ಇನ್ಮೂರೇ ದಿನ ಆಧಾರ್-ಪಾನ್ ಲಿಂಕ್ ಮಾಡೋಕೆ, ಈ ಕೆಲ್ಸವನ್ನೆಲ್ಲಾ ಮುಗಿಸಿ ಬಿಡಿ!

ಜೂನ್ ತಿಂಗಳು ಮುಗಿತಿದ್ದಂತೆ ಅನೇಕ ಬದಲಾವಣೆಯಾಗಲಿದೆ. ಅದಕ್ಕೆ ಪ್ರತಿಯೊಬ್ಬ ಸಾರ್ವಜನಿಕ ಸಿದ್ಧನಿರಬೇಕು. ಇನ್ನೂ ಸರ್ಕಾರ ಹೇಳಿದೆ ಕೆಲಸ ಮುಗಿಸಿಲ್ಲವೆಂದ್ರೆ ತಡ ಮಾಡ್ದೆ ಇಂದೇ ಮುಗಿಸಿ. ಇಲ್ಲವೆಂದ್ರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗುತ್ತೆ.

Business News Pan Aadhaar Card Link Must Complete Works In June roo

ವರ್ಷದ ಆರನೇ ತಿಂಗಳು ಮುಗಿಯುತ್ತದೆ. ಆರ್ಥಿಕವಾಗಿ ಸಾಕಷ್ಟು ಬದಲಾವಣೆಗಳು ನಡೆದಿವೆ. ಆರ್ಥಿಕ ದೃಷ್ಟಿಕೋನದಿಂದ ಜೂನ್ ತಿಂಗಳು ಬಹಳ ಮುಖ್ಯವಾಗಿದೆ. ಈ ತಿಂಗಳ 30ರೊಳಗೆ ಜನಸಾಮಾನ್ಯ ಅನೇಕ ಕೆಲಸಗಳನ್ನು ಮಾಡಬೇಕಾಗಿದೆ. ಒಂದ್ವೇಳೆ ಕೆಲಸ ಮಾಡದೆ ಹೋದ್ರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಾವಿಂದು ಜೂನ್ 30ರೊಳಗೆ ಯಾವೆಲ್ಲ ಕೆಲಸ ಮಾಡ್ಬೇಕು ಎಂಬುದನ್ನು ಹೇಳ್ತೇವೆ.

ಜೂನ್ (June) 30ರೊಳಗೆ ತಪ್ಪದೆ ಮಾಡಿ ಈ ಕೆಲಸ :

ಆಧಾರ್ (Aadhaar) ಮತ್ತು ಪಾನ್ (Pan) ಕಾರ್ಡ್ ಲಿಂಕ್  : ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಆದಾಯ (Income) ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ, ಜುಲೈ 1, 2017 ರಂತೆ ಪಾನ್ ಕಾರ್ಡ್ ಅನ್ನು ಮಂಜೂರು ಮಾಡಿದ ದೇಶದ ಪ್ರತಿಯೊಬ್ಬ ನಾಗರಿಕರೂ, ಪಾನ್ ಕಾರ್ಡನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಕೆಲ ದಿನಗಳ ಅವಕಾಶ ನೀಡಿತ್ತು. ಕೇಂದ್ರ ನೀಡಿದ್ದ ಗಡುವು ಜೂನ್ 30ಕ್ಕೆ ಮುಗಿಯಲಿದೆ. ಒಂದು ವೇಳೆ ನೀವು ಜೂನ್ 30ರೊಳಗೆ ಪಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ ನಿಮ್ಮ ಪಾನ್ ಕಾರ್ಡ್ ಅಮಾನ್ಯವಾಗಲಿದೆ. 

Personal Finance: ಖಾತೆಯೊಂದು, ಮೂರು ಲಾಭ ನೀಡುವ SBI ಈ ಖಾತೆ ವಿಶೇಷವೇನು?

ನಿಮ್ಮ ಪಾನ್ ಕಾರ್ಡ್ ಅಮಾನ್ಯವಾದ್ರೆ ನೀವು ಕೆಲ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಯಾವುದೇ ಹಣಕಾಸಿನ ವ್ಯವಹಾಸ ನಡೆಸಲು ಸಾಧ್ಯವಾಗೋದಿಲ್ಲ. ಯಾವುದೇ ಉದ್ದೇಶಕ್ಕಾಗಿ ಅಮಾನ್ಯವಾದ ಪಾನ್ ಕಾರ್ಡನ್ನು ನೀವು ಬಳಸಿದರೆ 10,000 ರೂಪಾಯಿ ದಂಡ ತೆರಬೇಕಾಗುತ್ತದೆ. 

