Asianet Suvarna News Asianet Suvarna News

ಜೀವನವೆಲ್ಲ ಕೂಡಿಟ್ಟು ಮದ್ವೆ ಮಾಡೋರಿಗೆ ಅಂಬಾನಿ ಮನೆ ಮದುವೆ ಪಾಠ!

ಅಂಬಾನಿ ಮಗಳ ಮದುವೆಯಲ್ಲಿದೆ ಕಲಿಯಬೇಕಾದ ಪಾಠ| ಒಟ್ಟು ಆಸ್ತಿಯ ಶೇ.1ರಷ್ಟು ಮಾತ್ರ ಖರ್ಚು ಮಾಡಿದ ಮುಕೇಶ್| ಮದುವೆಗೆಂದೇ ಆಸ್ತಿಪಾಸ್ತಿ ಮಾರುವ ಮಧ್ಯಮ ವರ್ಗಕ್ಕೊಂದು ಪಾಠ| ಮುಕೇಶ್ ಅಂಬಾನಿ ಒಟ್ಟು ಆಸ್ತಿ 3,15,750 ಕೋಟಿ ರೂ.| ಇಶಾ ಅಂಬಾನಿ ಮದುವೆಗೆ ಖರ್ಚು ಮಾಡಿದ್ದು ಕೇವಲ 700 ಕೋಟಿ ರೂ.
 

A Lesson For Middle Class Families From Ambani Daughter Marriage
Author
Bengaluru, First Published Dec 19, 2018, 4:56 PM IST
  • Facebook
  • Twitter
  • Whatsapp

ಮುಂಬೈ(ಡಿ.19): ಅದು ಇಂದ್ರಲೋಕವನ್ನೇ ನಾಚಿಸುವಂತ ಮದುವೆ. ಭಾರತದ ಬ್ಯುಸಿನೆಸ್ ಟೈಕೂನ್, ಆಗರ್ಭ  ಶ್ರೀಮಂತ ಮುಕೇಶ್ ಅಂಬಾನಿ ಇತ್ತೀಚಿಗಷ್ಟೇ ತಮ್ಮ ಮಗಳು ಇಶಾ ಅಂಬಾನಿ ಮದುವೆ ಮಾಡಿದ್ದಾರೆ.

ಬರೋಬ್ಬರಿ 700 ಕೋಟಿ ರೂ. ಖರ್ಚು ಮಾಡಿ ಮುಕೇಶ್ ತಮ್ಮ ಮಗಳನ್ನು ಬೀಳ್ಕೊಟ್ಟಿದ್ದಾರೆ. ಬಹುಶಃ ಇದು ಆಧುನಿಕ ಭಾರತ ಕಂಡ ಅತ್ಯಂತ ದುಬಾರಿ ಮದುವೆ ಅನ್ನೋದರಲ್ಲಿ ಯಾರಿಗೂ ಸಂಶಯವಿಲ್ಲ.

ಆದರೂ ಮುಕೇಶ್ ಮಗಳ ಈ 700 ಕೋಟಿ ರೂ. ಮದುವೆ ಭಾರತದ ಮಧ್ಯಮ ಮತ್ತು ಕೆಳ ವರ್ಗದ ಜನರಿಗೊಂದು ಪಾಠ ಹೇಳಿ ಕೊಟ್ಟಿದೆ. ಅರೆ! 700 ಕೋಟಿ ರೂ. ಮದುವೆ ಮಾಡಿದ ಮುಕೇಶ್ ನಮಗೇನು ಪಾಠ ಮಾಡ್ತಾರೆ ಅಂತೀರಾ?. ಇಲ್ಲೇ ಇರೋದು ಅಸಲಿ ಕಹಾನಿ.

ಎಲ್ಲರಿಗೂ ಗೊತ್ತಿರುವಂತೆ ಮುಕೇಶ್ ತಮ್ಮ ಮಗಳ ಮದುವೆಗೆ ಖರ್ಚು ಮಾಡಿದ್ದು 700 ಕೋಟಿ ರೂ.  ಮುಕೇಶ್ ಅಂಬಾನಿ ಅವರ ಸ್ವಂತ ಆಸ್ತಿ 3,15,750 ಕೋಟಿ ರೂ.

