ಡಿಗ್ರಿ, ಎಕ್ಸ್‌ಪೀರಿಯೆನ್ಸ್ ಬೇಡ, ಕೆಲಸ ಗೊತ್ತಿದ್ರೆ ಸಾಕು, ಉತ್ತಮ ಸ್ಯಾಲರಿ ಜಾಬ್ ಆಫರ್ ನೀಡಿದ ಮಸ್ಕ್
ಡಿಗ್ರಿ ಬೇಕಿಲ್ಲ, ಯಾವ ಕಂಪನಿಯಲ್ಲಿ ಕೆಲಸ ಮಾಡಿದ್ದೀರಿ ಅನ್ನೋದು ಬೇಡ. ನಿಮ್ಮಲ್ಲಿ ಟ್ಯಾಲೆಂಟ್ ಇದ್ದರೆ ಸಾಕು, ಎಲಾನ್ ಮಸ್ಕ್ ಕೆಲಸ ಕೊಡುತ್ತಿದ್ದಾರೆ. ಕೈತುಂಬ ಸ್ಯಾಲರಿ ಉದ್ಯೋಗದ ಆಫರ್ ಮಾಡಿದ್ದಾರೆ. ಈ ಕುರಿತು ಎಲಾನ್ ಮಸ್ಕ್ ಮಹತ್ವದ ಘೋಷಣೆ ಮಾಡಿದ್ದಾರೆ.
ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು, ಒಂದಷ್ಟು ಡಿಗ್ರಿ, ಕೋರ್ಸ್ ಮಾಡಿರಲೇಬೇಕು. ಇಷ್ಟಿದ್ದರೆ ಸಾಲದು, ಎಕ್ಸ್‌ಪೀರಿಯೆನ್ಸ್ ಇರಬೇಕು. ಅದು ಕೂಡ ಉತ್ತಮ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಇರಲೇಬೇಕು. ಆದರೆ ಎಲಾನ್ ಮಸ್ಕ್ ಭರ್ಜರಿ ಕೆಲಸದ ಆಫರ್ ನೀಡಿದ್ದಾರೆ. ನೀವು ಯಾವ ಶಾಲೆಯಲ್ಲಿ ಓದಿದಿದ್ದೀರಿ, ಎಷ್ಟು ಮಾರ್ಕ್ಸ್ ಪಡೆದಿದ್ದೀರಿ, ಎಲ್ಲಿ ಕೆಲಸ ಮಾಡಿದ್ದೀರಿ? ಅನುಭವ ಎಷ್ಟಿದೆ? ಇದ್ಯಾವುದು ಎಲಾನ್ ಮಸ್ಕ್ ಕೇಳಿಲ್ಲ. ನಿಮಗೆ ಕೆಲಸ ಗೊತ್ತಿದ್ದರೆ ಸಾಕು. ಎಲಾನ್ ಮಸ್ಕ್ ಕೈತುಂಬ ಸಂಬಂಳದ ಕೆಲಸದ ಆಫರ್ ಮಾಡಿದ್ದಾರೆ.
ಎಲಾನ್ ಮಸ್ಕ್ ವಿಶ್ವದ ಶ್ರೀಮಂತ ಉದ್ಯಮಿ. ಟೆಸ್ಲಾ ಎಲೆಕ್ಟ್ರಿಕ್ ಕಾರು, ಸ್ಪೇಸ್ ಎಕ್ಸ್ ಬಾಹ್ಯಾಕಾಶ ಕೇಂದ್ರ, ಎಕ್ಸ್ ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ಉದ್ಯಮಗಳ ಮಾಲೀಕ. ಇದೀಗ ಎಲಾನ್ ಮಸ್ಕ್ ತಮ್ಮ ಎವ್ರಿಥಿಂಗ್ ಆ್ಯಪ್ ಕಂಪನಿಯಲ್ಲಿ ಭರ್ಜರಿ ಉದ್ಯೋಗ ಅವಕಾಶವಿದೆ ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಸ್ಕ್, ನಿಮ್ಮಲ್ಲಿರಬೇಕಾದ ಅರ್ಹತೆ ಕುರಿತು ಮಾಹಿತಿ ನೀಡಿದ್ದಾರೆ.