ನಿವೃತ ನೌಕರರು ಮಾಡಬೇಕು ಈ ಕೆಲಸ : ಫೆಬ್ರವರಿ ಮತ್ತು ಏಪ್ರಿಲ್ 2020 ರ ನಡುವೆ ನಿವೃತ್ತರಾದ ಉದ್ಯೋಗಿಗಳು ಹಿರಿಯ ನಾಗರಿಕ ಯೋಜನೆ ಖಾತೆ (Account) ಯಲ್ಲಿ ಹೂಡಿಕೆ ಮಾಡಲು ಸರ್ಕಾರ ಅವಕಾಶ ನೀಡಿದೆ. ಈ ಖಾತೆಯಲ್ಲಿ ಹೂಡಿಕೆ ಮಾಡಲು ಸರ್ಕಾರ ಜೂನ್ 30 ರವರೆಗೆ ಅವಕಾಶ ನೀಡಿದೆ. 55ರಿಂದ 60 ವರ್ಷದೊಳಗಿನ ಜನರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.

Personal Finance : ಇಎಸ್ಐ ಕಾರ್ಡ್‌ನಿಂದ ಇದೆ ಇಷ್ಟು ಲಾಭ

FAEA ವಿದ್ಯಾರ್ಥಿ ವೇತನಕ್ಕೆ ಅರ್ಜಿ : ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಹಾಯ ಮಾಡಲು FAEA ವಿದ್ಯಾರ್ಥಿ ವೇತನ ನೀಡುತ್ತ ಬಂದಿದೆ. ಈ ವರ್ಷವೂ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30 ಆಗಿದ್ದು, ಈಗ್ಲೇ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ.

ಬ್ಯಾಂಕ್ ಲಾಕರ್ ಕೆಲಸ ಮುಗಿಸಿ : ಬ್ಯಾಂಕ್ ಲಾಕರ್ ನಿಯಮದಲ್ಲಿ ಬದಲಾವಣೆಯಾಗಿದೆ. ಜೂನ್ 30ರೊಳಗೆ ಬ್ಯಾಂಕ್ ಲಾಕರ್ ಹೊಂದಿರುವ ಗ್ರಾಹಕರು, ಬ್ಯಾಂಕ್ ನ ಹೊಸ ಒಪ್ಪಂದಕ್ಕೆ ಸಹಿ ಹಾಕಬೇಕು. ಜೂನ್ 30, 2023ರೊಳಗೆ ಬ್ಯಾಂಕ್ ಗಳು ಬ್ಯಾಂಕ್ ಲಾಕರ್ ಹೊಂದಿರುವ ಶೇಕಡಾ 50ರಷ್ಟು ಗ್ರಾಹಕರ ಒಪ್ಪಂದವನ್ನು ನವೀಕರಿಸಿ ಸಹಿ ಪಡೆದಿರಬೇಕು. ಕಡಾ 75ರಷ್ಟು ಲಾಕರ್ ಒಪ್ಪಂದಕ್ಕೆ ಸೆಪ್ಟೆಂಬರ್ 30, 2023 ರೊಳಗೆ ಸಹಿ ಹಾಕಬೇಕು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಗ್ರಾಹಕರು ಈ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಗಿದೆ. ಒಂದು ವೇಳೆ ಸಹಿ ಹಾಕದೆ ಹೋದ್ರೆ ಲಾಕರ್ ನಲ್ಲಿರುವ ದಾಖಲೆಗಳ ಸುರಕ್ಷತೆಗೆ ಸಂಬಂಧಿಸಿದ ನಿಯಮ ಅನ್ವಯವಾಗೋದಿಲ್ಲ.

ದುಬಾರಿಯಾಗಲಿದೆ ವಿದೇಶಿ ಪ್ರಯಾಣ : ವಿದೇಶಕ್ಕೆ ಪ್ರಯಾಣಿಸಲು ಬಯಸಿದ್ದರೆ ಮತ್ತು ಫಾರೆಕ್ಸ್ ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡಲು ಬಯಸಿದರೆ, ಜೂನ್ 30 ರೊಳಗೆ ಟಿಕೆಟ್ ಬಯಕ್ ಮಾಡಿ. ಜುಲೈ 1 ರಿಂದ ಇದರ ಬೆಲೆಯಲ್ಲಿ ಏರಿಕೆಯಾಗಲಿದೆ.  
 

Latest Videos
Follow Us:
Download App:
  • android
  • ios