Asianet Suvarna News Asianet Suvarna News

22 ರಾಜ್ಯಗಳಲ್ಲಿ ಬ್ಯುಸಿನೆಸ್‌ ಮಾಡ್ತೇವೆ: ಯಾವ ಪಕ್ಷದಿಂದಲೂ ಸಮಸ್ಯೆ ಇಲ್ಲ: ಗೌತಮ್ ಅದಾನಿ

ಇಂದು 22 ರಾಜ್ಯಗಳಲ್ಲಿ ಉದ್ಯಮ ಕಾರ್ಯನಿರ್ವಹಿಸುತ್ತಿದ್ದು, ಎಲ್ಲವೂ ಬಿಜೆಪಿಯ ರಾಜ್ಯಗಳಲ್ಲ. ತಮ್ಮ ಯಶಸ್ಸಿನ ಗುಟ್ಟು "ಮೆಹ್ನತ್" ಅಂದರೆ ಕಠಿಣ ಪರಿಶ್ರಮ ಎಂದೂ ಗೌತಮ್ ಅದಾನಿ ಹೇಳಿದ್ದಾರೆ. 

we do business in 22 states not all are with bjp gautam adani ash
Author
First Published Jan 7, 2023, 8:46 PM IST

ಖ್ಯಾತ ಕೈಗಾರಿಕೋದ್ಯಮಿ (Industrialist) ಹಾಗೂ ಜಾಗತಿಕ ಟಾಪ್ 5 ಶ್ರೀಮಂತ ವ್ಯಕ್ತಿಗಳಲ್ಲಿ (One of the Top 5 Richest Person In the World) ಒಬ್ಬರು ಗೌತಮ್ ಅದಾನಿ (Gautam Adani). ಮೋದಿ ಸರ್ಕಾರ (Modi Government) ಬಂದ ಮೇಲೆ ಇವರು ಹೆಚ್ಚು ಪ್ರಚಲಿತರಾಗಿದ್ದು, ಇದಕ್ಕೆ ಮೋದಿ ಸರ್ಕಾರದ ಆದ್ಯತೆಯೇ ಕಾರಣ ಎಂದು ಕಾಂಗ್ರೆಸ್‌ (Congress) ಸೇರಿ ವಿಪಕ್ಷಗಳು ಆರೋಪಿಸುತ್ತವೆ. ಅಲ್ಲದೆ, ಇತ್ತೀಚಿನ ಕೆಲ ವರ್ಷಗಳಿಂದ ಇವರ ಆಸ್ತಿ ತೀವ್ರ ಹೆಚ್ಚಾಗುತ್ತಿರುವುದಕ್ಕೂ ಇದೆ ಕಾರಣ ಎಂಬುದೂ ಹಲವು ರಾಜಕಾರಣಿಗಳ (Politicians) ಆರೋಪ. ಈ ಆರೋಪಗಳನ್ನು ಗೌತಮ್ ಅದಾನಿ ತಳ್ಳಿಹಾಕಿದ್ದು, ಪ್ರಧಾನಿ ಮೋದಿ ಸರ್ಕಾರದಿಂದ ಆದ್ಯತೆ ಪಡೆಯುತ್ತಿದ್ದೇನೆ ಎಂಬ ಆರೋಪವನ್ನು ಬಲವಾಗಿ ನಿರಾಕರಿಸಿದ್ದಾರೆ. ಅಲ್ಲದೆ,  ಕಾಂಗ್ರೆಸ್‌ ಪಕ್ಷದ ದಿವಂಗತ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಕಾಲದಲ್ಲಿ ತಮ್ಮ ಬೃಹತ್ ಬಂದರು-ಅಧಿಕಾರದ ಒಕ್ಕೂಟವು ಪ್ರಾರಂಭವಾಯಿತು ಎಂದು ಹೇಳಿದ್ದಾರೆ.

ಅಲ್ಲದೆ, ಇಂದು 22 ರಾಜ್ಯಗಳಲ್ಲಿ ಉದ್ಯಮ ಕಾರ್ಯನಿರ್ವಹಿಸುತ್ತಿದ್ದು, ಎಲ್ಲವೂ ಬಿಜೆಪಿಯ ರಾಜ್ಯಗಳಲ್ಲ ಎಂದೂ ಗೌತಮ್ ಅದಾನಿ ಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ 
ಸಂದರ್ಶನದಲ್ಲಿ ಮಾತನಾಡಿದ ಗೌತಮ್‌ ಅದಾನಿ, ತಮ್ಮ ಯಶಸ್ಸಿನ ಗುಟ್ಟು "ಮೆಹ್ನತ್" ಅಂದರೆ ಕಠಿಣ ಪರಿಶ್ರಮ ಎಂದು ಹೇಳಿದ್ದಾರೆ. ವ್ಯವಹಾರ ಮತ್ತು ಪ್ರಾಯೋಗಿಕ ಜೀವನದಲ್ಲಿ ಕೇವಲ ಒಂದು ಸೂತ್ರವು ಕಾರ್ಯನಿರ್ವಹಿಸುತ್ತದೆ. ಮೆಹ್ನತ್, ಮೆಹ್ನತ್, ಮೆಹ್ನತ್ (ಕಠಿಣ ಕೆಲಸ, ಕಠಿಣ ಪರಿಶ್ರಮ, ಕಠಿಣ ಪರಿಶ್ರಮ). ಜತೆಗೆ, ಕುಟುಂಬದ ಬೆಂಬಲ ಮತ್ತು ದೇವರ ಆಶೀರ್ವಾದ" ಎಂದೂ ಗೌತಮ್‌ ಅದಾನಿ ಹೇಳಿದ್ದಾರೆ.

