Asianet Suvarna News Asianet Suvarna News

DVAC Raids Thangamani :ಅಕ್ರಮ ಸಂಪತ್ತು, ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಆರೋಪ; ತಂಗಮಣಿ ವಿರುದ್ಧ ಪ್ರಕರಣ

* ತಂಗಮಣಿ ವಿರುದ್ಧ ಆದಾಯಕ್ಕಿಂತ 4.85 ಕೋಟಿ ರೂ. ಹೆಚ್ಚುವರಿ ಸಂಪತ್ತು ಹೊಂದಿರೋ ಆರೋಪ
*ಕರ್ನಾಟಕದಲ್ಲಿರೋ ಆಸ್ತಿಗಳ ಮೇಲೂ ವಿಚಕ್ಷಣಾ ಹಾಗೂ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ಅಧಿಕಾರಿಗಳಿಂದ ದಾಳಿ
*ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು
 

DVAC books AIADMK Thangamani for disproportionate assets alleges crypto investments anu
Author
Bangalore, First Published Dec 15, 2021, 4:55 PM IST

ನವದೆಹಲಿ (ಡಿ.15): ಅಕ್ರಮ ಆಸ್ತಿ ಸಂಪಾದನೆ (disproportionate assets)ಹಾಗೂ ಕ್ರಿಪ್ಟೋಕರೆನ್ಸಿಗಳಲ್ಲಿ( Cryptocurrencies) ಬೃಹತ್ ಮೊತ್ತದ ಬೇನಾಮಿ ಹಣ ಹೂಡಿಕೆ ಮಾಡಿದ ಆರೋಪದ ಮೇಲೆ ತಮಿಳುನಾಡಿನ(Tamilnadu) ಮಾಜಿ ಸಚಿವ ಹಾಗೂ ಎಐಎಡಿಎಂಕೆ (AIADMK)ನಾಯಕ ಪಿ. ತಂಗಮಣಿ (P Thangamani) ವಿರುದ್ಧ ವಿಚಕ್ಷಣಾ ಹಾಗೂ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ((DVAC) ಬುಧವಾರ (ಡಿ.15) ಪ್ರಕರಣ ದಾಖಲಿಸಿದೆ. ತಮಿಳುನಾಡಿನ ಮಾಜಿ ಇಂಧನ ಸಚಿವರು ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ತಮಿಳುನಾಡು(Tamilnadu), ಕರ್ನಾಟಕ(Karnataka) ಹಾಗೂ ಆಂಧ್ರಪ್ರದೇಶದ (Andhrapradesh) ವಿವಿಧ ನಗರಗಳಲ್ಲಿರೋ ತಂಗಮಣಿ ಅವರ ನಿವಾಸಗಳು ಹಾಗೂ ಕಚೇರಿಗಳು ಸೇರಿದಂತೆ ಒಟ್ಟು 69 ಸ್ಥಳಗಳ ಮೇಲೆ ಡಿ.15ರಂದು ದಾಳಿ ನಡೆಸಲಾಗಿದ್ದು, ಶೋಧ ಕಾರ್ಯಗಳು ನಡೆಯುತ್ತಿವೆ ಎಂದು ಡಿವಿಎಸಿ (DVAC) ಅಧಿಕಾರಿಗಳು ತಿಳಿಸಿದ್ದಾರೆ. 

PM Narendra Modi: ಕ್ರಿಪ್ಟೋಕರೆನ್ಸಿಗಳಂತಹ ತಂತ್ರಜ್ಞಾನಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗದಿರಲಿ!

4.85 ಕೋಟಿ ರೂ. ಅಕ್ರಮ ಸಂಪತ್ತು
ತಂಗಮಣಿ ತಮ್ಮ ಆದಾಯಕ್ಕಿಂತ 4.85 ಕೋಟಿ ರೂ. ಹೆಚ್ಚುವರಿ ಸಂಪತ್ತು ಹೊಂದಿದ್ದಾರೆ ಎಂದು ಡಿವಿಎಸಿ ಎಫ್ಐ ಆರ್(FIR) ನಲ್ಲಿ ದಾಖಲಿಸಿದೆ. ತಂಗಮಣಿ ಹಾಗೂ ಅವರ ಕುಟುಂಬ  2016 ರಿಂದ 2020ರ ಅವಧಿಯಲ್ಲಿ 4.85 ಕೋಟಿ ರೂ. ಅಕ್ರಮ ಸಂಪತ್ತು ಗಳಿಸಿದ್ದಾರೆ ಎಂದು ಡಿವಿಎಸಿ ಹೇಳಿದೆ. ತಂಗಮಣಿ ಹಾಗೂ ಅವರ ಪುತ್ರ ಅವರ ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ. ಅಲ್ಲದೆ, ಅವರ ಸಂಬಂಧಿಗಳ ಹೆಸರಿನಲ್ಲಿ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಹಾಗೂ ಹೊರರಾಜ್ಯಗಳಲ್ಲೂ ಹೂಡಿಕೆ ಮಾಡಿದ್ದಾರೆ ಎಂದು ಎಫ್ ಐಆರ್ ನಲ್ಲಿ ಆರೋಪಿಸಲಾಗಿದೆ. 

