ಹಿಂಡೆನ್‌ಬರ್ಗ್ ವಿವಾದದ ನಡುವೆ ಇಸ್ರೇಲ್‌ನ ಪ್ರಮುಖ ಹೈಫಾ ಬಂದರು ಸ್ವಾಧೀನಪಡಿಸಿಕೊಂಡ ಅದಾನಿ..!
ಹಿಂಡೆನ್‌ಬರ್ಗ್ ರಿಸರ್ಚ್‌ನ ವಂಚನೆಯ ಆರೋಪಗಳಿಂದ ಗೌತಮ್ ಅದಾನಿ ಅವರ ಆಸ್ತಿ ಸಾಕಷ್ಟು ಕರಗಿ ಹೋಗಿದ್ದರೂ, ಈ ವಿವಾದದ ನಡುವೆಯೇ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಕಾಣಿಸಿಕೊಂಡಿದ್ದು ಮತ್ತು ಹೂಡಿಕೆ ಅವಕಾಶಗಳ ಕುರಿತು ಮಾತುಕತೆ ನಡೆಸಿದ್ದಾರೆ.

ಹೈಫಾ, ಇಸ್ರೇಲ್ (ಜನವರಿ 31,2023): ಅದಾನಿ ಗ್ರೂಪ್ ಕೆಲ ದಿನಗಳಿಂದ ಹಿಂಡೆನ್‌ಬರ್ಗ್ ರೀಸರ್ಚ್‌ನ ವಿವಾದದ ಕಾರಣಗಳಿಮದಾಗಿಯೇ ಹೆಚ್ಚು ಸುದ್ದಿಯಾಗುತ್ತಿದೆ. ಈ ನಡುವೆ, ಮಂಗಳವಾರ ಇಸ್ರೇಲ್‌ನ ಬಂದರಾದ ಹೈಫಾವನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡಿದೆ. 1.2 ಬಿಲಿಯನ್ ಅಮೆರಿಕದ ಡಾಲರ್ ಮೌಲ್ಯಕ್ಕೆ ಇಸ್ರೇಲಿಯ ಪ್ರಮುಖ ಕಾರ್ಯತಂತ್ರದ ಬಂದರು ಎನಿಸಿಕೊಂಡಿದ್ದ ಹೈಫಾ ಬಂದರನ್ನು ಸ್ವಾಧೀನಪಡಿಸಿಕೊಂಡಿದೆ. ಜತೆಗೆ, ಯಹೂದಿ ರಾಷ್ಟ್ರದ ಟೆಲ್ ಅವಿವ್ ನಗರದಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯವನ್ನು ತೆರೆಯುವುದು ಸೇರಿದಂತೆ ಹೆಚ್ಚಿನ ಹೂಡಿಕೆ ಮಾಡುವ ನಿರ್ಧಾರದ ಭಾಗವಾಗಿ ಈ ಮೆಡಿಟರೇನಿಯನ್ ನಗರದ ಸ್ಕೈಲೈನ್ ಅನ್ನು ಪರಿವರ್ತಿಸಲು ಪ್ರತಿಜ್ಞೆ ಮಾಡಿದೆ.
ಹಿಂಡೆನ್‌ಬರ್ಗ್ ರಿಸರ್ಚ್‌ನ ವಂಚನೆಯ ಆರೋಪಗಳಿಂದ ಗೌತಮ್ ಅದಾನಿ ಅವರ ಆಸ್ತಿ ಸಾಕಷ್ಟು ಕರಗಿ ಹೋಗಿದ್ದರೂ, ಈ ವಿವಾದದ ನಡುವೆಯೇ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಕಾಣಿಸಿಕೊಂಡರು ಮತ್ತು ಹೂಡಿಕೆ ಅವಕಾಶಗಳ ಕುರಿತು ಮಾತುಕತೆ ನಡೆಸಿದ್ದಾರೆ.
ಇದನ್ನು ಓದಿ: ವಿಶ್ವದ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಗೌತಮ್ ಅದಾನಿ!
