Asianet Suvarna News Asianet Suvarna News

Mango Export ರೈತನ ತೋಟದಿಂದ ನೇರವಾಗಿ ಅಮೆರಿಕಾಗೆ ಮಾವಿನ ಹಣ್ಣು, ಭಾರತದ ಮಾವು ರಫ್ತಿಗೆ ಅನುಮೋದನೆ ಪಡೆದ ಕೇಂದ್ರ!

  • ಭಾರತದ ರಸಭರಿತ ಮಾವಿನ ಹಣ್ಣು ಅಮೆರಿಕಾಗ ರಫ್ತು
  • ಈ ಹಿಂದಿನ ಎಲ್ಲಾ ದಾಖಲೆ ಮುರಿಯಲಿದೆ ಈ ಬಾರಿಯ ಮಾವು ರಫ್ತು
  • 2017-20ರ ಅವಧಿಯಲ್ಲಿ 3,000 ಮೆಟ್ರಿಕ್ ಟನ್ ಮಾವು USAಗೆ ರಫ್ತು
Central government secures approval for export of Indian mangoes to USA this season ckm
Author
Bengaluru, First Published Jan 11, 2022, 6:10 PM IST

ನವದೆಹಲಿ(ಜ.11):  ಭಾರತದ ಸಣ್ಣ ಹಳ್ಳಿಯಲ್ಲಿ ರೈತ ಬೆಳೆದ ಮಾವಿನ ಹಣ್ಣಿಗೆ ಮಾರುಕಟ್ಟೆ ಇಲ್ಲ, ಬೆಲೆ ಇಲ್ಲ, ಖರೀದಿದಾರರಿಲ್ಲ ಎಂದು ಚಿಂತೆ ಪಡುವ ಅಗತ್ಯವಿಲ್ಲ. ಕಾರಣ ಭಾರತದ ರಸಭರಿತ ಮಾವಿಗೆ(Indian mangoes) ಭಾರಿ ಬೇಡಿಕೆ ಇದೆ. ಈ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.  ಭಾರತದ ಮಾವಿನ ಹಣ್ಣನ್ನು ಅಮೆರಿಕಾಗೆ(America) ರಫ್ತು ಮಾಡಲು USA ಕೃಷಿ ಇಲಾಖೆಯಿಂದ ಅನುಮೋದನೆ ಪಡೆದುಕೊಂಡಿದೆ.

ಕೇಂದ್ರ ಸರ್ಕಾರ(Government of India) ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (USDA)ಇಲಾಖೆಯಿಂದ ರಫ್ತು (Export) ಅನುಮೋದನೆ ಪಡೆದುಕೊಂಡಿದೆ. ಇದರಿಂದ ಭಾರತದ ಮಾವಿನ ಹಣ್ಣಿನ ಸ್ವಾದ ಇದೀಗ ಅಮೆರಿಕದಲ್ಲಿ ಮನೆಮಾತಾಗಲಿದೆ. ಅಮೆರಿಕದಲ್ಲಿರುವ ಗ್ರಾಹಕರು ಭಾರತದ ಅತ್ಯುತ್ತಮ ಗುಣಮಟ್ಟದ ಮಾವಿನ ಹಣ್ಣನ್ನು ಸವಿಯುವ ಅವಕಾಶ ಪಡೆದಿದ್ದಾರೆ. ಇದರ ಜೊತೆಗೆ ಭಾರತದ ರೈತನ ಮಾರುಕಟ್ಟೆ(Fruits Market) ಮತ್ತಷ್ಟು ವಿಸ್ತಾರವಾಗಿದೆ.

ಕೋಲಾರದಿಂದ 250 ಟನ್ ಮಾವು ಹೊತ್ತು ದೆಹಲಿಗೆ ತೆರಳಿದ ಕರ್ನಾಟಕದ ಮೊದಲ ಕಿಸಾನ್ ರೈಲು!

2017ರಿಂದ 2020ರ ವರೆಗೆ ಭಾರತ ಅತ್ಯುತ್ತಮ ಗುಣಮಟ್ಟದ ಮಾವಿನ ಹಣ್ಣನ್ನು ಅಮೆರಿಕಾಗೆ ರಫ್ತು ಮಾಡಿದೆ. ಆದರೆ 2020ರ ಬಳಿಕ ಇದು ಸ್ಥಗಿತಗೊಂಡಿತ್ತು. ಕೊರೋನಾ ವೈರಸ್ ಕಾರಣ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಹಲವು ನಿರ್ಬಂಧಗಳು ಜಾರಿಯಾಗಿತ್ತು. ಹೀಗಾಗಿ ಅಮೆರಿಕದ USDA ಅಧಿಕಾರಿಗಳು ಭಾರತಕ್ಕೆ ಆಗಮಿಸಿ ಭಾರತದ ಮಾವಿನ ಹಣ್ಣಿನ ಗುಣಮಟ್ಟ ಪರೀಕ್ಷಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಳೆದ ವರ್ಷ ಭಾರತದ ಮಾವಿನ ಹಣ್ಣ ರಫ್ತು ಸ್ಥಗಿತಗೊಂಡಿತ್ತು.

