Personal Finance: ಖಾತೆಯೊಂದು, ಮೂರು ಲಾಭ ನೀಡುವ SBI ಈ ಖಾತೆ ವಿಶೇಷವೇನು?
ವ್ಯಾಪಾರ, ಹೂಡಿಕೆಗೆ ಡಿಮ್ಯಾಟ್ ಹಾಗೂ ಆನ್ಲೈನ್ ಡ್ರೇಟಿಂಗ್ ಖಾತೆ ಅವಶ್ಯಕವಿರುತ್ತದೆ. ಉಳಿತಾಯ ಖಾತೆ ಜೊತೆ ಈ ಎರಡು ಖಾತೆಯನ್ನು ಪ್ರತ್ಯೇಕವಾಗಿ ತೆಗೆಯೋದು ಕಿರಿಕಿರಿ ಕೆಲಸ ಎನ್ನುವವರಿಗೆ ಎಸ್ ಬಿಐ ಅನುಕೂಲ ಮಾಡಿಕೊಟ್ಟಿದೆ. ಒಂದೇ ಖಾತೆಯಲ್ಲಿ ಮೂರು ಲಾಭ ನೀಡ್ತಿದೆ.
ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಈ ಬ್ಯಾಂಕ್‌ನಲ್ಲಿ ಕೋಟಿಗಟ್ಟಲೆ ಜನರು ತಮ್ಮ ಖಾತೆಗಳನ್ನು ಹೊಂದಿದ್ದಾರೆ. ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ ಜನರು ಹಣವನ್ನು ಠೇವಣಿ ಮಾಡ್ತಾರೆ. ಉಳಿತಾಯ ಖಾತೆಯಲ್ಲಿ ಹಣ ಠೇವಣಿ ಇಡುವ ಅನೇಕರು, ಹೂಡಿಕೆಯತ್ತ ಗಮನ ಹರಿಸೋದು ಕಡಿಮೆ. ಬ್ಯಾಂಕ್, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಕಾಲ ಕಾಲಕ್ಕೆ ಅದನ್ನು ನವೀಕರಿಸುತ್ತದೆ. ಅದ್ರ ಲಾಭ ಪಡೆಯುವಂತೆ ಗ್ರಾಹಕರಿಗೆ ಮಾಹಿತಿ ನೀಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 3 ಇನ್ 1 ಖಾತೆ ಸೌಲಭ್ಯವನ್ನು ನೀಡಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದ 3 ಇನ್ 1 ಖಾತೆಯಲ್ಲಿ ಸಾಮಾನ್ಯ ಬ್ಯಾಂಕ್ ಖಾತೆ, ಡಿಮ್ಯಾಟ್ ಮತ್ತು ಆನ್‌ಲೈನ್ ಟ್ರೇಡಿಂಗ್ ಖಾತೆ ಇರುತ್ತದೆ. ಈ ಮೂರೂ ಖಾತೆ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದು. ನಾವಿಂದು ಎಸ್ ಬಿಐನ 3 ಇನ್ 1 (3 in 1) ಖಾತೆ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
Personal Finance : ಇಎಸ್ಐ ಕಾರ್ಡ್‌ನಿಂದ ಇದೆ ಇಷ್ಟು ಲಾಭ
3 ಇನ್ 1 ಖಾತೆಯಿಂದಾಗುವ ಲಾಭವೇನು? : ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಲು ಅಥವಾ ವ್ಯಾಪಾರ ಮಾಡಲು ಯೋಚಿಸುತ್ತಿದ್ದರೆ ಡಿಮ್ಯಾಟ್ ಮತ್ತು ಟ್ರೇಡಿಂಗ್ (Trading) ಖಾತೆಯ ಅಗತ್ಯವಿರುತ್ತದೆ. ಇದಿಲ್ಲದೆ ಆನ್‌ಲೈನ್ ವ್ಯಾಪಾರ ಶುರು ಮಾಡಲು ಸಾಧ್ಯವಿಲ್ಲ. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ (Investment) ಮಾಡಲು ಯೋಚಿಸುತ್ತಿದ್ದರೆ ಇದು ಅತ್ಯಗತ್ಯ. ವರ್ಷವಿಡೀ ಷೇರುಗಳಲ್ಲಿ ಕೆಲವು ವಹಿವಾಟುಗಳನ್ನು ಮಾಡಿದರೆ ಮಾತ್ರ 3-ಇನ್-1 ಬ್ಯಾಂಕ್ ಖಾತೆಗಳು ಸೂಕ್ತವಾಗಿರುತ್ತವೆ.
