Asianet Suvarna News Asianet Suvarna News

Personal Finance : ಇಎಸ್ಐ ಕಾರ್ಡ್‌ನಿಂದ ಇದೆ ಇಷ್ಟು ಲಾಭ

ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ESI ಕಾರ್ಡ್ ನೀಡಲಾಗುತ್ತದೆ. ಅನೇಕರಿಗೆ ಈ ಕಾರ್ಡ್ ನಿಂದ ಏನೆಲ್ಲ ಲಾಭವಿದೆ ಎಂಬುದೇ ತಿಳಿದಿರೋದಿಲ್ಲ. ನಿಮ್ಮ ಬಳಿಯೂ ಕಾರ್ಡ್ ಇದೆ ಎಂದಾದ್ರೆ ಅದ್ರ ಬಗ್ಗೆ ಸರಿಯಾದ ಮಾಹಿತಿ ಇಟ್ಕೊಳ್ಳಿ. 
 

Esic Scheme What Is Employees State Insurance Scheme roo
Author
First Published Jun 12, 2023, 1:39 PM IST

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಪ್ರತಿಯೊಂದು ವರ್ಗಕ್ಕೂ ಪ್ರಯೋಜನಗಳನ್ನು ಒದಗಿಸಲು ವಿವಿಧ ಸರ್ಕಾರಿ ಯೋಜನೆಗಳನ್ನು ಜಾರಿಗೆ ತಂದಿವೆ. ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು, ಮಾಸಿಕ ಆದಾಯ ಕಡಿಮೆ ಇರುವ ಜನರಿಗಾಗಿ ಅನೇಕ ಯೋಜನೆಯನ್ನು ನಡೆಸುತ್ತಿದೆ. ಅದ್ರಲ್ಲಿ ನೌಕರರ ರಾಜ್ಯ ವಿಮಾ ಯೋಜನೆ ಸೇರಿದೆ. ಇದರ ಅಡಿಯಲ್ಲಿ ಲಕ್ಷಾಂತರ ಉದ್ಯೋಗಿಗಳು ಪಿಂಚಣಿ ಮತ್ತು ಉಚಿತ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಇಎಸ್ ಐ ಕಾರ್ಡ್‌ಗಳನ್ನು ನೀಡುತ್ತದೆ. ನಾವಿಂದು ಇಎಸ್ಐ ಕಾರ್ಡಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡ್ತೇವೆ.

ಇಎಸ್ಐ ಕಾರ್ಡಿನ ಲಾಭವನ್ನು ಯಾರು ಪಡೆಯಬಹುದು? : ಇಎಸ್ಐಡಿ (ESIC) ಯೋಜನೆ ಮಾಸಿಕ ಆದಾಯ (Income) ಕಡಿಮೆ ಇರುವ ಜನರಿಗೆ ಮಾತ್ರ ಲಭ್ಯವಿದೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಹಾಗೂ ಕಾರ್ಖಾನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆ (Plan) ಯಡಿ ನೌಕರರನ್ನು ಆಯ್ಕೆ ಮಾಡುವುದು ನೌಕರರ ರಾಜ್ಯ ವಿಮಾ (Insurance) ನಿಗಮದ ಜವಾಬ್ದಾರಿಯಾಗಿದೆ. 10 ಅಥವಾ ಅದಕ್ಕಿಂತ ಹೆಚ್ಚು ನೌಕರರು ಕೆಲಸ ಮಾಡುವ ಕಂಪನಿಗೆ ಮಾತ್ರ ಇದ್ರ ಲಾಭ ಸಿಗಲಿದೆ. ಕಂಪನಿಯೇ  ಯೋಜನೆಗೆ ಹೆಸರು ನೋಂದಾಯಿಸಬೇಕಾಗುತ್ತದೆ.

Personal Finance: ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇಡ್ಬಹುದು ಗೊತ್ತಾ?

ಇಷ್ಟು ಕಡಿಮೆ ಸಂಬಳ (Salary) ಇರೋರಿಗೆ ಸಿಗುತ್ತೆ ಲಾಭ : ಇಎಸ್ಐ ಸಿಯ ಲಾಭ ತಿಂಗಳಿಗೆ 21 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ಸಿಗಲಿದೆ. ಈ ಯೋಜನೆಯಡಿ  ಕಡಿಮೆ ಸಂಬಳದ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ಸಿಗುತ್ತದೆ. ಆರೋಗ್ಯಕ್ಕೆ ಮಾತ್ರವಲ್ಲದೆ ಇಎಸ್ಐ ಕಾರ್ಡ್ ನಿಂದ ಇನ್ನೂ ಅನೇಕ ಲಾಭವಿದೆ.