ಅಂದರೆ ಮುಕೇಶ್ ತಮ್ಮ ಮಗಳಿಗಾಗಿ ತಮ್ಮ ಆಸ್ತಿಯ ಶೇ.1ರಷ್ಟನ್ನೂ ಮುಕೇಶ್ ಖರ್ಚು ಮಾಡಿಲ್ಲ. ಆದರೆ ಮಕ್ಕಳ ಮದುವೆಗೆಂದೇ ಜೀವನ ಪೂರ್ತಿ ದುಡಿಯುವ ಮಧ್ಯಮ ವರ್ಗದ ಜನ ಮದುವೆಗಾಗಿ ತಮ್ಮ ಅರ್ಧದಷ್ಟು ಆಸ್ತಿಯನ್ನು ಖುರ್ಚು ಮಾಡ್ತಾರೆ.

ಮಧ್ಯಮ ಮತ್ತು ಕೆಳ ವರ್ಗದ ಜನ ತಮ್ಮ ಆಸ್ತಿಯ ಶೇ.50 ರಿಂದ ಶೇ.100 ರಷ್ಟು ಇನ್ನೂ ಕೆಲವರು ಸಾಲ ಮಾಡಿ ಮದುವೆ ಮಾಡುತ್ತಾರೆ. ಅದರಲ್ಲೂ ಹೆಣ್ಣು ಹೆತ್ತವರ ಸಂಕಷ್ಟ ಆ ದೇವರಿಗೇ ಪ್ರೀತಿ.

ಆದರೆ ಸುಮಾರು 700 ಕೋಟಿ ರೂ. ಖರ್ಚು ಮಾಡಿ ಮಗಳ ಮದುವೆ ಮಾಡಿದ ಅಂಬಾನಿ, ವಿದೇಶಿ  ಗಣ್ಯರು, ಬಾಲಿವುಡ್ ಸೆಲಿಬ್ರಿಟಿಗಳು, ರಾಝಕೀಯ ನೇತಾರರು, ಕ್ರೀಡಾ ಕ್ಷೇತ್ರದ ದಿಗ್ಗಜರು ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳಿಂದ ಗಣ್ಯರು ಬಂದಿದ್ದರು.

ಆದರೂ ಮುಕೇಶ್ ತಮ್ಮ ಮಗಳ ಮದುವೆಗಾಗಿ ತಮ್ಮ ಆಸ್ತಿಯ ಕೇವಲ ಶೇ.1ರಷ್ಟನ್ನು ಖರ್ಚು ಮಾಡಿದ್ದು, ಮಕ್ಕಳ ಮದುವೆಗೆಂದೇ ಜೀವನ ಪೂರ್ತಿ ಬೆವರು ಸುರಿಸುವ ಮಧ್ಯಮ ವರ್ಗದ ಪೋಷಕರಿಗೆ ನಿಜಕ್ಕೂ ಪಾಠವಾಗಿದೆ.

ಅಂಬಾನಿ ಮಗಳ ಮದುವೆಗೆ 700 ಕೋಟಿ ರೂ. ಖರ್ಚು!

ಶೇ. 90 ರಷ್ಟು ಭಾರತೀಯರಿಗೆ ಮುಖೇಶ್ ಮಗಳ ಮದುವೆ ಗಿಫ್ಟ್!

ಅಂಬಾನಿ ಮನೆ ಮದುವೆ ಫೋಟೊ ತೆಗೆದಿದ್ದು ಹಣವಿಲ್ಲದೆ ವಿದ್ಯಾಭ್ಯಾಸ ಬಿಟ್ಟಿದ್ದ ಕನ್ನಡಿಗ

ಸ್ವರ್ಗವನ್ನೇ ನಾಚಿಸುವಂತಿತ್ತು ಅಂಬಾನಿ ಮಗಳ ಮದುವೆ ವೈಭವ

Follow Us:
Download App:
  • android
  • ios