2021ರ ನವೆಂಬರ್ 23 ರಂದು ಭಾರತ ಹಾಗೂ ಅಮೆರಿಕ, ಯುಎಸ್ಎ ಟ್ರೇಡ್ ಪಾಲಿಸಿ ಫೋರಮ್ (TPF) ಅಡಿಯಲ್ಲಿ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಪ್ರಕಾರ ಭಾರತದ ಹಲವು ಕೃಷಿ ಬೆಳೆ ಹಾಗೂ ಉತ್ಪನ್ನಗಳನ್ನು ಅಮೆರಿಕ ಮಾರುಕಟ್ಟೆಗೆ ರಫ್ತು ಮಾಡಲು ಸಹಿ ಹಾಕಿದೆ. ಇದರ ಅಂಗವಾಗಿ ಇದೀಗ ಭಾರತದ ಯಾವುದೇ ಮೂಲೆಯಲ್ಲಿ ಬೆಳೆದ ಅತ್ಯುತ್ತಮ ಗುಣಮಟ್ಟದ ಮಾವಿನ ಹಣ್ಣನ್ನು ಅಮೆರಿಕ ಕಳುಹಿಸಬಹುದು. 

ಪ್ರಧಾನಿ ಮೋದಿಗೆ ಬಂಗಾಳದ ಸಿಹಿ ಮಾವು ಕಳಿಸಿದ ದೀದಿ..!

2021ರ ನವೆಂಬರ್ ತಿಂಗಳಲ್ಲಿ ಮಾಡಿದ ಒಪ್ಪದಿಂದ ಭಾರತ ಮಾವು ಮಾತ್ರವಲ್ಲ, ದಾಳಿಂಬೆ ಸೇರಿದಂತೆ ಕೆಲ ಹಣ್ಣುಗಳಿಗೆ ಅಮೆರಿಕ ಮಾರುಕಟ್ಟೆ ತೆರೆದುಕೊಂಡಿದೆ. ಇನ್ನು ಅಮೆರಿಕದಿಂದ ಭಾರತ ಚೆರ್ರಿ ಸೇರಿದಂತೆ ಇತರ ಕೆಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಿದೆ. ಇದರ ಪರಿಣಾಮ ಭಾರತದ ರೈತನಿಗೆ ವಿಪುಲವಾದ ಮಾರುಕಟ್ಟೆ ಲಭ್ಯವಾಗಿದ್ದು, ಬೆಳೆದ ಫಸಲಿಗೆ ತಕ್ಕ ಆದಾಯ ಖಾತ್ರಿ ಸಿಗಲಿದೆ.

ಅಲ್ಫೋಪೋನ್ಸೋ ಸೇರಿದಂತೆ ಹಲವು ತಳಿಯ ರಸಭರಿತ ಮಾವು ಭಾರತದಲ್ಲಿದೆ. ಬಹುತೇಕ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಮಾವಿನ ಸೀಸನ್ ಆರಂಭಗೊಳ್ಳಲಿದೆ. 2017-18ರ ಸಾಲಿನಲ್ಲಿ ಭಾರತ 800 ಮೆಟ್ರಿಕ್ ಟನ್ ಮಾವು ಅಮೆರಿಕಾಗೆ ರಫ್ತು ಮಾಡಿದೆ. ಇನ್ನು 2018-19ರ ಸಾಲಿನಲ್ಲಿ ಈ ಪ್ರಮಾಣ 951 ಮೆಟ್ರಿಕ್ ಟನ್ ಹಾಗೂ 2019-20ರ ಸಾಲಿನಲ್ಲಿ 1035 ಮಟ್ರಿಕ್ ಟನ್ ಮಾವನ್ನು ಅಮೆರಿಕಾಗೆ ರಫ್ತು ಮಾಡಿದೆ. 2017-20ರ ಅವಧಿಯಲ್ಲಿ ಭಾರತ ಒಟ್ಟು 3,000 ಮೆಟ್ರಿಕ್ ಟನ್ ಮಾವು ಅಮೆರಿಕಾಗೆ ರಫ್ತು ಮಾಡಿದೆ.

ಉತ್ತರ ಪ್ರದೇಶದ ಮಾವು ಇಷ್ಟ ಇಲ್ಲ ಎಂದ ರಾಹುಲ್: ಯೋಗಿ ಕೊಟ್ಟ ಉತ್ತರ ಇದು

2019-20ರ ಸಾಲಿನ ರಫ್ತು ದಾಖಲೆಯನ್ನು ಈ ಬಾರಿ ಭಾರತ ಮುರಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. USDA ಅನುಮೋದನೆಯಿಂದ ಮಹಾರಾಷ್ಟ್ರ, ಉತ್ತರ ಪ್ರದೇಶ , ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿನ ಸಾಂಪ್ರಾದಾಯಿಕ ಹಾಗೂ ಗುಣಮಟ್ಟದ ಮಾವುಗಳ ರಫ್ತಿಗೆ ದಾರಿ ಮಾಡಿಕೊಡಲಿದೆ. ಈಗಾಗಲೇ  USDA ಪರೀಕ್ಷಿಸಿ ಅನುಮೋದನೆ ನೀಡಿರುವ ಲಾಂಗ್ರಾ, ಚೌಸಾ, ದುಶೆಹ್ರಿ, ಫಾಜ್ಲಿ  ಸೇರಿದಂತೆ ಹಲವು ತಳಿಗಳ ಮಾವಿನ ಹಣ್ಣು ಅಮೆರಿಕಾಗೆ ರಫ್ತಾಗಲಿದೆ. ಉತ್ತರ ಹಾಗೂ ಪೂರ್ವ ಭಾರತ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದ ಮಾವುಗಳಿಗೆ ಅಮೆರಿಕದಲ್ಲಿ ಭಾರಿ ಬೇಡಿಕೆ ಇದೆ. ಇದರ ಜೊತೆಗೆ ಅಮೆರಿಕ USDA ಬಯಸುವ ಗುಣಮಟ್ಟದ ಮಾವು ಭಾರತದ ಯಾವುದೇ ಹಳ್ಳಿಯಲ್ಲಿದ್ದರೂ ರಫ್ತಿಗೆ ಅರ್ಹವಾಗಿದೆ.
 

Follow Us:
Download App:
  • android
  • ios