ಜೀರೋ ಬ್ಯಾಲೆನ್ಸ್ ಖಾತೆಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಕೆಲ ಬ್ಯಾಂಕ್ ಗಳು ಕನಿಷ್ಠ ಬ್ಯಾಲೆನ್ಸ್ ಇಡದಿದ್ದರೆ ತಿಂಗಳ ಅಂತ್ಯಕ್ಕೆ ಗ್ರಾಹಕರಿಂದ ದಂಡವನ್ನು ವಸೂಲಿ ಮಾಡುತ್ತಿವೆ. ಹಾಗಾಗಿ ಎಸ್ ಬಿಐ ನೀಡುವ ಜೀರೋ ಬ್ಯಾಲೆನ್ಸ್ ಖಾತೆಗಳ ಮೇಲೆ ಒಂದು ನೋಟ ಇಲ್ಲಿದೆ.

1. ಎಸ್ ಬಿಐ ಸ್ಯಾಲರಿ ಖಾತೆ:  ನೌಕರ ವರ್ಗಕ್ಕೆ ಸಂಬಂಧಿಸಿ ಈ ಖಾತೆ ಆಯ್ಕೆಗಳನ್ನು ಕೊಡಮಾಡುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು, ಖಾಸಗಿ ಸಂಸ್ಥೆ ನೌಕರರು ಈ ಖಾತೆಗೆ ಅರ್ಹರಾಗುತ್ತಾರೆ.  ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸಹ ಪಡೆದುಕೊಳ್ಳಬಹುದು. ಜಾಯಿಂಟ್ ಖಾತೆಯಿದ್ದರೆ ಹೆಚ್ಚುವರಿ ಎಟಿಎಂ ಕಾರ್ಡ್ ಸಹ  ನೀಡಲಾಗುತ್ತದೆ. ಚೆಕ್ ಸೇರಿದಂತೆ ಉಳಿದ ಸವಲತ್ತುಗಳು ಲಭ್ಯವಾಗುತ್ತದೆ. 

ಒಂದು ವೇಳೆ ಮೂರು ತಿಂಗಳಿಗಿಂತಲೂ ಅಧಿಕ ಕಾಲ ಈ ಖಾತೆಗೆ ಸ್ಯಾಲರಿ ಕ್ರೆಡಿಟ್ ಆಗದಿದ್ದರೆ ಇದು ಸಾಮಾನ್ಯ ಉಳಿತಾಯ ಖಾತೆಯಾಗಿ ಮಾರ್ಪಡುತ್ತದೆ. ನಂತರದಲ್ಲಿ ಉಳಿತಾಯ ಖಾತೆಯ ನಿಬಂಧನೆಗಳಿಗೆ ಒಳಪಡಬೇಕಾಗುತ್ತದೆ. ಸ್ಯಾಲರಿ ಖಾತೆಗೆ ಉಳಿತಾಯ ಖಾತೆ ಮಾದರಿಯಲ್ಲೆ ಬಡ್ಡಿ ನೀಡಲಾಗುತ್ತದೆ.

ಎಸ್ ಬಿಐ ಗ್ರಾಹಕರಿಗೆ ಗೊತ್ತಿರಲೇಬೇಕಾದ ವಿಚಾರ

2. ಬೇಸಿಕ್ ಸೇವಿಂಗ್ ಬ್ಯಾಂಕ್ ಡಿಪಾಸಿಟ್[ಬಿಎಸ್ಬಿಡಿ] : ಎಲ್ಲ ದಾಖಲೆಗಳನ್ನು ಹೊಂದಿರುವ ಬಡ ವರ್ಗದ ಜನರಿಗೆ ಈ ಖಾತೆಯ ಲಾಭ ನೀಡಲಾಗುತ್ತದೆ. ಬಡ ವರ್ಗದವರಲ್ಲಿ ಉಳಿತಾಯ ಉತ್ತೇಜನ ಇದರ ಮೂಲ ಉದ್ದೇಶ. ಗ್ರಾಹಕರಿಗೆ ರುಪೆ ಕಾರ್ಡ್ ನೀಡಲಾಗುತ್ತದೆ. ಆದರೆ ವಾರ್ಷಿಕ ಶುಲ್ಕ ಪಡೆದುಕೊಳ್ಳಲಾಗುತ್ತದೆ. ಆನ್ ಲೈನ್ ಟ್ರಾನ್ಸಾಕ್ಷನ್ ಅಂದರೆ ಎನ್ ಇ ಎಫ್ ಟಿ ಮತ್ತು ಆರ್ ಟಿಜಿಎಸ್ ಇಲ್ಲಿ ಉಚಿತ. ಸರಕಾರ ನೀಡುವ ಚೆಕ್ ಗಳನ್ನು ಉಚಿತವಾಗಿ ಕ್ಯಾಶ್ ಮಾಡಿಕೊಳ್ಳಬಹುದು. ಒಂದು ಸಂದರ್ಭದಲ್ಲಿ ಖಾತೆದಾರ ಈ ಬಗೆಯ ಒಂದೇ ಖಾತೆಯನ್ನು ಮಾತ್ರ ಹೊಂದಿರತಕ್ಕದ್ದು.  ತಿಂಗಳಿಗೆ ನಾಲ್ಕು ಸಾರಿ ಮಾತ್ರ ಹಣ ಡ್ರಾ ಮಾಡಿಕೊಳ್ಳುವ ಅವಕಾಶ ಇದ್ದು ಉಳಿದ ಉಳಿತಾಯ ಖಾತೆಗೆ ನೀಡುವಷ್ಟೆ ಬಡ್ಡಿ ನೀಡಲಾಗುತ್ತದೆ.

ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ

3. ಎಸ್ ಬಿಐ ಚಿಕ್ಕ ಖಾತೆ: ಅಧಿಕೃತವಾಗಿ ಕೆವೈಸಿ ದಾಖಲೆಗಳು ಇಲ್ಲವಾದರೂ 18 ವರ್ಷ ತುಂಬಿದವರುಈ ಖಾತೆ ತೆರೆಯಬಹುದು. ಆದರೆ ಕೆಲ ನಿಬಂಧನೆಗಳಿರುತ್ತವೆ. ಈ ಚಿಕ್ಕ  ಎಲ್ಲ ದಾಖಲೆ ನೀಡಿದ ನಂತರ ಉಳಿತಾಯ ಖಾತೆಯಾಘಿ ಮಾರ್ಪಡುವುದು. ಬಡ ವರ್ಗದವರಿಗಾಗಿ ಈ ಅವಕಾಶ ಮಾಡಿಕೊಡಲಾಗಿದ್ದು 50 ಸಾವಿರ ರೂ. ಗಿಂತ ಅಧಿಕ ಹಣ ಇಡುವಂತಿಲ್ಲ. ಆನ್ ಲೈನ್ ಟ್ರಾನ್ಸಾಕ್ಷನ್ ವಿಧಾನಗಳು ಉಚಿತವಾಗಿದ್ದು ಇದನ್ನು ಬಿ ಎಸ್ ಬಿಡಿ ಖಾತೆಯನ್ನಾಗಿಯೂ ಮಾಡಿಕೊಳ್ಳಬಹುದು. ರುಪೆ ಡೆಬಟ್ ಕಾರ್ಡ್‌ ನೀಡಲಾಗುತ್ತದೆ.

4. ಜೀರೋ ಬ್ಯಾಲೆನ್ಸ್ ಡಿಜಿಟಲ್ ಸೇವಿಂಗ್ಸ್ ಖಾತೆ: ಎಸ್ ಬಿಐನ ಯೋನೋ ಮೊಬೈಲ್ ಅಪ್ಲಿಕೇಶನ್ ಮುಖೇನ ಈ ಖಾತೆ ತೆರೆಯಬಹುದು. ಮಾರ್ಚ್ 31, 2019ರ ವರೆಗೆ ಯಾವುದೇ ಮಿನಿಮಮ್ ಬ್ಯಾಲೆನ್ಸ್ ಇಡುವ ಅಗತ್ಯ ಇಲ್ಲ. ಆದರೆ ಒಂದೇ ಶಾಖೆಯಲ್ಲಿ ನಿಮ್ಮ ಎಲ್ಲ ವ್ಯವಹಾರ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಸಹ ಉಳಿದ  ಉಳಿತಾಯ ಖಾತೆಗೆ ನೀಡುವಷ್ಟೆ ಬಡ್ಡಿ ನೀಡಲಾಗುತ್ತದೆ.

ಮುದ್ರಾ ಯೋಜನೆ ಬದಲಾಗಿದೆ ಗೊತ್ತಾ?

5. ಜೀರೋ ಬ್ಯಾಲೆನ್ಸ್  ಇಸ್ಟಾ ಸೇವಿಂಗ್ ಖಾತೆ: ಇದಕ್ಕೂ ಸಹ ವಿಶೆಷ ಅನುಮತಿ ನೀಡಲಾಗಿದ್ದು ಮಾರ್ಚ್ 31, 2019ರ ವರೆಗೆ ಯಾವುದೇ ಮಿನಿಮಮ್ ಬ್ಯಾಲೆನ್ಸ್ ಇಡುವ ಅಗತ್ಯ ಇಲ್ಲ. ಬ್ಯಾಂಕ್ ಶಾಖೆಗೆ ಭೇಟಿ ನೀಡದೇ ಖಾತೆ ತೆರೆದುಕೊಳ್ಳಬಹುದು. ಒನ್ ಟೈಮ್ ಪಾಸ್ ವರ್ಡ್ ಮೂಲಕ ಕೆವೈಸಿ ಡಾಟಾ ಕಲೆಹಾಕಲಾಗುವುದು. ಇಲ್ಲಿಯೂ ಉಚಿತ ರುಪೆ ಡೆಬಿಟ್ ಕಾರ್ಡ್ ನೀಡಲಾಗುತ್ತದೆ.