇಷತೆ?

ಭಾರತದ ಮೊದಲ ಸಾವರಿನ್ ಗ್ರೀನ್ ಬಾಂಡ್ ಯೋಜನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅನುಮೋದನೆ ನೀಡಿದ್ದಾರೆ. ಹಾಗಾದ್ರೆ ಗ್ರೀನ್ ಬಾಂಡ್ ಯೋಜನೆ ಅಂದ್ರೇನು? ಈ ಬಾಂಡ್ ಮೂಲಕ ಯಾವ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ. 
 

FM Nirmala Sitharaman approves Indias first sovereign green bonds framework

ನವದೆಹಲಿ (ನ.10): ಪರಿಸರ ಸುಸ್ಥಿರ ಯೋಜನೆಗಳಿಗೆ ಅನುದಾನ ಒದಗಿಸುವ ಭಾರತದ ಮೊದಲ ಸಾವರಿನ್ ಹಸಿರು ಬಾಂಡ್ ಗಳ  ಅಂತಿಮ ರೂಪುರೇಷಕ್ಕೆ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಅನುಮೋದನೆ ನೀಡಿದ್ದಾರೆ. ಪರಿಸರ ಸುಸ್ಥಿರ ಹಾಗೂ ವಾತಾವರಣಕ್ಕೆ ಹೊಂದಿಕೆಯಾಗುವ ಯೋಜನೆಗಳಿಗೆ ಅಗತ್ಯವಾದ ಹಣವನ್ನು ಹೊಂದಿಸಲು ಸರ್ಕಾರ ಬಳಸೋ ಹಣಕಾಸು ಸಾಧನವೇ ಹಸಿರು ಬಾಂಡ್. ನಿಯಮಿತ ಬಾಂಡ್ ಗಳಿಗೆ ಹೋಲಿಸಿದರೆ ಗ್ರೀನ್ ಬಾಂಡ್ ಗಳು ದುಬಾರಿಯಲ್ಲ. ಈ ಕುರಿತು ಮತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ಯಾರೀಸ್ ಒಪ್ಪಂದಗಳಡಿಯಲ್ಲಿ ದೇಶೀಯ ನಿರ್ಧರಿತ ಕೊಡುಗೆ (ಎನ್ ಡಿಸಿಎಸ್) ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಭಾರತದ ಬದ್ಧತೆಗೆ ಇದು ಇನ್ನಷ್ಟು ಬಲ ತುಂಬಿದೆ ಎಂದರು. ಇದು ಅರ್ಹ ಹಸಿರು ಯೋಜನೆಗಳಲ್ಲಿ ಜಾಗತಿಕ ಹಾಗೂ ದೇಶೀಯ ಹೂಡಿಕೆಗಳನ್ನು ಸೆಳೆಯಲು ನೆರವು ನೀಡಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಪರಿಸರಸ್ನೇಹಿ ಹಾಗೂ ಸುಸ್ಥಿರ ಅಭಿವೃದ್ಧಿಗೆ ನೆರವು ನೀಡುವ ಯೋಜನೆಗಳಲ್ಲಿ ಹಸಿರು ಬಾಂಡ್ ಮೂಲಕ ಹೂಡಿಕೆ ಮಾಡಲು ಅವಕಾಶ ನೀಡಲಾಗುತ್ತದೆ.  ಹಾಗಾದ್ರೆ ಈ ಸಾವರಿನ್ ಹಸಿರು ಬಾಂಡ್ ಅಂದ್ರೇನು? ಯಾವ ಯೋಜನೆಗಳಲ್ಲಿ ಈ ಬಾಂಡ್ ಮೂಲಕ ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ. 

ಏನಿದು ಹಸಿರು ಬಾಂಡ್?
ಸರ್ಕಾರ ವಿವಿಧ ಯೋಜನೆಗಳಿಗೆ ಹಣವನ್ನು ಸಂಗ್ರಹಿಸಲು  ಸರ್ಕಾರಿ ಬಾಂಡ್  ಗಳನ್ನು ವಿತರಣೆ ಮಾಡೋದು ಎಲ್ಲರಿಗೂ ಗೊತ್ತಿದೆ. ಅದೇ ಮಾದರಿಯಲ್ಲಿ ಸುಸ್ಥಿರ ಪರಿಸರಕ್ಕೆ ಪೂರಕವಾದ ಯೋಜನೆಗಳ ಮೇಲಿನ ಹೂಡಿಕೆಗೆ ಬಂಡವಾಳ ಸಂಗ್ರಹಿಸಲು ಹಸಿರು ಬಾಂಡ್ ಗಳನ್ನು ಸರ್ಕಾರ ವಿತರಿಸುತ್ತದೆ.  ಸಾವರಿನ್ ಹಸಿರು ಬಾಂಡ್ ಗಳು (sovereign green bonds) ಹೊಸ ಪ್ರಯೋಗವಲ್ಲ. ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಮತ್ತು ವಿಶ್ವಬ್ಯಾಂಕ್ 2007 ರಲ್ಲಿ ಹಸಿರು ಬಾಂಡ್ ಗಳನ್ನು ಪ್ರಾರಂಭಿಸಿದ್ದವು. ಸುಸ್ಥಿರ ಪರಿಸರ ಯೋಜನೆಗಳಿಂದ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಬಹುದು. 

