ಅಮೆರಿಕದಲ್ಲಿ ಟಿಕ್‌ಟಾಕ್ ಬ್ಯಾನ್ ಸಿದ್ಧತೆ ಬೆನ್ನಲ್ಲೇ ಖರೀದಿಗೆ ಮುಂದಾದ್ರಾ ಎಲಾನ್ ಮಸ್ಕ್?

ಅಮೆರಿಕದಲ್ಲಿ ಟಿಕ್‌ಟಾಕ್ ಬ್ಯಾನ್‌ಗೆ ಸಿದ್ಥತೆ ನಡೆಯುತ್ತಿದೆ. ರಾಷ್ಟ್ರೀಯ ಭದ್ರತೆ ಕಾರಣದಿಂದ ನಿಷೇಧವಾಗುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಟಿಕ್‌ಟಾಕ್ ಖರೀದಿಗೆ ಎಲಾನ್ ಮಸ್ಕ್ ಮುಂದಾಗಿದ್ದಾರೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ಈ ಬೆಳವಣಿಗೆ ಮೇಲೆ ಭಾರತವೂ ಕಣ್ಣಿಡಬೇಕಿದೆ.
 

TikTok may get banned in America Bytedance try to sell platform to Elon musk report ckm

ನವದೆಹಲಿ(ಜ.15)  ಭಾರತದಲ್ಲಿ ಚೀನಾ ಮೂಲದ ಶಾರ್ಟ್ ವಿಡಿಯೋ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ನಿಷೇಧಿಸಲಾಗಿದೆ. ಇದೀಗ ಅಮೆರಿಕದಲ್ಲೂ ಟಿಕ್‌ಟಾಕ್ ಬ್ಯಾನ್ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಅಮೆರಿಕ ಸರ್ಕಾರ ತಯಾರಿಗಳನ್ನು ಮಾಡಿಕೊಂಡಿದೆ. ಪ್ರಮುಖವಾಗಿ ರಾಷ್ಟ್ರೀಯ ಭದ್ರತೆಗೆ ಟಿಕ್‌ಟಾಕ್ ಸವಾಲಾಗುತ್ತಿದೆ ಎಂದು ಭದ್ರತಾ ಎಜೆನ್ಸಿಗಳು ವರದಿ ನೀಡಿದೆ. ಇದರ ಬೆನ್ನಲ್ಲೇ ಅಮೆರಿಕ ಚೀನಾ ಮೂಲದ ಟಿಕ್‌ಟಾಕ್ ಬ್ಯಾನ್ ಮಾಡಲು ಮುಂದಾಗಿದೆ. ಅಮೆರಿಕದಲ್ಲಿ ಬ್ಯಾನ್ ಆದರೆ ಟಿಕ್‌ಟಾಕ್ ಕಂಪನಿ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ಟಿಕ್‌ಟಾಕ್ ಕಂಪನಿ ಮಾರಾಟ ಮಾಡುವ ಸಾಧ್ಯತೆ ಇದೆ. ಟ್ವಿಟರ್ ಖರೀದಿಸಿದ ರೀತಿಯಲ್ಲೇ ಉದ್ಯಮಿ ಎಲಾನ್ ಮಸ್ಕ್ ಟಿಕ್‌ಟಾಕ್ ಖರೀದಿಸುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೀಗಾದರೆ ಭಾರತವೂ ಈ ಬೆಳವಣಿಗೆ ಮೇಲೆ ಕಣ್ಣಿಡಬೇಕು.

ರಾಷ್ಟ್ರೀಯ ಭದ್ರತೆ ವಿಚಾರವಾಗಿ ಟಿಕ್‌ಟಾಕ್ ಪ್ರಕರಣ ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿದೆ. ನಿಷೇಧ ಕುರಿತು ಶೀಘ್ರದಲ್ಲೇ ತೀರ್ಪು ಪ್ರಕಟಗೊಳ್ಳಲಿದೆ. ರಾಷ್ಟ್ರೀಯ ಭದ್ರತೆ ವಿಚಾರದಿಂದ ಅಮೆರಿಕ ಸುಪ್ರೀಂ ಕೋರ್ಟ್ ಟಿಕ್‌ಟಾಕ್ ಮುಂದುವರಿಯಲು ಅನುಮತಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಟಿಕ್‌ಟಾಕ್  ಪೇರೆಂಟ್ ಕಂಪನಿ ಬೈಟ್‌ಡ್ಯಾನ್ಸ್ ಇದೀಗ ಟಿಕ್‌ಟಾಕ್ ಉಳಿಸಿಕೊಳ್ಳಲು ಕಾನೂನು ಹೋರಾಟ ಮಾಡುತ್ತಿದೆ. ಇದರ ನಡುವೆ ನಿಷೇಧದ ಭೀತಿ ಹೆಚ್ಚಾಗುತ್ತಿರುವುದರಿಂದ ಮಾರಾಟ ಮಾಡಲು ಮುಂದಾಗಿದೆ.