ಅದಾನಿ ಗ್ರೂಪ್‌ನೊಂದಿಗಿನ ಹೈಫಾ ಬಂದರು ಒಪ್ಪಂದವನ್ನು ಅಗಾಧವಾದ ಮೈಲಿಗಲ್ಲು ಎಂದು ಬಣ್ಣಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇದು ಉಭಯ ದೇಶಗಳ ನಡುವಿನ ಸಂಪರ್ಕವನ್ನು ಹಲವು ವಿಧಗಳಲ್ಲಿ ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಹೇಳಿದರು. ಹಡಗು ಕಂಟೇನರ್‌ಗಳ ವಿಷಯದಲ್ಲಿ ಹೈಫಾ ಬಂದರು ಇಸ್ರೇಲ್‌ನಲ್ಲಿ ಎರಡನೇ ಅತಿದೊಡ್ಡ ಬಂದರಾಗಿದ್ದು ಮತ್ತು ಪ್ರವಾಸಿ ಕ್ರೂಸ್ ಹಡಗುಗಳನ್ನು ಸಾಗಿಸುವಲ್ಲಿ ಇದು ಈ ದೇಶದ ಅತಿ ದೊಡ್ಡದಾಗಿದೆ.
"ಇದು ಅಗಾಧವಾದ ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ ... 100 ವರ್ಷಗಳ ಹಿಂದೆ, ಮತ್ತು ಮೊದಲ ವಿಶ್ವ ಯುದ್ಧದ ಸಮಯದಲ್ಲಿ, ಹೈಫಾ ನಗರವನ್ನು ವಿಮೋಚನೆಗೊಳಿಸಲು ಧೈರ್ಯಶಾಲಿ ಭಾರತೀಯ ಸೈನಿಕರು ಸಹಾಯ ಮಾಡಿದ್ದರು. ಮತ್ತು ಇಂದು, ಅತ್ಯಂತ ದೃಢವಾದ ಭಾರತೀಯ ಹೂಡಿಕೆದಾರರು ಹೈಫಾ ಬಂದರಿನ ವಿಮೋಚನೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಬೆಂಜಮಿನ್ ನೆತನ್ಯಾಹು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅದಾನಿ ಕುಸಿತದಿಂದ ಎಲ್‌ಐಸಿ, ಎಸ್ಬಿಐಗೆ 78000 ಕೋಟಿ ನಷ್ಟ
"ನಮ್ಮ ದೇಶಗಳ ನಡುವೆ ಸಾರಿಗೆ ಮಾರ್ಗಗಳು ಮತ್ತು ವಾಯು ಮಾರ್ಗಗಳು ಹಾಗೂ ಸಮುದ್ರ ಮಾರ್ಗಗಳು ಸೇರಿ ಹಲವು ವಿಧಗಳಲ್ಲಿ ಸಂಪರ್ಕ ಸಾಧಿಸುವ ನಿಟ್ಟಿನ ದೃಷ್ಟಿಕೋನದ ಬಗ್ಗೆ ತಮ್ಮ "ಉತ್ತಮ ಸ್ನೇಹಿತ" ಭಾರತೀಯ ಸಹವರ್ತಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ್ದೇನೆ... ಮತ್ತು ಇದು ಇಂದು ನಡೆಯುತ್ತಿದೆ" ಎಂದೂ ಇಸ್ರೇಲ್ ಪ್ರಧಾನಿ ಹೇಳಿದರು.
