ಟ್ವೀಟರ್‌ನಲ್ಲಿ ಈಗ ಬ್ಲೂಟಿಕ್‌ ಜತೆ ‘ಅಧಿಕೃತ’ ಲೇಬಲ್‌

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರ ಟ್ವೀಟರ್‌ ಖಾತೆಗಳಿಗೆ ಬ್ಲೂಟಿಕ್‌ ಜೊತೆಗೆ ‘ಅಫಿಶೀಯಲ್‌’ ಎಂಬ ಬೂದು ಬಣ್ಣದ ಗುರುತನ್ನು ನೀಡಲು ಟ್ವೀಟರ್‌ ಆರಂಭಿಸಿದೆ. ಬ್ಲೂಟಿಕ್‌ ಖಾತೆಗಳಿಗೆ ತಿಂಗಳಿಗೆ 8 ಡಾಲರ್‌ ಪಾವತಿಸಬೇಕು ಎಂಬ ನಿಯಮದ ಮೊದಲ ಹಂತವಾಗಿ ಇದನ್ನು ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Now twitter has bluetick with Official label akb

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರ ಟ್ವೀಟರ್‌ ಖಾತೆಗಳಿಗೆ ಬ್ಲೂಟಿಕ್‌ ಜೊತೆಗೆ ‘ಅಫಿಶೀಯಲ್‌’ ಎಂಬ ಬೂದು ಬಣ್ಣದ ಗುರುತನ್ನು ನೀಡಲು ಟ್ವೀಟರ್‌ ಆರಂಭಿಸಿದೆ. ಬ್ಲೂಟಿಕ್‌ ಖಾತೆಗಳಿಗೆ ತಿಂಗಳಿಗೆ 8 ಡಾಲರ್‌ ಪಾವತಿಸಬೇಕು ಎಂಬ ನಿಯಮದ ಮೊದಲ ಹಂತವಾಗಿ ಇದನ್ನು ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಬ್ಲೂಟಿಕ್‌ ಹೊಂದಿರುವ ರಾಜಕಾರಣಿಗಳು, ವ್ಯಾಪಾರ ಸಂಸ್ಥೆಗಳು, ಕಂಪನಿಗಳು, ಪಕ್ಷಗಳು ಮತ್ತು ಉನ್ನತ ದರ್ಜೆಯ ಖಾತೆಗಳಿಗೆ ಈ ಹೊಸ ಗುರುತನ್ನು ನೀಡಲಾಗುತ್ತಿದೆ.

ಮೋದಿ ಅವರ ಜೊತೆಗೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌(Minister Nirmala Sitharaman), ಗೃಹ ಸಚಿವ ಅಮಿತ್‌ ಶಾ (Amit Shah), ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ (S. Jaishankar), ರಕ್ಷಣಾ ಸಚಿವ ರಾಜನಾಥ ಸಿಂಗ್‌ (Rajnath Singh) , ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi), ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ (Sachin Tendulkar), ಕಾಂಗ್ರೆಸ್‌, ಬಿಜೆಪಿ ಸೇರಿ ಹಲವು ಖಾತೆಗಳಿಗೂ ಅಫಿಶಿಯಲ್‌ ಗುರುತನ್ನು ನೀಡಲಾಗಿದೆ. ಉಳಿದ ಪ್ರಮುಖರ ಬ್ಲೂಟಿಕ್‌ ಮುಂದುವರಿಸಲಾಗಿದೆಯಾದರೂ ಅವರಿಗೆ ಅಫೀಶಿಯಲ್‌ ಎಂಬ ಲೇಬಲ್‌ ನೀಡಿಲ್ಲ. 8 ಡಾಲರ್‌ ಶುಲ್ಕ ಜಾರಿಯಾದ ಬಳಿಕ ಇವರು ಹಣ ನೀಡಿದಿದ್ದರೆ ಬ್ಲೂಟಿಕ್‌ ಹೋಗಬಹುದು ಎನ್ನಲಾಗುತ್ತಿದೆ.

ವಜಾ ಆದ ಕೆಲವರಿಗೆ ಟ್ವೀಟರ್‌ನಿಂದ ಮರು ನೇಮಕಕ್ಕೆ ಕರೆ!
ನಾನ್ಯಾಕೆ ಕೊಡಲಿ ಕಾಸು, ಬ್ಲೂಟಿಕ್‌ಗೆ ನಾ ಹಣ ಕೊಡಲ್ಲ: ನೈನಾ

 

Latest Videos
Follow Us:
Download App:
  • android
  • ios