Asianet Suvarna News Asianet Suvarna News

PM Narendra Modi: ಕ್ರಿಪ್ಟೋಕರೆನ್ಸಿಗಳಂತಹ ತಂತ್ರಜ್ಞಾನಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗದಿರಲಿ!

*ಕ್ರಿಪ್ಟೋಕರೆನ್ಸಿ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಲು ಬಳಸಿ
*ತಂತ್ರಜ್ಞಾನಗಳಿಗೆ  ಜಾಗತಿಕ ಮಾನದಂಡ ಅಗತ್ಯ : ಪ್ರಧಾನಿ
*Summit for Democracyಯಲ್ಲಿ ಮೋದಿ ಅಭಿಪ್ರಾಯ

Cryptocurrencies should empower democracy not undermine it said PM Modi at Summit for Democracy mnj
Author
Bengaluru, First Published Dec 11, 2021, 10:48 AM IST

ನವದೆಹಲಿ(ಡಿ. 11): ಭಾರತ ಸೇರಿದಂತೆ ಪ್ರಪಂಚದಾದ್ಯಂತ ಕ್ರಿಪ್ಟೋಕರೆನ್ಸಿ ಅಥವಾ ಡಿಜಿಟಲ್‌ ಕರೆನ್ಸಿ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಹಲವು ಜಾಗತಿಕ ನಾಯಕರು ಈ ಬೆನ್ನಲ್ಲೇ  ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ  ಪ್ರಧಾನಿ ಮೋದಿ ಕೂಡ (PM Narendra Modi)  ಕ್ರಿಪ್ಟೋಕರೆನ್ಸಿ Cryptocurrencies) ಬಗ್ಗೆ ಹಲವು ಅಭಿಪ್ರಾಯಗಳನ್ನು  ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕ್ರಿಪ್ಟೋಕರೆನ್ಸಿ ಬಳಕೆಯಿಂದ ಯುವ ಸಮೂಹ ದಾರಿ ತಪ್ಪದಿರಲಿ ಎಂದು ಪ್ರಧಾನಿ ಎಚ್ಚರಿಸಿದ್ದರು. ಈಗ  ಕ್ರಿಪ್ಟೋಕರೆನ್ಸಿಗಳಂತಹ ಉದಯೋನ್ಮುಖ ತಂತ್ರಜ್ಞಾನಗಳನ್ನು ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಲು ಬಳಸಬೇಕು ವಿನಃ ಅದನ್ನು ದುರ್ಬಲಗೊಳಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಡಿಸೆಂಬರ್ 10) ಹೇಳಿದ್ದಾರೆ. 

"ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಲು ಸಾಮಾಜಿಕ ಮಾಧ್ಯಮ ಮತ್ತು ಕ್ರಿಪ್ಟೋಕರೆನ್ಸಿಗಳಂತಹ ಉದಯೋನ್ಮುಖ ತಂತ್ರಜ್ಞಾನಗಳಿಗೆ ನಾವು ಜಂಟಿಯಾಗಿ ಜಾಗತಿಕ ಮಾನದಂಡಗಳನ್ನು ರೂಪಿಸಬೇಕು.  ಆದರೆ ಅದರ ತಪ್ಪು ಬಳಕೆಯಿಂದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಬಾರದು" ಎಂದು ಮೋದಿ ವರ್ಚುವಲ್ "ಪ್ರಜಾಪ್ರಭುತ್ವದ ಶೃಂಗಸಭೆ" (Summit for Democracy) ಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಕಾರ್ಯಕ್ರಮವನ್ನು ಯುಎಸ್ ಅಧ್ಯಕ್ಷ ಜೋ ಬಿಡೆನ್ (Joe Biden) ಆಯೋಜಿಸಿದ್ದರು.

Cryptocurrency ಬಳಕೆಯಿಂದ ಯುವ ಸಮೂಹ ದಾರಿ ತಪ್ಪದಿರಲಿ!

ಇತ್ತೀಚೆಗೆ ಪ್ರಧಾನಿ ಮೋದಿ  ಕ್ರಿಪ್ಟೋಕರೆನ್ಸಿಯು "ನಮ್ಮ ಯುವಕರನ್ನು ಹಾಳುಮಾಡುವ ರೀತಿಯಲ್ಲಿ ತಪ್ಪು ಕೈಯಲ್ಲಿ ಕೊನೆಗೊಳ್ಳುವುದಿಲ್ಲ" ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದರು. ಸಿಡ್ನಿ ಸಂವಾದದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಪ್ಟೋಕರೆನ್ಸಿಗಳು (Cryptocurrency) "ತಪ್ಪು ಕೈಗೆ ಬೀಳಬಾರದು ಮತ್ತು ನಮ್ಮ ಯುವಕರನ್ನು (Youth) ಹಾಳು ಮಾಡಬಾರದು" ಎಂದು ಹೇಳಿದ್ದರು. ಜತೆಗೆ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಎಲ್ಲಾ ಪ್ರಜಾಪ್ರಭುತ್ವ (Democratic) ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದರು. 