ಅಮೆರಿಕದಲ್ಲಿ ಟಿಕ್‌ಟಾಕ್ ಬ್ಯಾನ್ ಸಿದ್ಧತೆ ಬೆನ್ನಲ್ಲೇ ಖರೀದಿಗೆ ಮುಂದಾದ್ರಾ ಎಲಾನ್ ಮಸ್ಕ್?
ಸಾಮಾನ್ಯವಾಗಿ ಖಾಲಿ ಹುದ್ದೆ ಭರ್ತಿ ಅಥವಾ ನೇಮಕಾತಿ ವೇಳೆ ವಿದ್ಯಾಭ್ಯಾಸ ಅರ್ಹತೆ, ಕನಿಷ್ಠ ಅನುಭವ, ಗರಿಷ್ಠ ಹಾಗೂ ಕನಿಷ್ಠ ವಯಸ್ಸು ಸೇರಿದಂತೆ ಒಂದಷ್ಟು ಕಡ್ಡಾಯ ಮಾನದಂಡಗಳನ್ನು ಹಾಕಿರುತ್ತಾರೆ. ಆದರೆ ಎಲಾನ್ ಮಸ್ಕ್ ಉದ್ಯೋಗ ಆಫರ್ ತುಂಬಾ ಸ್ಪೆಷಲ್. ಎಲಾನ್ ಮಸ್ಕ್ ಸದ್ಯ ಆಫರ್ ಮಾಡಿರುವುದು ಎಂಜಿನೀಯರ್ಸ್ ಹುದ್ದೆ. ಹಾಗಂತ ನೀವು ಪ್ರತಿಷ್ಠಿಕ ಕಾಲೇಜಿನಿಂದ ಎಂಜಿನೀಯರಿಂಗ್ ಪದವಿ ಪಡೆದಿರಬೇಕು, ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು ಅನ್ನೋ ಯಾವುದೇ ನಿಯಮವಿಲ್ಲ.
ನೀವು ಹಾರ್ಡ್‌ಕೋರ್ ಎಂಜಿನೀಯರ್ ಆಗಿದ್ದರೆ, ನೀವು ಆ್ಯಪ್ ಬಿಲ್ಡ್ ಮಾಡುವ ಕಲೆ ಇದ್ದರೆ, ತಕ್ಷಣೇ ನಮ್ಮ ತಂಡ ಸೇರಿಕೊಳ್ಳಿ. ನೀವು ಮಾಡಿದ ಅತ್ಯುತ್ತಮ ಕೋಡಿಂಗ್ ವರ್ಕ್‌ನ್ನು ನಮಗೆ ಕಳುಹಿಸಿ ಸಾಕು. ನೀವು ಶಾಲಾ ಕಾಲೇಜು ಪದವಿ ಮುಗಿಸಿದ್ದೀರಾ? ಅಥವಾ ಶಾಲಾ ಕಾಲೇಜಿಗೆ ಹೋಗಿದ್ದೀರಾ ಅನ್ನೋದು ನಾವು ಕೇಳುವುದಿಲ್ಲ. ನೀವು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿದ್ದೀರಾ ಅನ್ನೋದು ಬೇಕಿಲ್ಲ. ಪ್ರತಿಭೆ ಇದ್ದರೆ ಸಾಕು ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಏನಿದು ಎವ್ರಿಥಿಂಗ್ ಆ್ಯಪ್?
