ಗೋವಾದ H.O.G ರ್‍ಯಾಲಿಗೆ ಕೈಜೋಡಿಸಿದ ನಯಾರಾ ಎನರ್ಜಿ, ಇದೀಗ ಅಧಿಕೃತ ಫ್ಯೂಯೆಲ್ ಪಾರ್ಟ್ನರ್ , ಡಿಸೆಂಬರ್ 19 ಹಾಗೂ 20 ರಂದು ಈ ರ್‍ಯಾಲಿ ನಡೆಯಲಿದೆ. ಇದೀಗ ನಯಾರಾ ಎನರ್ಜಿ ಅಧಿಕೃತ ಇಂಧನ ಪಾಲುದಾರಿಗೆ ಮಾಡಿಕೊಳ್ಳುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ.
ಮುಂಬೈ (ಡಿ.04) ಅಂತರಾಷ್ಟ್ರೀಯ ಮಟ್ಟದ ಇಂಟಿಗ್ರೇಟೆಡ್ ಡೌನ್‌ಸ್ಟ್ರೀಮ್ ಎನರ್ಜಿ ಮತ್ತು ಪೆಟ್ರೋಕೆಮಿಕಲ್ಸ್ ಕಂಪನಿಯಾದ ನಯಾರಾ ಎನರ್ಜಿ, ಗೋವಾದಲ್ಲಿ ನಡೆಯಲಿರುವ H.O.G. ರ್‍ಯಾಲಿ 2025ಕ್ಕೆ ಅಧಿಕೃತ ಫ್ಯೂಯೆಲಿಂಗ್ ಪಾಲುದಾರರಾಗಿದೆ. ಈ ಮೂಲಕ ನಯಾರ ಎನರ್ಜಿ ಮಹತ್ವದ ಹೆಜ್ಜೆ ಇಟ್ಟಿದೆ. ಡಿಸೆಂಬರ್ 19 ಹಾಗೂ 20 ರಂದು ನಡೆಯಲಿರುವ ಈ H.O.G ರ್‍ಯಾಲಿ asianetnews.com ವಿಶೇಷವಾಗಿ ನಿಮಗಾಗಿ ಆಯೋಜಿಸಿದ ರ್‍ಯಾಲಿಯಾಗಿದೆ. ಇದು ಆಹ್ವಾನಿತರಿಗೆ ಸೀಮಿತವಾದ ರ್‍ಯಾಲಿಯಾಗಿದ್ದು, ದೇಶಾದ್ಯಂತ ಹಾರ್ಲೆ-ಡೇವಿಡ್ಸನ್‌ನ ಕುಟುಂಬ ಸದಸ್ಯರ ಸ್ವಾತಂತ್ರ್ಯ ಮತ್ತು ಸಹೋದರತ್ವದ ಸಂಸ್ಕೃತಿಯನ್ನು ಆಚರಿಸಲಾಗುತ್ತದೆ. ಈ ರ್‍ಯಾಲಿಯನ್ನು ಎಪಿಸೆಂಟರ್ H.O.G.ಚಾಪ್ಟರ್, ನಾಗ್ಪುರ ಮತ್ತು ಐರನ್ ಓರ್ H.O.G ಚಾಪ್ಟರ್, ರಾಯ್‌ಪುರ ಪ್ರಸ್ತುತಪಡಿಸುತ್ತಿದೆ.
H.O.G.ರ್‍ಯಾಲಿ ಹಾರ್ಲೆ ಡೇವಿಡ್ಸನ್ ಮೋಟಾರ‌್‌ಸೈಕಲ್ ಮೂಲಕ ಸಾಗಲಿದೆ. ಇದೀಗ ಹಾರ್ಲೆ ಡೇವಿಡ್ಸನ್ ಬೈಕರ್ಸ್ ಕುತೂಹಲ ಇಮ್ಮಡಿಗೊಂಡಿದೆ. ಸುಂದರ ತಾಣಗಳ ಮೂಲಕ ಸಾಗುವ ಈ ರ್‍ಯಾಲಿ ಬೈಕ್ ಪ್ರೀಯರ ಮನತಣಿಸಲಿದೆ.