WhatsApp Cryptocurrency Payment: ಶೀಘ್ರದಲ್ಲೇ ವಾಟ್ಸಪ್ ಚಾಟ್‌ನಲ್ಲೇ‌ ಕ್ರಿಪ್ಟೋಕರೆನ್ಸಿ ಬಳಸಿ ಹಣ ಕಳುಹಿಸಿ!

ಕಳೆದ ತಿಂಗಳು, ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆಗಳು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಗೆ ದಾರಿಯಾಗಬಹುದು ಎಂಬ ಕಳವಳಗಳ ನಡುವೆ ಕ್ರಿಪ್ಟೋಕರೆನ್ಸಿಗಳ ಭವಿಷ್ಯದ ಬಗ್ಗೆ ಚರ್ಚಿಸಲು ಸಭೆ ನಡೆದಿತ್ತು. ಪ್ರಧಾನ ಮಂತ್ರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ

ದೇಶಾದ್ಯಂತ ಬಿಟ್‌ಕಾಯಿನ್‌ (Bitcoin) ಮುಂತಾದ ಕ್ರಿಪ್ಟೋಕರೆನ್ಸಿಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವಾಗಲೇ, ಈ ಮಾದರಿಯ ವರ್ಚುವಲ್‌ ಹಣಕ್ಕೆ (Virtual Money) ಕರೆನ್ಸಿಯ ಮಾನ್ಯತೆ ನೀಡುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಕರ್ನಾಟಕದ ಸಂಸದರಾದ ಸುಮಲತಾ ಮತ್ತು ಡಿ.ಕೆ.ಸುರೇಶ್‌  ಬಿಟ್‌ಕಾಯಿನ್‌ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Finance Minister Nirmala Sitharaman), ‘ಬಿಟ್‌ಕಾಯಿನ್‌ಗೆ ಭಾರತದಲ್ಲಿ ಕರೆನ್ಸಿಯ ಮಾನ್ಯತೆ ನೀಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ಜೊತೆಗೆ, ಕೇಂದ್ರ ಸರ್ಕಾರವು ಬಿಟ್‌ಕಾಯಿನ್‌ ವ್ಯವಹಾರಗಳ ಬಗ್ಗೆ ಯಾವುದೇ ಮಾಹಿತಿ ಸಂಗ್ರಹಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

Cryptocurrency Deadline : ಕ್ರಿಪ್ಟೋ ಕರೆನ್ಸಿ , ಬಿಟ್ ಕಾಯಿನ್ ಹೊಂದಿದವರಿಗೆ ಡೆಡ್‌ಲೈನ್?

ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ (Parliament Winter Session) ಕೇಂದ್ರ ಸರ್ಕಾರವು ದೇಶದಲ್ಲಿ ಕೆಲವೇ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು (Cryptocurrency) ಬಿಟ್ಟು ಇನ್ನೆಲ್ಲ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಕ್ರಿಪ್ಟೋಕರೆನ್ಸಿ ಆ್ಯಂಡ್ ರೆಗ್ಯುಲೇಶನ್‌ ಆಫ್‌ ಅಫಿಷಿಯಲ್‌ ಡಿಜಿಟಲ್‌ ಕರೆನ್ಸಿ ಮಸೂದೆ ಮಂಡಿಸಲು ಚಿಂತನೆ ನಡೆಸಿದೆ. ತನ್ಮೂಲಕ ಕೆಲ ಕ್ರಿಪ್ಟೋಕರೆನ್ಸಿಗೆ ಆರ್‌ಬಿಐ ಮೂಲಕ ಡಿಜಿಟಲ್‌ ಕರೆನ್ಸಿಯ ಮಾನ್ಯತೆ ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ. ಅದರ ನಡುವೆಯೇ ನಿರ್ಮಲಾ ಈ ಸ್ಪಷ್ಟನೆ ನೀಡಿರುವುದು ಕುತೂಹಲ ಮೂಡಿಸಿದೆ

Follow Us:
Download App:
  • android
  • ios