ಪ್ರಧಾನಿ ಮೋದಿಗೆ ಬಂಗಾಳದ ಸಿಹಿ ಮಾವು ಕಳಿಸಿದ ದೀದಿ..!
- ಪ್ರಧಾನಿ ಮೋದಿಗೆ ಸಿಹಿ ಮಾವು ಕಳಿಸಿದ ದೀದಿ
- ಪ್ರಧಾನಿಗೆ ಪಶ್ಚಿಮ ಬಂಗಾಳದ ರಸ ಭರಿತ ಹಣ್ಣ ಕಳಿಸಿದ ಸಿಎಂ ಮಮತಾ ಬ್ಯಾನರ್ಜಿ
ನವದೆಹಲಿ(ಜು.01): ರಾಜಕೀಯ ಸಿಹಿ-ಕಹಿ ಎನ್ನುವುದರಲ್ಲಿ ಡೌಟೇ ಇಲ್ಲ ಬಿಡಿ. ಒಮ್ಮೆ ಪರಸ್ಪರ ತೀವ್ರ ವಾಗ್ದಾಳಿ ನಡೆಸಿ ಮತ್ತೆಲ್ಲಿಯೋ ಸಿಕ್ಕಾಗ ಕೈಕುಲುಕಿ ನಗುತ್ತಾರೆ. ಅರೆ ಹೀಗೂ ಇದ್ಯಾ ಅಂತ ಜನ ಅಚ್ಚರಿಪಟ್ಟರೂ ರಾಜಕಾರಣಿಗಳು ಇರುವುದು ಹೀಗೆಯೇ.
ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯವಿದ್ದರೂ ವೈಯಕ್ತಿಕವಾಗಿ ಬಹಳಷ್ಟು ಚಂದದ ಬಾಂಡ್ ಇಟ್ಟುಕೊಂಡಿರುತ್ತಾರೆ. ಎಲೆಕ್ಷನ್ ಸೀಸನ್ ಪಕ್ಷಗಳ ನಡುವೆ ಹೇಗೆ ಕಹಿ ಬಾಂಡ್ ಹುಟ್ಟು ಹಾಕಿತ್ತೋ, ಈಗ ಮಾವಿನ ಸೀಸನ್ ಬಂದು ಆ ಕಹಿಯನ್ನೆಲ್ಲ ದೂರ ಮಾಡಿದೆ. ಹೇಗೆ ಅಂತೀರಾ..?
ವಿಧಾನಸಭಾ ಚುನಾವಣೆ ಸಂದರ್ಭ ಪಶ್ಚಿಮ ಬಂಗಾಳಕ್ಕೆ ಮಮತಾ ಸಮರ ಸುಲಭ ಇರಲಿಲ್ಲ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆಯೂ ರಾಜ್ಯ ಮತ್ತು ಕೆಂದ್ರದ ನಡುವಿನ ಕಹಿ ಸಂಬಂಧ ಹಾಗೆಯೇ ಮುಂದುವರಿದಿತ್ತು.
ಮೋದಿ ಯಾಕೆ ಕ್ಲೀನ್ ಶೇವ್ ಮಾಡಲ್ಲ ? ಇಲ್ಲಿದೆ ಆನ್ಸರ್
ರಾಜಕೀಯ ವಿಚಾರದಲ್ಲಿ ದೀದಿ ಖಡಕ್. ನೇರವಾಗಿ ಹೇಳಿಕೆ ಕೊಡೋ ಮಮತಾ ಬ್ಯಾನರ್ಜಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಆದ್ರೇನಾಯ್ತು ? ರಾಜಕೀಯ ಬೇರೆ, ಸಂಬಂಧ ಬೇರೆ. ದೀದಿ ಪ್ರಧಾನಿ ಮೋದಿಗೆ ಪಶ್ಚಿಮ ಬಂಗಾಳದ ಸಿಹಿ ರಸಭರಿತ ಮಾವಿನ ಹಣ್ಣುಗಳನ್ನು ಕಳುಹಿಸಿ ಕೊಟ್ಟಿದ್ದಾರೆ.
ಮಮತಾ ಪಶ್ಚಿಮ ಬಂಗಾಳ ಪ್ರಸಿದ್ಧ ತಳಿಯ ಮಾವಿನ ಹಣ್ಣು ಕಳುಹಿಸಿಕೊಟ್ಟಿದ್ದಾರೆ. ಹಾಗೆಯೇ ರಾಷ್ಟ್ರಪತಿ ರಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಅವರಿಗೆ ಮಾವು ಕಳುಹಿಸಿದ್ದಾರೆ. ಹಾಗೆಯೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೂ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ.
ದೀದಿಯ ಈ ರಾಜತಾಂತ್ರಿಕ ಐಡಿಯಾ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೋತ್ತರವಾಗಿ ನಡೆದ ಗಲಭೆ, ಗದ್ದಲದ ಕಹಿಯನ್ನು ಹೋಗಲಾಡಿಸುತ್ತಾ ಎಂಬುದನ್ನು ಕಾದು ನೋಡಬೇಕು.