Cryptocurrency:ಕ್ರಿಪ್ಟೋಕರೆನ್ಸಿ ಉತ್ತೇಜಿಸೋ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ: ವಿತ್ತ ಸಚಿವಾಲಯ ಸ್ಪಷ್ಟನೆ
ಕ್ರಿಪ್ಟೋಕರೆನ್ಸಿ ಕುರಿತು ಅನೇಕ ಗೊಂದಲಗಳು,ಅನುಮಾನಗಳು ಕಾಡುತ್ತಿರೋ ಬೆನ್ನಲ್ಲೇ ವಿತ್ತ ಸಚಿವಾಲಯದಿಂದ ಸ್ಪಷ್ಟನೆಯೊಂದು ಹೊರಬಿದ್ದಿದೆ. ಕ್ರಿಪ್ಟೋಕರೆನ್ಸಿಯನ್ನು ಉತ್ತೇಜಿಸಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳೋದಿಲ್ಲ ಎಂದು ಸರ್ಕಾರ ತಿಳಿಸಿದೆ.
ನವದೆಹಲಿ (ಡಿ.7): ದೇಶದಲ್ಲಿ ಕ್ರಿಪ್ಟೋಕರೆನ್ಸಿ (Cryptocurrency) ವಲಯವನ್ನು(Sector) ಉತ್ತೇಜಿಸೋ ಯಾವುದೇ ಯೋಚನೆ ಸರ್ಕಾರಕ್ಕಿಲ್ಲ ಎಂದು ವಿತ್ತ ಸಚಿವಾಲಯ (Finance Ministry) ಸಂಸತ್ತಿಗೆ (Parliament) ಮಾಹಿತಿ ನೀಡಿದೆ. ಈ ಮೂಲಕ ಅಧಿಕೃತ ಕ್ರಿಪ್ಟೋ ಕರೆನ್ಸಿ ಜಾರಿಗೆ ತರೋ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂಬ ಸುದ್ದಿಗಳಿಗೆ ತೆರೆ ಬಿದ್ದಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಬಳಿಕ ವಿತ್ತ ಸಚಿವಾಲಯದ ರಾಜ್ಯ ಸಚಿವ (MoS) ಪಂಕಜ್ ಚೌಧರಿ ಈ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ(India) ಕ್ರಿಪ್ಟೋಕರೆನ್ಸಿ ವಲಯವನ್ನು ಉತ್ತೇಜಿಸೋ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದರು.
ಕ್ರಿಪ್ಟೋಕರೆನ್ಸಿ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿಲ್ಲ, ಹೀಗಾಗಿ ಅದಕ್ಕೆ ಸಂಬಂಧಿಸಿ ಸರ್ಕಾರ ಯಾವುದೇ ಮಾಹಿತಿ(Information) ಸಂಗ್ರಹಿಸೋದಿಲ್ಲ.ಆದ್ರೆ ಈ ಚಳಿಗಾಲದ ಅಧಿವೇಶನದಲ್ಲಿ(Winter session) ಕ್ರಿಪ್ಟೋಕರೆನ್ಸಿ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿ (Digital currency) ನಿಯಂತ್ರಣ (regulation) ಮಸೂದೆಯನ್ನು (Bill) ಮಂಡಿಸಲು ಸರ್ಕಾರ ಯೋಚಿಸಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.
