ಭಾರತದೊಂದಿಗೆ ‘ಸ್ಟುಪಿಡ್ ಟ್ರೇಡ್’ ಎಂದ ಟ್ರಂಪ್: ಅಮೆರಿಕ ಅಧ್ಯಕ್ಷೆ ‘ಹೈ ಜಂಪ್’!
ಭಾರತದೊಂದಿಗಿನ ವ್ಯಾಪಾರವನ್ನು ಸ್ಟುಪಿಡ್ ಟ್ರೇಡ್ ಎಂದ ಟ್ರಂಪ್| ಅಮೆರಿಕದ ವಸ್ತುಗಳಿಗೆ ಭಾರತ-ಚೀನಾದಿಂದ ಅಧಿಕ ಆಮದು ಸುಂಕ| ಅಮೆರಿಕದ ಕೆಲವು ವಸ್ತುಗಳಿಗೆ ಶೇ.100ರಷ್ಟು ಆಮದು ಸುಂಕ ವಿಧಿಸುತ್ತಿರುವ ಭಾರತ| ಭಾರತವನ್ನು ವಿಶ್ವದಲ್ಲೇ ಅತ್ಯಂತ ಹೆಚ್ಚು ಸುಂಕ ವಿಧಿಸುವ ರಾಷ್ಟ್ರ ಎಂದ ಅಮೆರಿಕ ಅಧ್ಯಕ್ಷ| ಪ್ರಧಾನಿ ಮೋದಿ ಈ ನೀತಿ ಬದಲಿಸಲಿದ್ದಾರೆ ಎಂಬ ಭರವಸೆ ಇದೆ ಎಂದ ಟ್ರಂಪ್|
ವಾಷಿಂಗ್ಟನ್ (ಏ.07): ತನ್ನ ವಸ್ತುಗಳಿಗೆ ಭಾರತ ಮತ್ತು ಚೀನಾ ಅಧಿಕ ತೆರಿಗೆ ವಿಧಿಸುತ್ತಿದ್ದು, ಭಾರತ-ಚೀನಾದೊಂದಿಗಿನ ವ್ಯಾಪಾರವನ್ನು ‘ಸ್ಟುಪಿಡ್ ಟ್ರೇಡ್'(ಮೂರ್ಖ ವ್ಯಾಪಾರ ನೀತಿ)ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.
ಅಮೆರಿಕದ ಕೆಲವು ವಸ್ತುಗಳಿಗೆ ಭಾರತ ಶೇ.100ರಷ್ಟು ಆಮದು ಸುಂಕ ವಿಧಿಸುತ್ತಿದ್ದು, ಭಾರತದಿಂದ ಆಮದಾಗುವ ಅದೇ ವಸ್ತುಗಳಿಗೆ ಅಮೆರಿಕ ಯಾವುದೇ ಸುಂಕ ವಿಧಿಸುತ್ತಿಲ್ಲ ಎಂದು ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ.
ಭಾರತವನ್ನು ವಿಶ್ವದಲ್ಲೇ ಅತ್ಯಂತ ಹೆಚ್ಚು ಸುಂಕ ವಿಧಿಸುವ ರಾಷ್ಟ್ರ ಎಂದು ಜರೆದಿರುವ ಟ್ರಂಪ್, ಈ ಮೂರ್ಖ ವ್ಯಾಪಾರ ನೀತಿಯನ್ನು ತಮ್ಮ ಆಡಳಿತ ಸಹಿಸುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇದೇ ವೇಳೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೂ ಅಧಿಕ ಸುಂಕ ವಿಧಿಸುವ ಮುನ್ಸೂಚನೆ ನೀಡಿರುವ ಟ್ರಂಪ್, ಭಾರತದ ತಮ್ಮ ಗೆಳೆಯ(ಪ್ರಧಾನಿ ಮೋದಿ) ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.