16 ವರ್ಷದೊಳಗಿನ ಮಕ್ಕಳಿಗೆ ಫೇಸ್‌ಬುಕ್, ಇನ್‌ಸ್ಟಾ ಸೇರಿ ಸೋಶಿಯಲ್ ಮೀಡಿಯಾ ಬ್ಯಾನ್!

ಜನವರಿ 19ರೊಳಗೆ ಟಿಕ್‌ಟಾಕ್ ಮಾರಾಟ ಮಾಡದಿದ್ದರೆ ಅಮೆರಿಕದಲ್ಲಿ ಬೈಟ್‌ಡ್ಯಾನ್ಸ್ ಪ್ಲಾಟ್‌ಫಾರ್ಮ್ ಬ್ಯಾನ್ ಆಗಲಿದೆ. ಅಮೆರಿಕದಲ್ಲಿ ಆ್ಯಪಲ್ ಸ್ಟೋರ್, ಗೂಗಲ್ ಪ್ಲೇಸ್ಟೋರ್‌ನಿಂದ ಟಿಕ್‌ಟಾಕ್ ಸ್ಥಾನ ಕಳೆದುಕೊಳ್ಳಲಿದೆ. ಇಷ್ಟೇ ಅಲ್ಲ ಅಮರಿಕದ ಇಂಟರ್ನೆಟ್ ಸರ್ವೀಸ್ ನೀಡುವ ಸಂಸ್ಥೆಗಳು ಟಿಕ್‌ಟಾಕ್ ಬ್ಯಾನ್ ಮಾಡಲಿದೆ. ಹೀಗಾಗಿ ಯಾವುದೇ ರೀತಿಯಲ್ಲೂ ಅಮೆರಿಕದಲ್ಲಿ ಟಿಕ್‌ಟಾಕ್ ಲಭ್ಯವಿರುವುದಿಲ್ಲ.

ರಾಷ್ಟ್ರೀಯ ಭದ್ರತೆ ವಿಚಾರವಾಗಿರುವ ಕಾರಣ ಕಾನೂನು ಹೋರಾಟದಲ್ಲಿ ಚೀನಾದ ಟಿಕ್‌ಟಾಕ್‌ ಪರ ತೀರ್ಪು ಬರುವ ಸಾಧ್ಯತೆ ಇಲ್ಲ. ಇದೇ ವೇಳೆ ಚೀನಾ ಮೂಲದ ಮತ್ತೊಂದು ಪ್ಲಾಟ್‌ಫಾರ್ಮ್ ರೆಡ್ ನೋಟ್ ಇದೀಗ ಟಿಕ್‌ಟಾಕ್‌ಗೆ ಪ್ರತಿಸ್ಪರ್ಧಿಯಾಗಿ ಭಾರಿ ಸದ್ದು ಮಾಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಬೈಟ್‌ಡ್ಯಾನ್ಸ್ ಟಿಕ್‌ಟಾಕ್ ಪ್ಲಾಟ್‌ಫಾರ್ಮ್ ಮಾರಾಟ ಮಾಡುವ ಪ್ರಯತ್ನದಲ್ಲಿದೆ. ಟ್ವಿಟರ್ ಖರೀದಿಸದ ರೀತಿಯಲ್ಲೇ ಎಲಾನ್ ಮಸ್ಕ್ ಟ್ವಿಟರ್ ಖರೀದಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ. 

ಈ ಬೆಳವಣಿಗೆ ಭಾರತಕ್ಕೂ ಮಹತ್ವದ್ದಾಗಿದೆ. ಟಿಕ್‌ಟಾಕ್ ಪ್ಲಾಟ್‌ಫಾರ್ಮ್‌ನ್ನು ಎಲಾನ್ ಮಸ್ಕ್ ಖರೀದಿಸಿದರೆ ಭಾರತದಲ್ಲೂ ಕೆಲ ಬದಲಾವಣೆಯಾಗಲಿದೆ. ಪ್ರಮುಖವಾಗಿ ಬ್ಯಾನ್ ಆಗಿರುವ ಟಿಕ್‌ಟಾಕ್ ಹೊಸ ರೂಪದಲ್ಲಿ ಭಾರತ ಮರು ಪ್ರವೇಶಿಸುವ ಸಾಧ್ಯತೆ ಇದೆ. ಎಲಾನ್ ಮಸ್ಕ್ ಮಾಲೀಕತ್ವದಲ್ಲಿ ಟಿಕ್‌ಟಾಕ್ ಮುನ್ನಡೆದರೆ ಭಾರತಕ್ಕೆ ಹೊಸ ರೂಪದಲ್ಲಿ ಪ್ರವೇಶ ಪಡೆಯುವ ಎಲ್ಲಾ ಸಾಧ್ಯತೆ ಇದೆ.

ಟಿಕ್‌ಟಾಕ್‌ ಮಾಡುತ್ತಲೇ ಹೀರೋಯಿನ್ ಪಟ್ಟಕ್ಕೇರಿದ ಚೆಲುವೆ ಸಿಕ್ಕಾಪಟ್ಟೆ ಕ್ಯೂಟ್

Latest Videos
Follow Us:
Download App:
  • android
  • ios