ಇದನ್ನು ಓದಿ: Forbes 100 Richest Indians: ಅದಾನಿ, ಅಂಬಾನಿ, ಧಮಾನಿ ಭಾರತದ ಟಾಪ್‌ 3 ಶ್ರೀಮಂತರು: ಕರ್ನಾಟಕದ 10 ಮಂದಿಗೆ ಸ್ಥಾನ

ಬಿಜೆಪಿ ಆಡಳಿತವಿರುವ ರಾಜ್ಯಗಳ ಹೊರತಾಗಿ ತಮ್ಮ ಇತರೆ ಕೆಲಸಗಳನ್ನು ಪಟ್ಟಿ ಮಾಡಿದ ಅವರು, “ನಾವು ಪ್ರತಿ ರಾಜ್ಯದಲ್ಲೂ ಗರಿಷ್ಠ ಹೂಡಿಕೆ ಮಾಡಲು ಬಯಸುತ್ತೇವೆ. ಅದಾನಿ ಗ್ರೂಪ್‌ ಇಂದು 22 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ನಿಜವಾಗಿಯೂ ಸಂತೋಷವಾಗಿದೆ ಮತ್ತು ಈ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿಯೇ ಆಡಳಿತದಲ್ಲಿಲ್ಲ.. ಯಾವುದೇ ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಬಲ್ಲೆವು. ಎಡಪಕ್ಷಗಳ ಆಡಳಿತವಿರುವ ಕೇರಳದಲ್ಲಿ, ಮಮತಾ ದೀದಿಯವರ ಪಶ್ಚಿಮ ಬಂಗಾಳದಲ್ಲಿ, ನವೀನ್ ಪಟ್ನಾಯಕ್ ಜೀ ಅವರ ಒಡಿಶಾದಲ್ಲಿ, ಜಗನ್ಮೋಹನ್ ರೆಡ್ಡಿ ರಾಜ್ಯದಲ್ಲಿ, ಕೆಸಿಆರ್ ರಾಜ್ಯದಲ್ಲಿಯೂ ಸಹ ನಾವು ಕೆಲಸ ಮಾಡುತ್ತಿದ್ದೇವೆ" ಎಂದೂ ಗೌತಮ್ ಅದಾನಿ ಹೇಳಿದ್ದಾರೆ.

"ಇನ್ನು, ಹೂಡಿಕೆ ನಮ್ಮ ಸಾಮಾನ್ಯ ಕಾರ್ಯಕ್ರಮವಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಹ್ವಾನದ ಮೇರೆಗೆ ನಾನು ರಾಜಸ್ಥಾನ ಹೂಡಿಕೆದಾರರ ಶೃಂಗಸಭೆಗೆ ಹೋಗಿದ್ದೆ. ನಂತರ, ರಾಹುಲ್ ಗಾಂಧಿ ಜೀ ಕೂಡ ರಾಜಸ್ಥಾನದಲ್ಲಿ ನಮ್ಮ ಹೂಡಿಕೆಯನ್ನು ಶ್ಲಾಘಿಸಿದರು ಎಂದು ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ₹ 68,000 ಕೋಟಿ ಹೂಡಿಕೆಯನ್ನು ಗೌತಮ್ ಅದಾನಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ: Adani Port ವಿರೋಧಿಸಿ ಪೊಲೀಸ್‌ ಠಾಣೆ ಮೇಲೆ ದಾಳಿ: 30ಕ್ಕೂ ಅಧಿಕ ಸಿಬ್ಬಂದಿಗೆ ಗಾಯ; ಮಾಧ್ಯಮದವರ ಮೇಲೂ ಹಲ್ಲೆ

ಇನ್ನೊಂದೆಡೆ, ಗುಜರಾತ್‌ನಲ್ಲಿ ತನ್ನ ಅದ್ಭುತ ಬೆಳವಣಿಗೆಯನ್ನು ವಿವರಿಸಿದ ಗೌತಮ್ ಅದಾನಿ, ಗುಜರಾತ್ ಸರ್ಕಾರವು ಉದ್ಯಮ ಸ್ನೇಹಿಯಾಗಿದೆ. ಅವರು ಅದಾನಿಗೆ ಯಾವುದೇ ವಿಶೇಷ ಉಪಕಾರ ಮಾಡಿದಂತೆ ಅಲ್ಲ ಎಂದೂ ಹೇಳಿದರು. ಅಲ್ಲದೆ, ಪ್ರಧಾನಿ ಮೋದಿಯವರೊಂದಿಗಿನ ತಮ್ಮ ಸಂಬಂಧವನ್ನು ಪ್ರಶ್ನಿಸುವ ಟೀಕಾಕಾರರು ನಮ್ಮ ಉದ್ಯಮದ ಪ್ರಯಾಣವು ಸುಮಾರು ನಾಲ್ಕು ದಶಕಗಳ ಹಿಂದೆ ಪ್ರಾರಂಭವಾಯಿತು ಎಂಬುದನ್ನು ಮರೆತಿದ್ದಾರೆ ಎಂದೂ ಗೌತಮ್ ಅದಾನಿ ತಿರುಗೇಟು ನೀಡಿದ್ದಾರೆ. 

ನಾನು ನನ್ನ ಜೀವನದಲ್ಲಿ 3 ದೊಡ್ಡ ಬ್ರೇಕ್‌ಗಳನ್ನು ಪಡೆದುಕೊಂಡಿದ್ದೇನೆ. ಮೊದಲನೆಯದಾಗಿ, 1985 ರಲ್ಲಿ ರಾಜೀವ್ ಗಾಂಧಿ ಅವರ ಆಳ್ವಿಕೆಯಲ್ಲಿ. ಬಳಿಕ, ಎರಡನೆಯದಾಗಿ, 1991 ರಲ್ಲಿ ಪಿ.ವಿ. ನರಸಿಂಹ ರಾವ್ ಮತ್ತು ಡಾ. ಮನಮೋಹನ್ ಸಿಂಗ್ ಆರ್ಥಿಕತೆಯನ್ನು ತೆರೆದಾಗ, ಮತ್ತು ಮೂರನೆಯದಾಗಿ, ಗುಜರಾತ್‌ನಲ್ಲಿ ನರೇಂದ್ರ ಮೋದಿಯವರ 12 ವರ್ಷಗಳ ಸುದೀರ್ಘ ಆಡಳಿತದಲ್ಲಿ ಎಂದು ಗೌತಮ್ ಅದಾನಿ ಹೇಳಿದ್ದಾರೆ.

ಇದನ್ನೂ ಓದಿ: ಅಂಬಾನಿ ಬಳಿಕ ಅದಾನಿಯೂ ವಿದೇಶದಲ್ಲಿ ನೆಲೆಸಲು ಸಿದ್ಧತೆ?

ಅಲ್ಲದೆ, ನಾವು ಪಾರದರ್ಶಕವಾಗಿ ವಿತರಿಸಲಾದ ಯೋಜನೆಗಳನ್ನು ಮಾತ್ರ ಕೈಗೆತ್ತಿಕೊಂಡಿದ್ದು, ಹರಾಜು ಹಾಕದೆ ನಮಗೆ ಒಂದೇ ಒಂದು ಪ್ರಾಜೆಕ್ಟ್ ಸಿಕ್ಕಿಲ್ಲ. ಬಂದರು, ವಿಮಾನ ನಿಲ್ದಾಣ, ರಸ್ತೆ, ಪವರ್ ಹೌಸ್ ಯಾವುದೇ ಪ್ರಾಜೆಕ್ಟ್ ಅನ್ನು ಬಿಡ್ಡಿಂಗ್ ಮಾಡದೆ ಮುಟ್ಟುವುದಿಲ್ಲ ಎಂಬ ತತ್ವ ನಮ್ಮ ಅದಾನಿ ಗ್ರೂಪ್‌ಗೆ ಇದೆ. ರಾಹುಲ್ ಜೀ ಕೂಡ ಬಿಡ್ಡಿಂಗ್ ಪ್ರಕ್ರಿಯೆ ತಿದ್ದುವ ಬಗ್ಗೆ ಯಾವುದೇ ಆರೋಪ ಮಾಡಿಲ್ಲ" ಎಂದೂ ಅವರು ಹೇಳಿದರು.

ಇನ್ನೊಂದೆಡೆ,  ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರನ್ನು ಮಾದರಿ ಮತ್ತು ಅವರ ಮಗ ಮುಖೇಶ್ ಅಂಬಾನಿ ಅವರನ್ನು "ಒಳ್ಳೆಯ ಸ್ನೇಹಿತ" ಎಂದು ಪರಿಗಣಿಸುವುದಾಗಿ ಗೌತಮ್ ಅದಾನಿ ಹೇಳಿದ್ದಾರೆ. 

ಇದನ್ನೂ ಓದಿ: ಮೊದಲ ದಿನವೇ ಕರ್ನಾಟಕಕ್ಕೆ ಬಂಪರ್ ಕೊಡುಗೆ: ಒಂದು ಲಕ್ಷ ಕೋಟಿ ಹೂಡಿಕೆ ಮಾಡಲಿರುವ ಅದಾನಿ ಗ್ರೂಪ್

Follow Us:
Download App:
  • android
  • ios