ಇದು ಶಾಂತಿ ವರ್ಧಕವಾಗಿದೆ ಎಂದೂ ಹೇಳಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅರೇಬಿಯನ್ ಪರ್ಯಾಯ ದ್ವೀಪವನ್ನು ಸುತ್ತುವ ಅಗತ್ಯವಿಲ್ಲದೇ ನೇರವಾಗಿ ಮೆಡಿಟರೇನಿಯನ್ ಮತ್ತು ಯುರೋಪ್‌ಗೆ ತಲುಪುವ ಅಪಾರ ಸಂಖ್ಯೆಯ ಸರಕುಗಳಿಗೆ ಈ ಪ್ರದೇಶವು ಪ್ರವೇಶ ಬಿಂದು ಮತ್ತು ನಿರ್ಗಮನ ಸ್ಥಳವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 22 ರಾಜ್ಯಗಳಲ್ಲಿ ಬ್ಯುಸಿನೆಸ್ ಮಾಡ್ತೇವೆ: ಯಾವ ಪಕ್ಷದಿಂದಲೂ ಸಮಸ್ಯೆ ಇಲ್ಲ: ಗೌತಮ್ ಅದಾನಿ
ಇದು ಇಸ್ರೇಲಿ ಆರ್ಥಿಕತೆಯ ಮೇಲಿನ ವಿಶ್ವಾಸದ ನಿಸ್ಸಂದಿಗ್ಧವಾದ ಅಭಿವ್ಯಕ್ತಿಯಾಗಿದೆ" ಎಂದೂ ಅವರು ಹೇಳಿದ್ದು, ಬಂದರುಗಳ ಖಾಸಗೀಕರಣ ಮತ್ತು ಹೊಸ ಹೂಡಿಕೆದಾರರ ಪ್ರವೇಶವು ಇಸ್ರೇಲ್‌ನ ಆರ್ಥಿಕ ಶಕ್ತಿಯನ್ನು ಬಲಪಡಿಸುತ್ತದೆ, ಜೀವನ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಆಮದು ಹಾಗೂ ರಫ್ತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಭಾರತ ಮತ್ತು ಇಸ್ರೇಲ್ ನಡುವೆ ಸಂಬಂಧಗಳನ್ನು ಬಲಪಡಿಸುತ್ತದೆ ಎಂದೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದರು.
ಈ ಮಧ್ಯೆ, ಹೈಫಾ ಸ್ಕೈಲೈನ್ ಅನ್ನು ಪರಿವರ್ತಿಸಲು ತಮ್ಮ ಗುಂಪು ಬಂದರಿನಲ್ಲಿ ರಿಯಲ್ ಎಸ್ಟೇಟ್ ಅನ್ನು ಅಭಿವೃದ್ಧಿಪಡಿಸುತ್ತದೆ ಎಂದು ಗೌತಮ್ ಅದಾನಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಜತೆಗೆ, ನಾವು ಟೆಲ್ ಅವಿವ್‌ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಅನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದೇವೆ, ಇದು ಭಾರತ ಮತ್ತು ಯುಎಸ್‌ನಲ್ಲಿರುವ ನಮ್ಮ ಹೊಸ AI ಲ್ಯಾಬ್‌ಗಳೊಂದಿಗೆ ನಿಕಟ ಸಹಯೋಗದೊಂದಿಗೆ ಕೆಲಸ ಮಾಡುತ್ತದೆ ಎಂದು ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಹೈಫಾ ಬಂದರನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸುತ್ತಿರುವ ಈ ಮಹತ್ವದ ದಿನದಂದು @IsraeliPM @netanyahu ಅವರನ್ನು ಭೇಟಿಯಾಗುತ್ತಿರುವುದು ಅದೃಷ್ಟ. ಅಬ್ರಹಾಂ ಒಪ್ಪಂದವು ಮೆಡಿಟರೇನಿಯನ್ ಸಮುದ್ರದ ಲಾಜಿಸ್ಟಿಕ್ಸ್‌ಗೆ ಗೇಮ್ ಚೇಂಜರ್ ಆಗಲಿದೆ. ಅದಾನಿ ಗಡೋಟ್ ಹೈಫಾ ಪೋರ್ಟ್ ಅನ್ನು ಎಲ್ಲರೂ ಮೆಚ್ಚಿಕೊಳ್ಳುವಂತೆ ಹೆಗ್ಗುರುತಾಗಿ ಪರಿವರ್ತಿಸಲು ನಿರ್ಧರಿಸಿದೆ ಎಂದೂ ಗೌತಮ್ ಅದಾನಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Adani Port ವಿರೋಧಿಸಿ ಪೊಲೀಸ್ ಠಾಣೆ ಮೇಲೆ ದಾಳಿ: 30ಕ್ಕೂ ಅಧಿಕ ಸಿಬ್ಬಂದಿಗೆ ಗಾಯ; ಮಾಧ್ಯಮದವರ ಮೇಲೂ ಹಲ್ಲೆ