960 ಕೋಟಿ ಮೌಲ್ಯದ ಟೆಸ್ಲಾ ಷೇರು ಗಿಫ್ಟ್ ನೀಡಿದ ಎಲಾನ್ ಮಸ್ಕ್
ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ 2.68 ಲಕ್ಷ ಟೆಸ್ಲಾ ಷೇರುಗಳನ್ನು ದಾನ ನೀಡಿದ್ದಾರೆ. 960 ಕೋಟಿ ರೂಪಾಯಿ ಮೌಲ್ಯದ ಈ ಷೇರುಗಳನ್ನು ಎರಡು ಚಾರಿಟಿ ಸಂಸ್ಥೆಗಳಿಗೆ ನೀಡಲಾಗಿದೆ. ಇದು ಅವರ ವರ್ಷಾಂತ್ಯದ ತೆರಿಗೆ ಯೋಜನೆಯ ಭಾಗವಾಗಿತ್ತು ಎಂದು ವರದಿಯಾಗಿದೆ.
ಬೆಂಗಳೂರು (ಜ.3): ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಹೊಸ ವರ್ಷಕ್ಕೂ ಎರಡು ದಿನ ಮುನ್ನ ತಮ್ಮ ಟೆಸ್ಲಾ ಕಂಪನಿಯ 2.68 ಲಕ್ಷ ಷೇರುಗಳನ್ನು ಹೆಸರು ಹೇಳಲಿಚ್ಚಿಸದ ಚಾರಿಟಿಗೆ ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಸುಮಾರು 112 ಮಿಲಿಯನ್ ಯುಎಸ್ ಡಾಲರ್ ಅಂದರೆ, 960 ಕೋಟಿ ರೂಪಾಯಿ ಮೌಲ್ಯದ ಷೇರುಗಳು ಇದಾಗಿದ್ದು, ಇದು ಶತಕೋಟ್ಯಧಿಪತಿಯ ವರ್ಷಾಂತ್ಯದ ತೆರಿಗೆ ಯೋಜನೆಯ ಭಾಗವಾಗಿತ್ತು ಎಂದು ಮಂಗಳವಾರ ಸಲ್ಲಿಕೆ ಮಾಡಿದ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. ಈ ಎಲ್ಲಾ ಷೇರುಗಳು ಎರಡು ಚಾರಿಟಿ ಸಂಸ್ಥೆಗಳಿಗೆ ಹೋಗಿವೆ ಎನ್ನಲಾಗಿದೆ. ಎಲಾನ್ ಮಸ್ಕ್ ಹಾಗೂ ಅವರ ಆಪ್ತ ಅಧಿಕಾರಿ ಜೇರೆಡ್ ಬಿರ್ಚಾಲ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ $432 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿರುವ 53 ವರ್ಷದ ಮಸ್ಕ್, ಇದಕ್ಕೂ ಮುನ್ನ ಕೂಡ ಟೆಸ್ಟ್ ಷೇರುಗಳು ದೊಡ್ಡ ಗಿಫ್ಟ್‌ಅನ್ನು ನೀಡಿದ್ದರು. 2021ರಲ್ಲಿ 5.7 ಬಿಲಿಯನ್ ಡಾಲರ್ ಮೌಲ್ಯದ ಟೆಸ್ಲಾ ಷೇರುಗಳನ್ನು ಹೆಸರಿಸಲಾಗದ ಚಾರಿಟಿ ಸಂಸ್ಥೆಗೆ ನೀಡಿದ್ದರು. ಮರು ವರ್ಷ ಬಿಡುಗಡೆಯಾದ ಚಾರಿಟಿಯ ತೆರಿಗೆ ಫೈಲಿಂಗ್‌ಗಳ ಪ್ರಕಾರ, ಆ ನಿಧಿಗಳು ಅವರ ಸ್ವಂತ ಲಾಭೋದ್ದೇಶವಿಲ್ಲದ ಮಸ್ಕ್ ಫೌಂಡೇಶನ್‌ಗೆ ಹೋಗಿದ್ದವು.
ದುಬಾರಿಯಾದ ಎಕ್ಸ್ ಸೋಶಿಯಲ್ ಮೀಡಿಯಾ, ಸಬ್‌ಸ್ಕಿಪ್ಶನ್ ಬೆಲೆ ಏರಿಸಿದ ಮಸ್ಕ್!
ಕಳೆದ ವರ್ಷ, ಮಸ್ಕ್ ಫೌಂಡೇಶನ್ $ 9.5 ಶತಕೋಟಿ ಆಸ್ತಿಯನ್ನು ಹೊಂದಿತ್ತು ಮತ್ತು ದಾಖಲೆಯ $ 237 ಮಿಲಿಯನ್ ಅನ್ನು ಉಡುಗೊರೆಯ ರೂಪದಲ್ಲಿ ನೀಡಿತ್ತು., ಅದರಲ್ಲಿ ಹೆಚ್ಚಿನವು ವಿಶ್ವದ ಶ್ರೀಮಂತ ವ್ಯಕ್ತಿಯಿಂದ ನಿಯಂತ್ರಿಸಲ್ಪಡುವ ಇತರ ಘಟಕಗಳಿಗೆ ಹೋಯಿತು. US ನಲ್ಲಿ, ಲಾಭೋದ್ದೇಶವಿಲ್ಲದ ಸಂಸ್ಥೆಗಳು ಪ್ರತಿ ವರ್ಷ ಸರಾಸರಿಯಾಗಿ ತಮ್ಮ ಸ್ವತ್ತುಗಳ 5% ಅನ್ನು ಬಿಟ್ಟುಕೊಡಬೇಕು ಅಥವಾ ಬಳಸಬೇಕಾಗುತ್ತದೆ . ಇದನ್ನು ಮಸ್ಕ್‌ನ ಫೌಂಡೇಷನ್ ಪದೇ ಪದೇ ತಪ್ಪಿಸಿಕೊಂಡಿದೆ.
ಜಿಮೇಲ್‌ಗೆ ಟಕ್ಕರ್ ಕೊಡಲು ಬರುತ್ತಿದೆ ಎಲೋನ್ ಮಸ್ಕ್ ಒಡೆತನದ ಎಕ್ಸ್ ಮೇಲ್