Asianet Suvarna News Asianet Suvarna News

Black Rice Cultivation: ಆರೋಗ್ಯಕರ ಈ ಬೆಳೆ ಬೆಳೆದ್ರೆ ಬಾಳು ಬಂಗಾರ!

ಕೃಷಿ ಮಾಡುವ ಪ್ರತಿಯೊಬ್ಬರೂ ಲಾಭದ ಜೊತೆ ಬೇಡಿಕೆ, ಹೊಸ ಮಾದರಿಗಳ ಬಗ್ಗೆ ಜ್ಞಾನ ಹೊಂದಿರಬೇಕು. ಈಗಿನ ದಿನಗಳಲ್ಲಿ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಬೆಳೆಯೊಂದು ಎಲ್ಲರ ಗಮನ ಸೆಳೆದಿದೆ. ಅದ್ಯಾವುದು ಗೊತ್ತಾ?
 

Bumper Earning From Black Rice One Kg Is Sold For This Much Agriculture roo
Author
First Published Jun 23, 2023, 2:12 PM IST

ಸದಾ ಬೇಡಿಕೆಯಲ್ಲಿರುವ ಹಾಗೂ ಕೈತುಂಬ ಲಾಭಬರುವ ಕೃಷಿ ಮಾಡ್ಬೇಕು ಎಂಬ ಜ್ಞಾನ ಈಗ ಭಾರತೀಯ ರೈತರಿಗೆ ಬಂದಿದೆ. ಇದೇ ಕಾರಣಕ್ಕೆ ಅವರು ಕೂಡ  ಲಾಭಕರ ಬೆಳೆಯತ್ತ ಮುಖ ಮಾಡ್ತಿದ್ದಾರೆ. ಅದ್ರಲ್ಲಿ ಕಪ್ಪು ಅಕ್ಕಿ ಕೂಡ ಸೇರಿದೆ. ಕಪ್ಪು ಅಕ್ಕಿಯನ್ನು ಕೃಷಿ ಕ್ಷೇತ್ರದಲ್ಲಿ ಕಪ್ಪು ಚಿನ್ನ ಎಂದೂ ಕರೆಯಲಾಗುತ್ತದೆ. ಯಾವುದೇ ಅಕ್ಕಿಯಲ್ಲಿ ಇಲ್ಲದ ಅನೇಕ ಪೌಷ್ಠಿಕ ಗುಣಗಳು ಈ ಕಪ್ಪು ಅಕ್ಕಿಯಲ್ಲಿದೆ. ನಾವಿಂದು ಕಪ್ಪು ಅಕ್ಕಿ ಕೃಷಿ ಹಾಗೂ ಅದ್ರ ಬಳಕೆಯಿಂದ ಆಗುವ ಲಾಭಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಕಪ್ಪು ಅಕ್ಕಿ (Black Rice) ಅಂದ್ರೇನು? : ಕಪ್ಪು ಅಕ್ಕಿ ಕೂಡ ಸಾಮಾನ್ಯ ಅಕ್ಕಿಯಂತೆ ಇರುತ್ತದೆ. ಕಪ್ಪು ಅಕ್ಕಿ ಕೃಷಿಗೆ ನೀವು ವಿಶೇಷ ಮಹತ್ವ ನೀಡ್ಬೇಕಾಗಿಲ್ಲ. ಕಪ್ಪು ಅಕ್ಕಿಯನ್ನು ಕೂಡ ಬಿಳಿ ಅಕ್ಕಿ ಕೃಷಿಯಂತೆ ಮಾಡಬಹುದು. ಕಪ್ಪು ಅಕ್ಕಿ ಕೃಷಿಯನ್ನು ಮೊದಲ ಬಾರಿ ಚೀನಾದಲ್ಲಿ ಆರಂಭಿಸಲಾಯಿತು. ನಂತ್ರ ಭಾರತದ ಅಸ್ಸಾಂ ಮತ್ತು ಮಣಿಪುರದಲ್ಲಿ ಕಪ್ಪು ಅಕ್ಕಿ ಕೃಷಿ (Agriculture) ಶುರುವಾಯ್ತು. ಮೇ ತಿಂಗಳಿನಲ್ಲಿ ಇದ್ರ ಬಿತ್ತನೆ ನಡೆಯುತ್ತದೆ. ಸುಮಾರು ಐದಾರು ತಿಂಗಳಲ್ಲಿ ಬೆಳೆ ನಿಮ್ಮ ಕೈ ಸೇರುತ್ತದೆ. ಅಸ್ಸಾಂ, ಮಣಿಪುರವಲ್ಲದೆ ಉತ್ತರ ಪ್ರದೇಶ, ಛತ್ತೀಸ್‌ಗಢ, ಬಿಹಾರ ಮತ್ತು ಇತರ ಹಲವು ರಾಜ್ಯಗಳಲ್ಲಿ ಕಪ್ಪು ಅಕ್ಕಿ ಕೃಷಿ ಮಾಡಲಾಗ್ತಿದೆ. ಅಕ್ಕಿ ಗಾತ್ರ ಸ್ವಲ್ಪ ದೊಡ್ಡದಾಗಿರುತ್ತದೆ. ಕಡಿಮೆ ನೀರಿರುವ ಪ್ರದೇಶದಲ್ಲಿ ಕೂಡ ಇದನ್ನು ಸುಲಭವಾಗಿ ಬೆಳೆಯಬಹುದು. ಚೀನಾ ಹಾಗೂ ಭಾರತ (India), ಕಪ್ಪು ಅಕ್ಕಿ ಬೆಳೆಯುವ ದೊಡ್ಡ ದೇಶಗಳಾಗಿದ್ದು, ಇದಲ್ಲದೆ ಥೈಲ್ಯಾಂಡ್, ಬಾಂಗ್ಲಾದೇಶ, ವಿಯೆಟ್ನಾಂ ಮತ್ತು ಇಂಡೋನೇಷ್ಯಾದಲ್ಲೂ ಇದನ್ನು ಬೆಳೆಯಲಾಗುತ್ತದೆ. 

