Asianet Suvarna News Asianet Suvarna News

ಕೋವಿಡ್‌ ಔಷಧಿ,ಲಸಿಕೆ, ಸಲಕರಣೆ ದರ ಇಳಿಕೆ..?

  • ಜಿಎಸ್‌ಟಿ ಮಂಡಳಿ ಸಭೆ ಇಂದು ನಿಗದಿ
  • ಕೋವಿಡ್‌ ಔಷ​ಧ​ಗಳು, ಲಸಿ​ಕೆ​ಗಳು ಮತ್ತು ಇತರೆ ವೈದ್ಯ​ಕೀಯ ಸಲ​ಕ​ರ​ಣೆ​ಗಳ ಬೆಲೆ ಇಳಿಕೆ ಸಾಧ್ಯತೆ
  •  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ​ರಾ​ಮನ್‌ ನೇತೃ​ತ್ವದಲ್ಲಿ ಆಯೋಜನೆ
43rd GST Council meeting Likely To Cut covid Medicine Price snr
Author
Bengaluru, First Published May 28, 2021, 8:13 AM IST

ನವ​ದೆ​ಹ​ಲಿ (ಮೇ.28): ಬಹುನಿರೀಕ್ಷಿತ ಜಿಎಸ್‌ಟಿ ಮಂಡಳಿ ಸಭೆ ಶುಕ್ರವಾರ ನಿಗದಿಯಾಗಿದೆ. ಈ ಸಭೆಯಲ್ಲಿ ಕೊರೋನಾ ಸೋಂಕಿ​ತ​ರಿಗೆ ಕಡಿಮೆ ದರ​ದಲ್ಲಿ ಕೋವಿಡ್‌ ಔಷ​ಧ​ಗಳು, ಲಸಿ​ಕೆ​ಗಳು ಮತ್ತು ಇತರೆ ವೈದ್ಯ​ಕೀಯ ಸಲ​ಕ​ರ​ಣೆ​ಗಳು ಲಭ್ಯ​ವಾ​ಗು​ವಂತೆ ಕೇಂದ್ರ ಸರ್ಕಾರ ಕ್ರಮ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ರಾಜ್ಯ​ಗಳು ಮತ್ತು ಕೇಂದ್ರಾ​ಡ​ಳಿತ ಪ್ರದೇ​ಶ​ಗ​ಳು ಸದ​ಸ್ಯ​ರಾ​ಗಿ​ರುವ ಸಮಿತಿ ಸಭೆಯು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ​ರಾ​ಮನ್‌ ನೇತೃ​ತ್ವದಲ್ಲಿ ಆಯೋಜನೆಗೊಂಡಿದೆ.

ಕೋವಿಡ್‌ ಲಸಿಕೆ, ಚಿಕಿತ್ಸಾ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಕಾರಣ ಅವುಗಳ ಮೇಲಿನ ಸುಂಕ ಇಳಿಸಿ ಜನರಿಗೆ ನೆರವಾಗಬೇಕು ಎಂದು ಬಹುತೇಕ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಈ ಸಭೆ​ಯಲ್ಲಿ ಕೋವಿಡ್‌ ಔಷ​ಧ​ಗಳು, ಲಸಿ​ಕೆ​ಗಳು ಮತ್ತು ಇತರೆ ವೈದ್ಯ​ಕೀಯ ಸಲ​ಕ​ರ​ಣೆ​ಗಳ ಮೇಲಿನ ತೆರಿಗೆ ಇಳಿಸುವ ಬಗ್ಗೆ ತೀರ್ಮಾನ ಮಾಡುವ ನಿರೀಕ್ಷೆ ಇದೆ.

ನಿರ್ಲಕ್ಷ್ಯದ ಪರಮಾವಧಿ: ಕೊರತೆ ಇದ್ದರೂ ಲಸಿಕೆ ಹಾಳು ಮಾಡುತ್ತಿವೆ ರಾಜ್ಯಗಳು! .

ಜೊತೆಗೆ ಜಿಎ​ಸ್‌ಟಿ ಜಾರಿ​ಯಿಂದ ರಾಜ್ಯ​ಗ​ಳಿಗೆ ಆಗು​ತ್ತಿ​ರುವ ನಷ್ಟ​ವನ್ನು ಕೇಂದ್ರ ಸರ್ಕಾ​ರವೇ ಭರಿ​ಸಿ​ಕೊ​ಡಬೇಕು. ಜೊತೆಗೆ 1,000 ರು. ದರದ ಒಳ​ಗಿ​ನ ಪಾದ​ರ​ಕ್ಷೆ, ಫ್ಯಾಬ್ರಿಕ್ಸ್‌ ಮತ್ತು ಸಿದ್ಧ ಉಡು​ಪು​ಗಳ ಮೇಲಿನ ಜಿಎ​ಸ್‌​ಟಿ​ಯನ್ನು ಶೇ.5ರಿಂದ 12ಕ್ಕೆ ಏರಿ​ಸುವ ಮತ್ತು ಉಲ್ಲನ್‌​ನಿಂದ ನೆಯ್ಯ​ಲಾ​ಗುವ ಬಟ್ಟೆ​ಗಳ ಮೇಲಿನ ಜಿಎ​ಸ್‌​ಟಿ​ಯನ್ನು ಶೇ.18ರಿಂದ 12ಕ್ಕೆ ಇಳಿ​ಸುವ ಬಗ್ಗೆಯೂ ಚರ್ಚೆ ನಡೆ​ಯ​ಲಿದೆ ಎಂದು ಮೂಲ​ಗಳು ತಿಳಿ​ಸಿವೆ.

ಕಳೆದ 8 ತಿಂಗ​ಳಲ್ಲಿ ನಡೆ​ಯು​ತ್ತಿ​ರುವ ಮೊದಲ ಜಿಎ​ಸ್‌ಟಿ ಕೌನ್ಸಿ​ಲ್‌ ಸಭೆ ಇದಾ​ಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios