ಉತ್ತರ ಪ್ರದೇಶದ ಮಾವು ಇಷ್ಟ ಇಲ್ಲ ಎಂದ ರಾಹುಲ್: ಯೋಗಿ ಕೊಟ್ಟ ಉತ್ತರ ಇದು
- ಉತ್ತರಪ್ರದೇಶದ ಮಾವು ಇಷ್ಟ ಇಲ್ಲ ಎಂದ ರಾಹುಲ್ ಗಾಂಧಿ
- ಸಿಎಂ ಯೋಗಿ ಕೊಟ್ಟ ಉತ್ತರ ಹೇಗಿತ್ತು ನೋಡಿ
ಲಕ್ನೋ(ಜು.24): ತನ್ನ ಒಂದು ಹೇಳಿಕೆಯಲ್ಲಿ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಮಾವಿನಹಣ್ಣುಗಳನ್ನು ಇಷ್ಟಪಡುವುದಿಲ್ಲ ಆದರೆ ಆಂಧ್ರಪ್ರದೇಶದವರನ್ನು ಪ್ರೀತಿತ್ತೇನೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಹುಲ್ ಗಾಂಧಿಯವರ 'ವಿಭಜಕ ಚಿಂತನೆ-ಪ್ರಕ್ರಿಯೆ' ಯ ಬಗ್ಗೆ ಇಡೀ ರಾಷ್ಟ್ರಕ್ಕೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.
ಸತ್ಯವೇ ಗುರು ಎಂದ ರಾಹುಲ್: ನಿಮಗ್ಯಾರೂ ಗುರು ಇಲ್ಲ, ಹಾಗಾಗೇ ದಡ್ಡರಂತೆ ವರ್ತಿಸ್ತೀರಿ!
ರಾಹುಲ್ ಗಾಂಧಿ ಅವರ ಮಾವಿನ ಹಣ್ಣಿನ ಮಾತಿಗೆ ಈಗ ತೀವ್ರ ಟೀಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಉತ್ತರ ಪ್ರದೇಶದ ಮಾವುಗಳನ್ನು ತಿರಸ್ಕರಿಸುವ ಮೂಲಕ ರಾಹುಲ್ ಗಾಂಧಿ ವಿಭಜಕ ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಅವರಲ್ಲಿ ಅವರ ಫೇವರೇಟ್ ಮಾವಿನ ಹಣ್ಣಿನ ಕುರಿತು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು ನನಗೆ ಉತ್ತರ ಪ್ರದೇಶದ ಮಾವುಗಳು ಇಷ್ಟವಿಲ್ಲ, ಆಂಧ್ರಪ್ರದೇಶದ ಮಾವು ಇಷ್ಟ. ಇದು ರುಚಿಯ ವಿಷಯ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಗೋರಕ್‌ಪುರ್ ರವಿ ಕಿಷನ್ ಅವರು ರಾಹುಲ್‌ಗೆ ಉತ್ತರಪ್ರದೇಶದ ಮಾವು ಇಷ್ಟವಿಲ್ಲ, ಉತ್ತರಪ್ರದೇಶಕ್ಕೆ ಕಾಂಗ್ರೆಸ್ ಇಷ್ಟವಿಲ್ಲ ಎಂದಿದ್ದಾರೆ.