ಆರ್ಥಿಕ ಹಿಂಜರಿತದ ಭೀತಿ, ಉದ್ಯೋಗ ಕಡಿತಕ್ಕೆ ಮುಂದಾದ ಅಮೆರಿಕದ ಕಾರ್ಪೋರೇಟ್ ಕಂಪನಿಗಳು

ಸಾವರಿನ್ ಗ್ರೀನ್ ಬಾಂಡ್ ಗಳು (Green Bonds) ಕೇಂದ್ರ ಸರ್ಕಾರದ 2022-23ನೇ ಸಾಲಿನ ಬಂಡವಾಳ ಎರವಲು ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದು, ಹಸಿರು ಮೂಲಸೌಕರ್ಯಕ್ಕೆ ಅಗತ್ಯವಾದ ಬಂಡವಾಳವನ್ನು ಒಟ್ಟುಗೂಡಿಸಲಿದೆ. ಸ್ಕಾಟ್ಲೆಂಡ್ ಗ್ಲಾಸ್ಗೋನಲ್ಲಿ 2021ರ ನವೆಂಬರ್ ನಲ್ಲಿ ನಡೆದ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ, 2070ರೊಳಗೆ ಭಾರತ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿ ತಲುಪೋ ಐತಿಹಾಸಿಕ ಘೋಷಣೆ ಮಾಡಿದ್ದರು. ಇದಕ್ಕೆ ಪೂರಕವಾಗಿ ಕೇಂದ್ರ ಹಣಕಾಸು ಸಚಿವೆ (Union Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಫೆ.1ರಂದು ಮಂಡಿಸಿದ ಬಜೆಟ್ ನಲ್ಲಿ (Budget) ಹಸಿರು ಬಾಂಡ್ (green bond) ಬಿಡುಗಡೆ ಮಾಡೋದಾಗಿ ಘೋಷಿಸಿದ್ದರು.  

ಟ್ವೀಟರ್‌ನಲ್ಲಿ ಈಗ ಬ್ಲೂಟಿಕ್‌ ಜತೆ ‘ಅಧಿಕೃತ’ ಲೇಬಲ್‌

ಯಾವೆಲ್ಲ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು?
ಅನೇಕ ವಿಧದ ಪರಿಸರ ಸುಸ್ಥಿರ ಯೋಜನೆಗಳಿದ್ದು,ಅವುಗಳಲ್ಲಿ ಹಸಿರು ಬಾಂಡ್ ಗಳ ಮೂಲಕ ಸಂಗ್ರಹಿಸಿದ ಹಣವನ್ನು ಹೂಡಿಕೆ ಮಾಡಬಹುದು. ಹಸಿರು ಬಾಂಡ್ ಗಳ ಮೂಲಕ ಸಂಗ್ರಹಿಸಿದ ಬಂಡವಾಳವನ್ನು ಅನೇಕ ಯೋಜನೆಗಳಲ್ಲಿ ಬಳಸಬಹುದು. 
ನವೀಕರಿಸೋ ಇಂಧನ ಯೋಜನೆಗಳು: ಸೌರವಿದ್ಯುತ್ ಘಟಕಗಳು, ವಿಂಡ್ ಮಿಲ್ ಗಳು, ಬಯೋಗ್ಯಾಸ್ ಘಟಕಗಳ ಸ್ಥಾಪನೆ.
ಶುದ್ಧ ಸಾರಿಗೆ ಯೋಜನೆಗಳು: ಎಲೆಕ್ಟ್ರಿಕ್ ಕಾರುಗಳು ಹಾಗೂ ಅವುಗಳ ಚಾರ್ಜಿಂಗ್ ನೆಟ್ವರ್ಕ್, ಹಸಿರು ಇಂಧನಗಳಲ್ಲಿನ ಸಂಶೋಧನೆಗೆ ಹಣದ ಹೂಡಿಕೆ
ಇಂಧನ ದಕ್ಷತೆ ಯೋಜನೆಗಳು: ಶೂನ್ಯ ತ್ಯಾಜ್ಯವನ್ನೊಳಗೊಂಡ ಹಸಿರು ಕಟ್ಟಡಗಳ ನಿರ್ಮಾಣ, ತ್ಯಾಜ್ಯ ಸಾಮಗ್ರಿಗಳ ಪರಿಸರಸ್ನೇಹಿ ಮರುಬಳಕೆ, ಇಂಧನ ಉಳಿತಾಯ ಗುರಿ ಹೊಂದಿರೋ ಯೋಜನೆಗಳು.
 

Latest Videos
Follow Us:
Download App:
  • android
  • ios