Asianet Suvarna News Asianet Suvarna News

Demonetisation| ಅಮಾನ್ಯೀಕರಣದ 5 ವರ್ಷ ಬಳಿಕವೂ ನೋಟು ಚಲಾವಣೆ ಏರಿಕೆ!

* 500 ಮತ್ತು 1000 ರು. ಮುಖಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿದ್ದ ಕೇಂದ್ರ

* ಅಮಾನ್ಯೀಕರಣದ 5 ವರ್ಷ ಬಳಿಕವೂ ನೋಟು ಚಲಾವಣೆ ಹೆಚ್ಚಳ

Five Years Since Demonetisation Value Of Cash In Circulation Up 64pc pod
Author
Bangalore, First Published Nov 8, 2021, 8:50 AM IST

ನವದೆಹಲಿ(ನ.08): ಕೇಂದ್ರ ಸರ್ಕಾರ 500 ಮತ್ತು 1000 ರು. ಮುಖಬೆಲೆಯ ಹಳೆಯ ನೋಟುಗಳನ್ನು (Old Notes) ರದ್ದುಗೊಳಿಸಿ ನ.8ರ ಸೋಮವಾರಕ್ಕೆ 5 ವರ್ಷ ಪೂರ್ಣಗೊಳ್ಳಲಿದೆ. ಈ 5 ವರ್ಷಗಳಲ್ಲಿ ಡಿಜಿಟಲ್‌ ಪಾವತಿ (Digital Payment) ಹೆಚ್ಚುವುದರ ಜೊತೆಗೆ ನೋಟುಗಳ ಚಲಾವಣೆಯಲ್ಲೂ ಹಿಂದಿಗಿಂತ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.

ಕಪ್ಪು ಹಣ (Black Money) ತಡೆಗಟ್ಟುವ ಮತ್ತು ಡಿಜಿಟಲ್‌ ಪೇಮೆಂಟ್‌ ಹೆಚ್ಚಳಗೊಳಿಸುವ ಉದ್ದೇಶದಿಂದ 1000 ಮತ್ತು 500 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಸರ್ಕಾರ ಆದೇಶಿಸಿತ್ತು. ಆದರೆ ನಂತರದ ವರ್ಷಗಳಲ್ಲಿ ಡಿಜಿಟಲ್‌ ಪೇಮೆಂಟ್‌ ಹೆಚ್ಚಳವಾದರೂ, ನೋಟುಗಳ ಚಲಾವಣೆ ಕಡಿಮೆಯಾಗಿಲ್ಲ. ಆರ್‌ಬಿಐ (RBI) ದತ್ತಾಂಶಗಳ ಪ್ರಕಾರ 2016ರ ನ.4ರವೇಳೆಗೆ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಮೌಲ್ಯ 17.74 ಲಕ್ಷ ಕೋಟಿ ರು.ಗಳಾಗಿದ್ದರೆ, 2021ರ ಅ.29ರಂದು ಆ ಪ್ರಮಾಣ 29.17 ಲಕ್ಷ ಕೋಟಿ ರು.ಗಳಾಗಿತ್ತು.

ಇನ್ನು ಕಳೆದ ಒಂದು ವರ್ಷದ ಅವಧಿಯಲ್ಲೇ ಚಲಾವಣೆಯಲ್ಲಿರುವ ನೋಟುಗಳ ಒಟ್ಟು ಮೌಲ್ಯ 2.28 ಲಕ್ಷ ಕೋಟಿ ರು.ನಷ್ಟುಹೆಚ್ಚಾಗಿದೆ. ಅಂದರೆ ಒಂದು ವರ್ಷದ ಅವಧಿಯಲ್ಲಿ ನೋಟುಗಳ ಮೌಲ್ಯ ಮತ್ತು ಪ್ರಮಾಣದಲ್ಲಿ ಕ್ರಮವಾಗಿ ಶೇ.16.8 ಮತ್ತು ಶೇ.7.2ರಷ್ಟುಏರಿಕೆಯಾಗಿದೆ. ಅದಕ್ಕೂ ಹಿಂದಿನ ವರ್ಷದಲ್ಲಿ ಈ ಪ್ರಮಾಣ ಶೇ.14.7 ಮತ್ತು ಶೇ.6.6ರಷ್ಟಿತ್ತು.