Personal Finance: ಖಾತೆಯೊಂದು, ಮೂರು ಲಾಭ ನೀಡುವ SBI ಈ ಖಾತೆ ವಿಶೇಷವೇನು?

ಕಪ್ಪು ಅಕ್ಕಿ ಬೆಳೆಯಿಂದ ಲಾಭವೆಷ್ಟು? : ಬಿಳಿ ಅಕ್ಕಿಗೆ ಹೋಲಿಕೆ ಮಾಡಿದ್ರೆ ಅದ್ರ ಐದಾರುಪಟ್ಟು ಹೆಚ್ಚಿನ ಲಾಭ ಇದ್ರಲ್ಲಿದೆ. ಸಾಮಾನ್ಯವಾಗಿ 40 ರಿಂದ 100- 150 ರೂಪಾಯಿ ಕಿಲೋಗೆ ಅಕ್ಕಿ ಮಾರಾಟವಾಗುತ್ತದೆ. ಆದ್ರೆ ಕಪ್ಪು ಅಕ್ಕಿ ಬೆಲೆ ಕೆ.ಜಿಗೆ ಕೆಜಿಗೆ 400 ರಿಂದ 500 ರೂಪಾಯಿ ಇದೆ. ಇಂಡೋನೇಷ್ಯಾ ಮತ್ತು ಏಷ್ಯಾದ ಇತರ ದೇಶಗಳಲ್ಲಿ ಈ ಅಕ್ಕಿಗೆ ಹೆಚ್ಚಿನ ಬೇಡಿಕೆಯಿದೆ. ಈಗೀಗ ಭಾರತದಲ್ಲೂ ಅದ್ರ ಬಳಕೆ ಹೆಚ್ಚಾಗ್ತಿದೆ. ಬೇಡಿಕೆ ಹೆಚ್ಚಾಗ್ತಿದ್ದಂತೆ ಕಪ್ಪು ಅಕ್ಕಿ ಬೆಳೆಗೆ ರೈತರು ಆಸಕ್ತಿ ತೋರುತ್ತಿದ್ದಾರೆ. ಛತ್ತೀಸ್ಗಢ ಸೇರಿದಂತೆ ಕೆಲ ರಾಜ್ಯ ಸರ್ಕಾರ, ರೈತರಿಗೆ ಆರ್ಥಿಕ ನೆರವು ನೀಡ್ತಿದೆ.

ಕಪ್ಪು ಅಕ್ಕಿಯಲ್ಲೇನಿದೆ ವಿಶೇಷ? : 

ಪೋಷಕಾಂಶಗಳ ಮೂಲ : ಕಪ್ಪು ಅಕ್ಕಿಯಲ್ಲಿ ವಿಟಮಿನ್ ಬಿ, ವಿಟಮಿನ್ ಇ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಸತು, ಪ್ರೋಟೀನ್, ಫೈಬರ್, ಮತ್ತು ಇತರ ಅನೇಕ ಪೋಷಕಾಂಶಗಳು ಇದರಲ್ಲಿ ಹೇರಳವಾಗಿದೆ. ಕಪ್ಪು ಅಕ್ಕಿ ಸೇವನೆ ಮಾಡೋದ್ರಿಂದ ದೇಹ ಬಲಪಡೆಯುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.

ಈ ಮಹಿಳೆಗೆ ಉದ್ಯಮ ಪ್ರಾರಂಭಿಸಲು ಅಡುಗೆ ಮನೆಯೇ ಪ್ರೇರಣೆ; ತುಪ್ಪ ಮಾರಾಟದಿಂದ ತಿಂಗಳಿಗೆ 20 ಲಕ್ಷ ರೂ.ಆದಾಯ!

ಕಪ್ಪು ಅಕ್ಕಿಯಲ್ಲಿದೆ ಆಂಟಿಆಕ್ಸಿಡೆಂಟ್  : ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಉತ್ತಮ ಮೂಲವಾಗಿರುವುದರ ಕಪ್ಪು ಅಕ್ಕಿಯು ಹಲವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದ್ರಲ್ಲಿರುವ ಆಕ್ಸಿಡೇಟಿವ್ ಒತ್ತಡವು ಹೃದ್ರೋಗ, ಆಲ್ಝೈಮರ್ ಮತ್ತು ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ಅನೇಕ ದೀರ್ಘಕಾಲದ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 

ಕಣ್ಣಿನ ರಕ್ಷಣೆ : ಕಪ್ಪು ಅಕ್ಕಿಯಲ್ಲಿರುವ ಅಂಶ ಕಣ್ಣುಗಳನ್ನು ರಕ್ಷಿಸುತ್ತದೆ. ಕಣ್ಣಿಗೆ ಬರುವ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದು ನಿಮ್ಮ ದೃಷ್ಟಿಯನ್ನು ಹೆಚ್ಚಿಸುತ್ತದೆ.  
 

Follow Us:
Download App:
  • android
  • ios