ಮಧುರೈ(ಆ.18):  ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರ ಜೀವನವೂ ದುಸ್ತರವಾಗಿದೆ. ಆಯಾ ರಾಜ್ಯದಲ್ಲಿ ಹಲವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡೋ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ತಮಿಳುನಾಡಿನ ಮಧುರೈನಲ್ಲಿ ಭಿಕ್ಷುಕ ಪೂಲನ್ ಪಾಂಡ್ಯನ ತನ್ನ ಉಳಿತಾಯದ 90,000 ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

ಲೆಕ್ಕ ಕೊಡ್ತೀವಿ, ಮನೆಯಲ್ಲೇ ಕುಳಿತು ಲೆಕ್ಕಹಾಕ್ಲಿ: ಆರ್‌. ಅಶೋಕ್‌ ಟಾಂಗ್

ದೇವಾಲದ ಬಳಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಪೂಲನ್ ಪಾಂಡ್ಯನ್, ತಾವು ಉಳಿಸಿದ 90,000 ರೂಪಾಯಿಯನ್ನು  ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವಂತೆ ಜಿಲ್ಲಾಧಿಕಾರಿಗೆ  ನೀಡಿದ್ದಾನೆ. ಭಿಕ್ಷುಕನ ಸಾಮಾಜಿಕ ಕಳಕಳಿಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಜಿಲ್ಲಾಧಿಕಾರಿ ಸೋಶಿಯಲ್ ವರ್ಕರ್ ಅನ್ನೋ ಪ್ರಮಾಣ ಪತ್ರವನ್ನು ನೀಡಿದ್ದಾರೆ.

ಸಿದ್ದರಾಮಯ್ಯ ಆರೋಪ ಕಾಂಗ್ರೆಸ್‌ಗೇ ತಿರುಗುಬಾಣ..?.

ಪ್ರಮಾಣ ಪತ್ರ ಪಡೆದ ಭಿಕ್ಷುಕನ ಸಂತಸ ಇಮ್ಮಡಿಗೊಂಡಿದೆ. ನನಗೆ ಸೋಶಿಯಲ್ ವರ್ಕರ್ ಅನ್ನೋ ಪಟ್ಟ ನೀಡಿರುವುದು ನನ್ನ ಸಂತಸ ಮಾತ್ರವಲ್ಲ ಉತ್ಸಾಹವನ್ನು ಹೆಚ್ಚಿಸಿದೆ ಎಂದು ಪೂಲನ್ ಪಾಂಡ್ಯ ಹೇಳಿದ್ದಾರೆ.

 

ಮೇ ತಿಂಗಳಲ್ಲಿ ಪೂಲನ್ ಪಾಂಡ್ಯನ್ 10,000 ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದರು. ಪೂಲನ್ ಪಾಂಡ್ಯನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳ ಸುರಿಮಳೆ ಬಂದಿದೆ.

ತಮಿಳುನಾಡಿನಲ್ಲಿ 54,122 ಸಕ್ರಿಯ ಪ್ರಕರಣಗಳಿವೆ.  2,83,937 ಮಂದಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ. 5,886 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.