ನಯಾರ ಎನರ್ಜಿ
ಭಾರತದ ಎರಡನೇ ಅತಿದೊಡ್ಡ ಏಕ-ಸೈಟ್ ಸಂಸ್ಕರಣಾಗಾರ (ರಿಫೈನರಿ) ಮತ್ತು ದೇಶಾದ್ಯಂತ 6,500 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳ ಜಾಲವನ್ನು ನಿರ್ವಹಿಸುತ್ತಿರುವ ನಯಾರಾ ಎನರ್ಜಿ, ದೇಶದ ಸಂಸ್ಕರಣಾ ಸಾಮರ್ಥ್ಯಕ್ಕೆ ಸುಮಾರು 8%, ಅದರ ಚಿಲ್ಲರೆ ಇಂಧನ ಜಾಲಕ್ಕೆ ಸುಮಾರು 7% ಮತ್ತು ಪಾಲಿಪ್ರೊಪಿಲೀನ್ ಸಾಮರ್ಥ್ಯಕ್ಕೆ ಸುಮಾರು 8% ಕೊಡುಗೆ ನೀಡುತ್ತದೆ. asianetnews.com ಮತ್ತು ಇಂಡಿಯಾ H.O.G.™️ ರ‍್ಯಾಲಿ 2025 ರೊಂದಿಗಿನ ಈ ಸಹಯೋಗವು ಉತ್ಸಾಹ, ಕಾರ್ಯಕ್ಷಮತೆ (ಪರ್ಫಾರ್ಮೆನ್ಸ್) ಮತ್ತು ಪ್ರಗತಿಯ ಹಂಚಿಕೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ರ‍್ಯಾಲಿಯ ಶಕ್ತಿ ಮತ್ತು ಉತ್ಸಾಹವು ಗುಣಮಟ್ಟದ ಇಂಧನಕ್ಕೆ ಕಂಪನಿಯ ಬದ್ಧತೆಯನ್ನು ಬಿಂಬಿಸುತ್ತದೆ, ಈ ಸಂಬಂಧವು ನಯಾರಾ ಎನರ್ಜಿಯ ಇಂಧನವು ಕಾರ್ಯಕ್ಷಮತೆಯನ್ನು ಪೂರೈಸುತ್ತದೆ ಎಂದು ಪುನರುಚ್ಚರಿಸಲು ಮತ್ತೊಂದು ಮಾರ್ಗವಾಗಿದೆ.
ಇಂಡಿಯಾ H.O.G ರ‍್ಯಾಲಿಯು ದೇಶದ ಸುಂದರ ಮಾರ್ಗಗಳ ಮೂಲಕ ಗೋವಾ ತಲುಪುವ ರಮಣೀಯ ಸವಾರಿಗಳನ್ನು (ರೈಡ್‌ಗಳನ್ನು) ಒಳಗೊಂಡಿರುತ್ತದೆ. ಇದು ಪ್ರಮುಖ ಕಲಾವಿದರಿಂದ ಲೈವ್ ಸಂಗೀತ ಪ್ರದರ್ಶನಗಳು, H.O.G. ಸದಸ್ಯರೊಂದಿಗೆ ಭೇಟಿ , ಶುಭಾಶಯ ವಿನಿಮಯ (ಮೀಟ್-ಅಂಡ್-ಗ್ರೀಟ್) , ವಾರ್ಷಿಕ H.O.G. ಪ್ರಶಸ್ತಿ ಸಮಾರಂಭ ಸೇರಿದಂತೆ ಆಕರ್ಷಕ ಅನುಭವಗಳ ಸರಣಿಯೊಂದಿಗೆ ಕೊನೆಗೊಳ್ಳಲಿದೆ.
ಹಾರ್ಲೆ-ಡೇವಿಡ್ಸನ್ ®️ ಸದಸ್ಯರಿಗೆ ನೋಂದಣಿ ಈಗ ಅಧಿಕೃತ ಇಂಡಿಯಾ H.O.G.™️ ರ್‍ಯಾಲಿ ವೆಬ್‌ಸೈಟ್ ನಲ್ಲಿ ತೆರೆದಿದೆ.