ಎಸ್‌ಬಿಐನ 3 ಇನ್ 1 ಖಾತೆ ತೆರೆಯಲು ಯಾವೆಲ್ಲ ದಾಖಲೆ ಅವಶ್ಯಕ : ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60, ಫೋಟೋ ನೀಡಬೇಕು. ಅಲ್ಲದೆ ಪಾಸ್‌ಪೋರ್ಟ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ವೋಟಿಂಗ್ ಕಾರ್ಡ್, ಎನ್ ಪಿಆರ್ ಪತ್ರ ಇವುಗಳಲ್ಲಿ ಯಾವುದಾದ್ರೂ ಒಂದನ್ನು ದಾಖಲೆಯಾಗಿ ನೀಡಬೇಕಾಗುತ್ತದೆ. ಇದಲ್ಲದೆ ಎಸ್‌ಬಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗೆ ಅಗತ್ಯವಿರುವ ಪಾಸ್‌ಪೋರ್ಟ್ ಅಳತೆಯ ಫೋಟೋ. ಪ್ಯಾನ್ ಕಾರ್ಡ್ ನಕಲು, ಆಧಾರ್ ಕಾರ್ಡ್ ನಕಲು ಮತ್ತು ರದ್ದಾದ ಚೆಕ್ ಅಥವಾ ಇತ್ತೀಚಿನ ಬ್ಯಾಂಕ್ ಸ್ಟೇಟ್‌ಮೆಂಟ್ ನೀಡಬೇಕಾಗುತ್ತದೆ.
Personal Finance: ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇಡ್ಬಹುದು ಗೊತ್ತಾ?
ಎಸ್‌ಬಿಐ 3 ಇನ್ 1 ಖಾತೆ ತೆರೆಯೋದು ಹೇಗೆ? : ನೀವು ಬ್ಯಾಂಕ್ ಶಾಖೆಗೆ ಹೋಗಿ ಖಾತೆಯನ್ನು ತೆರೆಯಬಹುದು. ಆನ್ಲೈನ್ ನಲ್ಲಿ ಕೂಡ ಖಾತೆ ತೆರೆಯುವ ಸೌಲಭ್ಯವನ್ನು ಬ್ಯಾಂಕ್ ನೀಡಿದೆ. ನೀವು ಆನ್ಲೈನ್ ನಲ್ಲಿ 3 ಇನ್ 1 ಖಾತೆ ತೆರೆಯುತ್ತಿದ್ದರೆ, ಮೊದಲು ಎಸ್‌ಬಿಐ ವೆಬ್‌ಸೈಟ್‌ಗೆ ಹೋಗಬೇಕು. ಅಲ್ಲಿ 3 ಇನ್ 1 ಖಾತೆ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ಐಡಿ ಪುರಾವೆಯನ್ನು ಲಗತ್ತಿಸಬೇಕು. ಆ ನಂತ್ರ ನಿಮ್ಮ ಖಾತೆ ತೆರೆಯಲಾಗುತ್ತದೆ. ನಂತ್ರ ನೀವು ಇನ್ನೂ ಕೆಲ ಮಾಹಿತಿ ನೀಡಿ, ಹಂತಗಳನ್ನು ದಾಟಿದ ನಂತ್ರ ವ್ಯಾಪಾರ ಶುರು ಮಾಡಬಹುದು. ನೀವು ಎಸ್ ಬಿಐ ಸೆಕ್ಯುರಿಟೀಸ್ ವೆಬ್ ಪ್ಲಾಟ್‌ಫಾರ್ಮ್ ಮೂಲಕ ವ್ಯಾಪಾರ ಖಾತೆಯನ್ನು ತೆರೆಯಬೇಕು.
ಯಾರಿಗೆ 3 ಇನ್ ಒನ್ ಖಾತೆ ಯೋಗ್ಯವಲ್ಲ : ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಲು ಆಸಕ್ತಿ ಇಲ್ಲದವರು ಮತ್ತು ವ್ಯಾಪಾರದ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದವರಿಗೆ ಈ ಖಾತೆಯ ಅವಶ್ಯಕತೆಯಿಲ್ಲ. ನೀವು ಸಾಂಪ್ರದಾಯಿಕ ಹೂಡಿಕೆ ಬಯಸಿದ್ದರೆ ನಿಮಗೂ ಈ ಖಾತೆಯಿಂದ ಪ್ರಯೋನವಿಲ್ಲ.