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನರು ತುರ್ತು ಪರಿಸ್ಥಿತಿಗೆಂದು ಕೈಯಲ್ಲಿ ಹಣಇಟ್ಟುಕೊಳ್ಳುವ ಪ್ರಮಾಣ ಹೆಚ್ಚಾದ ಕಾರಣ, ನೋಟುಗಳ ಬಳಕೆ ಹೆಚ್ಚಾಗಿರುವುದು ಕಂಡುಬಂದಿದೆ. 2021ರ ಮಾ.31ರವರೆಗೆಇನ ಅಂಕಿ ಅಂಶಗಳ ಅನ್ವಯ ಚಲಾವಣೆಯಲ್ಲಿರುವ ಒಟ್ಟು ನೋಟುಗಳ ಮೌಲ್ಯದಲ್ಲಿ 500 ಮತ್ತು 2000 ರು. ಮುಖಬೆಲೆಯ ನೋಟುಗಳ ಪ್ರಮಾಣ ಶೇ.85.7ರಷ್ಟಿತ್ತು.

ಚಲಾವಣೆಯಲ್ಲಿರುವ ನೋಟುಗಳ ಒಟ್ಟು ಮೊತ್ತ

2020 - 26.88 ಲಕ್ಷ ಕೋಟಿ

2021- 29.77 ಲಕ್ಷ ಕೋಟಿ

ಭಿಕ್ಷುಕನ ಮನೆಯಲ್ಲಿತ್ತು 10 ಲಕ್ಷ ರೂ ನಗದು, ಅಧಿಕಾರಿಗಳಿಗೆ ತಲೆನೋವು!

 

ಅನಾರೋಗ್ಯ ಕಾರಣದಿಂದ ದೇವಾಲಯ ಪಟ್ಟಣವಾದ ತಿರುಮಲ ಸಮೀಪದಲ್ಲಿ ವಾಸವಿದ್ದ ಭಿಕ್ಷುಕನೋರ್ವ ಮೃತಪಟ್ಟಿದ್ದಾನೆ. ಬಳಿಕ ಭಿಕ್ಷುಕ ವಾಸವಿದ್ದ ಮನೆ ಶೋಧಿಸಿದಾಗ 10 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ. ಕಂತೆ ಕಂತೆ ಹಣ ಶೋಧಿಸಿ ಹೊರತೆಗೆದ ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ.

ಭಿಕ್ಷೆ ಬೇಡುವುದು ಈತನ ಕೆಲಸ, ಕೈಯಲ್ಲಿದ್ದ ಹಣ‌ ಮಾತ್ರ ಊಹಿಸೋಕೂ ಆಗಲ್ಲ..!

ಮೃತ ಭಿಕ್ಷುಕ ಶ್ರೀನಿವಾಸಾಚಾರಿಗೆ ತಿರುಮಲ ತಿರುಪತಿ ದೇವಸ್ತಾನಂ(ಟಿಟಿಡಿ) ಟ್ರಸ್ಟ್ ಅಡಿ ಸಣ್ಣ ಉದ್ಯಮ ಮಾಡುತ್ತಿದ್ದರು. ಜೊತೆಗೆ ಭಿಕ್ಷೆ ಬೇಡುತ್ತಾ ಜೀವನಸಾಗಿಸುತ್ತಿದ್ದರು. ಶ್ರೀನಿವಾಸಾಚಾರಿ ಕುಟುಂಬಸ್ಥರು ಟಿಟಿಡಿಯಲ್ಲೇ ಕೆಲಸ ನಿರ್ವಹಿಸಿದ್ದರು. ಹೀಗಾಗಿ ಟಿಟಿಡಿ ಶ್ರೀನಿವಾಸಾಚಾರಿಗೆ 2007ರಲ್ಲಿ ಮನೆ ನೀಡಲಾಗಿತ್ತು. ಇತ್ತ ಶ್ರೀನಿವಾಸಾಚಾರಿ ಕುಟುಂಬಸ್ಥರೆಲ್ಲಾ ದಶಕಗಳ ಹಿಂದೆ ಕಾಲವಾಗಿದ್ದಾರೆ.  ಇತ್ತ ಅನಾರೋಗ್ಯಕ್ಕೆ ತುತ್ತಾದ ಶ್ರೀನಿವಾಸಾಚಾರಿ ಕಳೆದ ವರ್ಷ ಮರಣ ಹೊಂದಿದ್ದಾರೆ.