ಉಚಿತ ಚಿಕಿತ್ಸೆ (Free Health Treatement) : ಐಎಸ್ಐ ಕಾರ್ಡ್ ನಿಂದ ನೀವು ಸರ್ಕಾರ ನಿಗದಿಪಡಿಸಿದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಕಾರ್ಡ್ ಇದ್ದಲ್ಲಿ ನಿಮಗೆ ಯಾವುದೇ ರೋಗದ ಚಿಕಿತ್ಸೆಗೆ ಹಣ ಖರ್ಚು ಮಾಡಬೇಕಾಗಿರೋದಿಲ್ಲ. ನಿಮ್ಮ ಕುಟುಂಬಸ್ಥರ ವೈದ್ಯಕೀಯ ಚಿಕಿತ್ಸೆಗೂ ನೀವು ಹಣ ಪಾವತಿಸಬೇಕಾಗಿಲ್ಲ. 

Personal Finance: ಬ್ಯಾಂಕ್ ಲಾಕರ್ ಬಗ್ಗೆ ನಿಮಗೆಷ್ಟು ಗೊತ್ತು?

ರಜೆಯಲ್ಲೂ ಸಿಗುತ್ತೆ ಸಂಬಳ (Leave Salary) : ಇಎಸ್‌ಐ ನಿಮ್ಮ ಆರೋಗ್ಯ ಮಾತ್ರವಲ್ಲದೆ ನಿಮ್ಮ ಮಾಸಿಕ ಸಂಬಳಕ್ಕೂ ನೆರವಾಗುತ್ತದೆ.  ಅನಾರೋಗ್ಯದ ಕಾರಣ ರಜೆ ಹಾಕಿದರೆ ಇಎಸ್ ಐ ನೆರವಿನಿಂದ ರಜೆಯಲ್ಲೂ ಸಂಬಳ ಪಡೆಯಬಹುದಾಗಿದೆ. ಅನಾರೋಗ್ಯ ಸಿಬ್ಬಂದಿಗೆ 91 ದಿನಗಳ ಕಾಲ ನಗದು ಪಾವತಿ ಇರುತ್ತದೆ. ವೇತನದ ಶೇಕಡಾ 70ರಷ್ಟು ಹಣ ನಿಮಗೆ ಸಿಗುತ್ತದೆ. 

ನಿರುದ್ಯೋಗ ಭತ್ಯೆ (Unemployment Allowance) : ಉದ್ಯೋಗ ನಷ್ಟದ ಸಂದರ್ಭದಲ್ಲಿ ಇಎಸ್‌ಐ ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ. ನೀವು ಇಎಸ್‌ಐ ಕಾರ್ಡ್ ಹೊಂದಿದ್ದರೆ ಮತ್ತು ನೀವು ನಿಮ್ಮ ಕೆಲಸವನ್ನು ಕಳೆದುಕೊಂಡಿದ್ದರೆ  ನಿರುದ್ಯೋಗ ಭತ್ಯೆ ಪಡೆಯುವ ಮೂಲಕ ನೀವು ಜೀವನ ನಡೆಸಬಹುದು.

ಪಿಂಚಣಿ ಸೌಲಭ್ಯ (Pension Facility): ಇಎಸ್ಐ ಕಾರ್ಡ್ ಸೌಲಭ್ಯ ಹೊಂದಿದ್ದ ಉದ್ಯೋಗಿ ಸಾವನ್ನಪ್ಪಿದ್ರೆ ಇಎಸ್ಐ ಕುಟುಂಬಸ್ಥರನ್ನು ಕೈಬಿಡೋದಿಲ್ಲ. ಕುಟುಂಬದ ಇತರ ಸದಸ್ಯರಿಗೆ ಇಡೀ ಜೀವನಕ್ಕೆ ಪಿಂಚಣಿ ಒದಗಿಸುವ ಕೆಲಸವನ್ನು ಇಎಸ್ಐ ಮಾಡುತ್ತದೆ. ಇಎಸ್ಐ, ಮೃತನ ಕುಟುಂಬ ಸದಸ್ಯರಿಗೆ 10 ಸಾವಿರ ರೂಪಾಯಿವರೆಗೆ ಪಿಂಚಣಿ ಸೌಲಭ್ಯ ನೀಡುತ್ತದೆ. 

ಮಾತೃತ್ವ ರಜೆಯಲ್ಲಿ ಸಂಬಳ ಸೌಲಭ್ಯ (Salary During Maternity Leave) : ಇಎಸ್‌ಐ ಸಹಾಯದಿಂದ ನೀವು ಮಾತೃತ್ವ ರಜೆಯ ಸಮಯದಲ್ಲೂ ಸಂಬಳ ಪಡೆಯಬಹುದು. ನೀವು ಮನೆಯಲ್ಲಿ ಕುಳಿತು 26 ತಿಂಗಳವರೆಗೆ ರಜೆಯ ಪೂರ್ಣ ವೇತನವನ್ನು ಉಚಿತವಾಗಿ ಪಡೆಯಬಹುದಾಗಿದೆ.

Follow Us:
Download App:
  • android
  • ios