ದಾಖಲೆಗಳಿಗಷ್ಟೇ ಸೀಮಿತವಾಗಿರೋ ಉದ್ಯಮ
ತಂಗಮಣಿ ಪುತ್ರನ ಹೆಸರಿನಲ್ಲಿ ಮುರುಗನ್ ಅರ್ಥ್ ಮೂವರ್ಸ್ ಎಂಬ ಬೃಹತ್ ಸಂಸ್ಥೆಯಿದೆ ಎಂಬುದು ದಾಖಲೆಗಳಿಗಷ್ಟೇ ಸೀಮಿತವಾಗಿದ್ದು, ವಾಸ್ತವದಲ್ಲಿ ಅಂಥ ಯಾವುದೇ ಉದ್ಯಮ ಕಾರ್ಯನಿರ್ವಹಿಸುತ್ತಿಲ್ಲ ಎಂದು ಎಫ್ ಐ ಆರ್ ನಲ್ಲಿ ಆರೋಪಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ವಿವಿಧ ಸೆಕ್ಷನ್ ಅಡಿಯಲ್ಲಿ ತಂಗಮಣಿ, ಅವರ ಪತ್ನಿ ಹಾಗೂ ಪುತ್ರನ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. 

Cryptocurrency:ಕ್ರಿಪ್ಟೋಕರೆನ್ಸಿ ಉತ್ತೇಜಿಸೋ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ: ವಿತ್ತ ಸಚಿವಾಲಯ ಸ್ಪಷ್ಟನೆ

ಕ್ರಿಪ್ಟೋಕರನ್ಸಿಯಲ್ಲಿ ಹೂಡಿಕೆ
ತಂಗಮಣಿ ಹಾಗೂ ಅವರ ಪುತ್ರ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಕ್ರಿಪ್ಟೋಕರೆನ್ಸಿಗಳಲ್ಲಿ ( Cryptocurrencies)) ಹೂಡಿಕೆ(Investment) ಮಾಡಿರೋ ಬಗ್ಗೆ ನಂಬಿಕಾರ್ಹ ಮೂಲಗಳಿಂದ ಮಾಹಿತಿ ಸಿಕ್ಕಿರೋದಾಗಿ  ವಿಚಕ್ಷಣಾ ಹಾಗೂ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ((DVAC) ತಿಳಿಸಿದೆ. ಭಾರತದಲ್ಲಿ ಈ ತನಕ ಕ್ರಿಪ್ಟೋಕರೆನ್ಸಿ ಮೇಲೆ ಸರ್ಕಾರ ನಿಯಂತ್ರಣ ಹೊಂದಿಲ್ಲವಾದ ಕಾರಣ ಇದ್ರಲ್ಲಿ ಹೂಡಿಕೆ ಮಾಡಿದ ಹಣದ ಮಾಹಿತಿ ಆದಾಯ ತೆರಿಗೆ ಇಲಾಖೆಗೆ(Income Tax Department) ಸಿಗೋದಿಲ್ಲ. ಹೀಗಾಗಿ ಅಕ್ರಮ ಹಣ ಸಂಪಾದಿಸಿದವರು ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡೋ ಸಾಧ್ಯತೆ ಹೆಚ್ಚಿದೆ. ಇದಕ್ಕೆ ತಂಗಮಣಿ ಪ್ರಕರಣವೇ ಈಗ ನಿದರ್ಶನವಾಗಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ನಿಯಂತ್ರಣಕ್ಕೆ ಕಾನೂನು ರೂಪಿಸದಿದ್ರೆ ಅಕ್ರಮ ಹಣ ಗಳಿಸಿದವರು ಇದ್ರಲ್ಲಿ ಹೂಡಿಕೆ ಮಾಡೋ ಸಾಧ್ಯತೆ ಹೆಚ್ಚಿದೆ ಎಂದು ಆರ್ ಬಿಐ(RBI) ಈ ಹಿಂದೆಯೇ ಕಳವಳ ವ್ಯಕ್ತಪಡಿಸಿತ್ತು. 
ತಮಿಳುನಾಡಿನಲ್ಲಿ ವಿಚಕ್ಷಣಾ ಹಾಗೂ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ದಾಳಿ ನಡೆಸಿದ ವಿರೋಧ ಪಕ್ಷದ ಐದನೇ ನಾಯಕ ತಂಗಮಣಿ ಅವರಾಗಿದ್ದಾರೆ. ಈ ಹಿಂದೆ ವಿರೋಧಪಕ್ಷದ ನಾಯಕರಾದ ವಿಜಯ್ ಭಾಸ್ಕರ್(Vijayabhaska), ಎಸ್ಪಿ ವೇಲುಮಣಿ(SP Velumani), ಕೆಸಿ ವೀರಮಣಿ (KC Veeramani) ಹಾಗೂ ಸಿ. ವಿಜಯ್ ಭಾಸ್ಕರ್ (C Vijayabaskar) ಅವರ ಆಸ್ತಿಗಳ ಮೇಲೆ  ವಿಚಕ್ಷಣಾ ಹಾಗೂ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ ದಾಳಿ ನಡೆಸಿತ್ತು. 

Follow Us:
Download App:
  • android
  • ios