ಮುಂಬೈ: ಇತ್ತೀಚೆಗೆ ಮುಂಬೈನಲ್ಲಿ ನಡೆದ ಭಾರತದ ನಂ.1 ಶ್ರೀಮಂತ, ರಿಲಯನ್ಸ್‌ ಸಮೂಹದ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್‌ ಪಿರಾಮಲ್‌ ಮದುವೆ ಮತ್ತು ಇತರೆ ಶುಭ ಸಮಾರಂಭಗಳ ಫೋಟೋ ತೆಗೆದಿದ್ದು ಮಂಗಳೂರಿನ ವಿವೇಕ್‌ ಸೀಕ್ವೇರಾ ಮತ್ತು ಅವರ ತಂಡ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಹಣವಿಲ್ಲದೇ ವಿದ್ಯಾಭ್ಯಾಸವನ್ನೇ ಬಿಟ್ಟು, ಕೊನೆಗೆ ಸ್ನೇಹಿತರ ಸಲಹೆಯಂತೆ ಫೋಟೋಗ್ರಫಿ ಆರಂಭಿಸಿ, 2010, 2011, 2012 ಮತ್ತು 2014ರಲ್ಲಿ ‘ಬೆಟರ್‌ ಫೋಟೋಗ್ರಫಿ’ ಸಂಸ್ಥೆ ನೀಡುವ ಅತ್ಯುತ್ತಮ ಮದುವೆ ಫೋಟೋಗ್ರಾಫರ್‌ ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ವಿವೇಕ್‌, ಇದೀಗ ಅಂಬಾನಿ ಮಗಳ ಫೋಟೋ ತೆಗೆಯುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.

ಮಗಳ ಕೊರಳಿಗೆ ಹಾರ ಬೀಳುತ್ತಿದ್ದಂತೆಯೇ ಭಾವುಕರಾದ ಮುಕೇಶ್ ಅಂಬಾನಿ!

ಡಿ.1ರಿಂದ 15ರವರೆಗೆ ಅಂಬಾನಿ ಮಗಳ ಮದುವೆಯ ವಿವಿಧ ಕಾರ್ಯಕ್ರಮಗಳ ಕುರಿತು 1.2 ಲಕ್ಷ ಫೋಟೋಗಳನ್ನು ತೆಗೆದಿರುವ ವಿವೇಕ್‌ ಮತ್ತು ಅವರ ತಂಡ ಇದೀಗ ಫೋಟೋಗಳನ್ನು ಸುಂದರಗೊಳಿಸಿ ಹಸ್ತಾಂತರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ರಹಸ್ಯ ಆಫರ್‌:

ತಮಗೆ ಇಂಥ ಆಫರ್‌ ಸಿಕ್ಕ ಬಗ್ಗೆ ಮಾತನಾಡಿರುವ ವಿವೇಕ್‌, ಕಳೆದ ಜೂನ್‌ ತಿಂಗಳಲ್ಲಿ ಅಂಬಾನಿ ಮತ್ತು ಪಿರಾಮಲ್‌ ಕುಟುಂಬಗಳೆರಡಕ್ಕೂ ಮಿತ್ರನಾಗಿರುವ ವ್ಯಕ್ತಿಯೊಬ್ಬರು ನನ್ನನ್ನು ಸಂಪರ್ಕಿಸಿದ್ದರು. ಈ ವೇಳೆ ಅವರು ಡಿ.1-15ರವರೆಗಿನ ನಿಮ್ಮ ಎಲ್ಲಾ ದಿನಗಳನ್ನು ನಮಗಾಗಿ ಕಾಯ್ದಿರಿಸಿ ಎಂದು ಸೂಚಿಸಿದ್ದರು. ಜೊತೆಗೆ ನನ್ನ ಕೆಲವೊಂದು ಫೋಟೋ ಸ್ಯಾಂಪಲ್‌ಗಳನ್ನು ಕಳುಹಿಸುವಂತೆ ಸೂಚಿಸಿದ್ದರು. ಆದರೆ ಯಾರ ಮದುವೆ ಫೋಟೋ ಎಂಬ ಮಾಹಿತಿ ನೀಡಿರಲಿಲ್ಲ.