ಎಲಾನ್ ಮಸ್ಕ್ ಹೊಸ ಎವ್ರಿಥಿಂಗ್ ಕಂಪನಿ ಹಲವು ಪ್ಲಾಟ್‌ಫಾರ್ಮ್‌ಗಳನ್ನು ಒಂದೇ ಆ್ಯಪ್ ಆಡಿಯಲ್ಲಿ ತರಲಾಗುತ್ತಿದೆ. ಅಂದರೆ ಇ ಕಾಮರ್ಸ್ ಶಾಪಿಂಗ್, ಮೆಸೇಜಿಂಗ್, ಸೋಶಿಯಲ್ ನೆಟ್‌ವರ್ಕಿಂಗ್, ಫಿನಾನ್ಶಿಯಲ್ ಟ್ರಾನ್ಸಾಕ್ಷನ್ ಸೇರಿದಂತೆ ಹಲವು ಸೇವೆಗಳನ್ನು ಎವ್ರಿಥಿಂಗ್ ಆ್ಯಪ್ ನೀಡಲಿದೆ. ಒಂದೇ ಆ್ಯಪ್ ಮೂಲಕ ಹಲವು ಸೇವೆ ನೀಡುವುದೇ ಎವ್ರಿಥಿಂಗ್ ಆ್ಯಪ್. ಇದೀಗ ಹೊಸದಾಗಿ ಅಭಿವದ್ಧಿಪಡಿಸಲಾಗುತ್ತಿದೆ. ಇದಕ್ಕೆ ಎಂಜಿನೀಯರ್ಸ್ ಅವಶ್ಯಕತೆ ಇದೆ. ಏಷ್ಯಾ ಭಾಗದಲ್ಲಿ ಈ ರೀತಿಯ ಆ್ಯಪ್ ಹೆಚ್ಚು ಜನಪ್ರಿಯವಾಗಿದೆ. ಒಂದು ಆ್ಯಪ್ ಅಡಿಯಲ್ಲಿ ಎಲ್ಲಾ ಸೇವೆಗಳನ್ನು ಬಳಸುತ್ತಿರುವರ ಸಂಖ್ಯೆ ಹೆಚ್ಚಾಗಿದೆ. ಫುಡ್ ಡೆಲಿವರಿ, ಪಾರ್ಸೆಲ್, ಶಾಪಿಂಗ್, ಯುಪಿಐ ಪಾವತಿ ಸೇರಿದಂತೆ ಎಲ್ಲಾ ಅಗತ್ಯ ಸೇವೆಗಳನ್ನು ಒಂದರಡಿ ತರಲಾಗುತ್ತಿದೆ. ಇದು ಎಲಾನ್ ಮಸ್ಕ್ ಅವರ ಬಹುನಿರೀಕ್ಷಿತ ಪ್ರಾಜೆಕ್ಟ್. ಈ ಆ್ಯಪ್‌ನಲ್ಲಿ ಇದೀಗ ಉದ್ಯೋಗವಕಾಶವಿದೆ.
ವೇತನ ಕುರಿತು ಎಲಾನ್ ಮಸ್ಕ್ ಸದ್ಯ ಯಾವುದೇ ಮಾಹತಿ ಬಹಿರಂಗಪಡಿಸಿಲ್ಲ. ಆದರೆ ಎಲಾನ್ ಮಸ್ಕ್ ಒಡೆತನದ ಎಲ್ಲಾ ಕಂಪನಿಗಳಲ್ಲಿ ಕೈತುಂಬ ಸ್ಯಾಲರಿ ಇದೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಡಾಲರ್ ಲೆಕ್ಕದಲ್ಲಿ ವೇತನ ಖಾತೆಗೆ ಜಮೆ ಆಗಲಿದೆ. ಹೀಗಾಗಿ ಪ್ರತಿಭಾನ್ವಿತ ಎಂಜಿನೀಯರ್ಸ್‌ಗೆ ಅತ್ಯುತ್ತಮ ಅವಕಾಶವನ್ನು ಎಲಾನ್ ಮಸ್ಕ್ ಕಲ್ಪಿಸಿದ್ದಾರೆ.
960 ಕೋಟಿ ಮೌಲ್ಯದ ಟೆಸ್ಲಾ ಷೇರು ಗಿಫ್ಟ್ ನೀಡಿದ ಎಲಾನ್ ಮಸ್ಕ್