ಕುಟುಂಬ ಸದಸ್ಯರು ಯಾರು ಇಲ್ಲದ ಕಾರಣ ಈ ವರ್ಷ ಟಿಟಿಡಿ ಕಂದಾಯ ಅಧಿಕಾರಿಗಳು ಮನೆಯನ್ನು ಮರು ವಶಕ್ಕೆ ಪಡೆದು ನವೀಕರಣ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಅಧಿಕಾರಿಗಳ ತಂಡ ಶ್ರೀನಿವಾಸಾಚಾರಿ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ತಿರುಪತಿ ದೇವಸ್ಥಾನದ ಕಾರ್ಯ ಹಾಗೂ ಭಿಕ್ಷೆಯಿಂದ ಬಂದ ಹಣವನ್ನು ಶ್ರೀನಿವಾಸಾಚಾರಿ ಮನೆಯಲ್ಲಿ ಅಡಗಿಸಿಟ್ಟಿದ್ದರು.

ಕೊರೋನಾ ಪರಿಹಾರ ನಿಧಿಗೆ 90 ಸಾವಿರ ರೂ ದೇಣಿಗೆ ನೀಡಿದ ಭಿಕ್ಷುಕ!

ಮನೆಯೊಳಗಿದ್ದ ಪೆಟ್ಟಿಗೆಯಲ್ಲಿ ಶ್ರೀನಿವಾಸಾಚಾರಿ ಬರೋಬ್ಬರಿ 10 ಲಕ್ಷ ರೂಪಾಯಿ ಕೂಡಿಟ್ಟಿದ್ದರು. ಈ ಹಣ ಹೊರತೆಗೆದು ಎಣಿಸಲು ಮುಂದಾದಾಗ ಅಧಿಕಾರಿಗಳಿಗೆ ತಲೆನೋವು ಹೆಚ್ಚಾಗತೊಡಗಿದೆ. ಕಾರಣ 10 ಲಕ್ಷ ರೂಪಾಯಿ ಅಲ್ಲಿದ್ದ ಬಹುತೇಕ ನೋಟುಗಳು ಹಳೆ ಅಮಾನ್ಯಗೊಂಡ ನೋಟುಗಳಾಗಿವೆ. ಪ್ರಧಾನಿ ಮೋದಿ ಡಿಮಾನಿಟೈಸೇಶನ್ ಘೋಷಣೆ ಮೊದಲು ಇದ್ದ 1,000, 500 ರೂಪಾಯಿ ನೋಟುಗಳಾಗಿದೆ.

10 ಲಕ್ಷ ರೂಪಾಯಿಯನ್ನು ಎಣಿಸಿದ ಅಧಿಕಾರಿಗಳಿಗೆ ಈ ಹಣವನ್ನು ಏನು ಮಾಡಬೇಕು ಅನ್ನೋದೇ ತೋಚಲಿಲ್ಲ. ಕಾರಣ ಅಮಾನ್ಯಗೊಂಡಿರುವ ನೋಟುಗಳನ್ನು ಸದ್ಯಕ್ಕೆ ಹೊಸ ನೋಟುಗಳಾಗಿ ಪರಿವರ್ತಿಸುವುದು ಅಸಾಧ್ಯ. ಇತ್ತ ಲಕ್ಷ ಲಕ್ಷ ರೂಪಾಯಿ ಹಳೆ ನೋಟುಗಳನ್ನು ಮನೆಯಲ್ಲಿಟ್ಟಿರುವುದು ಅಪರಾಧ. ಹೀಗಾಗಿ ಅಧಿಕಾರಿಗಳಿಗೆ ತಲೆನೋವು ಶುರುವಾಗಿತ್ತು. ಬಳಿಕ ಈ ಹಣವನ್ನು ಟಿಟಿಡಿ ಟ್ರಸ್ಟ್ ಡಿಪಾಸಿಟ್ ಮಾಡಿದ್ದಾರೆ. ಆದರೆ ಹಳೇ ನೋಟುಗಳನ್ನು ಮಾಡಿದ್ದಾರೋ, ಅಥವಾ ಮಾನ್ಯವಿರುವ ಹಣವನ್ನೂ ಮಾತ್ರ ಮಾಡಿದ್ದಾರೋ ಅನ್ನೋ ಮಾಹಿತಿ ಲಭ್ಯವಾಗಿಲ್ಲ

Follow Us:
Download App:
  • android
  • ios