ಭಾರತದ ನಂ.1 ಶ್ರೀಮಂತನ ಮನೆ ಮದ್ವೆಯಲ್ಲಿ ಕಡು ಬಡವರಿಗೂ ಊಟ!

ನಂತರ ಅಕ್ಟೋಬರ್‌ ತಿಂಗಳಲ್ಲಷ್ಟೇ ತಾನು ಅಂಬಾನಿ ಕುಟುಂಬದ ಮದುವೆ ಫೋಟೋ ತೆಗೆಯಲು ಆಯ್ಕೆಯಾಗಿದ್ದೆ ಎಂಬ ವಿಷಯ ತಿಳಿಸಲಾಯಿತು. ಈ ವಿಷಯ ಅರಿಗಿಸಿಕೊಳ್ಳಲೇ ನನಗೆ 2 ದಿನ ಬೇಕಾಯ್ತು. ಬಳಿಕ ಮುಂಬೈಗೆ ತೆರಳಿ ಫೋಟೋ, ಫೋಟೋ ರಹಸ್ಯ, ಸಂಭಾವನೆ ಕುರಿತು ಒಪ್ಪಂದ ಮಾಡಿಕೊಂಡು ಮುಂದೆ. ಅಲ್ಲಿಂದ ಮುಂದೆ 2 ತಿಂಗಳು ವಿವಿಧ ರೀತಿಯ ಸಿದ್ಧತೆ ಮಾಡಿಕೊಂಡೆವು. ನನ್ನ ಜೊತೆಗೆ ನನ್ನ ಲಕ್ಸೆ ಕ್ಯಾಪ್ಚ​ರ್‍ಸ್ನ 15 ಸದಸ್ಯರೂ ಸೇರಿಕೊಂಡರು.

ಭಾರೀ ಭದ್ರತೆಯಲ್ಲಿ ನಡೆದ ವಿವಾಹವಾದ ಕಾರಣ ನಾನು ಮತ್ತು ನನ್ನ ಇನ್ನೊಬ್ಬ ಜೊತೆಗಾರಗೆ ವಿಶೇಷ ಗುರುತಿನ ಚೀಟಿ ನೀಡಲಾಗಿತ್ತು. ಅದನ್ನು ಬಳಸಿ ನಾವು ವಿವಾಹ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಿಗೆ ಅಡೆತಡೆ ಇಲ್ಲದೆಯೋ ಹೋಗಬಹುದಾಗಿತ್ತು. ಇದು ಜೀವನದಲ್ಲಿ ಒಮ್ಮೆ ಸಿಗಬಹುದಾದ ಅವಕಾಶ. ಅದು ನನಗೇ ಒಲಿದುಬಂದಿದ್ದು ತೃಪ್ತಿತಂದಿದೆ ಎಂದಿದ್ದಾರೆ ಇದುವರೆಗೆ 15 ದೇಶಗಳಿಗೆ ಭೇಟಿ ಕೊಟ್ಟು 1300ಕ್ಕೂ ಹೆಚ್ಚು ಮದುವೆಗಳ ಫೋಟೋ ತೆಗೆದಿರುವ ವಿವೇಕ್‌

ವಿವೇಕ್‌ ಮತ್ತು ಅವರ ತಂಡದ ಜೊತೆಗೆ ಭಾರತದ ಇನ್ನೊಂದು ಫೋಟೋಗ್ರಾಫರ್‌ ತಂಡ, ಬ್ರಿಟನ್‌, ಇಟಲಿ ಮತ್ತು ಇತರೆ ಕೆಲ ದೇಶಗಳ ಖ್ಯಾತನಾಮರಿಗೂ ಫೋಟೋ ತೆಗೆಯಲು ಆಹ್ವಾನ ನೀಡಲಾಗಿತ್ತು.