ಜಿಯೋ, ಏರ್ಟೆಲ್ , ವೋಡಾಫೋನ್ ಕಂಪನಿಗಳಿಗೆ BSNL ಟಕ್ಕರ್
ಆರ್ ಬಿಐ (RBI) ವಿರೋಧ
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಸಾಕಷ್ಟು ಸದ್ದು ಮಾಡುತ್ತಿದೆ. ಕರ್ನಾಟಕದಲ್ಲಿ(karnataka) ನಡೆದಿದೆ ಎನ್ನಲಾದ ಕ್ರಿಪ್ಟೋಕರೆನ್ಸಿ ಹಗರಣ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕ್ರಿಪ್ಟೋ ಕರೆನ್ಸಿಗೆ ಕಾನೂನು ಮಾನ್ಯತೆ ನೀಡಬಾರದು ಎಂಬುದು ಭಾರತೀಯ ರಿಸರ್ವ್ ಬ್ಯಾಂಕ್ (RBI)ನಿಲುವಾಗಿದೆ. ಇದನ್ನು ಅನೇಕ ಸಂದರ್ಭಗಳಲ್ಲಿ ಆರ್ ಬಿಐ ಸ್ಪಷ್ಟಪಡಿಸಿದೆ ಕೂಡ. ಕ್ರಿಪ್ಟೋ ಕರೆನ್ಸಿ ತನ್ನ ಹಿಡಿತಕ್ಕೊಳಪಡದ ಕಾರಣ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಕಳವಳವನ್ನು ಕೂಡ ಆರ್ ಬಿಐ ವ್ಯಕ್ತಪಡಿಸಿತ್ತು. ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಿರೋರ ಸಂಖ್ಯೆ ಹಾಗೂ ಅವರ ಆಸ್ತಿಯ ಬಗ್ಗೆ ಕೂಡ ನಿಖರ ಮಾಹಿತಿ ಕಲೆ ಹಾಕೋದು ಕಷ್ಟವಾಗುತ್ತದೆ ಎಂಬುದು ಆರ್ ಬಿಐ ಅಭಿಪ್ರಾಯವಾಗಿದೆ. ಈ ಹಿಂದೆ ಕ್ರಿಪ್ಟೋ ಕರೆನ್ಸಿ ಬಗ್ಗೆ ಸಾಕಷ್ಟು ಗೊಂದಲ ಏರ್ಪಟ್ಟು ದೂರುಗಳು ಕೇಳಿಬಂದಾಗ ಕ್ರಿಪ್ಟೋ ಕರೆನ್ಸಿ ಹಾಗೂ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ 2021ರ ಮೂಲಕ ಆರ್ ಬಿಐ ಮುಖಾಂತರ ಅಧಿಕೃತ ಡಿಜಿಟಲ್ ಕರೆನ್ಸಿ ರಚನೆಗೆ ನೀತಿ ರೂಪಿಸಲಾಗೋದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಅತೀಹೆಚ್ಚು ಫೋರೆಕ್ಸ್ ಸಂಗ್ರಹ ಹೊಂದಿರೋ ಜಗತ್ತಿನ ನಾಲ್ಕನೇ ರಾಷ್ಟ್ರ ನಮ್ಮದು: ಸಚಿವ ಚೌಧರಿ
IPo ಮೂಲಕ 52,759 ಕೋಟಿ ರೂ. ಸಂಗ್ರಹ
ಈ ಹಣಕಾಸು ವರ್ಷದ ಅಕ್ಟೋಬರ್ ತನಕ 61 ಕಂಪನಿಗಳು IPOಗಳ ಮೂಲಕ 52,759 ಕೋಟಿ ರೂ. ಸಂಗ್ರಹಿಸಿವೆ ಎಂಬ ಮಾಹಿತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ನೀಡಿದ್ದಾರೆ. ಈ 61 ಕಂಪನಿಗಳಲ್ಲಿ 34 ಸಣ್ಣ ಹಾಗೂ ಮಧ್ಯಮ ಗಾತ್ರದ ಸಂಸ್ಥೆಗಳಾಗಿವೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ. 21 ನೇ ಹಣಕಾಸು ಸಾಲಿನಲ್ಲಿ 56 ಕಂಪನಿಗಳು IPO ಮೂಲಕ 31,060ರೂ. ಸಂಗ್ರಹಿಸಿವೆ. ಇವುಗಳಲ್ಲಿ 27 ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಾಗಿವೆ ಎಂಬ ಸೆಬಿ ಮಾಹಿತಿಯನ್ನು ಉಲ್ಲೇಖಿಸುತ್ತ ತಿಳಿಸಿದರು. 10 ಹೆಲ್ತ್ ಕೇರ್ ಸಂಸ್ಥೆಗಳು ಈ ಬಾರಿ IPOನಲ್ಲಿ ಭಾಗವಹಿಸಿದ್ದವು. ಸಿಮೆಂಟ್/ ನಿರ್ಮಾಣ ಕ್ಷೇತ್ರದ 6 ಹಾಗೂ ಆಹಾರ ಸಂಸ್ಕರಣ ಕ್ಷೇತ್ರದ 4 ಕಂಪನಿಗಳು IPOನಲ್ಲಿ ಪಾಲ್ಗೊಂಡಿದ್ದವು. ಪೇಟಿಎಂ IPOನಿಂದ ಹೂಡಿಕೆದಾರರಿಗೆ ಯಾವುದೇ ಸಮಸ್ಯೆಯುಂಟಾಯಿತಾ ಎಂಬ ಪೂರಕ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್ ಕಂಪನಿ ಬಯಸಿದ್ದಕ್ಕಿಂತ ಹೆಚ್ಚಿನ ಚಂದಾದಾರರು ಸಿಕ್ಕಿದ್ದಾರೆ ಎನ್ನೋ ಮೂಲಕ ನಕಾರಾತ್ಮಕ ಧಾಟಿಯ ಉತ್ತರ ನೀಡಿದರು.